• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಂಗ್ರೆಸ್ಸಿನ ಪಾಲಿಕೆ ಸದಸ್ಯೆ ಆಶಾ ಡಿಸಿಲ್ವ ಚಾಲಕನಿಂದ ಸಾರ್ವಜನಿಕರ ಮೇಲೆ ಹಲ್ಲೆ!!

Tulunadu News Posted On February 18, 2018


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕಾರ್ಫೋರೇಟರ್ ಗಳು ಬಡವರಿಗೆ, ಮಧ್ಯಮ ವರ್ಗದವರಿಗೆ ಹೊಡೆಯುವುದನ್ನೇ ಕಾಯಕವನ್ನಾಗಿ ಮಾಡಿದ್ದಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಒಂದಿಷ್ಟು ದಿನಗಳ ಹಿಂದೆ ಮೇಯರ್ ಕವಿತಾ ಸನಿಲ್ ಅವರು ತಮ್ಮ ವಸತಿ ಸಮುಚ್ಚಯದ ವಾಚ್ ಮೆನ್ ಅವರ ಪತ್ನಿ ಮತ್ತು ಮಗುವನ್ನು ಹೊಡೆಯುವ ಮೂಲಕ ಸುದ್ದಿಯಾಗಿದ್ದರು. ವಾಚ್ ಮೆನ್ ನ ಮಗು ಮತ್ತು ತನ್ನ ಮಗಳು ಪಟಾಕಿ ಹೊಡೆಯುವಾಗ ಆದ ಗಲಾಟೆಯಲ್ಲಿ ಯಾವುದೋ ಊರಿನಲ್ಲಿದ್ದ ಮೇಯರ್ ಕವಿತಾ ಮಂಗಳೂರಿಗೆ ಬಂದ ನಂತರ ಸೀದಾ ವಾಚ್ ಮೆನ್ ಕುಟುಂಬ ವಾಸಿಸುತ್ತಿರುವ ಕೊಠಡಿಗೆ ಹೋಗಿ ಜೋರು ರಂಪಾಟ ಮಾಡಿ ಸೆಕ್ಯೂರಿಟಿ ಗಾರ್ಡ್ ಮಗುವನ್ನು ಹೊಡೆದು ಬಂದಿದ್ದರು. ಆದರೆ ಈ ಬಾರಿಯ ಪ್ರಕರಣದಲ್ಲಿ ಆಶಾ ಡಿಸಿಲ್ವ ಅವರು ನೇರವಾಗಿ ದಂಡಂ ದಶಗುಣಂ ಎಂದು ತನ್ನ ವಾರ್ಡಿನ ಜನರ ಮೇಲೆ ತನ್ನ ಡ್ರೈವರ್ ಕೈಯಲ್ಲಿ ಹೊಡೆಸಿ ಮತ್ತು ಪೆಟ್ಟು ತಿಂದವರ ಮೇಲೆ ಕೇಸು ದಾಖಲಿಸಲು ಡ್ರೈವರ್ ಗೆ ಪರೋಕ್ಷ ಸಹಕಾರ ನೀಡುವ ಮೂಲಕ ಆ ವಾರ್ಡಿನ ಜನರ ಹಿಡಿಶಾಪಕ್ಕೆ ತುತ್ತಾಗಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಂಪ್ ವೆಲ್ ನಿಂದ ಪಡೀಲ್ ಕಡೆ ಹೋಗುವ ರಸ್ತೆ ಆಶಾ ಡಿಸಿಲ್ವಾ ಅವರ ವಾಡರ್ಿಗೆ ಬರುತ್ತದೆ. ಅಲ್ಲಿ ರೆಡ್ ಬಿಲ್ಡಿಂಗ್ ಎನ್ನುವ ಹೆಸರಿನ ಏರಿಯಾವಿದೆ. ಅದೇ ಪ್ರದೇಶದಲ್ಲಿ ಈ ಕಾಂಗ್ರೆಸ್ ಕಾರ್ಫೋರೇಟರ್ ಆಶಾ ಡಿಸಿಲ್ವಾ ಅವರ ತಂದೆಯ ಹೆಸರಿನಲ್ಲಿರುವ ಎಂಭತ್ತು ಸೆನ್ಸ್ ಖಾಲಿ ಜಾಗ ಮತ್ತು ಮನೆ ಇದೆ. ಆ ಜಾಗಕ್ಕೆ ಹೋಗಲು ಈಗಾಗಲೇ ಇಪ್ಪತ್ತು ಅಡಿ ಅಗಲದ ರಸ್ತೆ ಇದೆ. ಆದರೆ ಆ ಎಂಭತ್ತು ಸೆಂಟ್ಸ್ ಜಾಗ ಮತ್ತು ಮನೆ ಒಳ್ಳೆಯ ರೇಟಿಗೆ ಹೋಗಬೇಕಾದರೆ ಅಲ್ಲಿ ಇರುವ ರಸ್ತೆ ಇನ್ನು ಸಾಕಷ್ಟು ಅಗಲ ಬೇಕಾಗುತ್ತದೆ. ಆಶಾ ಡಿಸಿಲ್ವಾ ಆ ಜಾಗ ಮಾರುವ ಐಡಿಯಾದಲ್ಲಿದ್ದಾರೆ. ಆದರೆ ಖರೀದಿಸಲು ಬಂದಿರುವ ಬಿಲ್ಡರ್ ಗಳು ರಸ್ತೆಯನ್ನು ಅಗಲ ಮಾಡಿ ಕೊಡಿ ಎಂದು ಕೇಳಿದ್ದಾರೆ. ಅದರೊಂದಿಗೆ ಅಲ್ಲಿ ಡ್ರೈನೇಜ್ ವ್ಯವಸ್ಥೆ ಕೂಡ ಆದರೆ ಒಳ್ಳೆಯದು ಎಂದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಕಾರ್ಫೋರೇಟರ್ ಗಳು ಬಿಲ್ಡರ್ ಗಳಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ ಎನ್ನುವುದಕ್ಕೆ ಹಿಂದಿನ ಅನೇಕ ಉದಾಹರಣೆಗಳಿವೆ. ತಮ್ಮ ಜಾಗ ಒಳ್ಳೆಯ ಬೆಲೆಗೆ ಹೋಗುವುದಾದರೆ ಪಾಲಿಕೆ ಹಣದಲ್ಲಿ ರಸ್ತೆ ಅಗಲೀಕರಣ ಮಾಡುವುದು ಮತ್ತು ಜನರು ಕೇಳಿದರೆ ಅದು ಡ್ರೈನೇಜ್ ಹಾಕಿಸುವುದಕ್ಕೆ ಇದೆ, ನಮ್ಮ ವಾರ್ಡ್ ಅಭಿವೃದ್ಧಿ ಆಗಬೇಕಲ್ಲವೇ ಎಂದು ಜನರ ಕಿವಿಯ ಮೇಲೆ ಹೂ ಇಡುವ ಕೆಲಸ ಮಾಡುವುದು ಎಂದು ಕಾರ್ಫೋರೇಟರ್ ನಿಧರ್ಾರ ಮಾಡಿದ್ದಾರೆ.

