ಮೋದಿ ಅವರು ಇಂದು ಚಾಲನೆ ನೀಡಲಿರುವ ರೈಲಿನಲ್ಲಿ ನಮ್ಮ ದೇಶದ ಆತ್ಮವಿಶ್ವಾಸವೂ ಓಡಲಿದೆ!
ಪಟನಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ರಚನೆಯಾದ ಬಳಿಕ ಭಾರತೀಯ ರೈಲುಗಳು, ನಿಲ್ದಾಣಗಳ ಅಭಿವೃದ್ಧಿಗೆ ಮುಂದಾಗಿದ್ದು, ಅದರ ಫಲವಾಗಿಯೇ ಇಂದು ದೇಶದ ವಿಮಾನ ನಿಲ್ದಾಣಗಳು ಆಧುನೀಕರಣಗೊಂಡಿದ್ದು ಪ್ರಯಾಣಿಕರಿಗೆ ಉತ್ಕೃಷ್ಟ ಸೌಲಭ್ಯ ಒದಗಿಸುತ್ತಿವೆ.
ಇದರ ಭಾಗವಾಗಿಯೇ ಮಾರ್ಚ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅತೀ ವೇಗದ ವಿದ್ಯುತ್ ಎಂಜಿನ್ ಹೊಂದಿರುವ ರೈಲಿಗೆ ಚಾಲನೆ ನೀಡಲಿದ್ದಾರೆ.
ಭಾರತೀಯ ರೈಲ್ವೆ ಕ್ಷೇತ್ರದಲ್ಲಿ ಈ ರೈಲು ಸಂಚಾರ ಹೊಸ ಮೈಲಿಗಲ್ಲು ಸ್ಥಾಪಿಸಲಾಗುತ್ತಿದೆ ಎಂದೇ ಹೇಳಲಾಗುತ್ತಿದ್ದು, ಇಷ್ಟು ಹಾರ್ಸ್ ಪವರ್ ಎಂಜಿನ್ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಲಿದೆ. ಆ ಮೂಲಕ ಈ ರೈಲಿನಲ್ಲಿ ನಮ್ಮ ಆತ್ಮವಿಶ್ವಾಸವೂ ಓಡಲಿದೆ.
ಈ ರೈಲು 12 ಸಾವಿರ ಹಾರ್ಸ್ ಪವರ್ (ಎಚ್ ಪಿ) ಇರುವ ಎಂಜಿನ್ ಹೊಂದಿದ್ದು, ಇಷ್ಟು ಹಾರ್ಸ್ ಪವರ್ ಇರುವ ರೈಲುಗಳನ್ನು ಹೊಂದಿರುವ ರಷ್ಯಾ, ಚೀನಾ ಹಾಗೂ ಸ್ವೀಡನ್ ರಾಷ್ಟ್ರಗಳ ನಂತರದ ಸ್ಥಾನವನ್ನು ಭಾರತವೇ ಹೊಂದಲಿದೆ. ಈ ರೈಲು ತಾಸಿಗೆ 110 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು, ಇದುವರೆಗೂ ಭಾರತದಲ್ಲಿ 6 ಸಾವಿರ ಹಾರ್ಸ್ ಪವರ್ ಇರುವ ಎಂಜಿನ್ ಹೊಂದಿರುವ ರೈಲುಗಳು ಮಾತ್ರ ಇದ್ದವು.
ಅಲ್ಲದೆ ಮಾಧೆಪುರದಲ್ಲಿ ಇಂತಹ ವಿದ್ಯುತ್ ಎಂಜಿನ್ ರೈಲುಗಳ ತಯಾರಿಕೆಗೆ ಸ್ಥಾಪಿಸುವ ಕಾರ್ಖಾನೆಗೂ ಮೋದಿ ಚಾಲನೆ ನೀಡಲಿದ್ದು, ಈ ಕಾರ್ಖಾನೆಯಲ್ಲಿ ಮುಂದಿನ 11 ವರ್ಷಗಳ ಅವಧಿಯಲ್ಲಿ 8 ಸಾವಿರ ಹಾರ್ಸ್ ಪವರ್ ಇರುವ ರೈಲುಗಳ ತಯಾರಿಸಲಾಗುತ್ತದೆ. 2021ರ ವೇಳೆಗೆ ಇಂತಹ 60 ರೈಲುಗಳು ದೇಶಾದ್ಯಂತ ಓಡಾಡಲಿವೆ ಎಂದು ತಿಳಿದುಬಂದಿದೆ.
Leave A Reply