ಮುಸ್ಲಿಂ ಮಹಿಳೆಯರೂ ಜಿಹಾದ್ ನಲ್ಲಿ ತೊಡಗಿದರಾ ಎಂಬ ಅನುಮಾನ ಮೂಡಲು ಈ ಘಟನೆ ಸಾಕು!
ಚಂಡೀಗಡ: ಪ್ರಸ್ತುತ ದೇಶದ ಬಹುತೇಕ ಕಡೆ ಮುಸ್ಲಿಂ ಮೂಲಭೂತವಾದಿಗಳು ಲವ್ ಜಿಹಾದಿನಲ್ಲಿ ತೊಡಗಿದ್ದಾರೆ. ಹಲವು ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ, ಅವರನ್ನು ಮದುವೆಯಾಗಿ, ಮತಾಂತರಗೊಳಿಸಿ, ಮಹಿಳೆಗೆ ನಾಲ್ಕು ಮಕ್ಕಳನ್ನು ನೀಡಿ ಕೈ ಬಿಡುವುದು ಇತ್ತೀಚಿನ ದುರುಳತನವಾಗಿದೆ.
ಆದರೆ ಈಗ ಮುಸ್ಲಿಂ ಮಹಿಳೆಯರು ಸಹ ಜಿಹಾದಿನಲ್ಲಿ ತೊಡಗಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಹೀಗೆ ಅನುಮಾನ ಕಾಡುವ ಒಂದು ನಿದರ್ಶನವೊಂದು ಹರಿಯಾಣದಲ್ಲಿ ಸಿಕ್ಕಿದೆ.
ಹೌದು ಹರಿಯಾಣದ ಮೇವಾತ್ ಪ್ರದೇಶದ ಪುನ್ಹಾನಾ ಎಂಬಲ್ಲಿ ಹಿಂದೂ ಬಾಲಕಿಯನ್ನು ಮುಸ್ಲಿಂ ಮಹಿಳೆಯೊಬ್ಬರು 40 ದಿನದ ಹಿಂದೆ ಅಪಹರಿಸಿದ್ದು, ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿ 40 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪ್ರಕರಣ ಈಗ ರಾಜ್ಯಾದ್ಯಂತ ಸುದ್ದಿಯಾಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲಕಿ ಮೂಲತಃ ರಾಜಸ್ಥಾನದವಳಾಗಿದ್ದು, ಫರೀದಾಬಾದಿನಲ್ಲಿ ಕುಟುಂಬಸ್ಥರ ಜತೆ ನೆಲೆಸಿದ್ದಾಳೆ. ಆದರೆ ಕಳೆದ ಏಪ್ರಿಲ್ 4ರಂದು ಬಾಲಕಿ ಕಾಣೆಯಾಗಿದ್ದು, ಆತಂಕಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ಆರಂಭಿಸಿದರು.
ಕೊನೆಗೂ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಪರ್ಜಾನಾ ಹಾಗೂ ಆಕೆಯ ಗಂಡ ಜಾಕೀರ್ ಸೇರಿ ಮೂವರನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಅಪಹರಿಸಿದ್ದ ಮಹಿಳೆ ತನ್ನ ಸಹಚರರೊಂದಿಗೆ ಸೇರಿ ದೂರದ ಗ್ರಾಮದವರಿಗೆ 40 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Leave A Reply