ಹಿಂದೂ ಧರ್ಮಕ್ಕೆ ಮತಾಂತರವಾಗಿ, ಹಿಂದೂವನ್ನು ಮದುವೆಯಾಗಿದ್ದಕ್ಕೆ ಮುಸ್ಲಿಂ ಯುವಕರಿಗೆ ಜೀವ ಬೆದರಿಕೆ!
ಲಖನೌ: ಇಸ್ಲಾಮಿನಲ್ಲಿ ಎಂಥ ಲೆಕ್ಕಾಚಾರ ನೋಡಿ. ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಮದುವೆಯಾಗಿ, ಆಕೆಯನ್ನು ಇಸ್ಲಾಮಿಗೆ ಮತಾಂತರಗೊಳಿಸಿ, ಬಳಿಕ ಆಕೆಗೆ ತ್ರಿವಳಿ ತಲಾಖ್ ನೀಡಿದರೆ ಅಥವಾ ಇನ್ನೊಂದು ಮದುವೆಯಾದರೆ ಅದು ಧರ್ಮಕ್ಕೆ ಮಾಡುವ ಸೇವೆ. ಆದರೆ ಮುಸ್ಲಿಂ ಮಹಿಳೆ ಹಿಂದೂಗಳನ್ನು ಮದುವೆಯಾದರೆ ಅಥವಾ ಪ್ರೀತಿಸಿದರೆ ಅದು ಧರ್ಮದ್ರೋಹ.
ಇಂತಹ ಧರ್ಮದ್ರೋಹದ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಪ್ರೀತಿಸಿ, ಆತನನ್ನು ಮದುವೆಯೂ ಆಗಿ ಈಗ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು ಕುಟುಂಬಸ್ಥರನ್ನು ಕೆರಳಿದೆ. ಅಲ್ಲದೆ ಜೀವಬೆದರಿಕೆ ಸಹ ಒಡ್ಡುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.
ಉತ್ತರ ಪ್ರದೇಶದ ಅಲಿಗಡದ ಗಬಾನಾ ಎಂಬ ಪ್ರದೇಶದ ನಿವಾಸಿಯಾಗಿದ್ದ ನಸ್ರೀನ್, ಹಿಂದೂ ಯುವಕ ಮನ್ವೇಂದ್ರ ಕುಮಾರ್ ಎಂಬಾತನನ್ನು ಪ್ರೀತಿಸಿದ್ದಳು. ಪ್ರೀತಿ ಗಾಢವಾಗುತ್ತಲೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಯುವತಿಯ ಕುಟುಂಬಸ್ಥರು ಒಪ್ಪಿಲ್ಲ. ಆದರೂ ಪ್ರೀತಿಯನ್ನೇ ಉಳಿಸಿಕೊಳ್ಳಲು ಮುಂದಾದ ನಸ್ರೀನ್ ಹಾಗೂ ಮನ್ವೇಂದ್ರ ಕುಮಾರ್ ಕಳೆದ ಫೆ.4ರಂದು ಮದುವೆಯಾಗಿದ್ದಾರೆ.
ಆದರೆ ನಸ್ರೀನ್ ಹಿಂದೂ ಯುವಕನನ್ನು ಮದುವೆಯಾಗಿದ್ದಲ್ಲದೇ, ಹಿಂದೂ ಧರ್ಮಕ್ಕೆ ಮದುವೆಯಾಗಿದ್ದು ಕುಟುಂಬಸ್ಥರನ್ನು ಕೆರಳಿಸಿದ್ದು, ಗಂಡ-ಹೆಂಡತಿ ಇಬ್ಬರನ್ನೂ ಜೀವಂತವಾಗಿ ಸುಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಹಾಗಾಗಿ ದಂಪತಿ ಭದ್ರತೆ ಒದಗಿಸುವಂತೆ ಪೊಲೀಸರು ಹಾಗೂ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಯಲ್ಲಿ ಅಂಕಿತ್ ಸಕ್ಸೇನಾ ಎಂಬ ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಕಾರಣ ಕೊಲೆಗೀಡಾಗಿದ್ದ. ನನ್ನ ಕುಟುಂಬಸ್ಥರೇ ಪ್ರಿಯಕರನನ್ನು ಕೊಂದಿದ್ದಾನೆ ಎಂದು ಯುವತಿಯೇ ಆರೋಪಿಸಿದ್ದಳು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಸುದ್ದಿಯಾಗಿದೆ.
Leave A Reply