ಆದರೆ ಅಲ್ಲಿರುವ ಹೆಚ್ಚಿನ ಜನರು ಮಧ್ಯಮ ವರ್ಗದವರು. ಸುಮಾರು 150 ರಿಂದ 180 ಕುಟುಂಬಗಳು ಅಲ್ಲಿ ವಾಸಿಸುತ್ತಿವೆ. ಅಲ್ಪಸ್ವಲ್ಪ ಜಾಗದಲ್ಲಿ ಮನೆ ಕಟ್ಟಿ ಜೀವನ ಸಾಗಿಸುತ್ತಿರುವ ಈ ಕುಟುಂಬಗಳಿಗೆ ರಸ್ತೆ ಅಗಲೀಕರಣವೆನ್ನುವುದು ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಅವರು ಸಹಜವಾಗಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಮಾರು 2016 ರಿಂದಲೇ ಈ ವಿರೋಧಗಳು ಕೇಳಿಬರುತ್ತಾ ಇವೆ. ಆದ್ದರಿಂದ ತನ್ನ ತಂದೆಯ ಹೆಸರಿನಲ್ಲಿ ಅಷ್ಟು ಜಾಗವನ್ನು ಮಾರಿ ಕೋಟ್ಯಾಧಿಪತಿಯಾಗುವ ಆಶಾ ಡಿಸಿಲ್ವಾ ಆಸೆಗೆ ಆವತ್ತಿನಿಂದ ಹಿನ್ನಡೆಯಾಗುತ್ತಿದೆ. ಇನ್ನು ಕಾದರೆ ಮುಂದಿನ ಬಾರಿ ತಾನು ಗೆಲ್ಲುತ್ತೇನಾ, ಇಲ್ವಾ ಈಗ ಅಧಿಕಾರದಲ್ಲಿ ಇರುವಾಗಲೇ ಏನಾದರೊಂದು ಮಾಡಿ ಆಸ್ತಿಯ ಜಾಗವನ್ನು ಪರಾಭಾರೆ ಮಾಡಬೇಕು ಎಂದು ಕಾರ್ಫೋರೇಟರ್ ನಿರ್ಧರಿಸಿದ್ದಾರೆ. ಆದರೆ ಸ್ಥಳೀಯರು ಒಗ್ಗಟ್ಟು ಪ್ರದಶರ್ಿಸುತ್ತಿರುವುದರಿಂದ ಆಶಾ ಡಿಸಿಲ್ವಾ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ.

