ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಗೆ ಕಲ್ಲು ಬಿಸಾಡುತ್ತಾರೆ!!
ಪತ್ರಕರ್ತ, ರೈಸಿಂಗ್ ಕಾಶ್ಮೀರ್ ಸಂಪಾದಕ, ನಿರ್ಭಿತದ ವರದಿಗಾರಿಕೆಯಿಂದ ಎಲ್ಲೆಡೆ ಹೆಸರು ಗಳಿಸಿದ್ದ ಶುಝತ್ ಬುಖಾರಿಯ ಆತ್ಮಕ್ಕೆ ಮೊದಲಿಗೆ ಶಾಂತಿ ಕೋರುತ್ತಿದ್ದೇನೆ. ಜಾತಿ, ಧರ್ಮ ಮೀರಿ ದೇಶವನ್ನು ಪ್ರೀತಿಸುತ್ತಿದ್ದ ಪತ್ರಕರ್ತನಾಗಿ ಬುಖಾರಿ ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ರಾಷ್ಟ್ರದ ಮುಕುಟಮಣಿಯಲ್ಲಿ ಸತ್ಯದ ಪರವಾಗಿ, ದೇಶಾಭಿಮಾನದ ದ್ಯೋತಕದ ವರದಿ ಮಾಡುವುದು ಸುಲಭವಲ್ಲ. ಆದರೆ ಬುಖಾರಿ ಸವಾಲನ್ನು ಸ್ವೀಕರಿಸಿದ್ದರು. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ಕುರಿತು ಬರೆಯುತ್ತಿದ್ದರು. ಹುರಿಯತ್ ನಿಲುವುಗಳನ್ನು ಖಂಡಿಸಿ ಬರೆಯುತ್ತಿದ್ದರು. ಪ್ರತ್ಯೇಕತಾವಾದಿಗಳ ವಿರುದ್ಧ ಅವರಿಗೆ ಆಕ್ರೋಶವಿತ್ತು. ಅವರಿಗೆ ಜೀವಬೆದರಿಕೆಗಳು ಸಾಮಾನ್ಯವಾಗಿದ್ದವು. ಬರೆದರೆ ಕೊಂದೆ ಬಿಡುತ್ತೇವೆ ಎನ್ನುವುದು ಅವರ ಲೇಖನಗಳ ವಿರುದ್ಧ ದೇಶದ್ರೋಹಿಗಳ ಬೆದರಿಕೆಯಾಗಿತ್ತು. ಅದಕ್ಕಾಗಿ ಜಮ್ಮು-ಕಾಶ್ಮೀರದ ಸರಕಾರ ಅವರಿಗೆ ಇಬ್ಬರು ಗನ್ ಮ್ಯಾನ್ ಗಳನ್ನು ಒದಗಿಸಿತ್ತು. ಮೊನ್ನೆ ರಂಝಾನ್ ತಿಂಗಳ ಅಂತಿಮ ವಾರ. ಇಂತಹ ಪವಿತ್ರ ಮಾಸದಲ್ಲಿ ಪ್ರಾಮಾಣಿಕ ದೇಶಭಕ್ತ ಪತ್ರಕರ್ತನ ಮೇಲೆ ಗುಂಡಿನ ಮಳೆಗೆರೆಯಲಾಗಿದೆ. ಅಡ್ಡ ಬಂದ ಗನ್ ಮ್ಯಾನ್ ಗಳಲ್ಲಿ ಒಬ್ಬ ಅಲ್ಲಿಯೇ ಸಾವಿಗೀಡಾಗಿದ್ದರೆ, ಇನ್ನೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಬುಖಾರಿ ಸತ್ತದ್ದನ್ನು ಖಾತ್ರಿ ಮಾಡಿದ ಮೂರು ಜನ ಹಂತಕರು ತಾವು ಬಂದ ಬೈಕಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ. ರಂಝಾನ್ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೊರಡಲು ಕಾರಿನಲ್ಲಿ ಕುಳಿತುಕೊಳ್ಳಲು ಬಾಗಿಲು ತೆಗೆಯುತ್ತಿದ್ದ ಶುಝತ್ ಬುಖಾರಿ ಅಲ್ಲಿಯೇ ಹೆಣವಾಗಿದ್ದಾರೆ. ಅಲ್ಲಿಗೆ ತಮ್ಮ ವಿರುದ್ಧ ಧ್ವನಿ ಎತ್ತುವ ಯಾರನ್ನು ಕೂಡ ಬಿಡುವ ಮಾತೇ ಇಲ್ಲ ಎಂದು ಭಯೋತ್ಪಾದಕರು ಸಾರಿದ್ದಾರೆ. ಹತ್ಯೆಯನ್ನು ವಿರೋಧಿಸಿ ರಾಷ್ಟ್ರದ ಬಹುತೇಕ ಹಿರಿಯ ರಾಜಕಾರಣಿಗಳು ತಮ್ಮ ಟ್ವಿಟ್ ರ್ ನಲ್ಲಿ ಬರೆದಿದ್ದಾರೆ.
