• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಭಾಗ್ಯಗಳಲ್ಲಿ ಯಶಸ್ವಿ ಭಾಗ್ಯ ಗೋಕಳ್ಳತನ ಭಾಗ್ಯ!

Hanumantha Kamath Posted On April 5, 2018
0


0
Shares
  • Share On Facebook
  • Tweet It

ಗೋಕಳ್ಳತನ ಹಿಂದೂಗಳ ಸಮಸ್ಯೆ, ಅವರು ನಾಲ್ಕು ದಿನ ಅಳುತ್ತಾರೆ, ಪ್ರತಿಭಟಿಸುತ್ತಾರೆ, ನಂತರ ಮರೆತುಬಿಡುತ್ತಾರೆ ಎಂದು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಹಿಂದಿನ ಶಾಸಕರು, ಸಚಿವರು ಅಂದುಕೊಂಡಿದ್ದರೆ ಅದನ್ನು ಅವರು ಬೇಗ ಸರಿಪಡಿಸಿಕೊಳ್ಳುವುದು ಒಳ್ಳೆಯದು.

ಯಾಕೆಂದರೆ ಟಿ ಜಿ ರಾಜಾರಾಂ ಭಟ್ ನೇತೃತ್ವದಲ್ಲಿ ಮಂಗಳೂರಿನ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಗೋಪ್ರೇಮಿಗಳು ಕೈಗೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಅಲ್ಲಿ ಹಿಂದೂಗಳು ಇದ್ದಾರೆ, ಮುಸ್ಲಿಮರು ಇದ್ದಾರೆ, ಕ್ರೈಸ್ತರೂ ಇದ್ದಾರೆ. ಒಟ್ಟಿನಲ್ಲಿ ಗೋಪ್ರೇಮಿಗಳು ಇದ್ದಾರೆ. ಹಲವರ ಕಣ್ಣುಗಳಲ್ಲಿ ನೀರು ಜಿನುಗುತ್ತಿದೆ. ಅನೇಕರ ಮನದಲ್ಲಿ ನೋವು ಹೆಪ್ಪುಗಟ್ಟಿದೆ. ಬೆಳಿಗ್ಗೆ ಹಾಲಿನವ ಪ್ಯಾಕೇಟು ತಂದು ನಮ್ಮ ಮನೆಯ ಬಾಗಿಲಲ್ಲಿ ಎಸೆದು ಹೋಗುವಾಗ ಅರ್ಧ ಗಂಟೆ ತಡವಾದರೆ ನಾವು ಚಡಪಡಿಸುತ್ತೇವೆ. ಹಾಗಿರುವಾಗ ಆ ಹಾಲನ್ನೇ ಕೊಡುವ ಕಾಮಧೇನು ಮೇಯಲು ಹೋದದ್ದು ಬರದೇ ಇದ್ದಾಗ ಅದನ್ನು ಸಾಕಿದವರಿಗೆ ಹೃದಯ ಬಾಯಲ್ಲಿ ಬಂದಂತೆ ಆಗುವುದರಲ್ಲಿ ಸಂಶಯವಿಲ್ಲ. ಯಾರು ಗೋ ಸಾಕುತ್ತಾರೋ ಅವರ ಪ್ರೀತಿಯನ್ನು ನಿಮಗೆ ಅಳತೆ ಮಾಡಲು ಸಾಧ್ಯವಿಲ್ಲ. ಅವರು ಮಕ್ಕಳಿಗೆ ತಿಂಡಿ ಕೊಡಲು ಹತ್ತು ನಿಮಿಷ ತಡ ಮಾಡಿಯಾರು ಆದರೆ ದನಕ್ಕೆ ಹಿಂಡಿ ಕೊಡಲು ಅರ್ಧ ನಿಮಿಷ ಕೂಡ ತಡ ಮಾಡುವುದಿಲ್ಲ. ಗೋವುಗಳ ಹಾರೈಕೆ ಮಾಡುವವರಿಗೆ ಯಾವುದೋ ಬೇರೆಯದ್ದೇ ರೀತಿಯ ಮಮಕಾರ ಆ ಭಗವಂತ ಕೊಟ್ಟಿದ್ದಾನೆ ಅಂತ ಅನಿಸುತ್ತದೆ. ಅವರು ಬೇರೆಯವರಿಗಿಂತ ಹೆಚ್ಚು ಭಾವುಕರಾಗಿರುತ್ತಾರೆ. ಗೋವಿನ ಸಂಭ್ರಮದಲ್ಲಿ ಇರುವವರಿಗೆ ಹೊರಗಿನ ಯಾವ ಪ್ರಪಂಚದ ಅರಿವೂ ಇರುವುದಿಲ್ಲ. ಅವರಾಯಿತು, ಅವರ ಕೆಲಸವಾಯಿತು ಎನ್ನುವ ಗುಂಗಿನಲ್ಲಿರುತ್ತಾರೆ. ಅಂತವರ ಎದುರಿನಲ್ಲಿಯೇ ತಲವಾರು ತೋರಿಸಿ ಅವರ ದನಕರುಗಳನ್ನು ಎಳೆದುಕೊಂಡು ಹೋಗುವವರು ಹೆಚ್ಚಾಗುತ್ತಿದ್ದಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಮೇಯಲು ಬಿಡುವುದು ತಪ್ಪಾ…