ಮೊನ್ನೆ ಫೆಬ್ರವರಿ 12 ರಂದು ಬೆಳಿಗ್ಗೆ 9.30 ರ ಸುಮಾರಿಗೆ ಆಶಾ ಡಿಸಿಲ್ವಾ ಕಾರು ಚಾಲಕ ಫ್ರಾನ್ಸಿಸ್ ಎನ್ನುವವನು ದಾರಿಯಲ್ಲಿ ಬರುತ್ತಿದ್ದ ಸ್ಟ್ಯಾನಿ ಎನ್ನುವವರನ್ನು ಈ ವಿಷಯದಲ್ಲಿ ಛೇಡಿಸಿದ್ದಾನೆ. ಅವರು ಕ್ಯಾರ್ ಮಾಡದೇ ಇದ್ದಾಗ ಸುಮ್ಮ ಸುಮ್ಮನೆ ಏನೇನೋ ಮಾತನಾಡಿ ಅಡ್ಡಹಾಕಿದ್ದಾನೆ. ಇದರಿಂದ ಮಾತಿಗೆ ಮಾತಿಗೆ ಬೆಳೆದಿದೆ. ಫ್ರಾನ್ಸಿಸ್ ತನ್ನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಬಲಯುತವಾಗಿ ಸ್ಟ್ಯಾನಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ಸ್ಟ್ಯಾನಿಯವರ ಪತ್ನಿಯನ್ನು ಕೂಡ ಎಳೆದಾಡಿದ್ದಾನೆ. ಅವರಿಗೂ ಪೆಟ್ಟಾಗಿದೆ. ಕೂಡಲೇ ಸ್ಥಳೀಯರು ಸೇರಿ ಸ್ಟ್ಯಾನಿ ಮತ್ತು ಪತ್ನಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಈ ಬಗ್ಗೆ ದೂರು ಕೊಡಲು ಇವರ್ಯಾರು ಮುಂದೆ ಹೋಗಿರಲಿಲ್ಲ. ಯಾಕೆಂದರೆ ಹಲ್ಲೆ ಮಾಡಿದ ಫ್ರಾನ್ಸಿಸ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೂ ಅದರಿಂದ ಏನೂ ಆಗುವುದಿಲ್ಲ, ಅದರ ಬದಲಿಗೆ ಅದು ತಮಗೆ ರಿಸ್ಕ್ ಆಗುವ ಸಾಧ್ಯತೆ ಇದೆ, ಕಾಪರ್ೋರೇಟರ್ ಚಾಲಕನ ವಿರುದ್ಧ ದೂರು ಕೊಟ್ಟರೆ ರಾಜಕೀಯ ವಶೀಲಿಬಾಜಿ ನಡೆದು ಸುಮ್ಮನೆ ಮಾನಸಿಕ, ದೈಹಿಕ ಕಿರಿಕಿರಿ ಎಂದು ಸ್ಟ್ಯಾನಿ ಮತ್ತು ಪತ್ನಿ ಅದನ್ನೊಂದು ವಿವಾದ ಮಾಡುವುದು ಬೇಡಾ ಎಂದು ಸುಮ್ಮನಾಗಿದ್ದರು. ಆದರೆ ಫ್ರಾನ್ಸಿಸ್ ಮಾತ್ರ ಸ್ಥಳೀಯರನ್ನು ಇದೇ ವಿವಾದದಲ್ಲಿ ಸಿಲುಕಿಸಿ ಅವರ ಮೇಲೆ ದೂರು ದಾಖಲು ಮಾಡಿ ಅಲ್ಲಿನವರು ಯಾವತ್ತೂ ರಸ್ತೆ ಅಗಲೀಕರಣಕ್ಕೆ ಅಡ್ಡಿ ಬರಬಾರದು, ಹಾಗೆ ಮಾಡೋಣ ಎಂದು ಪ್ಲಾನ್ ಮಾಡಿದ್ದಾನೆ. ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿರುವ ಸ್ಟ್ಯಾನಿ, ಮ್ಯಾಕ್ಸಿಂ, ಡೆನ್ಸಾರ್ ಸೇರಿದಂತೆ ಇತರರು ತನ್ನ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾನೆ. ಅವನಿಗೆ ಒಂದು ವಿಷಯ ಗೊತ್ತಿತ್ತು. ಹೀಗೆ ಅಲ್ಲಿನ ಪ್ರಮುಖರ ಮೇಲೆ ದೂರು ಕೊಟ್ಟರೆ ಅವರು ಬಂಧಿತರಾಗುತ್ತಾರೆ, ಅದರ ಬಳಿಕ ಕೋಟರ್್, ಕಚೇರಿ ಎಂದು ಅಲೆಯಬೇಕಾಗುತ್ತದೆ. ಅದನ್ನು ನೋಡಿ ಉಳಿದವರು ಸೈಲೆಂಟ್ ಆಗುತ್ತಾರೆ. ಆಗ ರಸ್ತೆ ಅಗಲೀಕರಣ ಸುಲಭದಲ್ಲಿ ಮಾಡಬಹುದು ಎಂದು ಕಾರ್ಫೋರೇಟರ್ ಆಶಾ ಡಿಸಿಲ್ವಾ ಅವರ ಯೋಜನೆಯನ್ನು ಅಕ್ಷರಶ: ಜಾರಿಗೆ ತರುತ್ತಾನೆ.

