ಶಕ್ತಿನಗರದ ನಾಲ್ಯಪದವು ಶಾಲೆಯಲ್ಲಿ ಮಿಂಚಿನ ನೊಂದಣೆ ಪ್ರಕ್ರಿಯೆ ಸಂದರ್ಭ ನಡೆದದ್ದೇನು?
ನಮ್ಮ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಮತದಾನ ಮಾಡುವ ಅವಕಾಶ ಸಾರ್ವಜನಿಕರಿಗೆ ಕೊಡುವ ನಿಟ್ಟಿನಲ್ಲಿ ನಿನ್ನೆ ಅಂದರೆ ಎಪ್ರಿಲ್ 8, ಭಾನುವಾರ ಜಿಲ್ಲಾಡಳಿತ ಕಾರ್ಯಕ್ರಮ ಆಯೋಜಿಸಿತ್ತು. ಅದಕ್ಕೆ ಅವರು ಕೊಟ್ಟ ಹೆಸರು ಮಿಂಚಿನ ನೋಂದಣಿ. ಯಾರ ಹೆಸರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಲ್ಲವೋ ಅಥವಾ ಯಾರು ವೋಟರ್ ಐಡಿ ಕಾರ್ಡ್ ಮಾಡಲಿಲ್ಲವೋ ಅವರು ತಮ್ಮ ಸಮೀಪದ ಮತಗಟ್ಟೆಗೆ ಹೋಗಿ ಅಲ್ಲಿ ಜಿಲ್ಲಾಡಳಿತ ನಿಯೋಜಿಸಿದ್ದ ಸಿಬ್ಬಂದಿಗಳ ಬಳಿ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಬಹುದಿತ್ತು. ಬಹಳ ಉತ್ತಮ ಯೋಚನೆ ಮತ್ತು ಯೋಜನೆ. ಈ ಕುರಿತು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಅವರ ಇಡೀ ತಂಡವನ್ನು ಅಭಿನಂದಿಸಲೇಬೇಕು. ಮತದಾನದಂತಹ ಪವಿತ್ರ ಹಕ್ಕನ್ನು ಜನರು ಚಲಾಯಿಸಬೇಕಾದ್ದಲ್ಲಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕಾದದ್ದು ಅವಶ್ಯಕ. ಆದರೆ ಎಷ್ಟೋ ಜನ ಮತದಾನದ ದಿನ ಬೂತ್ ತನಕ ಹೋಗಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣದಿಂದ ತಮ್ಮ ಹಕ್ಕನ್ನು ಚಲಾಯಿಸಲಾಗದೇ ಹಾಗೆ ಬರುತ್ತಾರೆ. ಅದು ಈ ಬಾರಿ ಆಗಬಾರದು ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿಗಳು ಸೂಕ್ತ ಕಾಲಕ್ಕೆ ಒಳ್ಳೆಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಮಂಗಳೂರಿನ ಅನೇಕ ಶಾಲೆಗಳಲ್ಲಿ ಬೆಳಿಗ್ಗೆಯಿಂದ ಟೇಬಲ್, ಕುರ್ಚಿ ಹಾಕಿ ಚುನಾವಣಾಧಿಕಾರಿಗಳು ನೇಮಿಸಿದ್ದ ವ್ಯಕ್ತಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು.
69 ಹೆಸರು ಡಿಲಿಟ್ ಮಾಡಲಿಲ್ಲದ ಕಾರಣ..
