ಉ.ಪ್ರ. ಉಪಚುನಾವಣೆಯಲ್ಲಿ ಸೋತರೂ ಗೆದ್ದಂತಾಡಿದ ಕಾಂಗ್ರೆಸ್ ರಾಜ್ಯಸಭೆ ಚುನಾವಣೆ ಕುರಿತು ಏನೆನ್ನುತ್ತದೆ?
ಲಖನೌ: ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಎರಡು ಲೋಕಸಭಾ ಚುನಾವಣೆ ಕ್ಷೇತ್ರಗಳಿಗೆ ನಡೆದ ಉಪ-ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಭಾರತೀಯ ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ಅಲ್ಪ ಮತಗಳಿಂದ ಸೋಲಿಸಿದವು. ಆದರೆ ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡರೂ ಸಂಭ್ರಮಿಸಿದ್ದು ಮಾತ್ರ ಕಾಂಗ್ರೆಸ್.
ಆದರೆ ಚಾಣಕ್ಯ ಅಮಿತ್ ಶಾ ಮತ್ತು ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಚಾಣಾಕ್ಷ ನಡೆಯಿಂದ ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಒಂಬತ್ತೂ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು, ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ಸಿಗೆ ಭಾರಿ ಮುಖಭಂಗವಾದಂತಾಗಿದೆ.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತವಿರುವುದರಿಂದ ನಿರೀಕ್ಷಿತವಾಗಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಲ್ಲೂ ಕುತಂತ್ರ ಮಾಡಿದ್ದ, ಬಿಎಸ್ಪಿ, ಕಾಂಗ್ರೆಸ್ ಹಾಗೂ ಎಸ್ಪಿ ಪಕ್ಷಗಳು ಬಿಜೆಪಿಯ ಒಬ್ಬ ಅಭ್ಯರ್ಥಿಯನ್ನಾದರೂ ಸೋಲಿಸಲು ಹುನ್ನಾರ ಮಾಡಿದ್ದವು.
ಅದರಲ್ಲೂ ಬಿಎಸ್ಪಿಯ ಶಾಸಕರೊಬ್ಬರು, ಬೇರೆಯವರು ಏನು ಮಾಡಿದ್ದಾರೋ ಗೊತ್ತಿಲ್ಲ, ನಾನಂತೂ ಅಂತಃಸತ್ವದ ಕರೆಯಂತೆ ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಎರಡು ಸೀಟು ಗೆದ್ದು ಪ್ರಧಾನಿಯಾದವರಂತೆ ಬೀಗಿದ್ದ ಮಾಯಾವತಿಯವರಿಗೆ ತೀವ್ರ ಮುಖಭಂಗವಾಗಿದೆ.
Leave A Reply