ಭಾಯಿಯೋ, ಬೆಹೆನೊ ಜಂಗ್ ಕೇಲಿಯೆ ತಯಾರ್ ಹೋನೆ ಕಾ ವಕ್ತ್ ಆಗಯಾ ಹೇ!!
ಇವತ್ತು ಶಿವರಾತ್ರಿ. ಅದರ ಶುಭಹಾರೈಕೆಗಳು. ಇನ್ನೇನೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತಾರೆ ಎಂದು ಜನ ಕಾಯುತ್ತಾ ಇದ್ದಾರೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಮೊದಲು ನಮ್ಮ ದೇಶದಲ್ಲಿರುವ ಪಾಕಿಸ್ತಾನದ ಹತ್ತಿರದ ಸಂಬಂಧಿಗಳಿಗೂ ಅವರು ಬುದ್ಧಿ ಕಲಿಸಬೇಕು. ಜಮ್ಮು-ಕಾಶ್ಮೀರ ವಿಧಾನಸಭೆಯ ಅಧಿವೇಶನದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಅಕ್ಬರ್ ಲೋನ್ ಎನ್ನುವ ಸದಸ್ಯ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದ. ಅಂದರೆ ಅರ್ಥ ಪಾಕಿಸ್ತಾನ ತನ್ನ ಬೇರುಗಳನ್ನು ದೇಶದ ಒಳಗೆ ಹರಡುತ್ತಿದೆ. ಅದೇ ವಿಧಾನಸಭೆಯಲ್ಲಿದ್ದ ಭಾರತೀಯ ಜನತಾ ಪಾರ್ಟಿಯ ಸದಸ್ಯರು ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗುತ್ತಿದ್ದರು. ಯಾವಾಗ ಹೈದ್ರಾಬಾದಿನ ಸಂಸದ ಓವೈಸಿ ಪಾಕ್ ಪರ ಘೋಷಣೆ ಕೂಗುವ ಮುಸಲ್ಮಾನರನ್ನು ಪಾಕಿಸ್ತಾನಿಗಳು ಎಂದು ಕರೆಯುವವರಿಗೆ ಮೂರು ವರ್ಷದ ಜೈಲುಶಿಕ್ಷೆ ಆಗಬೇಕು ಎಂದು ಲೋಕಸಭೆಯಲ್ಲಿ ವಾದಿಸಿದನೋ ಒಂದಂತೂ ಸ್ಪಷ್ಟವಾಗುತ್ತಾ ಹೋಯಿತು. ಪಾಕಿಸ್ತಾನಿಗಳು ಹೈದ್ರಾಬಾದ್ ತನಕ ಬಂದಿದ್ದಾರೆ, ಬಿಟ್ಟರೆ ನಿಮ್ಮ ಮನೆಯ ಅಂಗಳದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ನಮ್ಮ ಜನಸಂಖ್ಯೆ 25% ಆದರೆ ನಾವು ಹಿಂದೂಗಳ ಮನೆಯ ಒಳಗೆ ನುಗ್ಗಿ ನಮಾಝ್ ಮಾಡುತ್ತೇವೆ ಎಂದು ಯಾರೋ ಒಬ್ಬ ಮುಲ್ಲಾ ಹೇಳಿದ ಎಂದು ಸುದ್ದಿ. ಭವಿಷ್ಯದಲ್ಲಿ ಒಂದು ದಿನ ಅದು ಆದರೂ ಆಗಬಹುದು. ಯಾಕೆಂದರೆ ನಮ್ಮದು ವಿಶಾಲ ಮನೋಭಾವದ ರಾಷ್ಟ್ರವಲ್ಲವೇ.
ಪಾಕಿಗಳ ಬಳಿ ಅಣ್ವಸ್ತ್ರ ಇದೆ….