ಹಾಗಂತ ಗೋಕಳ್ಳರಿಗೆ ದನಕರುಗಳು ಕೇವಲ ತಿನ್ನುವ ವಸ್ತು. ಅವರಲ್ಲಿ ರಾಕ್ಷಸೀಯ ಗುಣಗಳು ಹೆಪ್ಪುಗಟ್ಟಿರುವಂತೆ ಅವರು ವರ್ತಿಸುತ್ತಾರೆ. ಅವರಿಗೆ ಭಾವನೆ ಬಿಡಿ, ಗೋವಿನಲ್ಲಿ ಕಾಣುವುದು ಕೇವಲ ಮಾಂಸ ಮಾತ್ರ. ಗೋಸಂತತಿ ಈ ಪರಿ ಆಹಾರವಾಗಿ ಕಣ್ಮರೆಯಾಗುತ್ತಿದ್ದರೆ ಮುಂದೊಂದು ದಿನ ನಮ್ಮ ಕೃಷಿ ಬದುಕು ಕೂಡ ನಾಶವಾಗುತ್ತದೆ. ಬಳಿಕ ಹೊಟ್ಟೆಗೆ ಅನ್ನ ಕಾಣಬೇಕಾದರೆ ಅದೆಷ್ಟು ಕಷ್ಟವಿದೆಯೋ. ಈ ಸಂಗತಿಯನ್ನು ಅರ್ಥ ಮಾಡಿಕೊಂಡಿರುವ ವಿದೇಶಿಯರು ತಮ್ಮ ರಾಷ್ಟ್ರಗಳಲ್ಲಿ ಗೋವಿನ ಸಂಖ್ಯೆಯನ್ನು ಹೆಚ್ಚು ಮಾಡಲು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ನಾವು ಮಾತ್ರ ಗೋವನ್ನು ಉಳಿಸುವುದರ ಬಗ್ಗೆ ಉಪವಾಸ ಸತ್ಯಾಗ್ರಹ ಮಾಡುವ ಮಟ್ಟಕ್ಕೆ ಬಂದಿದ್ದೇವೆ.

