ಹಿಂದೂ ಧರ್ಮಕ್ಕೆ ಶರಣೆಂದ ಆಸ್ಟ್ರೇಲಿಯಾ, ಶಿವ, ವಿಷ್ಣು ದೇವಾಲಯಕ್ಕೆ ಸರ್ಕಾರದ ಸಹಾಯಧನ
ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಹಿಂದೂ ಧರ್ಮದ ರಣಕಹಳೆ ಮೊಳಗಿದ್ದು, ಹಿಂದೂ ಧರ್ಮದ ದೇವರುಗಳಿಗೆ ಸರ್ಕಾರವೂ ಹಣ ನೀಡುತ್ತಿರುವುದು ಹಿಂದು ಧರ್ಮಕ್ಕೆ ಹೊಸ ಚೈತನ್ಯ ಮೂಡಿದಂತಾಗಿದೆ. ಹಿಂದು ಧರ್ಮದ ವಸುದೈವ ಕುಟುಂಬ ತತ್ವ ಇದೀಗ ಸಾಕಾರವಾಗುತ್ತಿದ್ದು ಆಸ್ಟ್ರೇಲಿಯಾದ ವಿಕ್ಟೋರಿಯನ್ ಸರ್ಕಾರ ಶಿವ ವಿಷ್ಣು ದೇವಾಲಯ ನಿರ್ಮಿಸಲು 160,000 ಡಾಲರ್ ಹಣವನ್ನು ಸಹಾಯಧನ ನೀಡಿದೆ.
ವಿಕ್ಟೋರಿಯಾದಲ್ಲಿರುವ ಹಿಂದೂ ಸೊಸೈಟಿಯ ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ಮತ್ತು ಶಿವ ವಿಷ್ಣು ದೇವಾಲಯದ ಅಭಿವೃದ್ಧಿಗೆ ವಿಕ್ಟೋರಿಯನ್ ಸರ್ಕಾರ ಹಣ ನೀಡುವುದಾಗಿ ಘೋಷಣೆ ಮಾಡಿದೆ. 1994ರಲ್ಲಿ ಆರಂಭಿಸಲಾಗಿದ್ದ ಶಿವ ಮತ್ತು ವಿಷ್ಣು ದೇವಾಲಯ ಕಾಮಗಾರಿಗೆ ಹಣ ನೀಡಲು ವಿಕ್ಟೋರಿಯನ್ ಸರ್ಕಾರ ನಿರ್ಧರಿಸಿದೆ..
ವಿಕ್ಟೋರಿಯನ್ ಸರ್ಕಾರದ ಬಹುಸಂಸ್ಕೃತಿ ಸಚಿವ ರಾಬಿನ್ ಸ್ಕಾಟ್ ಇತ್ತೀಚೆಗೆ ಶಿವ ವಿಷ್ಣು ದೇವಾಲಯಕ್ಕೆ ಕುಟುಂಬ ಸಮೇತ ಭೇಟಿಯಾಗಿ, ದೇವರ ದರ್ಶನ ಪಡೆದುಕೊಂಡು, ವಿಕ್ಟೋರಿಯನ್ ಹಿಂದೂ ಸಮಾಜದವರಿಗೆ ಶಿವ ವಿಷ್ಣು ದೇವಾಲಯದ ಕಾಮಗಾರಿಗೆ 160,000 ಡಾಲರ್ ಹಣ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಸರ್ಕಾರ ವಿಕ್ಟೋರಿಯಾದಲ್ಲಿ ವಾಸಿಸುವ ಪ್ರತಿ ನಾಗರೀಕರಿಗೂ ಸಂಸ್ಕೃತಿ, ರಕ್ಷಣೆಗೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
ಹೋದಲೆಲ್ಲಾ ಹಿಂದೂ ಧರ್ಮವನ್ನು ದೂಷಿಸುತ್ತಿರುವ ಹಿಂದೂ ಧರ್ಮದಲ್ಲೇ ಇರುವ ಕೆಲ ಎಡಬಿಡಂಗಿಗಳ ಮಧ್ಯೆ ಆಸ್ಟ್ರೇಲಿಯಾದ ವಿಕ್ಟೋರಿಯನ್ ಸರ್ಕಾರ ಹಿಂದೂ ದೇವಾಲಯಕ್ಕೆ ಹಣ ಬಿಡುಗಡೆ ಮಾಡಿದ್ದು, ಹಿಂದೂ ಸಂಸ್ಕೃತಿ ವಿಶ್ವವ್ಯಾಪಿಯಾಗುತ್ತಿದೆ ಎಂಬುದರ ಸಂಕೇತವಾಗಿದೆ.
ವಿಕ್ಟೋರಿಯನ್ ಸರ್ಕಾರದ ಈ ನಿರ್ಧಾರ ಆಸ್ಟ್ರೇಲಿಯಾದಲ್ಲಿರುವ ಹಿಂದೂಗಳಿಗೆ ಪ್ರೇರಣೆ ನೀಡಿದ್ದು, ಶೀಘ್ರದಲ್ಲಿ ಪ್ರಮುಖ ಸಮಸ್ಯೆಯಾಗಿದ್ದ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ನೀಗಿಸಲು 300 ಕಾರ್ ನಿಲ್ಲುವ ಸಾಮರ್ಥ್ಯದ ಪಾರ್ಕಿಂಗ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಸರ್ಕಾರ ಹಿಂದೂ ಸಮುದಾಯದವರಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ವಿಕ್ಟೋರಿಯನ್ ಹಿಂದೂ ಸೊಸೈಟಿಯ ರಾಮ್ ಪ್ರಸಾದ್ ವೇಮುಲಾ ಧನ್ಯವಾದ ಸಲ್ಲಿಸಿದ್ದಾರೆ.
Leave A Reply