ಐದು ತಿಂಗಳಲ್ಲಿ 119 ನಕ್ಸಲರು, 65 ಜಿಹಾದಿ ಭಯೋತ್ಪಾದಕರು ಖಲ್ಲಾಸ್
ದೆಹಲಿ: ನಕ್ಸಲರು ಮತ್ತು ಭಯೋತ್ಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕಟ್ಟುನಿಟ್ಟನ ಕ್ರಮಗಳು ಭಾರಿ ಪ್ರಮಾಣದಲ್ಲಿ ಯಶ ಕಾಣುತ್ತಿದ್ದು, ದೇಶದಲ್ಲಿ ನಕ್ಸಲರು ಮತ್ತು ಭಯೋತ್ಪಾದನೆ ಹೇಳ ಹೆಸರಿಲ್ಲದಂತಾಗುತ್ತಿದ್ದು, ಶಾಂತಿಯುತ ವಾತಾವರಣ ನಿರ್ಮಾಣದತ್ತ ದೇಶ ಸಾಗುತ್ತಿದೆ. ಕಟ್ಟುನಿಟ್ಟಿನ ಕ್ರಮಗಳಿಗೆ ಸಾಕ್ಷಿಯಾಗಿ ನಕ್ಸಲರು ಮತ್ತು ಉಗ್ರರನ್ನು ಸದೆಬಡೆಯುವ ಕಾರ್ಯ ನಿರಂತರವಾಗಿದ್ದು, 2018 ಜನವರಿಯಿಂದ ಇದುವರೆಗೆ ದೇಶದಲ್ಲಿ 119 ನಕ್ಸಲರು ಮತ್ತು 65 ಜಿಹಾದಿ ಭಯೋತ್ಪಾಕರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಮೂಲಗಳು ತಿಳಿಸಿವೆ.
ದೇಶದಲ್ಲಿ ನಕ್ಸಲ್ ಚಟುವಟಿಕೆಗಳು ಶೇ. 36.6 ರಷ್ಟು ಇಳಿಕೆಯಾಗಿದೆ. 2010-13 ರಲ್ಲಿ 6,524 ನಕ್ಸಲರ ಸಂಖ್ಯೆ 2014 ರಿಂದ 2017ರವರೆಗೆ 4136 ಕ್ಕೆ ಇಳಿಕೆಯಾಗಿದೆ. ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಅಲ್ಲದೇ ನಕ್ಸಲ ದಾಳಿಯಲ್ಲಿ ಹುತಾತ್ಮರಾಗುತ್ತಿದ್ದ ಯೋಧರು ಮತ್ತು ಜನಸಾಮಾನ್ಯರ ಸಂಖ್ಯೆಯಲ್ಲೂ ಶೇ.55.5 ರಷ್ಟು ಇಳಿಕೆಯಾಗಿದೆ. 2,428 ರಷ್ಟಿದ್ದ ಸಾವಿನ ಪ್ರಮಾಣ ಇದೀಗ 1,081 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಗೆ ಮೂಗುದಾರ ಹಾಕಲಾಗಿದೆ. ಇಡೀ ದೇಶದಲ್ಲಿ ಇಸ್ಲಾಂ ಭಯೋತ್ಪಾದನೆಗೆ ಕಡಿವಾಣ ಹಾಕಲಾಗಿದ್ದು, 113 ರನ್ನು ಬಂಧಿಸಿ, ಇಡೀ ವಿಶ್ವಕ್ಕೆ ಭಾರತ ಭಯೋತ್ಪಾದಕರ ವಿರುದ್ಧ ಕೈಗೊಳ್ಳುತ್ತಿರುವ ಕಠೋರ ನಿಯಮದ ಕುರಿತು ಸ್ಪಷ್ಟ ಸಂದೇಶ ನೀಡಲಾಗಿದೆ. ಕೇಂದ್ರದ ಕಠೋರ ನಿಲುವುಗಳು ದೇಶದಲ್ಲಿ ನಕ್ಸಲ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿಯಂತ್ರಿಸುತ್ತಿದೆ.
Leave A Reply