ಮೋದಿ ಮಾಡಿದರು ಅಭಿವೃದ್ಧಿ ಮೋಡಿ, ಮುಂದಿನ ಅವಧಿಗೂ ಅವರೇ ಪ್ರಧಾನಿಯಾಗುತ್ತಾರಂತೆ ನೋಡಿ!
ಪ್ರಧಾನಿ ನರೇಂದ್ರ ಮೋದಿ ಎಂದರೇನೆ ಹಾಗೆ. ಅವರು ಪ್ರಧಾನಿಯಾಗುವ ಮೊದಲೇ ಇಡೀ ದೇಶದ ಜನರನ್ನು ಆವರಿಸಿದ್ದರು. ವಿರೋಧಿಗಳು, ಕಡು ವಿರೋಧಿಗಳು, ಮೋದಿ ಅವರನ್ನು ಸೋಲಿಸಲೇಬೇಕು ಎಂದು ಪಣತೊಟ್ಟವರು, ರಾಜಕೀಯದಿಂದಲೇ ಮನೆಗೆ ಕಳುಹಿಸಬೇಕು ಎಂದು ಶಪಥ ಮಾಡಿದವರು… ಹೂಂ, ಹೂಂ, ಯಾರೆಂದರೆ ಯಾರಿಗೂ ಮೋದಿ ಜಗ್ಗಲಿಲ್ಲ.
ನರೇಂದ್ರ ಮೋದಿ ಅವರ ಈ ಅಲೆಯ ಪರಿಣಾಮ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನ ಗೆದ್ದಿತು. ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ನರೇಂದ್ರ ಮೋದಿ ಅವರು ಪದವಿ ಸಿಕ್ಕ ತಕ್ಷಣ ಮೈಮರೆಯಲಿಲ್ಲ. ಬದಲಾಗಿ ಭಾರತದ ಅಭಿವೃದ್ಧಿಗಾಗಿ ಒಂದು ದಿನವೂ ಕೆಲಸ ಮಾಡದೆ ದುಡಿಯುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಭಾರತ ಬದಲಾವಣೆ ಕಾಣುತ್ತಿದೆ.
ಇದನ್ನು ಮನಗಂಡಿರುವ ಪ್ರತಿಪಕ್ಷಗಳು ಈಗಾಗಲೇ 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಹಣೆಯಲು ಒಂದಾಗಿವೆ. ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಆದರೆ ಮೋದಿ ಅವರ ವಿರುದ್ಧ ಇಷ್ಟೆಲ್ಲ ಶಕ್ತಿಗಳು ಒಂದಾಗಿದ್ದರೂ, ಇಂದಿಗೂ ನರೇಂದ್ರ ಮೋದಿ ಅವರ ಮೇಲೆ ಜನ ಅಪಾರ ಪ್ರೀತಿ, ಅಭಿಮಾನ, ವಿಶ್ವಾಸ ಇಟ್ಟಿದ್ದಾರೆ. ಇದಕ್ಕೆ ಸಾಕ್ಷಿಯಾಗಿ 2019ರ ಲೋಕಸಭೆ ಚುನಾವಣೆಯ ಸಮೀಕ್ಷಾ ವರದಿ ಬಹಿರಂಗವಾಗಿದ್ದು, ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ತಿಳಿದುಬಂದಿದೆ,
ಹೌದು, 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಟೈಮ್ಸ್ ನೌ ಸಂಸ್ಥೆ ಕ್ರೋಮ್ ಡಾಟಾ ಅನಾಲಿಟಿಕ್ಸ್ ಮೂಲಕ ಸಮೀಕ್ಷೆ ನಡೆಸಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 318 ಸಂಸತ್ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ತಿಳಿದುಬಂದಿದೆ.
ಸಮೀಕ್ಷೆಗಾಗಿ ಮೇ 9ರಿಂದ ಮೇ 22ರ ಅವಧಿಯಲ್ಲಿ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 13,575 ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಶೇ.51ರಷ್ಟು ಜನ ನರೇಂದ್ರ ಮೋದಿಯವರೇ ಮುಂದಿನ ಅವಧಿಗೂ ಪ್ರಧಾನಿಯಾಗಿ ಮುಂದುವರಿಯಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಶೇ.23ರಷ್ಟು ಜನ ಮಾತ್ರ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದಿದ್ದಾರೆ. ಒಟ್ಟಿನಲ್ಲಿ ಮೋದಿ ಅವರು ಕೈಗೊಂಡ ಅಭಿವೃದ್ಧಿಗೆ ದೇಶದ ಜನ ಮನಸೋತಿದ್ದು, ಅವರೇ ಮುಂದಿನ ಪ್ರಧಾನಿಯಾಗುತ್ತಾರೆ ಎನ್ನಲಾಗುತ್ತಿದೆ. ಅದಕ್ಕೆ ಸಮೀಕ್ಷಾ ವರದಿಗಳೂ ಪೂರಕವಾಗಿವೆ.
Leave A Reply