ಹಾಗಿರುವಾಗ ಶಕ್ತಿನಗರದ ನೆಲ್ಯಪದವು ಎನ್ನುವ ಏರಿಯಾದಲ್ಲಿರುವ ಸರಕಾರಿ ಶಾಲೆಯಲ್ಲಿಯೂ ಈ ಮಿಂಚಿನ ನೊಂದಣಿ ಪ್ರಕ್ರಿಯೆ ನಡೆಯುತ್ತಿತ್ತು. ಅಲ್ಲಿಗೆ ಒಂದಿಷ್ಟು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಆಗಮಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಕೆಲವು ಅಕ್ರಮ ಹೆಸರುಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ ಯಾರೋ ಕರೆ ಮಾಡಿ ನನಗೆ ಮಾಹಿತಿ ಕೊಟ್ಟಿದ್ದಾರೆ. ಅಲ್ಲಿ ಮತದಾರರ ಪಟ್ಟಿಯಲ್ಲಿ ಕೇರಳ ಮೂಲದವರ ಹೆಸರು ಸಾಕಷ್ಟು ಇರುವುದು ಮತ್ತು ಆ ಬಗ್ಗೆ ಸಂಬಂಧಪಟ್ಟವರಿಗೆ ಹಿಂದೇನೆ ಲಿಖಿತವಾಗಿ ಮನವಿ ಕೊಟ್ಟರೂ ಡಿಲಿಟ್ ಮಾಡದಿರುವುದನ್ನು ನನಗೆ ಹೇಳಿದರು. ಆ ಬಗ್ಗೆ ವಿಚಾರಿಸಲು ನಾನು ನಾಲ್ಯಪದವು ಶಾಲೆಗೆ ಹೋದೆ. ವಿಷಯ ಏನೆಂದರೆ ಶಕ್ತಿನಗರದ ಆ ಭಾಗದಲ್ಲಿ ಸಂಜಯ ನಗರ ಎನ್ನುವ ಏರಿಯಾ ಇದೆ. ಅಲ್ಲಿ ಒಂದೇ ಮನೆ ನಂಬರ್ ಇರುವ ವಿಳಾಸ ನೀಡಿ ಸುಮಾರು 270 ಮಂದಿಯ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಶಕೀಲಾ ಕಾವ ಹಾಗೂ ಅಲ್ಲಿನ ಬಿಜೆಪಿ ಕಾರ್ಯಕರ್ತರು ರಂಗಕ್ಕೆ ಇಳಿದಿದ್ದರು. ಎರಡು ತಿಂಗಳ ಹಿಂದೆನೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಕೇರಳ ಮೂಲದ ವ್ಯಕ್ತಿಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎನ್ನುವುದರ ಬಗ್ಗೆ ವಿಷಯ ತಿಳಿಸಿದ್ದರು. ಇದನ್ನು ತೆಗೆಯುವಂತೆ ಮನವಿ ಮಾಡಿದ್ದರು. ಆದರೆ ನಿನ್ನೆ ಮತದಾರರ ಪಟ್ಟಿಗೆ ಮಿಂಚಿನ ನೊಂದಣೆ ಪ್ರಕ್ರಿಯೆ ಸಂದರ್ಭ ಬಿಜೆಪಿ ಕಾರ್ಯಕರ್ತರಿಗೆ ವಿಷಯ ತಿಳಿದಿದೆ. ಅವರು ಅಲ್ಲಿ ಹೋಗಿ ವಿಚಾರಿಸಿದ್ದಾರೆ. ಆದರೆ ಅಧಿಕಾರಿಗಳಿಂದ ಸಕರಾತ್ಮಕ ವಿಷಯ ಬರಲೇ ಇಲ್ಲ. ಆದ್ದರಿಂದ ಒಂದಿಷ್ಟು ಮಾತಿನ ಚಕಮಕಿ ನಡೆದಿದೆ. ಅಷ್ಟೊತ್ತಿಗೆ ವಿಷಯ ತಿಳಿದು ಮಾಧ್ಯಮದವರು ಕೂಡ ಆಗಮಿಸಿದ್ದಾರೆ. ಪೊಲೀಸರು ಕೂಡ ಬಂದಿದ್ದಾರೆ.
ಈ ಸಮಸ್ಯೆ ಇಲ್ಲಿ ಮಾತ್ರ ಅಲ್ಲ…