ಲೆಕ್ಕಪ್ರಕಾರ ಸರಕಾರಗಳೇ ಗೋವನ್ನು ಸಾಕುವವರಿಗೆ ಪ್ರೋತ್ಸಾಹ ಕೊಟ್ಟು ಅವರನ್ನು ಉತ್ತೇಜಿಸಬೇಕಿತ್ತು. ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ದನ ಕಾಣೆಯಾಗಿರುವ ಪ್ರಕರಣ ಬಂದರೆ ಅಲ್ಲಿನ ಪೊಲೀಸ್ ಠಾಣಾಧಿಕಾರಿ ಸಸ್ಪೆಂಡ್ ಆಗಬೇಕು ಎನ್ನುವಂತಹ ಕಾನೂನು ಬರಬೇಕಿತ್ತು. ಆಗ ಕನಿಷ್ಟ ಪ್ರತಿ ಠಾಣೆಯ ಪೊಲೀಸ್ ಅಧಿಕಾರಿಗಳು ಹೆಚ್ಚು ಜಾಗರೂಕರಾಗುತ್ತಿದ್ದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಎಷ್ಟೆಷ್ಟು ದನಗಳಿವೆ ಎನ್ನುವ ಲೆಕ್ಕ ಅವರಿಗೆ ಮಾಡಲು ಹೇಳಬೇಕು. ಅದರಲ್ಲಿ ಒಂದು ದನ ಕಡಿಮೆಯಾದರೂ ಅದರ ಸಂಪೂರ್ಣ ವಿವರ ಆ ಠಾಣಾಧಿಕಾರಿ ರಾಜ್ಯದಲ್ಲಿ ಗೋಸಂರಕ್ಷಣಾ ಸಮಿತಿಯೊಂದಕ್ಕೆ ವಿವರ ಕೊಡಬೇಕು ಎನ್ನುವ ನಿಯಮ ತರಬೇಕು. ಆಗ ಗೋಕಳ್ಳತನ ಕಡಿಮೆಯಾಗುತ್ತದೆ. ಯಾಕೆಂದರೆ ಯಾರಾದರೂ ಗೋವನ್ನು ಕಳ್ಳತನ ಮಾಡಲು ಬಂದರೆ ಪೊಲೀಸರು ಅವನನ್ನು ಹಿಡಿದು ಆತ ಭವಿಷ್ಯದಲ್ಲಿ ದನ ಎಂದರೆ ಒಳಗೆ ಒದ್ದೆ ಮಾಡಿಕೊಳ್ಳಬೇಕು ಅಂತಹ ಪರಿಸ್ಥಿತಿಗೆ ತರುತ್ತಾರೆ. ಯಾಕೆಂದರೆ ಗೋವು ಪರೋಕ್ಷವಾಗಿ ಅವರ ಭವಿಷ್ಯದ ಪ್ರಶ್ನೆಯೂ ಆಗಿರುತ್ತದೆ. ಒಂದು ವೇಳೆ ಇಂತಹ ನಿಯಮಗಳನ್ನು ಮಾಡದಿದ್ದಲ್ಲಿ ಏನಾಗುತ್ತದೆ ಎಂದರೆ ಮೊನ್ನೆ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಒಬ್ಬರು ಹೇಳಿದ ಹಾಗೆ ಗೋಕಳ್ಳತನ ಆಗಿದೆ ಎಂದು ದೂರು ಕೊಡಲು ಹೋದರೆ “ನೀವು ಮೇಯಲು ಬಿಟ್ಟಿದ್ದು ಯಾಕೆ” ಎಂದು ಪೊಲೀಸರೇ ಕೇಳಿದರಂತೆ. ಇದಾ ಕೇಳುವ ಪ್ರಶ್ನೆ.

