• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಕಲಾವಿದರ ಕಣ್ಣಿನಲ್ಲಿ ಕಲಾದೇವತೆ ನಮ್ಮ ಮೇಯರ್!

TNN Correspondent Posted On July 21, 2017
0


0
Shares
  • Share On Facebook
  • Tweet It

ಲೇಖನ – ಹನುಮಂತ ಕಾಮತ್ ಸಾಮಾಜಿಕ ಕಾರ್ಯಕರ್ತ

ತಿಥಿ ಊಟ ಮಾಡಲು ಕೂಡಲು ಲಾಯಕ್ಕಿಲ್ಲದ ಸಭಾಂಗಣದ ಮಾನ ಉಳಿಸಲು ಪುರಭವನ ಕಡಿಮೆ ಬಾಡಿಗೆಗೆ ಕೊಡುತ್ತೇನೆ ಎಂದ ಮೇಯರ್!

ಮಂಗಳೂರು ಮಹಾನಗರ ಪಾಲಿಕೆ ತಾನು ಶ್ರೀಮಂತರನ್ನು ದೃಷ್ಟಿಯಲ್ಲಿಟ್ಟುಕೊಂಡು ಏನೋ ಮಾಡಲು ಹೋಗಿ ಕೊನೆಗೆ ಏನೋ ಆಗಿದೆ ಎಂದು ಗೊತ್ತಾಗಿರುವುದರಿಂದ ಚುನಾವಣೆಯ ಹೊಸ್ತಿಲಲ್ಲಿ ಅದರಿಂದ ತನ್ನ ಪಕ್ಷದ ಶಾಸಕರಿಗೆ ಪೆಟ್ಟು ಬೀಳುವುದು ಬೇಡಾ ಎಂದು ಕೊನೆಯ ಕ್ಷಣದಲ್ಲಿ ಇನ್ನೇನೋ ಮಾಡಿ ಕಲಾವಿದರ ಕಣ್ಣಿನಲ್ಲಿ ಹೀರೋ ಆಗಿದೆ. ಆ ಮೂಲಕ ಕಲಾಭಿಮಾನಿಗಳ ಪಾಲಿಗೆ ಮೇಯರ್ ಕವಿತಾ ಸನಿಲ್ ಸಾಕ್ಷಾತ್ ಕಲಾದೇವತೆಯಾಗಿ ಹೊರಹೊಮ್ಮಿದ್ದಾರೆ. ಟೌನ್ ಹಾಲ್ ನವೀಕರಣ ಆದ ಮೇಲೆ ನಾಟಕ ತಂಡಗಳಿಗೆ ಪುರಭವನ ಕೈಗೆ ಎಟಕುವುದಿಲ್ಲವೆಂದು ಗೊತ್ತಾಗಿತ್ತು. ಕಲಾವಿದರಿಂದ ವಿರೋಧ ಕಂಡು ಬಂದ ಕೂಡಲೇ ಪಾಲಿಕೆಯಲ್ಲಿ ಆಡಳಿತದಲ್ಲಿರುವವರಿಗೆ ತಾವು ಮಾಡಿದ್ದು ಎಲ್ಲಿಯೋ ಎಡವಟ್ಟು ಆಗಿದೆ ಎನ್ನುವ ಅನುಮಾನ ಬಂತು. ಅದು ಬರಿ ಅನುಮಾನ ಅಲ್ಲ. ನಿಜ ಕೂಡ.

