• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಲ್ಲು ತೂರಾಟಗಾರರಿಂದ ಸೈನಿಕರ ರಕ್ಷಣೆಗೆ ದೇಹರಕ್ಷಕ ಅಸ್ತ್ರ ನೀಡಲು ಕೇಂದ್ರ ಸರ್ಕಾರದ ನಿರ್ಧಾರ

TNN Correspondent Posted On June 17, 2018
0


0
Shares
  • Share On Facebook
  • Tweet It

ದೆಹಲಿ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರತ್ಯೇಕತವಾದಿಗಳು, ಭಯೋತ್ಪಾಕರ ಕುತಂತ್ರದಿಂದ ಸೈನಿಕರ ಮೇಲೆ ಕಲ್ಲು ತೂರಾಟ ಪ್ರಕರಣಗಳು ಹೆಚ್ಚುತ್ತಿದ್ದು, ಸೈನಿಕರಿಗೆ ಹಾನಿಯಾಗುತ್ತಿರುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಸೈನಿಕರ ರಕ್ಷಣೆಗಾಗಿ ಇಡೀ ದೇಹವನ್ನು ಕಲ್ಲುಗಳಿಂದ ರಕ್ಷಿಸುವ ದೇಹರಕ್ಷಕ ಧಿರಿಸುಗಳನ್ನು ಕೇಂದ್ರ ಸರ್ಕಾರ ನೀಡಲು ನಿರ್ಧರಿಸಿದೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ.

ಸೈನಿಕರ ರಕ್ಷಣೆಗಾಗಿ ಸಿದ್ಧಪಡಿಸಿರುವ ಈ ಧಿರಿಸುಗಳ ಮೇಲೆ ‘ಕಲ್ಲು ತೂರಾಟ, ಕೆರೋಸಿನ್ ದಾಳಿ, ಪೆಟ್ರೋಲ್ ಬಾಂಬ್ ದಾಳಿ, ಕೆಮಿಕಲ್ ದಾಳಿ ಸೇರಿ ನಾನಾ ತರಹದ ದಾಳಿಗಳಿಂದ ರಕ್ಷಣೆ ನೀಡುತ್ತವೆ. ಅಲ್ಲದೇ ಕಣಿವೆಯಲ್ಲಿರುವ ಮೈಕೊರೆಯುವ ಚಳಿಯಿಂದಲೂ ಈ ಧಿರಿಸುಗಳು ರಕ್ಷಣೆ ನೀಡಲಿದ್ದು, ಮೈನಸ್ 20 ಸೆಲ್ಸಿಯಸ್ ನಿಂದ 55 ಸೆಲ್ಸಿಯಸ್ ವರೆಗೆ ಚಳಿಯಿಂದ 5 ಗಂಟೆವರೆಗೆ ರಕ್ಷಣೆ ನೀಡಲಿದೆ.

ಕಾಶ್ಮೀರದ ಗಲಭೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸಿಆರ್ ಫಿಎಫ್ ಸೈನಿಕರಿಗೆ ಇಡೀ ದೇಹವನ್ನು ರಕ್ಷಿಸುವ ಈ ಧಿರಿಸುಗಳನ್ನು ನೀಡಲು ನಿರ್ಧರಿಸಲಾಗಿದೆ. ಸಿಆರ್ ಫಿಎಫ್ ಜಮ್ಮು ಕಾಶ್ಮೀರದಲ್ಲಿ ಗಲಭೆ ನಿಯಂತ್ರಿಸಲು ಮತ್ತು ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ಇಳಿಯುತ್ತಿದ್ದು, ಸಿಆರ್ ಫಿಎಫ್ ಪಡೆಗೆ ಆರಂಭದಲ್ಲಿ ನೀಡಲಾಗುತ್ತಿದೆ. ಅಲ್ಲದೇ ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಬಿಎಸ್ ಎಫ್ ಯೋಧರಿಗೆ ವಿತರಿಸಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಆರು ಕೆ.ಜಿ.ತೂಕದ ಈ ಧಿರಿಸುಗಳು ಮೂರು ಬೇರೆ ಬೇರೆ ರೀತಿಯ ಸೈಜ್ ಗಳನ್ನು ಹೊಂದಿವೆ. ಮುಖ, ಎದೆ, ತೋಳು,  ಹೊಟ್ಟೆ, ತೊಡೆ ಸೇರಿ ದೇಹದ ಸೂಕ್ಷ್ಮ ಅಂಗಗಳನ್ನು ಈ ನೂತನ ಧಿರಿಸುಗಳು ರಕ್ಷಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ 2018ರ ವರ್ಷದಲ್ಲಿ ಕಲ್ಲು ತೂರಾಟಗಾರರಿಂದ ಸುಮಾರು 3000 ಸಿಆರ್ ಫಿಎಫ್ ಸೈನಿಕರು ಗಾಯಗೊಂಡಿದ್ದಾರೆ. ಆದ್ದರಿಂದ ಸೈನಿಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಿಗೆ ಇಡೀ ದೇಹವನ್ನು ರಕ್ಷಿಸುವ ಧಿರಿಸುಗಳನ್ನು ನೀಡಲು ಮುಂದಾಗಿದೆ.

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Tulunadu News June 16, 2026
Najlepsze bonusy i sloty w polskim kasynie online
Tulunadu News May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ

  • Privacy Policy
  • Contact
© Tulunadu Infomedia.

Press enter/return to begin your search