ಈಗ ಮಾಧ್ಯಮದವರು ಆಶಾ ಡಿಸಿಲ್ವಾ ಅವರನ್ನು ಕೇಳಿದರೆ ಅಲ್ಲಿನ ಜನ ಡ್ರೈನೇಜ್ ಗೆ ವಿರೋಧಿಸುತ್ತಾರೆ, ತಾನು ಅಭಿವೃದ್ಧಿ ಮಾಡಲು ಹೊರಟರೆ ಅಡ್ಡಗಾಲು ಹಾಕುತ್ತಾರೆ ಎನ್ನುತ್ತಿದ್ದಾರೆ. ಆದರೆ ಜನರು ಹೇಳುವ ಪ್ರಕಾರ ಒಂದು ಏರಿಯಾದಲ್ಲಿ ಡ್ರೈನೇಜ್ ಅಳವಡಿಕೆಯಾಗುತ್ತದೆ ಎಂದರೆ ಯಾರೂ ಕೂಡ ಅಡ್ಡಿಪಡಿಸುವುದಿಲ್ಲ. ಯಾಕೆಂದರೆ ಅದು ಸಾರ್ವಜನಿಕರಿಗೆ ಉಪಯೋಗವಾಗುವಂತದ್ದು. ಆದರೆ ರಸ್ತೆ ಅಗಲೀಕರಣ ಮಾಡುವ ಆಶಾ ಡಿಸಿಲ್ವಾ ಅವರ ಯೋಚನೆ ತಮ್ಮ ಸ್ವಅಭಿವೃದ್ಧಿಯದ್ದು ಬಿಟ್ಟರೆ ಜನರಿಗಾಗಿ ಅಲ್ಲ ಎನ್ನುತ್ತಿದ್ದಾರೆ. ತಮ್ಮ ಒಬ್ಬರ ಲಾಭಕ್ಕಾಗಿ ಕಾಪರ್ೋರೇಟರ್ ಅನೇಕ ಬಡ, ಮಧ್ಯಮ ವರ್ಗದ ಜನರ ಜೀವದ ಮೇಲೆ ಆಟವಾಡುತ್ತಿದ್ದಾರೆ ಎನ್ನುವುದು ಸ್ಥಳೀಯರ ನೋವು.
ಇನ್ನು ರಸ್ತೆ ಅಗಲೀಕರಣ ಮಾಡಬಾರದು ಎಂದು ಸ್ಥಳೀಯರು ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೂ ಆಶಾ ಡಿಸಿಲ್ವಾ ತನ್ನ ಪ್ರಭಾವ ಬೀರಿ ಪಾಲಿಕೆಯಲ್ಲಿ ಇನ್ಸಫ್ಲೂಯೆನ್ ಮಾಡಿ ರಸ್ತೆ ಅಗಲೀಕರಣ ತಯಾರಾಗಿರುವುದು ಸ್ಥಳೀಯರಿಗೆ ಬೇಸರ ತಂದಿದೆ. ಈ ಬಗ್ಗೆ ಪಾಲಿಕೆಯ ಸ್ಥಾಯಿ ಸಮಿತಿ ಸದಸ್ಯ ಅಬ್ದುಲ್ ರವೂಫ್ ಅವರಿಗೆ ಸ್ಥಳೀಯರು ಮನವಿ ಕೊಟ್ಟಿದ್ದಾರೆ. ಸರಿ ಮಾಡೋಣ ಎಂದು ಭರವಸೆ ಕೊಟ್ಟು ಇವರನ್ನು ಕಳುಹಿಸಲಾಗಿದೆ. ರಸ್ತೆ ಅಗಲೀಕರಣಕ್ಕೆ ವಿರೋಧಿಸುವ ಮುಂಚೂಣಿ ನಾಯಕರನ್ನು ಕೋರ್ಟ್ ಕಟ್ಟಲೆ ಎಂದು ಸಿಲುಕಿಸಿ ತನ್ನ ದಾರಿ ಸುಗಮವಾಗುವಂತೆ ನೋಡಿಕೊಳ್ಳುವ ಕಾರ್ಫೋರೇಟರ್ ಆಶಾ ಡಿಸಿಲ್ವಾ ಅವರ ಪ್ಲಾನ್ ಸಖತ್ತಾಗಿದೆ ಎಂದು ಪಾಲಿಕೆಯ ಇತರ ಸದಸ್ಯರು ಹೇಳಿಕೊಂಡು ನಗುತ್ತಿದ್ದಾರೆ.

sh

  • Share On Facebook
  • Tweet It


- Advertisement -
Sathya Neermarga


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search