ಆದ ವಿಷಯ ಏನೆಂದರೆ ಮತದಾರರ ಪಟ್ಟಿಯಲ್ಲಿ ಈ ಅಕ್ರಮವಾಗಿ ಹೆಸರು ನೋಂದಾವಣೆ ಆದದ್ದು ಕೇವಲ ಶಕ್ತಿನಗರದ ಭಾಗದಲ್ಲಿ ಮಾತ್ರವಲ್ಲ. ಮಂಗಳೂರು ನಗರ ದಕ್ಷಿಣದಲ್ಲಿ ಮತದಾರರ ಪಟ್ಟಿಯಲ್ಲಿ ಕೇರಳ ಮೂಲದ ಅನೇಕರ ಹೆಸರುಗಳು ಅಕ್ರಮವಾಗಿ ಸೇರಿವೆ ಎನ್ನುವುದರಲ್ಲಿ ಯಾವ ಸಂಶಯ ಕೂಡ ಇಲ್ಲ. ಕೇರಳ ಮೂಲದ ಅನೇಕರ ಹೆಸರು ತಮ್ಮ ಮೂಲ ಸ್ಥಳದ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಮಂಗಳೂರಿನಲ್ಲಿ ಕೂಡ ಅವರಿಗೆ ವೋಟಿಂಗ್ ಮಾಡುವ ಹಕ್ಕನ್ನು ಕರುಣಿಸಲಾಗಿದೆ. ಕೇರಳ ಭಾಗದವರು ಇಲ್ಲಿ ಯಾರಿಗೆ ವೋಟ್ ಹೆಚ್ಚಿಸಲು ಮತದಾನ ಮಾಡುತ್ತಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಲ್ಲಿನ ಮಲಯಾಳಿ ಕ್ರೈಸ್ತರಿಗೆ ಭಾರತೀಯ ಜನತಾ ಪಾರ್ಟಿಯವರನ್ನು ಕಂಡರೆ ಅಷ್ಟಕಷ್ಟೇ. ಕಮ್ಯೂನಿಸ್ಟ್ ಪಕ್ಷ ಇಲ್ಲಿ ಗೆಲ್ಲುವ ಪಕ್ಷವಾಗಿ ಉಳಿಯದೇ ಇರುವುದರಿಂದ ಅವರ ವೋಟ್ ಯಾರಿಗೆ ಎನ್ನುವ ಅಂದಾಜು ನೀವು ಮಾಡಬಹುದು. ಆದ್ದರಿಂದ ಮಂಗಳೂರಿನ ಕಾಲೇಜುಗಳಲ್ಲಿ ಕಲಿಯುತ್ತಾ ಇಲ್ಲಿನ ಹಾಸ್ಟೆಲ್ ಗಳಲ್ಲಿ ಇರುವ ಇಂತಹ ಅನೇಕ ವಿದ್ಯಾರ್ಥಿನಿಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಲಾಗಿದೆ. ಅದರಲ್ಲಿಯೂ ಒಂದೇ ಮನೆ ನಂಬರ್ ನೀಡಿ 270 ಹೆಸರುಗಳನ್ನು ಸೇರಿಸುವ ಉದ್ದಟತನ ಕೆಲವರು ಮಾಡುತ್ತಾರೆ ಎಂದರೆ ಅವರು ಭಾರತದ ಪ್ರಜಾಪ್ರಭುತ್ವಕ್ಕೆ ಎಂತಹ ದ್ರೋಹ ಮಾಡುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಬಿಜೆಪಿ ಕಾರ್ಯಕರ್ತರು ತಮ್ಮ ಸಮಯಪ್ರಜ್ಞೆಯಿಂದ ಇಂತಹ ಅನೇಕ ಅಕ್ರಮಗಳನ್ನು ಸೆರೆಹಿಡಿದಿದ್ದಾರೆ. ಆದರೆ ಇನ್ನು ಕೂಡ ಹಲವರ ಹೆಸರು ಹಾಗೆ ಉಳಿದಿವೆ. ಅದನ್ನೇ ಶಕ್ತಿನಗರದ ನೆಲ್ಯಪದವು ಶಾಲೆಯಲ್ಲಿ ಮಿಂಚಿನ ನೊಂದಣಿ ಪ್ರಕ್ರಿಯೆ ನಡೆಯುತ್ತಿದ್ದಾಗ ಹೋಗಿ ಪ್ರಶ್ನಿಸಲಾಗಿತ್ತು. ಸದ್ಯ ಆ ಬೂತ್ ನಲ್ಲಿ ಒಂದೇ ನಂಬರಿನ 270 ಹೆಸರುಗಳಲ್ಲಿ 69 ಹೆಸರು ಬಿಟ್ಟು ಬೇರೆ ಅಕ್ರಮ ಹೆಸರುಗಳನ್ನು ಡಿಲಿಟ್ ಮಾಡಲಾಗಿದೆ. ಉಳಿದ 69 ಹೆಸರುಗಳನ್ನು ಕೂಡ ಟಿಲಿಟ್ ಮಾಡಿದರೆ ಆ ಬೂತಿನ ಸಮಸ್ಯೆ ಮುಗಿಯಿತು. ಆದರೆ ಉಳಿದ ಬೂತ್ ಗಳ ಪರಿಸ್ಥಿತಿ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಕ್ರಮ ಮತದಾನ ಮಾಡುವವರನ್ನು ಸದೆ ಬಡಿಯುತ್ತಾರೆ ಎನ್ನುವ ವಿಶ್ವಾಸ ಇದೆ. ಸಸಿಕಾಂತ್ ಸೆಂಥಿಲ್ ಅವರಿಗೆ ಆ ಕ್ಯಾಪೆಸಿಟಿ ಇದೆ!
Leave A Reply