ಭರವಸೆ ಈಡೇರಿಸಿದ ಸಚಿವ ಹೆಗಡೆ, ದೀಪಕ ಸಹೋದರನಿಗೆ ಸರ್ಕಾರಿ ಉದ್ಯೋಗ
ಮಂಗಳೂರು : ಮತಾಂಧರ ಅಟ್ಟಹಾಸಕ್ಕೆ ಬಲಿಯಾಗಿದ್ದ ಸುರತ್ಕಲ್ ನ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಕುಟುಂಬಕ್ಕೆ ಕೇಂದ್ರ ಸರ್ಕಾರ ಆಧಾರವಾಗಿ ನಿಲ್ಲಲ್ಲು ಮುಂದಾಗಿದ್ದು, ಕುಟುಂಬಕ್ಕೆ ಆಶ್ರಯವಾಗಿದ್ದ ದೀಪಕ್ ಕೊಲೆಯಾದ ನಂತರ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ದೀಪಕ್ ರಾವ್ ಸಹೋದರ್ ಸತೀಶ್ ಗೆ ಕೇಂದ್ರ ಸರ್ಕಾರ ಸ್ವಾಮ್ಯದ ಕುದುರೆ ಮುಖ ಕಬ್ಬಿಣ ಅದಿರು ಕಂಪನಿಯಲ್ಲಿ ಆಫರ್ ಬಂದಿದೆ. ಇತ್ತೀಚೆಗೆ ದೀಪಕ್ ಕುಟುಂಬಕ್ಕೆ ಭೇಟಿ ನೀಡಿದ ಕೇಂದ್ರ ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ‘ದೀಪಕ್ ಸಹೋದರನಿಗೆ ಮಾನವೀಯ ನೆಲೆಯಲ್ಲಿ ನೌಕರಿ ಕೊಡಿಸುವ ಭರವಸೆ ನೀಡಿದ್ದರು.
ದೀಪಕ್ ಸಹೋದರ ಸತೀಶ್ ಶಾಲೆ ಕಲಿತ್ತಿಲ್ಲ. ಜನ್ಮತಃ ಸತೀಶ್‌ಗೆ ಮಾತೂ ಬರುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಆದ್ದರಿಂದ ಅವರನ್ನು ಶಾಲೆಗೆ ಕಳುಹಿಸಲು ಹೆತ್ತವರಿಗೆ ಸಾಧ್ಯವಾಗಿಲ್ಲ. ಈಗ ಸತೀಶ್‌ಗೆ 28 ವರ್ಷ. ಸತೀಶ್‌ಗೆ ಪಣಂಬೂರಿನಲ್ಲಿರುವ ಕೆಐಒಸಿಎಲ್ ಕಂಪನಿಯಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ನೀಡಲು ಆಹ್ವಾನಿಸಲಾಗಿದೆ.
ದೀಪಕ್ ಕುಟುಂಬಕ್ಕೆ ಭೇಟಿ ನೀಡಿದ ದಿನವೇ ಕೆಐಒಸಿಎಲ್‌ಗೆ ತೆರಳಿದ್ದ ಹೆಗಡೆ, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು. ನಂತರ ಸತೀಶ್ ಅವರಿಂದ ಸೂಕ್ತ ದಾಖಲೆ ತರಿಸಿಕೊಂಡ ಕೆಐಒಸಿಎಲ್ ಅಧಿಕಾರಿಗಳು, ಸತೀಶ್ ಗೆ ಕಂಪನಿಯಲ್ಲಿ ಕಾಯಂ ಉದ್ಯೋಗ ನೀಡುವುದಾಗಿ ಸಮ್ಮತಿ ಸೂಚಿಸಿದರು. ಮಾತಿನಂತೆ ಇದೀಗ ಸತೀಶ್ ಗೆ ಉದ್ಯೋಗಕ್ಕೆ ಆಹ್ವಾನಿಸಿದ್ದಾರೆ.
ಇನ್ನು ಒಂದು ವಾರದೊಳಗೆ ಉದ್ಯೋಗ ನೇಮಕಾತಿ ಪತ್ರ ಸತೀಶ್ ಅವರ ಕೈಸೇರುವ ನಿರೀಕ್ಷೆ ಇದೆ ಎಂದು ಕುಟುಂಬ ಮೂಲ ತಿಳಿಸಿವೆ. ಅಟೆಂಡರ್ ಅಥವಾ ಗ್ರೂಪ್ ಡಿ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.
Leave A Reply