ತ್ರಿಪುರಾ ಸರ್ಕಾರದ ಕಠೋರ ನಿರ್ಧಾರ, ಬಾಂಗ್ಲಾ ಅಕ್ರಮ ನುಸುಳುಕೋರರಿಗೆ ಶುರುವಾಗಿದೆ ನಡುಕ
ಅಗರ್ತಲಾ: ದೇಶಕ್ಕೆ ಕಂಟಕವಾಗಿ ಮಾರ್ಪಟ್ಟಿರುವ ಬಾಂಗ್ಲಾ ಅಕ್ರಮ ನುಸುಳುಕೋರರಿಗೆ ನಡುಕ ಶುರುವಾಗಿದೆ. ಬೇಕಾಬಿಟ್ಟಿಯಾಗಿ ತನ್ನ ರಾಜಕೀಯಕ್ಕಾಗಿ ಅಕ್ರಮ ನುಸುಳುಕೋರರಿಗೆ ಆಶ್ರಯ ನೀಡಿ, ಪೋಷಿಸುತ್ತಿದ್ದ ವಿರೋಧ ಪಕ್ಷಗಳು ಗೂಡು ಸೇರಿದ್ದು, ತ್ರಿಪುರಾದಲ್ಲಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ನುಸುಳುಕೋರರ ವಿರುದ್ಧ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದು, ನುಸುಳುಕೋರರತನ ತಡೆಯಲು ಗಟ್ಟಿ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ಹೊಸ ನಿರೀಕ್ಷೆ ಮೂಡಿಸಿದ್ದಾರೆ.
ಭಾರತ ಸರ್ಕಾರದ ಸಹಕಾರದೊಂದಿಗೆ ಬಾಂಗ್ಲಾದೇಶದ ಗಡಿಯಲ್ಲಿ ಅಕ್ರಮ ನುಸುಳುಕೋರತನವನ್ನು ನಿಯಂತ್ರಿಸಲು ಎಲ್ಲ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಗಡಿಯಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳಿಗೆ ಮೂಗುದಾರ ಹಾಕಲು ನಿರ್ಧರಿಸಲಾಗಿದೆ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಕುಮಾರ ಸ್ಪಷ್ಟಪಡಿಸಿದ್ದಾರೆ.
ಭಾರತದ ಗಡಿಯಲ್ಲಿ ದೇಶದ ವಿರುದ್ಧ ನಡೆಯುತ್ತಿರುವ ಒಳಸಂಚುಗಳನ್ನು ತಡೆಯಲು ನಿರ್ಧರಿಸಲಾಗಿದ್ದು, ಗಡಿಯೂದಕ್ಕೆ ತೀವ್ರ ಕಟ್ಟೆಚ್ಚರ ವಹಿಸುವುದು, ಸೈನಿಕ ಬಲ ಹೆಚ್ಚಿಸಿಸುವುದು ಸೇರಿ ನಾನಾ ಕ್ರಮಗಳನ್ನು ಕೈಗೊಂಡು ಬಾಂಗ್ಲಾ ಅಕ್ರಮ ನುಸುಳುಕೋರರನ್ನು ನಿಯಂತ್ರಿಸಲು ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇಬ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವೂ ಈ ನಿಯಮಕ್ಕೆ ಬದ್ಧವಾಗಿದ್ದು, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರವೂ ಎಲ್ಲ ಸಹಕಾರ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕಕಾಲಕ್ಕೆ ಬಾಂಗ್ಲಾ ವಲಸಿಗರ ವಿರುದ್ಧ ಮುಗಿಬಿದ್ದಿದ್ದು, ಶೀಘ್ರದಲ್ಲಿ ನುಸುಳಕೋರರ ಸಮಸ್ಯೆಗೆ ಒಂದು ಕೊನೆ ಹಾಡಲು ನಿರ್ಧರಿಸಿದ್ದು, ಬಾಂಗ್ಲಾ ಅಕ್ರಮ ವಾಸಿಗಳಿಗೆ ಭೀತಿ ಹುಟ್ಟಿಸಿದೆ.
Leave A Reply