ಜೋಗ ಅಭಿವೃದ್ಧಿ ನಿರ್ಲಕ್ಷ, ರಾಜ್ಯ ಸರ್ಕಾರದ ಸಚಿವರ ವಿರುದ್ಧವೇ ಕಾಗೋಡು ತಿಮ್ಮಪ್ಪ ಅಸಮಾಧಾನ
ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತವನ್ನು ಸರ್ವ ಋತು ಜಲಪಾತವನ್ನಾಗಿ ಮಾಡಬೇಕು ಎಂಬ ಆಗ್ರಹಕ್ಕೆ ತಕ್ಕಂತೆ ರಾಜ್ಯದ ಪ್ರವಾಸೋಧ್ಯಮ ಸಚಿವರು ಆಸಕ್ತಿ ವಹಿಸಿಲ್ಲ ಎಂದು ರಾಜ್ಯ ಸರ್ಕಾರದ ಸಚಿವರೇ ಆಗಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಬೊಗಳೆ ಬಿಡುತ್ತಿರುವ ಸಿದ್ದರಾಮಯ್ಯನವರಿಗೂ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಸಚಿವರೇ ಈ ರೀತಿಯ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಯಾವ ಮಟ್ಟದಲ್ಲಿ ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ರಾಜ್ಯ ಸರ್ಕಾರ ಸರ್ವಋತು ಜೋಗದ ಬಗ್ಗೆ ಕೆಲಸ ಮಾಡಿದೆ, ಆದರೆ ಪ್ರವಾಸೋಧ್ಯಮ ಸಚಿವರಿಗೆ ಸರ್ವ ಋತು ಯೋಜನೆಗೆ ಬಗ್ಗೆ ಸೂಕ್ತ ಆಸಕ್ತಿ ಇಲ್ಲದಿರುವುದರಿಂದ ಯೋಜನೆಗೆ ಪೂರ್ಣವಾಗದೆ ನೆನೆಗುದಿದೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೋಗ ಜಲಪಾತಕ್ಕೆ ಸರ್ವ ಋತುಗಳಲ್ಲಿ ಪ್ರವಾಸಿಗರು ನೋಡಲು ಬರುವಂತೆ ಅಭಿವೃದ್ಧಿ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಅದಕ್ಕೆ ಪೂರಕ್ವಾಗಿ ಕಾರ್ಯ ನಿರ್ವಹಿಸಲು ಬಿ.ಆರ್.ಶೆಟ್ಟಿ ಕಂಪನಿ ಕೂಡ ಮುಂದಾಗಿತ್ತು. ಯೋಜನೆಗಾಗಿ ಅವರು ಪರಿಶೀಲನೆಯನ್ನೂ ಮಾಡಿದ್ದರು. ಆದರೆ, ದಾಖಲೆ ನೀಡುವಲ್ಲಿ ಅಧಿಕಾರಿಗಳು ತೋರಿದ ವಿಳಂಬ ಹಾಗೂ ಪ್ರವಾಸೋದ್ಯಮ ಸಚಿವರ ನಿರಾಸಕ್ತಿಯಿಂದ ಸರ್ವ ಋತು ಯೋಜನೆ ವಿಳಂಬವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರವಾಸೋದ್ಯಮ ಸಚಿವರ ವಿರುದ್ಧವೇ ಸಚಿವ ಕಾಗೋಡು ತಿಮ್ಮಪ್ಪ ಅವರೇ ಅಸಮಾಧಾನ ವ್ಯಕ್ತಪಡಿಸಿರುವುದು ಸರ್ಕಾರದ ಅಭಿವೃದ್ಧಿಯ ನಿರ್ಲಕ್ಷ್ಯಕ್ಕೆ ಕನ್ನಡಿಹಿಡಿದಂತಾಗಿದೆ.
Leave A Reply