ಕೇವಲ ಸಣ್ಣಮಟ್ಟಿಗಿನ ಭರ್ತಡೇ ಪಾರ್ಟೀ ಮಾಡಲು ಕೂಡ ಲಾಯಕ್ಕಿಲ್ಲದ ಒಂದು ಸಭಾಂಗಣ ಕಟ್ಟಿ ಇನ್ನು ನಿಮ್ಮ ನಾಟಕ, ಜಾದೂ ಇಲ್ಲಿ ಮಾಡಿ ಎಂದು ಸೂಚನೆ ಕೊಟ್ಟಿದ್ದೇ ಪಾಲಿಕೆಯಲ್ಲಿ ಅಧಿಕಾರದಲ್ಲಿರುವವರು. ಆದರೆ ಆ ಸಭಾಂಗಣದಲ್ಲಿ ಬೇಕಾದರೆ ನೀವು ನಾಟಕ ಮಾಡಿ ಎಂದು ಕಲಾವಿದರು ಯಾವಾಗ ಹೇಳಿದರೋ ಆಗ ನಿತ್ಯ ವೇಷ ಹಾಕಿ ಪಾಲಿಕೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದವರಿಗೆ ತಮ್ಮ ಮೇಕಪ್ ಕಳಚಿದಂತೆ ಆಯಿತು. ಹಾಗಂತ ನಿಮಗಿಂತ ದೊಡ್ಡ ನಾಟಕದವರು ನಾವು, ಬೇಕಾದರೆ ಅಲ್ಲಿ ಮಾಡಿ ಅಥವಾ ಡಾನ್ ಬಾಸ್ಕೊ ಅಥವಾ ಬೇರೆಡೆ ನೋಡಿಕೊಳ್ಳಿ ಎಂದು ಮೇಯರ್ ಬೇರೆಯವರಿಗಾದರೆ ಹೇಳಿ ದಕ್ಕಿಸಿಕೊಳ್ಳುತ್ತಿದ್ದರೋ ಏನೋ. ಆದರೆ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಜಾದೂ ಮಾಂತ್ರಿಕ ಕುದ್ರೋಳಿ ಗಣೇಶ್ ಸಹಿತ ಒಂದಿಬ್ಬರು ಖಡಕ್ ಮಾತನಾಡುವವರ ಬಾಯಿಯಲ್ಲಿ ಬಿದ್ದು ಮರ್ಯಾದೆ ಕಳೆದುಕೊಳ್ಳುವುದು ಬೇಡಾ ಎಂದು ಮೇಯರ್ ಒಂದು ಉಪಾಯ ಮಾಡಿದರು.

