ಗಡಿ ಅಕ್ರಮ ನುಸುಳುಕೋರರಿಗೆ ಶಾಕ್, ನುಸುಳುವಿಕೆ ತಡೆಯಲು ಸ್ಮಾರ್ಟ್ ಬೇಲಿ
ದೆಹಲಿ: ಅಕ್ರಮವಾಗಿ ನುಸುಳಿ ದೇಶದಲ್ಲಿ ಅನಾಚಾರ, ದೇಶವಿರೋಧಿ ಚಟುವಟಿಕೆ, ಭಯೋತ್ಪಾದನೆ, ಕೋಮು ಗಲಭೆ ಸೇರಿ ನಾನಾ ಕುಕೃತ್ಯಗಳನ್ನು ನಡೆಸುವ ನುಸುಳುಕೋರರಿಗೆ ಕೇಂದ್ರ ಸರ್ಕಾರ ಭರ್ಜರಿ ಶಾಕ್ ನೀಡಿದೆ. ಬಾಂಗ್ಲಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ನಿರಂತರವಾಗಿ ಭಾರತಕ್ಕೆ ಅಕ್ರಮವಾಗಿ ನುಳುವಿಕೆ ತಡೆಯಲು ಸೈನ್ಯ ಆಧುನಿಕ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಫೆನ್ಸ್ ಬೇಲಿಯನ್ನು ಆರಂಭವಿಕವಾಗಿ ಅಸ್ಸಾಂನಲ್ಲಿ ಅಳವಡಿಸಲಾಗಿದೆ. ಶೀಘ್ರದಲ್ಲೇ ಈ ಬೇಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಇಡೀ ಗಡೀ ಪ್ರದೇಶವನ್ನು ಆಕ್ರಮಿಸಲಿದೆ.
ಇದೀಗ ಅಸ್ಸಾಂನ ಭಾಂಗ್ಲಾ ಗಡಿಯಲ್ಲಿ ಕಾಂಪ್ರಹೆನ್ಸೀವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ಪ್ರಸ್ತುತ ಬಹ್ಮಪುತ್ರ ನದಿ ದಂಡೆಯ ಧುಬ್ರಿಯಲ್ಲಿನ ಗಡಿಭಾಗದ 55 ಕಿ.ಮೀ. ಉದ್ದಕ್ಕೂ ಅಳವಡಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
ಗುಡ್ಡಗಾಡು, ನದಿ, ಅರಣ್ಯ ಸೇರಿ ನಾನಾ ರೀತಿಯ ಪ್ರದೇಶದಲ್ಲಿ ತಡೆಗೋಡೆ, ತಂತಿ ಬೇಲಿ ನಿರ್ಮಿಸಲು ಸಾಧ್ಯವಿಲ್ಲ. ಅಂತಹ ಸ್ಥಳದಲ್ಲಿ ನೂತನ ತಂತ್ರಜ್ಞಾನವನ್ನು ಬಳಿಸಿ ನಿಗಾಃ ಇರಿಸುವುದು ಭದ್ರತಾ ಪಡೆಯ ಯೋಜನೆ. ಸಿಸಿ ಕ್ಯಾಮರಾ, ಸೆನ್ಸಾರ್, ಚಲನೆಗಳನ್ನು ಗ್ರಹಿಸುವ ವಿಕಿರಣ ಸಾಧನೆಗಳು, ಅಲಾಂರ ವ್ಯವಸ್ಥೆಯನ್ನು ಬಳಸಿ ವಿರೋಧಿ ರಾಷ್ಟ್ರದ ಯೋಧರು, ಜನರು ಅಕ್ರಮವಾಗಿ ದೇಶವನ್ನು ಪ್ರವೇಶಿಸುವುದರ ಮೇಲೆ ನಿಗಾ ಇಡಬಹುದು.
ಪ್ರಸ್ತುತ ಗಡಿಯಲ್ಲಿ ಗೋಡೆ ಅಥವಾ ತಂತಿ ಬೇಲಿಗಳು ಇಲ್ಲದೇ ತಂತ್ರಜ್ಞಾನ ಹೊಂದಿರುವ ಗಡಿ ಬೇಲಿ ಅಳವಡಿಸುವುದು ಉತ್ತಮ ಎಂದು ಈ ಹೊಸ ಪ್ರಯೋಗ ಆರಂಭಿಸಲಾಗಿದೆ. ನದಿ ಹರಿವು ತೀವ್ರವಾಗಿರುವ ಪ್ರದೇಶದಲ್ಲಿ ಗೋಡೆ ಅಥವಾ ತಂತಿ ಬೇಲಿ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಸ್ಮಾರ್ಟ್ ಬೇಲಿ ಅಳವಡಿಸಿ ಅಕ್ರಮವಾಗಿ ನುಸುಳುವುದನ್ನು ತಡೆಗಟ್ಟಬಹುದು. ಪ್ರಸ್ತುತ ಯೋಧರು ದೋಣಿಗಳಲ್ಲಿ ಗಸ್ತು ತಿರುಗುವ ಮೂಲಕ ಗಡಿಯಲ್ಲಿ ನಿಗಾ ವಹಿಸುತ್ತಿದ್ದಾರೆ ಎಂದು ಗಡಿ ಭದ್ರತಾ ಪಡೆಯ ಪ್ರಧಾನ ನಿರ್ದೇಶಕ ಕೆಕೆ ಶರ್ಮಾ ತಿಳಿಸಿದ್ದಾರೆ.
Leave A Reply