ಇನ್ನು ಪಾಕಿಸ್ತಾನದ ಎದುರು ಯುದ್ಧ ಮಾಡುವ ಮೊದಲು ಆ ಪಾಪಿಗಳ ಹತ್ತಿರ ಅಣುಬಾಂಬ್ ಕೂಡ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೆಲವರು ಹೇಳುತ್ತಾರೆ. ಅವರಲ್ಲಿ ಅಣುಬಾಂಬ್ ಇದ್ರೆ ನಮ್ಮಲ್ಲಿ ಏನೂ ಸುರುಸುರು ಕಡ್ಡಿ ಇರುವುದಾ? ನಮ್ಮಲ್ಲೂ ಅದರ ಅಪ್ಪನಂತದ್ದು ಇದೆ. ಅವರು ಅಣುಬಾಂಬ್ ಅವರ ಕಪಾಟಿನಿಂದ ತೆಗೆಯುವ ಮೊದಲು ನಾವು ಅವರ ಮೇಲೆ ಪರಮಾಣು ಬಾಂಬ್ ತರಹದ್ದನ್ನು ಹಾಕಿದರೆ ನಂತರ ಪಾಕಿಸ್ತಾನದ ಬೂದಿ ತೆಗೆಯಲು ನಾಲ್ಕು ಲಾರಿ ಕಳಿಸಿದರೆ ಸಾಕು. ಇದು ಅಷ್ಟು ಸುಲಭವಲ್ಲ. ನಮ್ಮ ರಾಷ್ಟ್ರದ ವಿರುದ್ಧ ಬೇರೆ ದೇಶಗಳು ಒಟ್ಟಾಗುತ್ತವೆ ಎಂದು ಹೇಳುವವರು ಇದ್ದಾರೆ. ಹಾಗಾದರೆ ಕಳೆದ ವರ್ಷಗಳಲ್ಲಿ ಮೋದಿ ಅಷ್ಟು ರಾಷ್ಟ್ರಗಳಿಗೆ ಹೋಗಿ ಬಂದದ್ದು ಯಾವ ಪುರುಷಾರ್ಥಕ್ಕೆ? ಜಾಗತಿಕವಾಗಿ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂದು ಅಮೇರಿಕಾದ ಅಧ್ಯಕ್ಷರು ಅವರ ಸಂಸತ್ತಿನಲ್ಲಿ ಹೇಳಿಯಾಗಿದೆ. ಒಂದು ಚೀನಾ ಬಿಟ್ಟರೆ ಪಾಕಿಸ್ತಾನ ನಮ್ಮ ದೂರದ ಸಂಬಂಧಿ ಎಂದು ಹೇಳುವ ಮತ್ತೊಂದು ರಾಷ್ಟ್ರ ಕಾಣಿಸುತ್ತಿಲ್ಲ. ಹಾಗಿರುವಾಗ ಕಿರಿಕಿರಿ ತುಂಬಾ ಆಯಿತು, ಒಳಗೆ ನುಗ್ಗಿ ಹೊಡೆದೆವು, ಯಾರಿಗಾದರೂ ತೊಂದರೆ ಇದ್ರೆ ಎದುರಿಗೆ ಬಂದು ಹೇಳಿ ಎಂದು ಮೋದಿ ಒಂದು ಸಂದೇಶ ಕಳುಹಿಸಿದರೆ ಸಾಕು, ಪಾಕಿಗಳ ಕಸಿನ್ಸ್ ಯಾರು, ನಮ್ಮ ಹಿತಚಿಂತಕರು ಯಾರು ಎಂದು ಒಂದೇ ಚಿಟಿಕಿಗೆ ಕ್ಲೀಯರ್ ಆಗುತ್ತದೆ.