ಅತ್ಯಾಧುನಿಕ ವ್ಯವಸ್ಥೆ ಯಾವುದಕ್ಕೆ…

ಈಗ ಪೊಲೀಸ್ ಇಲಾಖೆ ಮೊದಲಿನಂತೆ ಅಲ್ಲ. ದನ ಒಂದು ಮನೆಯಲ್ಲಿ ಕಳವು ಆಗಿದೆಯೆಂದ ಮಾಹಿತಿ ಸಿಕ್ಕ ತಕ್ಷಣ ಅಲ್ಲಿ ತಕ್ಷಣ ಹೋಗಿ ಕಳ್ಳರನ್ನು ಹಿಡಿಯುವ ವ್ಯವಸ್ಥೆ ಅವರಲ್ಲಿ ಇದೆ. ಅದಕ್ಕಾಗಿ ಅವರಿಗೆ ಸುಸಜ್ಜಿತ ವಾಹನಗಳನ್ನು ಕರುಣಿಸಲಾಗಿದೆ. ಹಿಂದೆ ಆದರೆ ಇಷ್ಟು ಒಳ್ಳೆಯ ವಾಹನ ಇರಲಿಲ್ಲ. ಬೈಕ್ ನಲ್ಲಿ ಇಬ್ಬರೂ ಪಿಸಿಗಳು ಹೋಗುವಾಗ ದನ ಮಾಂಸವಾಗಿ ಯಾರದ್ದೋ ಹೊಟ್ಟೆ ಸೇರುತ್ತಿತ್ತು. ಈಗ ಹಾಗಲ್ಲವಲ್ಲ. ಇದರೊಂದಿಗೆ ಒಂದು ಠಾಣಾ ವ್ಯಾಪ್ತಿಯಲ್ಲಿ ಗೋ ಕಳ್ಳರು ಯಾರ್ಯಾರಿದ್ದಾರೆ ಎನ್ನುವ ಐಡಿಯಾ ಪೊಲೀಸರಿಗೆ ಇರುತ್ತದೆ. ಅಂತಹ ಗೋಕಳ್ಳರ ನಲ್ಟು ಬೊಲ್ಟು ಸಡಿಲ ಮಾಡಿದರೆ ನಂತರ ಸ್ವಲ್ಪ ಕಾಲದ ತನಕ ಗೋಕಳ್ಳತನ ಬಿಡಿ, ಆ ಬಗ್ಗೆ ಯೋಚಿಸಲು ಕೂಡ ಗೋಕಳ್ಳರು ಹೋಗುವುದಿಲ್ಲ. ಇನ್ನು ಗೋಶಾಲೆಗೆ ಬಂದು ದನಗಳನ್ನು ಎತ್ತಿಕೊಂಡು ಹೋಗುತ್ತಾರೆ ಎಂದರೆ ಅಂತವರು ಸೀಸನ್ಡ್ ಕಳ್ಳರು ಆಗಿರುತ್ತಾರೆ. ಅಂತವರು ಎರಡು ಸಲ ಸಿಕ್ಕಿಬಿದ್ದರೆ ಮೂರನೇ ಸಲ ಎನ್ ಕೌಂಟರ್ ಮಾಡಲಾಗುತ್ತದೆ ಎಂದು ಸರಕಾರ ನಿಯಮ ತಂದರೆ ಮುಗಿಯಿತು. ಎಷ್ಟೋ ಮನೆಗಳಲ್ಲಿ ಹೆಂಗಸರು ದನ ಕಳೆದುಕೊಂಡ ದು:ಖದಲ್ಲಿ ಅಳುವುದು ನಿಲ್ಲಿಸಬಹುದು.

ಇನ್ನು ಗೋಕಳ್ಳತನ ಹೆಚ್ಚಾಗಿರುವ ಉಳ್ಳಾಲದಂತಹ ಭಾಗದಲ್ಲಿ ಹೆಣ್ಣುಮಕ್ಕಳು ರಾತ್ರಿ ನಡೆದಾಡಿ ಹೋಗುವುದು ಕಷ್ಟಕರವಾಗಿದೆ, ಅಷ್ಟು ಗಾಂಜಾ ವ್ಯಸನಿಗಳ ತೊಂದರೆ ಇದೆ ಎಂದು ಸತ್ಯಾಗ್ರಹ ನೇತೃತ್ವ ವಹಿಸಿದ ರಾಜಾರಾಂ ಭಟ್ ಹೇಳಿದರು. ಅದು ಪ್ರತ್ಯೇಕ ಚರ್ಚೆ ಮಾಡಬೇಕಾದ ಸಂಗತಿ. ಆದರೆ ಗೋಕಳ್ಳರನ್ನು ಕಳೆದ ಐದು ವರ್ಷಗಳಲ್ಲಿ ನಿಯಂತ್ರಿಸಲಾಗದೇ ಕಾಂಗ್ರೆಸ್ ಸೋತು ಹೋಗಿದೆ. ಗೋಕಳ್ಳತನ ಭಾಗ್ಯವನ್ನು ಸಿದ್ಧರಾಮಯ್ಯ ಯಶಸ್ವಿಯಾಗಿ ಜಾರಿಗೆ ತಂದ ಹಿರಿಮೆ ಹೊಂದಿದ್ದಾರೆ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search