ದಲಿತ ಮಹಿಳೆ ಕುಟುಂಬ ವಾಸವಿದ್ದ ಮನೆ ಕೆಡವಿದ ಮುಸ್ಲಿಮರು, ಇವರ ಪರ ನ್ಯಾಯ ಕೇಳೋರು ಎಲ್ಲಿದ್ದಾರೆ?
ಲಖನೌ: ಎಂಥಾ ದುರಂತ ನೋಡಿ. ಮುಸ್ಲಿಮರ ದುಷ್ಕೃತ್ಯ ಎಂಬ ಒಂದೇ ಒಂದು ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ವಾಸವಿದ್ದ ದಲಿತ ಕುಟುಂಬವೊಂದರ ಮೇಲೆ ದೌರ್ಜನ್ಯವಾದರೂ ಜಿಗ್ನೇಶ್ ಮೇವಾನಿಯಂತಹ ದಲಿತ ನಾಯಕರು ಬಾಯಿ ಬಿಡುತ್ತಿಲ್ಲ.
ಹೌದು, ಉತ್ತರ ಪ್ರದೇಶದ ಅಮೇಥಿಯ ನಯಾ ಪೂರ್ವ ಮಜ್ರೆ ಕಾಶಿಂಪುರದಲ್ಲಿ ವಾಸವಿದ್ದ ದಲಿತ ಮಹಿಳೆ ಕುಟುಂಬದ ಮೇಲೆ ಐವರು ಮುಸ್ಲಿಂ ಯುವಕರು ದೌರ್ಜನ್ಯ ಎಸಗಿದ್ದು, ಇದನ್ನು ಪ್ರಶ್ನಿಸಿದ ಕುಟುಂಬದ ಹೆಣ್ಣುಮಕ್ಕಳಿಗೆ ಹೊಡೆದಿದ್ದಲ್ಲದೆ, ಇಡೀ ಮನೆಯನ್ನೇ ನೆಲಸಮಗೊಳಿಸಿದ್ದಾರೆ.
ಕಾಜಲ್ ಎಂಬ ದಲಿತ ಮಹಿಳೆ ತನ್ನ ಕುಟುಂಬಸ್ಥರಾದ ಮಂಜು, ರಾಜ್ ಕುಮಾರಿ, ಇಂದ್ರಾವತಿ, ಗೀತಾ ಸೇರಿ ಹಲವರೊಂದಿಗೆ ಪುಟ್ಟ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದು, ಈಗ ಮುಸ್ಲಿಂ ಯುವಕರ ದೌರ್ಜನ್ಯದಿಂದ ಬದುಕೇ ಬೀದಿಗೆ ಬಂದಂತಾಗಿದೆ.
ಈ ಅನ್ಯಾಯ ಪ್ರಶ್ನಿಸಿ ಹಾಗೂ ಮನೆ ಕೆಡವಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊತ್ವಾಲಿ ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಇದರಿಂದ ನೊಂದಿರುವ ಕಾಜಲ್ ಜಿಲ್ಲಾಧಿಕಾರಿ ಬಳಿ ತೆರಳಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಎಲ್ಲೇ ದಲಿತರ ಮೇಲೆ ಅನ್ಯಾಯವಾದರೂ ಗಲ್ಲಿಗೊಬ್ಬರು ದಲಿತ ನಾಯಕರು ರೊಚ್ಚಿಗೇಳುವ ಪ್ರಸ್ತುತದ ಸನ್ನಿವೇಶದಲ್ಲಿ ಒಬ್ಬ ದಲಿತ ಮುಖಂಡನೂ ಈ ಕೃತ್ಯವನ್ನು ಖಂಡಿಸುವ ಧೈರ್ಯ ಮಾಡುತ್ತಿಲ್ಲ. ಕಾರಣ ಯಾಕೆಂದು ಬಿಡಿಸಿ ಹೇಳಬೇಕಿಲ್ಲವೇನೋ?
Leave A Reply