ರಾಜಸ್ಥಾನ ಸರ್ಕಾರದ ಕ್ರಾಂತಿಕಾರಿ ನಿರ್ಧಾರ: ಶಾಲೆಗಳಲ್ಲಿ ಸಂತರ ಹಿತೋಪದೇಶ ಕೇಳುವುದು ಕಡ್ಡಾಯ
ಜೈಪುರ: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ರಾಜಸ್ಥಾನದ ಬಿಜೆಪಿ ಸರ್ಕಾರ ಕ್ರಾಂತಿಕಾರಿ ನಿಯಮವೊಂದನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಪ್ರತಿತಿಂಗಳು ಶಾಲೆಗಳಲ್ಲಿ ಸಂತರ ಹಿತೋಪದೇಶವನ್ನು ಕೇಳುವ ನಿಯಮವನ್ನು ಕಡ್ಡಾಯ ಮಾಡುವ ಮೂಲಕ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದೆ.
ಪ್ರತಿ ತಿಂಗಳ ಮೂರನೇ ಶನಿವಾರ ಶಾಲೆಗಳಲ್ಲಿ ಸಾದು, ಸಂತರ, ತತ್ವಜ್ಞಾನಿಗಳ ದಿವ್ಯ ಸಂದೇಶವನ್ನು ಹೊಂದಿರುವ ಹಿತೋಪದೇಶವನ್ನು ಕೇಳುವ ನಿಯಮ ಜಾರಿಗೆ ತರುವ ಕುರಿತು ಸೆಕೆಂಡರಿ ಎಜುಕೇಷನ್ ನಿರ್ದೇಶಕ ಆದೇಶ ಹೊರಡಿಸಿದ್ದಾರೆ.
ತಿಂಗಳ ಪ್ರಥಮ ಶನಿವಾರ ಒಬ್ಬ ಮಹಾನ್ ಪುರುಷರ, ಸಂತರ ಜೀವನ ಸಂದೇಶವನ್ನು, ಅರಿಯುವುದು, ವಿದ್ಯಾರ್ಥಿಗಳಿಂದ ಮಾದರಿ ಪುರುಷರ ಬಗ್ಗೆ ಭಾಷಣ ಸೇರಿ ನಾನಾ ಕಾರ್ಯಕ್ರಮ ಏರ್ಪಡಿಸುವುದು, ಎರಡನೇ ಶನಿವಾರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವಂತ ಕಥೆಗಳನ್ನು ಹೇಳುವುದು, ಮೌಲ್ಯಾಧಾರಿತ ಜೀವನದ ಪಾಠ ಬೋಧಿಸುವುದು, ನಾಲ್ಕನೇ ಶನಿವಾರ ಪ್ರಶ್ನಾರ್ಥಕ ಕಾರ್ಯಕ್ರಮ ಏರ್ಪಡಿಸುವ ಕುರಿತು ಆದೇಶ ಜಾರಿ ಮಾಡಲಾಗಿದೆ. ಈ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ ಗಟ್ಟಿ ನಿರ್ಧಾರ ಕೈಗೊಂಡಿದೆ.
ಈ ನಿಯಮ ರಾಜಸ್ಥಾನದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಕೇಂದ್ರೀಯ ಶಾಲೆಗಳಿಗೂ, ತರಬೇತಿ ಶಿಬಿರಗಳು, ವಸತಿ ನಿಲಯಗಳಿಗೆ ಅನ್ವಯವಾಗಲಿದೆ.
Leave A Reply