ಈಗಾಗಲೇ ಅಲ್ಲಿ ಏನು ಮಾಡಲು ಆಗದಷ್ಟು ಬಾಡಿಗೆನೂ ಇದೆ, ರಾಜಕೀಯವೂ ಇದೆ, ಆದ್ದರಿಂದ ಅಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗದೆ ಕಲಾವಿದ ತೊಂದರೆಗೆ ಒಳಗಾಗಿದ್ದಾನೆ ಎಂದು ಮಾಧ್ಯಮಗಳಲ್ಲಿ ಆಗಾಗ ವರದಿ ಬಂದ ನಂತರ ಮೇಯರ್ ಅವರಿಗೆ ಬಿಸಿ ಮುಟ್ಟಿದೆ. ಮೇಡಂ, ಅವರನ್ನೆಲ್ಲಾ ಕರೆಸಿ ಒಂದು ಸಭೆ ಮಾಡಿ, ಕಡಿಮೆ ಬಾಡಿಗೆಗೆ ಪುರಭವನ ಕೊಡುತ್ತೇನೆ ಎಂದು ಘೋಷಿಸಿ, ಅದರಿಂದ ನೀವು ಕಲಾವಿದರ ಮತ್ತು ಕಲಾಭಿಮಾನಿಗಳ ಕಣ್ಣಿನಲ್ಲಿ ದೇವರಾಗುತ್ತಿರಿ ಎಂದು ಯಾರೋ ಆಪ್ತರು ಸಲಹೆ ಕೊಟ್ಟಿದ್ದಾರೆ. ಜನರ ಕಣ್ಣಿನಲ್ಲಿ ಹೀರೋ ಆಗುವ ಯಾವ ಸಣ್ಣ ಅವಕಾಶ ಕೂಡ ಬಿಡಲು ಸಾಧ್ಯವಿಲ್ಲ ಎಂದು ಅಂದುಕೊಂಡಿರುವ ಮೇಯರ್ ತಕ್ಷಣ ಎಲ್ಲಾ ಕಲಾ ಸಂಘಟನೆಗಳ ಮುಖಂಡರನ್ನು ಕರೆಸಿ ಸಭೆ ಮಾಡಿದ್ದಾರೆ. ಆ ಸಭಾಂಗಣ ನೋಡಿದರೆ ಯಾವ ಸಣ್ಣಮಟ್ಟದ ರಾಜಕಾರಣಿಯ ತಿಥಿ ಮಾಡಲು ಕೂಡ ಯೋಗ್ಯತೆ ಇಲ್ಲ. ಅದನ್ನು ಯಾಕೆ ಕಟ್ಟಿದ್ದಿರಿ ಮೇಡಂ ಎಂದು ಯಾರಾದರೂ ಕೇಳಿರುವ ಸಾಧ್ಯತೆ ಇದೆ. ಅದು ಕಟ್ಟಿದ್ದು ಶ್ರೀಮಂತರ ಮದುವೆಯ ಊಟದ ವ್ಯವಸ್ಥೆಗೆ, ನಿಮಗೆ ಎಂದು ಯಾರು ಹೇಳಿದ್ದು ಎಂದು ಹೇಳಲು ಆಗುತ್ತಾ, ಈಗ ಏನು ಮಾಡಬೇಕು ಸಲಹೆ ಕೊಡಿ, ಆದ್ದದ್ದು ಆಗಿ ಹೋಯಿತು ಎಂದು ಮೇಯರ್ ಕವಿತಾ ಸನಿಲ್ ಕೇಳಿದ್ದಾರೆ.

