• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಉರ್ದುವಿನಲ್ಲಿ ರಾಮಾಯಣ ಬರೆದ ಈ ಮುಸ್ಲಿಂ ಮಹಿಳೆ ಹಿಂದೂಗಳ ಹೃದಯವನ್ನೂ ಗೆದ್ದಳು!

TNN Correspondent Posted On July 1, 2018
0


0
Shares
  • Share On Facebook
  • Tweet It

ದೇಶದಲ್ಲಿ ಹಿಂದೂಗಳು ಎಂದರೆ ದ್ವೇಷ ಸಾಧಿಸುವ, ಲವ್ ಜಿಹಾದ್ ಮೂಲಕ ಹಿಂದೂ ಧರ್ಮೀಯರನ್ನು ಮತಾಂತರ ಮಾಡುವ, ಗಲಭೆಗೆ ಪ್ರಚೋದಿಸುವ ಇಸ್ಲಾಂ ಮೂಲಭೂತವಾದಿಗಳಿದ್ದಾರೆ. ಅಲ್ಲದೆ ಹಿಂದೂ ಧರ್ಮಗ್ರಂಥಗಳನ್ನು ದ್ವೇಷಿಸುವ, ರಾಮನೇ ಇಲ್ಲ ಎನ್ನುವ, ಹಿಂದೂಗಳು ಕೋಮುವಾದಿಗಳು ಎನ್ನುವ ಮತಿಗೇಡಿಗಳೂ ಇದ್ದಾರೆ.

ಆದರೆ ಕೆಲವು ಮುಸ್ಲಿಮರಿಗೆ ಮಾತ್ರ ಹಿಂದೂ ಧರ್ಮ ಶಾಂತಿಯನ್ನು ಸಾರುವ ಹಾಗೂ ಅದನ್ನೇ ಪಾಲಿಸುವ, ಸೌಹಾರ್ದತೆ ಹೊಂದಿರುವ ರಾಷ್ಟ್ರ ಎಂಬುದು ಗೊತ್ತಾಗಿದೆ. ಅಲ್ಲದೆ ಅವರು ಹಿಂದೂಗಳ ಜತೆ ಉತ್ತಮವಾಗಿಯೂ ಇದ್ದಾರೆ, ನಮ್ಮ ಆಚರಣೆಗಳನ್ನೂ ಆಚರಿಸುತ್ತಾರೆ.

ಈಗ ಹಿಂದೂಗಳು, ಹಿಂದೂ ಧರ್ಮ ಸೌಹಾರ್ದದ ಸಂಕೇತ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ರಾಮ ಜನಿಸಿದ ನಾಡಾದ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ರಾಮಾಯಣವನ್ನು ಉರ್ದು ಭಾಷೆಯಲ್ಲಿ ಬರೆಯುವ ಮೂಲಕ ಕೋಟ್ಯಂತರ ಹಿಂದೂಗಳ ಹೃದಯವನ್ನೂ ಗೆದ್ದಿದ್ದಾರೆ.

ಹೌದು, ಉತ್ತರ ಪ್ರದೇಶದ ಪ್ರೇಮ್ ನಗರದ ಡಾ.ಮಾಹಿ ತಲಾತ್ ಸಿದ್ಧಿಕಿ ಅವರು ಉರ್ದು ಭಾಷೆಯಲ್ಲಿ ರಾಮಾಯಣ ಪುಸ್ತಕ ಬರೆದಿದ್ದು, ಈಗ ಹಿಂದೂಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮುಸ್ಲಿಮರು ಹಾಗೂ ಉರ್ದು ಭಾಷೆ ಬರುವವರಿಗೂ ರಾಮಾಯಣದ ಸಾರ ತಿಳಿಯಲಿ  ಎಂದು ಸಿದ್ಧಿಕಿ ಪುಸ್ತಕ ಬರೆದಿದ್ದು, ಇವರು ಇದಕ್ಕಾಗಿ ಒಂದೂವರೆ ವರ್ಷ ಸಮಯ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮಾತನಾಡಿರುವ ಡಾ.ಮಾಹಿ ತಲಾತ್ ಸಿದ್ಧಿಕಿ, ರಾಮಾಯಣ ಪುಸ್ತಕದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಕುರಿತು ಉತ್ತಮ ಸಂದೇಶಗಳಿವೆ. ಪುಸ್ತಕ ಬರೆಯಲು ನಾನು ಮೂಲ ಪುಸ್ತಕವನ್ನು ಓದಿದೆ. ನನ್ನ ಮನಸ್ಸಲ್ಲಿ ಶಾಂತಿ ಮೂಡಿತು. ಉತ್ತಮ ಸಂದೇಶಗಳಿವೆ ಎನಿಸಿತು. ಹಾಗಾಗಿ ಉರ್ದುವಿನಲ್ಲಿ ಬರೆದೆ. ಎಲ್ಲರೂ ಪುಸ್ತಕ ಓದಬೇಕು ಎಂದಿದ್ದಾರೆ.

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search