ಮೋದಿ ಸೌದಿ ಅರೇಬಿಯಾಗೆ ಹೋಗಿದ್ದಕ್ಕೆ, ಆ ರಾಷ್ಟ್ರ ಭಾರತದಲ್ಲಿ ಎಷ್ಟು ಬಂಡವಾಳ ಹೂಡಲು ಮುಂದಾಗಿದೆ ಗೊತ್ತಾ?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ವಿದೇಶ ಪ್ರವಾಸಗಳನ್ನು ಟೀಕಿಸುವವರಿಗೆ ಸಮರ್ಪಕವಾದ ಉತ್ತರವೊಂದು ಮೊನ್ನೆ ಮೋದಿ ಅವರು ಕೈಗೊಂಡ ಸೌದಿ ಅರೇಬಿಯಾ ಪ್ರವಾಸದಲ್ಲಿ ಸಿಕ್ಕಿದೆ.
ಹೌದು, ಮೋದಿ ಸೌದಿ ಅರೇಬಿಯಾ ರಾಜಕುಮಾರನನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ, ಸೌದಿ ಅರೇಬಿಯಾ ಭಾರತದಲ್ಲಿ ಅಪಾರ ಬಂಡವಾಳ ಹೂಡಲು ಬಯಸಿದೆ.
ಮುಂದಿನ ನಾಲ್ಕರಿಂದ ಐದು ವರ್ಷದ ಅವಧಿಯಲ್ಲಿ, ಭಾರತದ ಭದ್ರತೆ, ಸರಕು ಸಾಗಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸುಮಾರು 300 ಬಿಲಿಯನ್ ಡಾಲರ್, ಅಂದರೆ 19 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಹಣ ಭಾರತದಲ್ಲಿ ಹೂಡಲು ಸೌದಿ ನಿರ್ಧರಿಸಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡು ಬಾರಿ ಸೌದಿ ಅರೇಬಿಯಾಗೆ ಭೇಟಿ ನೀಡಿದ್ದು, ಆ ರಾಷ್ಟ್ರದ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಸೌದಿ ಅರೇಬಿಯಾ ಸಹ ಭಾರತದಲ್ಲಿ ಹೂಡುವ ಪ್ರಮುಖ ರಾಷ್ಟ್ರವಾಗುವ ಇರಾದೆ ವ್ಯಕ್ತಪಡಿಸಿದ್ದು, ಅದರ ಭಾಗವಾಗಿ ಬಂಡವಾಳ ಹೂಡಲು ಮುಂದಾಗಿದೆ ಎಂದು ಕಾಂತ್ ವಿವರಿಸಿದ್ದಾರೆ.
ಅಷ್ಟೇ ಅಲ್ಲ, 30-45 ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ “ನೂತನ ಸಾಮರ್ಥ್ಯ ನೀತಿ” ಪ್ರಕಟಿಸಲಿದ್ದು, ಭಾರತ ಗ್ಯಾಸ್ ಉತ್ಪಾದನೆಯ ಪ್ರಮುಖ ತಾಣವಾಗಿ ಮಾರ್ಪಡಿಸುವ ಯೋಜನೆಯಿಂದೆ. ಈ ದಿಸೆಯಲ್ಲಿ ಸೌದಿ ಅರೇಬಿಯಾದ ಬಂಡವಾಳ ಹೂಡಿಕೆ ಆಶಾದಾಯಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುತ್ತಿರುವ ವಿದೇಶ ಪ್ರವಾಸಗಳಿಂದ ಭಾರತದ ಘನತೆ, ಶಕ್ತಿ ಜಾಗತಿಕವಾಗಿ ಬೆಳೆಯುತ್ತಿರುವ ಜತೆಗೆ ಭಾರತಕ್ಕೆ ಅಪಾರ ಪ್ರಮಾಣದ ಬಂಡವಾಳ ಸಹ ಹರಿದುಬರುತ್ತಿರುವುದು ದೇಶದ ಅಭಿವೃದ್ಧಿಗೆ ಸಹಾಯಕವಾಗಲಿದೆ. ಹಾಗೆಯೇ ಇದನ್ನು ಮೋದಿ ವಿರೋಧಿಗಳು ಅರ್ಥಮಾಡಿಕೊಳ್ಳಬೇಕಿದೆ.
Leave A Reply