ಯೋಧನ ಕಿಡ್ನಾಪ್ ಮತ್ತು ಹತ್ಯೆ…..
ಇನ್ನು ಬುಖಾರಿ ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಜಮ್ಮು-ಕಾಶ್ಮೀರದ ಯೋಧ ಔರಂಗಾಜೇಬ್ ಅವರನ್ನು ಕಿಡ್ನಾಪ್ ಮಾಡಿದ ಭಯೋತ್ಪಾದಕರು ಅವರಿಗೆ ಚಿತ್ರಹಿಂಸೆ ನೀಡಿ ಹತ್ತು ಕಿಲೋ ಮೀಟರ್ ದೂರದ ಕಾಡೊಂದರಲ್ಲಿ ಕೊಂದು ಬಿಸಾಡಿದ್ದಾರೆ. ತಮ್ಮ ಕರ್ತವ್ಯ ಮುಗಿಸಿ ಈದ್ ರಜೆಯ ಮೇಲೆ ತೆರಳಲು ತಯಾರಾಗುತ್ತಿದ್ದ ಔರಂಗಾಜೇಬ್ ತಮ್ಮ ಊರಿನ ಕಡೆ ಹೋಗುತ್ತಿದ್ದ ಕಾರೊಂದಕ್ಕೆ ಕೈ ಅಡ್ಡ ತೋರಿಸಿ ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಕೆಲವೇ ಕಿಲೋಮೀಟರ್ ದೂರ ಹೋಗುತ್ತಿದ್ದಂತೆ ಅಡ್ಡ ಹಾಕಿದ ಭಯೋತ್ಪಾದಕರು ಔರಂಗಾಜೇಬ್ ಅವರನ್ನು ಎತ್ತಿಕೊಂಡು ಹೋಗಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಕೊನೆಗೆ ತಲೆಗೆ ಹೊಡೆದು ಕೊಂದಿದ್ದಾರೆ. ನೀನು ಯಾವ ಪೋಸ್ಟಿಂಗ್ ನಲ್ಲಿ ಇದ್ದಿಯಾ, ಅಲ್ಲಿ ಎಷ್ಟು ಯೋಧರು ಇರುತ್ತಾರೆ, ನೀನು ಇಲ್ಲಿಯ ತನಕ ಯಾವೆಲ್ಲ ಏನ್ ಕೌಂಟರ್ ನಲ್ಲಿ ಭಾಗವಹಿಸಿದ್ದಿಯಾ ಎಂದು ವಿವಿಧ ಪ್ರಶ್ನೆಗಳನ್ನು ಕೇಳಿ ಕೊನೆಗೆ ಅಲ್ಲಿಯೇ ಕೊಂದು ಮುಗಿಸಿದ್ದಾರೆ. ಇಬ್ಬರು ದೇಶಪ್ರೇಮಿಗಳು ರಂಝಾನ್ ಮಾಸದಲ್ಲಿಯೇ ಧರ್ಮವಿಲ್ಲದ ಕೇವಲ ರಕ್ತಪಿಪಾಸುಗಳಾಗಿಯೇ ಬದುಕುವ ಕಿರಾತಕರ ಗುಂಡಿಗೆ ಎದೆ ನೀಡಿದ್ದಾರೆ.
ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಹೊರಗೆ ಬಂದವರು….