ಪಾಕ್ ಮೇಲೆ ಯುದ್ಧ ಮುಸ್ಲಿಮರ ಮೇಲೆ ಯುದ್ಧ ಅಲ್ಲ…
ಇನ್ನು ಪಾಕಿಸ್ತಾನದ ಮೇಲೆ ಯುದ್ಧ ಸಾರಿದರೆ ಅದು ಮುಸ್ಲಿಮರ ಮೇಲೆ ಯುದ್ಧ ಸಾರಿದಂತೆ ಎಂದು ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಯಾವುದೇ ಪಕ್ಷ ಮಾಡಿದರೂ ಅದು ಕೂಡ ಅಕ್ಷಮ್ಯ ಅಪರಾಧವಾಗುತ್ತದೆ. ಇಲ್ಲಿನ ಮುಸ್ಲಿಮರು ಮೊದಲು ಭಾರತೀಯರು, ನಂತರ ಧರ್ಮ ಎಂದು ತಿಳಿದುಕೊಂಡರೆ ಅಂತಹ ಅಪಪ್ರಚಾರವನ್ನು ಅವರು ಕಿವಿಗೆ ಹಾಕಿಕೊಳ್ಳುವುದಿಲ್ಲ. ಅದೇ ಅವರು ಕೂಡ ಮುಸ್ಲಿಮರು, ನಾವು ಕೂಡ ಮುಸ್ಲಿಮರು. ಅವರಿಗೆ ತೊಂದರೆಯಾದರೆ ನಮಗೆ ಅನ್ಯಾಯವಾದಂತೆ ಎಂದು ಅಂದುಕೊಂಡರೆ ಮತ್ತು ಅದನ್ನೇ ಯಾವುದಾದರೂ ಪಕ್ಷ ಬಂಡವಾಳ ಮಾಡಿಕೊಂಡರೆ ಆಗ ನಮ್ಮ ಸೈನಿಕರು ನಿರಂತರವಾಗಿ ಪಾಕಿಗಳು ಕಳುಹಿಸುವ ಭಯೋತ್ಪಾದಕರ ಹಿಂಬದಿ ಬಾಗಿಲಿನ ಯುದ್ಧಕ್ಕೆ ಹುತಾತ್ಮರಾಗುತ್ತಲೇ ಇರಬೇಕಾಗುತ್ತದೆ. ಈ ನಡುವೆ ಮತ್ತೆ ಮತ್ತೆ ನಮ್ಮ ಸೈನಿಕರನ್ನು ಕಳೆದುಕೊಳ್ಳುತ್ತಿದ್ದೇವೆ. ಬಹುಶ: ಅದನ್ನು ನೋಡಿ ಆ ಹಿರಿಯ ಜೀವಕ್ಕೆ ತುಂಬಾ ಸಂಕಟವಾಗಿರಬೇಕು. ರಾಷ್ಟ್ರಭಕ್ತಿಯ ಆವೇಶದಲ್ಲಿ ಕೊಟ್ಟಿರುವ ಹೇಳಿಕೆಯನ್ನು ಕೆಲವರು ತಮಗೆ ಬೇಕಾದ ಹಾಗೆ ತಿರುಗಿಸಿ ರಾಷ್ಟ್ರೀಯ ಸ್ವಯಂ ಸೇವಕ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅಪ್ರತಿಮ ಮುತ್ಸದ್ದಿ ಮೋಹನ್ ಭಾಗವತ್ ಹೇಳಿದ ಮಾತಿಗೆ ದೆಹಲಿಯ ಎಸಿ ಕೋಣೆಯಲ್ಲಿ ಕುಳಿತು ವಿರೋಧ ವ್ಯಕ್ತಪಡಿಸುವುದು ಸುಲಭ. ಆದರೆ ಸೈನಿಕರ ಪಾರ್ಥಿವ ಶರೀರದ ಮುಂದೆ ಅವರ ಕುಟುಂಬದವರು ವ್ಯಕ್ತಪಡಿಸುವ ಶೋಕ ಗಮನಿಸುವಾಗ ಎಂತಹ ಹಿರಿಯ ವಯಸ್ಸಾದ ವ್ಯಕ್ತಿಯಲ್ಲಿಯೂ ಒಂದು ರೋಷ ಉಕ್ಕಿ ಹರಿಯುತ್ತದೆ. ಅದನ್ನು ನೀವು ಕೂಡ ಯಾವತ್ತಾದರೂ ವ್ಯಕ್ತಪಡಿಸಿರಬಹುದು. ಪ್ರಸ್ತುತ ನಮ್ಮ ದೇಶದಲ್ಲಿ ಎಲ್ಲವೂ ಇದೆ. ಆದರೆ ಈಗ ಅರ್ಜೆಂಟಾಗಿ ನಮ್ಮಲ್ಲಿ ಬೇಕಾಗಿರುವುದು ಒಗ್ಗಟ್ಟು. ಮೋದಿ ರೂಪಾಯಿ ಅಮಾನ್ಯಿಕರಣ, ಜಿಎಸ್ ಟಿ, ತ್ರಿವಳಿ ತಲಾಕ್ ತರುವಾಗ ವಿರೋಧ ವ್ಯಕ್ತಪಡಿಸಿದವರಿಗೆ ಯುದ್ಧ ಘೋಷಣೆ ಆದರೆ ಮಾತನಾಡಲು ಮತ್ತೊಂದು ವಿಷಯ ಸಿಕ್ಕಿದಂತೆ ಆಗುತ್ತದೆ. ಅದಕ್ಕೆ ಅವರು ಕಾಯುತ್ತಾ ಇದ್ದಾರೆ!
Leave A Reply