• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಸೀದಿಗೆ ದಾರಿ ನೀಡಿ, ಸೌಹಾರ್ದತೆ ಮೆರೆದ ಹಿಂದೂಗಳು

TNN Correspondent Posted On March 1, 2018
0


0
Shares
  • Share On Facebook
  • Tweet It

ಫೈಜಬಾದ್: ಇದುವರೆಗೆ ಕೇವಲ ಹಿಂದೂ ಮುಸ್ಲಿಂ ಕೋಮು ಗಲಭೆಗೆ ಪ್ರಚಾರದಲ್ಲಿರುತ್ತಿದ್ದ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನಕ್ಕೇರಿದ ನಂತರ ಹೊಸ ಶಕೆ ಆರಂಭವಾಗಿದೆ. ಹಿಂದೂ, ಮುಸ್ಲಿಂ ಎನ್ನದೇ ಕಠಿಣ ನಿರ್ಧಾರಗಳ ಮೂಲಕ ಕ್ರಿಮಿನಲ್ ಗಳ ಹೆಡೆಮುರಿ ಕಟ್ಟಿರುವ ಯೋಗಿ ಸರ್ಕಾರ, ಶಾಂತಿ, ಸೌಹಾರ್ದತೆಯನ್ನು ಸಾರುತ್ತಿದೆ. ಇನ್ನು ವಿಶ್ವದಲ್ಲೇ ಶಾಂತಿ, ಸೌಹಾರ್ದತೆ, ಸಹಕಾರ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಹಿಂದೂಗಳು ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮಸೀದಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವ ಮೂಲಕ ಸೌಹಾರ್ದತೆಯ ವಾತಾವರಣ ಸೃಷ್ಟಿಗೆ ಕಾರಣವಾಗಿದ್ದಾರೆ.

ಉತ್ತರ ಪ್ರದೇಶದ ಸಂತ ಕಬೀರ್‌ ನಗರ ಜಿಲ್ಲೆಯಲ್ಲಿ ಮಸೀದಿಗೆ ಹೋಗಲು ದಾರಿ ನಿರ್ಮಾಣಕ್ಕೆ ಹಿಂದೂಗಳು ಭೂಮಿ ನೀಡಿದ್ದಾರೆ. ಹಿಂದೂಗಳು ಭೂಮಿ ನೀಡಿದ್ದರಿಂದ ಮುಸ್ಲಿಮರು ನಮಾಜ್‌ಗೆಂದು ಮಸೀದಿಗೆ ಹೋಗುವುದು ಸುಲಭವಾಗಲಿದೆ.

ಮಸೀದಿಗೆ ಹೋಗಲು ಮುಸ್ಲಿಮರು ಸಂಕಷ್ಟ ಪಡುತ್ತಿದ್ದರು. ಮುಸ್ಲಿಮರ ಸಮಸ್ಯೆಗೆ ಪರಿಹಾರ ಒದಗಿಸುವ ದೃಷ್ಟಿಯಿಂದ  ಹಿಂದೂಗಳು ಭೂಮಿ ನೀಡಿದ್ದಾರೆ. ಸಂತಕಬೀರ್ ಗ್ರಾಮದ ರಾಜೇಂದ್ರ ಸಿಂಗ್‌, ಕಪಿಲ್‌ ಸಿಂಗ್‌, ಮಹೇಂದ್ರ ಸಿಂಗ್‌ ಮತ್ತು ನಕ್ಚೆಂದ್‌ ಸಿಂಗ್‌ ಅವರು ಮಸೀದಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ನೂರು ಮೀಟರ್ ಭೂಮಿ ದಾನ ನೀಡಿದ್ದಾರೆ ಎಂದು ಗ್ರಾಮದ ಮುಖಂಡೆ ಊರ್ಮಿಳಾ ದೇವಿ ತಿಳಿಸಿದ್ದಾರೆ.

ತವೈಪರ್‌ನಲ್ಲಿ ಮುಸ್ಲಿಮರು ನಮಾಜ್‌ಗೆ ಹೋಗುತ್ತಿದ್ದ ಮಸೀದಿ ಪಕ್ಕ ಸದಾ ಕೊಳಚೆ ನೀರು ತುಂಬಿಕೊಂಡಿರುತ್ತದೆ. 1963 ರಲ್ಲಿ ನಿರ್ಮಾಣವಾದ ಮಸೀದಿ ಸುತ್ತ ಪ್ರದೇಶದಲ್ಲಿ ಜನ ಸಂಖ್ಯೆ ಹೆಚ್ಚಿದ್ದು, ಮಸೀದಿಗೆ ಹೋಗುವ ಸಮೀಪದ ದಾರಿಯಲ್ಲಿ ತೀವ್ರ ಸಮಸ್ಯೆಯಾಗುತ್ತಿತ್ತು. ಇದೀಗ ಹಿಂದೂಗಳು ಭೂಮಿ ನೀಡುವ ಮೂಲಕ ಹಿಂದೂಗಳು ಉದಾರತೆ ಮೆರೆದಿದ್ದು, ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.

0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Tulunadu News February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 5
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search