ಈ ಎರಡು ಹತ್ಯೆಗಳು ಕೂಡ ನಡೆದದ್ದು ಭಾರತ ರಂಝಾನ್ ಮಾಸದಲ್ಲಿ ಕದನ ವಿರಾಮ ಘೋಷಿಸಿದ ಸಮಯದಲ್ಲಿ. ನೀವು ಪವಿತ್ರ ಉಪವಾಸದ ದಿನಗಳಲ್ಲಿ ಇದ್ದಿರಿ. ಇಂತಹ ಸಮಯದಲ್ಲಿ ಗುಂಡಿನ ಮೊರೆತಗಳು ಕಣಿವೆಯಲ್ಲಿ ಕೇಳುವುದು ಸರಿಯಲ್ಲ. ಆದ್ದರಿಂದ ನಾವು ಒಂದು ತಿಂಗಳು ಕದನ ವಿರಾಮ ಘೋಷಿಸುತ್ತಿದ್ದೇವೆ. ನಮ್ಮ ಕಡೆಯಿಂದ ಬಂದೂಕು ಸಿಡಿಯುವುದಿಲ್ಲ, ಆದರೆ ನಿಮ್ಮ ಕಡೆಯಿಂದ ಗುಂಡುಗಳು ಬಂದರೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಕೊಡುತ್ತೇವೆ ಎಂದು ಭಾರತದ ಕಡೆಯಿಂದ ಸಂದೇಶ ಹೋಗಿತ್ತು. ಹಾಗೆ ಭಾರತ ನಡೆದುಕೊಂಡಿದೆ. ರಂಝಾನ್ ಮಾಸದಲ್ಲಿ ನೆತ್ತರು ಹರಿಯುವುದು ಬೇಡಾ ಎನ್ನುವ ಭಾರತದ ನಿಲುವಿಗೆ ಪಾಕಿಸ್ತಾನ ಮಾತ್ರ ಉಲ್ಟಾ ಹೊಡೆದಿತ್ತು. ಇನ್ನು ಜಮ್ಮು-ಕಾಶ್ಮೀರದಲ್ಲಿ ವಾಸಿಸುತ್ತಾ, ನಮ್ಮ ದೇಶದ ನೀರು, ಗಾಳಿ, ಆಹಾರ ಸೇವಿಸಿ ಮೆರೆಯುವ ಮೂಲಭೂತ ಮುಸ್ಲಿಮರು ಇವತ್ತು ಏನು ಮಾಡಿದ್ರು ಗೊತ್ತಾ?
ಬೆಳಿಗ್ಗೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಗೆ ಬಂದವರೇ ತಮ್ಮ ರಕ್ಷಣೆಗೆಂದು ಹೊರಗೆ ನಿಂತಿದ್ದ ಯೋಧರ ಮತ್ತು ಪೊಲೀಸ್ ವಾಹನಗಳ ಮೇಲೆ ಕಲ್ಲು ಬಿಸಾಡಿದ್ದಾರೆ. ಇದಕ್ಕಿಂತ ನೀಚತನ ಬೇರೆ ಇದೆಯಾ? ಇವರ ರಕ್ಷಣೆಗಾಗಿ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವವರು ನಮ್ಮ ಯೋಧರು. ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜಂಗ್ಲಾತ್ ಮಂಡಿಯ ಮಸೀದಿಯಿಂದ ಹೊರಗೆ ಬಂದ ಮೂಲಭೂತವಾದಿಗಳು ಸೈನಿಕರ ಮೇಲೆ, ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಅದರ ನಂತರ ಕಾಶ್ಮೀರದ ಹಲವು ಕಡೆ ಇಂತಹುದೇ ಘಟನೆಗಳು ನಡೆದಿವೆ. ಯೋಧರು, ಪೊಲೀಸರು ತಮ್ಮ ರಕ್ಷಣೆಗೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿ ತರಲು ಪ್ರಯೋಗಿಸಿದ್ದು ಆಶ್ರುವಾಯು ಮತ್ತು ರಬ್ಬರ್ ಬುಲೆಟ್. ರಂಝಾನ್ ಪವಿತ್ರ ಮಾಸ ಎನ್ನುತ್ತಾರೆ. ಶಾಂತಿ ಭೋದಿಸುವ ಸಮಯ ಎನ್ನುತ್ತಾರೆ. ಆದರೆ ಅಲ್ಲಿ ಪ್ರಾರ್ಥನೆ ಮುಗಿಸಿ ಹೊರಗೆ ಬಂದ ಕೂಡಲೇ ಇವರು ಹೀಗೆ ಮಾಡುತ್ತಾರೆ ಎಂದರೆ ಮೋದಿಗೆ ಉಳಿದಿರುವ ದಾರಿ ಒಂದೇ, 56 ಇಂಚಿನ ಎದೆಯನ್ನು ತೋರಿಸುವುದು. ಆಗ ಮಾನವಹಕ್ಕು ಆಯೋಗದವರು ಏದ್ದೇಳುತ್ತಾರೆ. ಅವರಿಗೆ ಕ್ಯಾರ್ ಮಾಡದೇ ಏನು ಮಾಡಬೇಕೋ ಅದನ್ನು ಮೋದಿ ಮಾಡಿ ಮುಗಿಸಬೇಕು. ಇನ್ನು ಎಷ್ಟು ದಿನ ಎಂದು ಸಹಿಸುವುದು!!
Leave A Reply