ರಸ್ತೆ ಮೇಲೆ ನಮಾಜು ಬೇಡ, ಅದೇನಿದ್ದರೂ ಮಸೀದಿಯಲ್ಲಿ ಇಟ್ಟುಕೊಳ್ಳಿ ಎಂಬ ಖಡಕ್ ನುಡಿ ಯಾರದ್ದು ಗೊತ್ತಾ?
ಚಂಡೀಗಡ: ದೇಶದಲ್ಲಿ ಹಿಂದೂಗಳ ಆಚರಣೆಗಳೆಂದರೆ ಕಾಂಗ್ರೆಸ್ ಸೇರಿ ಹಲವು ರಾಜಕೀಯ ಪಕ್ಷಗಳು ಒಂದು ಕಲ್ಲು ಎಸೆದು ನೋಡುತ್ತವೆ. ಆದರೆ ಅದೇ ಬೇರೆ ಧರ್ಮದ ಆಚರಣೆಗಳನ್ನು ಕನಿಷ್ಠ ಪ್ರಶ್ನೆ ಮಾಡುವುದಿರಲಿ, ಮೂಢನಂಬಿಕೆಗಳ ಕುರಿತು ಸಹ ಸೊಲ್ಲೆತ್ತುವುದಿಲ್ಲ.
ಆದರೆ ಹರಿಯಾಣದ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಖಡಕ್ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಮುಸ್ಲಿಮರು ನಮಾಜ್ ಮಾಡುವುದನ್ನು ಮಸೀದಿ ಹಾಗೂ ಈದ್ಗಾಗಳಲ್ಲಿ ಇಟ್ಟುಕೊಳ್ಳಿ, ಅದನ್ನು ರಸ್ತೆಗೆ ತರಬೇಡಿ ಎಂದು ಸೂಚನೆ ನೀಡಿದ್ದಾರೆ.
ಹೌದು, ಇತ್ತೀಚೆಗೆ ಹರಿಯಾಣದ ಗುರಗಾಂವ್ ನ ವಾಜಿರಾಬಾದ್, ಅತುಲ್ ಕಟಾರಿಯಾ ಚೌಕ್, ಸೈಬರ್ ಪಾರ್ಕ್, ದಕ್ಷಿಣ ನಗರ ಸೇರಿ ಹಲವೆಡೆ ಹಲವು ಮುಸ್ಲಿಮರು ಬಹಿರಂಗವಾಗಿ ನಮಾಜ್ ಮಾಡಿದ್ದು, ಗಲಾಟೆಗೆ ಕಾರಣವಾಗಿತ್ತು. ಜನರಿಗೆ ತೊಂದರೆಯಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಕ್ರಾಂತಿ ದಳ ಸೇರಿ ಹಲವು ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.
ಅಷ್ಟೇ ಅಲ್ಲ, ನಮಾಜ್ ಮಾಡುವವರು ಸಹ ಹಿಂದೂ ಸಂಘಟನೆಗಳ ವಿರುದ್ಧ ತಿರುಗಿಬಿದ್ದು ಪ್ರಕರಣ ಹಿಂಸಾರೂಪ ತಾಳುವ ಲಕ್ಷಣ ಗೋಚರಿಸಿದ್ದವು. ಆಗ ಮಧ್ಯಪ್ರವೇಶಿಸಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೂ ನಮಾಜ್ ಮಾಡುವ ಪದ್ಧತಿ ನಿಲ್ಲದ ಕಾರಣ ಈಗ ರಾಜ್ಯ ಸರ್ಕಾರವೇ ಪ್ರಕಟಣೆ ಹೊರಡಿಸಿದೆ.
ಖಂಡಿತವಾಗಿಯೂ ಯಾವುದೇ ಧರ್ಮದವರು ನಮಾಜು, ಪ್ರಾರ್ಥನೆ ಮಾಡುವುದು ತಪ್ಪಲ್ಲ. ಹಾಗಂತ ಇನ್ನೊಬ್ಬರಿಗೆ ತೊಂದರೆಯಾಗದ ಹಾಗೆ, ಶಾಂತಿ ಕಾಪಾಡುವ ಹಾಗೆ ನೋಡಿಕೊಳ್ಳುವುದು ಸಹ ಮುಖ್ಯ ಎನಿಸುತ್ತದೆ. ಹಾಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಸ್ಲಿಮರು ಮಸೀದಿ ಹಾಗೂ ಈದ್ಗಾಗಳಲ್ಲಿ ಮಾತ್ರ ನಮಾಜ್ ಮಾಡಬೇಕು ಎಂದು ಮನೋಹರ್ ಲಾಲ್ ಖಟ್ಟರ್ ಆದೇಶ ಹೊರಡಿಸಿದ್ದಾರೆ.
Leave A Reply