ಒಂದು ದಿನದ ಭೇಟಿಯಲ್ಲೇ ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗ ಎಂಬ ಸಂದೇಶ ಸಾರಿದ ಮೋದಿ
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶ ಅಥವಾ ದೇಶದ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಅದರಲ್ಲೊಂದು ದೂರದೃಷ್ಟಿಯ ಚಿಂತನೆ ಹೊಂದಿರುತ್ತಾರೆ. ಅದರ ಫಲ ದೇಶವಾಸಿಗಳಿಗೆ ದೊರಯಬೇಕು ಎಂಬ ದೂರದೃಷ್ಟಿಯಿಂದಲೇ ಸದಾ ಕಾರ್ಯಪವೃತ್ತರಾಗಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಆ ಮಾತಿಗೆ ಪುಷ್ಠಿ ನೀಡಿದ್ದುಮ ಮೇ.19 ಜಮ್ಮು ಕಾಶ್ಮೀರ ಭೇಟಿ ವೇಳೆ ಶತ್ರು ರಾಷ್ಟ್ರ ಪಾಕಿಸ್ತಾನದ ಜೊತೆಗೆ ಇಡೀ ವಿಶ್ವಕ್ಕೆ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಸಾರಿ ಬಂದಿದ್ದಾರೆ.
ಮೇ.19ರಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಏಷ್ಯಾದ ಅತಿ ಉದ್ದನೆಯ ದ್ವಿಪಥ ಸುರಂಗಮಾರ್ಗ ಝೋಜಿಲಾ ಯೋಜನೆಗೆ ಚಾಲನೆ ನೀಡುವ ಮೂಲಕ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದ್ದಾರೆ. ಸುಮಾರು 25 ಸಾವಿರ ಕೋಟಿ ಅನುದಾನದ ಈ ಯೋಜನೆಯಿಂದ ಕಣಿವೆ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ದೊರೆಯಲಿದೆ. ಅಲ್ಲದೇ ಶ್ರೀನಗರ, ಕಾರ್ಗಿಲ್ ಮತ್ತು ಲೇಹ್ ಮಧ್ಯೆ ಉತ್ತಮ ಸಂಪರ್ಕ ಸಾಧಿಸಲು ಪೂರಕವಾಗಲಿದೆ. ಈ ದ್ವಿಪಥ ರಸ್ತೆ ಹಲವು ದೃಷ್ಟಿಯಿಂದ ದೇಶಕ್ಕೆ ಅನುಕೂಲವಾಗಲಿದೆ.
330 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಕಿಶನ್ ಗಂಗಾ ಜಲ ವಿದ್ಯುದಾಗಾರವನ್ನು ಶ್ರೀನಗರದಲ್ಲಿ ಹಮ್ಮಿಕೊಂಡಿರುವ ಶೇರ್ ಇ ಕಾಶ್ಮೀರ ಸಮ್ಮೇಳದ ಮೂಲಕ ದೇಶಕ್ಕೆ ಸಮರ್ಪಿಸಿದರು. ಇದು ಕಣಿವೆ ರಾಜ್ಯಕ್ಕೆ ವಿದ್ಯುತ್ ಒದಗಿಸಲು ಅನುಕೂಲ ಕಲ್ಪಿಸಲಿದೆ. ಅಲ್ಲದೇ ಮಾತಾ ವೈಷ್ಣೋದೇವಿ ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಿಕರ ಅನುಕೂಲಕ್ಕೆ ನಿರ್ಮಿಸಲಾಗಿರುವ ರೋಪ್ ವೇಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಹೀಗೆ ಒಂದೇ ಸಾಲು ಸಾಲು ಕಾರ್ಯಕ್ರಮಗಳ ಮೂಲಕ ಕಣಿವೆ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವಕ್ಕೆ ವಿಶೇಷವಾಗಿ ಪಾಕಿಸ್ತಾನಕ್ಕೆ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಸಾರಿದ್ದಾರೆ.
ಝೋಜಿಲಾ ಸುರಂಗ ಮಾರ್ಗ, ಕಿಶನಗಂಗಾ ಜಲವಿದ್ಯುತ್ ಗಾರ, ಪಾಕುಲ್ ದರ್ ವಿದ್ಯುತ್ ಯೋಜನೆ ಸೇರಿ ನಾನಾ ಯೋಜನೆಗಳನ್ನು ಒಂದೇ ದಿನದಲ್ಲಿ ಉದ್ಘಾಟನೆ, ಶಂಕುಸ್ಥಾಪನೆ ಮಾಡುವ ಮೂಲಕ ಇಡೀ ಕಣಿವೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿ, ಯುವಕರನ್ನು ಹೊಸ ಚಿಂತನೆಗೆ ಹಚ್ಚಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.
Leave A Reply