ಆ ಬಳಿಕ ಬಂದಿದ್ದ ಅಷ್ಟೂ ಜನ ತುಳುನಾಡ ಪ್ರಖ್ಯಾತ ಕಲಾವಿದರು ಎಲ್ಲಾ ಸಮಸ್ಯೆಗಳನ್ನು ಹೇಳಿದ್ದಾರೆ. ಈಗಲೇ ಒಂದು ಹೊಸ ಟೌನ್ ಹಾಲ್ ಕಟ್ಟುವಷ್ಟು ಹಣವನ್ನು ಬರಿ ರಿಪೇರಿಗೆಂದು ಖರ್ಚು ಮಾಡಿರುವ ಪಾಲಿಕೆಗೆ ಆಗ ತಡವಾಗಿ ಜ್ಞಾನೋದಯವಾಗಿದೆ. ನಾವು ಜೀರ್ಣೋದ್ಧಾರಕ್ಕೆ ಕೈ ಹಾಕುವಾಗಲೇ ಇವರನ್ನೆಲ್ಲಾ ಕರೆಸಿ ಕೇಳಿದ್ದರೆ ಅರ್ಧಕರ್ಧ ಹಣ ಉಳಿಯುತ್ತಿತ್ತು, ಪುರಭವನ ಕೂಡ ಚೆನ್ನಾಗಿ ಆಗುತ್ತಿತ್ತು. ಆದರೆ ಶಾಸಕ ಜೆ ಆರ್ ಲೋಬೊ ಹಾಗೂ ಆಗಿನ ಮೇಯರ್ ಮಹಾಬಲ ಮಾರ್ಲಾರ ನಡುವಿನ ಘನತೆಯ ಶೀತಲ ಸಮರದಲ್ಲಿ ಕೋಟಿ ಕೈಬಿಟ್ಟಿದ್ದೇ ಗೊತ್ತಾಗಲಿಲ್ಲ ಎಂದು ಹೇಳಲು ಆಗುತ್ತಾ? ಬಹುಶ: ಕವಿತಾ ಸನಿಲ್ ವಿರೋಧ ಪಕ್ಷದಲ್ಲಿ ಇದ್ದಿದ್ದರೆ ಈ ಸತ್ಯ ಹೇಳುತ್ತಿದ್ದರೋ ಏನೋ, ಆದರೆ ಶಾಸಕರು, ಹಿಂದಿನ ಮೇಯರ್ ಕೂಡ ತಮ್ಮದೇ ಪಕ್ಷದವರು ಆಗಿರುವುದರಿಂದ ಮನಸ್ಸಿನಲ್ಲಿ ಅವರನ್ನು ಶಪಿಸಿ ಮುಖದಲ್ಲಿ ನಗು ತೋರಿಸಿ ಈಗ ನಾನು ಏನು ಮಾಡಬೇಕು ಎಂದು ಕೇಳಿದ್ದಾರೆ. ನೀವು ಬಾಡಿಗೆ ಕಡಿಮೆ ಮಾಡಬೇಕು ಎಂದು ಇತ್ತಕಡೆಯಿಂದ ಮನವಿ ಬರುತ್ತಿದ್ದ ಹಾಗೆ ತಕ್ಷಣ ಅಲ್ಲಿಯೇ ಅದಕ್ಕೆನಂತೆ ಈಗಲೇ ಮಾಡೋಣ, ಹೇಗೂ ಈಗಲೇ ಎಲ್ಲಾ ಟಿವಿಯವರು, ಪೇಪರಿನ ಫೋಟೋಗ್ರಾಫರ್ಸ್ ಇಲ್ಲಿಯೇ ಇದ್ದಾರೆ. ಅವರನ್ನು ಎರಡೆರಡು ಸಲ ಕರೆದು ನ್ಯೂಸ್ ಮಾಡುವುದಕ್ಕಿಂತ ಒಂದೇ ಖರ್ಚಿನಲ್ಲಿ ಆಗುತ್ತೆ ಎಂದು ಕವಿತಾ ಸನಿಲ್ ಆಗಲೇ ಹೇಳಬೇಕು ಎನ್ನುವಷ್ಟರಲ್ಲಿ ಇಷ್ಟು ಬೇಗ ಹೇಳಿಬಿಟ್ಟರೆ ತನಗೆ ಆ ಅಧಿಕಾರ ಇಲ್ಲ ಎಂದು ಅಲ್ಲಿದ್ದ ಯಾರಾದರೂ ತಲೆ ಇರುವ ವ್ಯಕ್ತಿ ಹೇಳಿ ಬಿಟ್ಟರೆ ಎಂದು ಅಂದುಕೊಂಡು ಸರಿ, ಇದನ್ನು ಯೋಚಿಸಿ ಆದಷ್ಟು ಬೇಗ ಹೇಳಿ ಕಳುಹಿಸುತ್ತೇನೆ ಎಂದಿದ್ದಾರೆ.

ನಂತರ ಅವರು ತಡಮಾಡಲಿಲ್ಲ, ನಿಯಮಗಳು ಬೇರೆ, ನಾನೇ ಬೇರೆ ಎಂದು ತೋರಿಸಲು ಹೋಗಿದ್ದಾರೆ. ಅದೇನು? ಅಷ್ಟಕ್ಕೂ ಮೇಯರ್ ಅವರಿಗೆ ಏಕಾಏಕಿ ಬಾಡಿಗೆ ಕಡಿಮೆ ಮಾಡಲು ಅಧಿಕಾರ ಇದೆಯಾ? ಮೇಯರ್ ಅವರಿಗೆ ತಾನು ಕಲಾವಿದರ ರಕ್ಷಕ ಎಂದು ತೋರಿಸುವ ಹಪಾಹಪಿಯಲ್ಲಿ ನಿಯಮಗಳೇ ಬೇಡವೆನಿಸಿತಾ? ಎಲ್ಲವೂ ನಾಳೆ ನೋಡೋಣ.

0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search