ಪಕೋಡ ಮಾರಿಕೊಂಡು ಜೀವನ ಸಾಗಿಸಬಹುದು ಎಂಬ ಮೋದಿ ಸಲಹೆ ಕೈ ಕಾರ್ಯಕರ್ತನ ಜೀವನವೇ ಬದಲಿಸಿದೆ ನೋಡಿ!
ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡ ಮಾರಿಕೊಂಡು, ನಿತ್ಯ ನೂರಾರು ರೂಪಾಯಿ ಸಂಪಾದಿಸುವುದು ಲೇಸು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಹೇಳಿದಾಗ ವಿವಾದಕ್ಕೆ ಕಾರಣವಾಯಿತು. ಅದರಲ್ಲೂ ರಾಹುಲ್ ಗಾಂಧಿಯವರಂತೂ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾದವು. ಜನರಿಗೆ ಪಕೋಡ ಮಾರಲು ಹಚ್ಚುವ ಪ್ರಧಾನಿ ಎಂದು ಜರಿದರು.
ನರೇಂದ್ರ ಮೋದಿ ಅವರು ವಾಸ್ತವದಲ್ಲಿ ಸುಮ್ಮನಿರುವುದಕ್ಕಿಂತ ಯಾವುದಾದರೂ ಉದ್ಯೋಗ ಕೈಗೊಳ್ಳುವುದು, ಕೆಲಸ ಮಾಡುವ ಮೂಲಕ ದುಡಿದು ತಿನ್ನುವ ದಾರಿ ತೋರಿಸಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಸುಖಾಸುಮ್ಮನೆ ವಿವಾದ ಎಬ್ಬಿಸಿದ್ದವು.
ಆದರೆ ನರೇಂದ್ರ ಮೋದಿ ಅವರ ಈ ಸಲಹೆ ಈಗ ಕಾಂಗ್ರೆಸ್ ಕಾರ್ಯಕರ್ತನ ಜೀವನವನ್ನೇ ಬದಲಿಸಿದ್ದು, ಪಕೋಡ ಮಾರಿ ಹೆಮ್ಮೆಯ ಜೀವನ ನಡೆಸುತ್ತಿದ್ದಾನೆ. ನಿತ್ಯ ನೂರಾರು ರೂಪಾಯಿ ಸಂಪಾದಿಸುವ ಮೂಲಕ ತನ್ನ ಕಾಲ ಮೇಲೆ ತಾನು ನಿಂತುಕೊಂಡಿದ್ದಾನೆ. ಸ್ವಾವಲಂಬಿ ಜೀವನ ನಡೆಸುತ್ತಿದ್ದಾನೆ.
ಹೌದು, ವಡೋಧರಾದಲ್ಲಿ ಹಿಂದಿ ಸ್ನಾತಕೋತ್ತರ ಪದವಿ ಪಡೆದಿದ್ದ ನಾರಾಯಣ ಭಾಯಿ ರಜಪೂತ್, ಎಲ್ಲೂ ಕೆಲಸ ಸಿಗದೆ ನಿರುದ್ಯೋಗಿಯಾಗಿದ್ದರು. ಕಾಂಗ್ರೆಸ್ ಕಾರ್ಯಕರ್ತನಾಗಿ ಓಡಾಡಿಕೊಂಡಿದ್ದರು. ಕಲಿತ ವಿದ್ಯೆಗೆ ತಕ್ಕ ಉದ್ಯೋಗ ಸಿಗದೆ ಪರದಾಡುತ್ತಿದ್ದರು. ಆದರೆ ಯಾವಾಗ ನರೇಂದ್ರ ಮೋದಿ ಅವರು ಪಕೋಡ ಮಾಡಿಯೂ ಜೀವನ ಸಾಗಿಸಬಹುದು ಎಂದು ಸಲಹೆ ನೀಡಿದರೋ, ಅಲ್ಲಿಂದ ರಜಪೂತ್ ದಿಸೆಯೇ ಬದಲಾಗಿದೆ.
ಮೋದಿ ಮಾತಿನಿಂದ ಪ್ರೇರಣೆಗೊಂಡು ವಡೋದರಾದಲ್ಲಿ ಶ್ರೀರಾಮ ದಲ್ವಾಡ ಎಂಬ ಹೆಸರಿನಲ್ಲಿ ಪಕೋಡ ಅಂಗಡಿ ತೆರೆದಿರುವ ರಜಪೂತ್ ನಿತ್ಯ 500-600 ಕೆಜಿ ಪಕೋಡ ಮಾರುವ ಮೂಲಕ ಸಾವಿರಾರು ರೂಪಾಯಿ ಗಳಿಸುತ್ತಿದ್ದಾರೆ. ಆ ಮೂಲಕ ದುಡಿದು ತಿನ್ನುತ್ತಿದ್ದಾರೆ. ಈಗ ಹೇಳಿ ನರೇಂದ್ರ ಮೋದಿ ಅವರು ಹೇಳಿದ್ದರಲ್ಲಿ ಯಾವ ತಪ್ಪಿದೆ?
Leave A Reply