‘ ಭಾರತ ರತ್ನ’ ದ ಹೆಸರು ಮತದಾರರ ಪಟ್ಟಿಯಿಂದ ಔಟ್ !
>> 12 ವರ್ಷಗಳಿಂದ ಮತದಾನ ಮಾಡಿಲ್ಲ ಎಂಬ ಕಾರಣ
>> ಪ್ರಜಾಪ್ರಭುತ್ವಕ್ಕೆ ಮೆರೆಗು ತಂದುಕೊಟ್ಟ ಅಟಲ್‍ಗೆ ಮತದಾರನ ಗೌರವವೂ ಉಳಿಯಲ್ಲ
ಲಖನೌ : ಮತದಾರರ ಪಟ್ಟಿಯಲ್ಲಿ ನೋಂದಣಿಯಾದ ವಿಳಾಸದಲ್ಲಿ ವಾಸವಿಲ್ಲ ಮತ್ತು ದಶಕದಿಂದ ಸ್ಥಳೀಯ ಚುನಾವಣೆಯಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂದು ಮಾಜಿ ಪ್ರಧಾನಿ, ಅಜಾತಶತ್ರು, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಸ್ಥಳೀಯ ಪಾಲಿಕೆ ತೆಗದುಹಾಕಿದೆ.
ಲಖನೌ ಮಹಾನಗರ ಪಾಲಿಕೆಯ ಬಾಬು ಬನ್ಸಾರಿ ವಾರ್ಡ್‍ನ ಮತದಾರರ ಪಟ್ಟಿಯಲ್ಲಿ ವಾಜಪೇಯಿ ಅವರ ಹೆಸರು ನೋಂದಣಿಯಾಗಿದೆ. ಆದರೆ ಅವರು 2000ನೇ ಇಸವಿಯ ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಮಾತ್ರ ಮತದಾನ ಮಾಡಿದ್ದಾರೆ. ನಂತರ 2004ರ ಲೋಕಸಭೆ ಚುನಾವಣೆ ಬಿಟ್ಟರೆ ಮುಂದಿನ ಯಾವ ಚುನಾವಣೆಗಳಲ್ಲಿಯೂ ಮತದಾನವನ್ನು ಮಾಡಿಯೇ ಇಲ್ಲ. ಹಾಗಾಗಿ ಅವರ ಹೆಸರನ್ನು ಕೈಬಿಟ್ಟಿದ್ದೇವೆ ಎಂದು ಪಾಲಿಕೆ ಜೋನಲ್ ಅಧಿಕಾರಿ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕಿಸಾನ್ ಸಂಘದ ಕಚೇರಿಯಾಯ್ತು ಮನೆ
ನೋಂದಣಿಯಾಗಿರುವ ವಾಜಪೇಯಿ ಅವರ ಲಖನೌನ ನಿವಾಸದ ಮನೆ ಪ್ರಸ್ತುತ ಕಿಸಾನ್ ಸಂಘದ ಕಚೇರಿಯಾಗಿದೆ. ಸುಮಾರು 10 ವರ್ಷಗಳಿಂದ ಅವರು ಲಖನೌಗೆ ಭೇಟಿ ನೀಡಿಲ್ಲ. ಅನಾರೋಗ್ಯದ ಕಾರಣ ಅವರು ದೆಹಲಿಯ ತಮ್ಮ ನಿವಾಸದಲ್ಲಿ ದೀರ್ಘಕಾಲದಿಂದ ವಿಶ್ರಾಂತಿಯಲ್ಲಿದ್ದಾರೆ.
Leave A Reply