ಇದಲ್ಲವೇ ಅಚ್ಛೇ ದಿನ್: ನಕ್ಸಲ್ ಪೀಡಿತ ಒಂದೇ ಜಿಲ್ಲೆಯ 18 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆ ಪಾಸ್
ದಂತೇವಾಡ: ಗುಡ್ಡಗಾಡು ಪ್ರದೇಶದಲ್ಲಿದ್ದುಕೊಂಡು ಮುಗ್ದ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದ ನಕ್ಸಲರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಶಸ್ವಿಯಾಗಿ ಹತ್ತಿಕ್ಕಿದ್ದು, ಇದೀಗ ಅದರ ಫಲವನ್ನು ನಕ್ಸಲ ಪೀಡಿತ ಪ್ರದೇಶದ ಜನರು ಅನುಭವಿಸುತ್ತಿದ್ದಾರೆ. ಅದಕ್ಕೆ ಪ್ರಬಲ ಸಾಕ್ಷಿ. ಛತ್ತಿಸಗಢದ ನಕ್ಸಲ್ ಪೀಡಿತ ದಂತೇವಾಡ ಜಿಲ್ಲೆಯ 18 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು.
ಐಐಟಿ, ಎನ್ ಐಟಿ ಯಲ್ಲಿ ವಿದ್ಯಾಭ್ಯಾಸ ಮಾಡುವುದು ನಮ್ಮ ಕನಸಾಗಿತ್ತು. ಇದೀಗ ಆ ಕನಸು ಸಾಕಾರವಾಗಿದಕ್ಕೆ ಖುಷಿಯಾಗುತ್ತಿದೆ. ನಮ್ಮ ನಿರಂತರ ಪ್ರಯತ್ನ, ಪೂರ್ವ ಸಿದ್ಧತೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ದಂತೆವಾಡ ಜಿಲ್ಲೆಯ 18 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆ ಪಾಸ್ ಆಗಿರುವುದು ಜಿಲ್ಲೆಗೆ ಹೆಮ್ಮೆ. ವಿದ್ಯಾರ್ಥಿಗಳು ನಿರಂತರ ಪರಿಶ್ರಮ, ಪ್ರಯತ್ನ ಈ ಸಾಧನೆಗೆ ಕಾರಣ ಎಂದು ಜಿಲ್ಲಾಧಿಕಾರಿ ಸೌರಭ ಕುಮಾರ ತಿಳಿಸಿದ್ದಾರೆ.
ನಕ್ಸಲ ಪೀಡಿತ ದಂತೆವಾಡ ಜಿಲ್ಲೆ: ಮುಗ್ದ ಜನರು ಮುಖ್ಯವಾಹಿನಿಗೆ ಬರದಂತೆ ತಡೆಹಿಡಿದು ಸದಾ ಕಾಟ ಕೊಡುತ್ತಿದ್ದ ನಕ್ಸಲರ ಪೀಡನೆಗೆ ಅತಿ ಹೆಚ್ಚು ಒಳಗಾಗಿದ್ದು, ದಂತೆವಾಡ ಜಿಲ್ಲೆ. ಇದೀಗ ಆ ಜಿಲ್ಲೆಯಲ್ಲೇ 18 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆ ಉತ್ತೀರ್ಣರಾಗಿರುವುದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೇ ಇದಕ್ಕೆ ಕೇಂದ್ರ ಸರ್ಕಾರದ ನಕ್ಸಲ ವಿರುದ್ಧದ ನಿರಂತರ ಕಾರ್ಯಾಚರಣೆಗಳು ವಿದ್ಯಾರ್ಥಿಗಳ ಓದಿಗೆ ಸಹಕಾರ ಒದಗಿಸಿದೆ. ನಕ್ಸಲರ ಉಪಟಳ ತಪ್ಪಿಸಿದ್ದು, ವಿದ್ಯಾರ್ಥಿಗಳ ಓದಿಗೆ ಪೂರಕವಾಗಿದೆ.
Leave A Reply