ಪ್ರಧಾನಿ ಮೋದಿ ಫಿಟ್ನೆಸ್ ವೀಡಿಯೋಗೆ ಸರ್ಕಾರದಿಂದ ಹಣ ಖರ್ಚು ಮಾಡಿಲ್ಲ ಎಂದು ಸ್ಪಷ್ಟನೆ, ಶಶಿ ತರೂರ್ ಗೆ ಮುಖಭಂಗ!
ಈ ಕಾಂಗ್ರೆಸ್ಸಿಗರೇ ಹೀಗೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಬೇಕು ಎಂದರೆ ಯಾವ ದಾರಿಯನ್ನು ಬೇಕಾದರೂ ಅನುಸರಿಸುತ್ತಾರೆ. ಯಾವ ಮಟ್ಟಕ್ಕೂ ಇಳಿಯುತ್ತಾರೆ. ಇದಕ್ಕೆ ನೋಟು ನಿಷೇಧ, ಜಿಎಸ್ಟಿ ಜಾರಿ, ಮೋದಿ ಅವರ ವಿದೇಶ ಪ್ರವಾಸ, ತೊಡುವ ಬಟ್ಟೆ… ಹೀಗೆ ಎಲ್ಲ ವಿಷಯದಲ್ಲೂ ಕಾಂಗ್ರೆಸ್ಸಿಗರು ಮೋದಿ ಅವರನ್ನು ಸುಖಾಸುಮ್ಮನೆ ಟೀಕಿಸುತ್ತಾರೆ ಹಾಗೂ ವಾಸ್ತವ ಅರಿತಾಗ ಮುಖಭಂಗ ಅನುಭವಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ, ವ್ಯಾಯಾಮ ಮಾಡುವ ವೀಡಿಯೋ ಒಂದನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಹಲವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದರು. ವ್ಯಾಯಾಮ, ಯೋಗ ಮಾಡುವುದು ಒಳ್ಳೆಯದು ಎಂಬ ದೃಷ್ಟಿಯಿಂದ ಮೋದಿ ಅವರು ವೀಡಿಯೋ ಅಪ್ಲೋಡ್ ಮಾಡಿದ್ದರು. ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನಕ್ಕೆ ಮೋದಿ ಅವರು ಬೆಂಬಲಿಸಿದ್ದು ಸರಿಯಾಗಿಯೇ ಇತ್ತು.
ಆದರೆ ಮೋದಿ ಅವರು ಖ್ಯಾತಿ ಗಳಿಸುವುದು, ಜನರ ಮೆಚ್ಚುಗೆಗೆ ಪಾತ್ರರಾದರೆ ಕಾಂಗ್ರೆಸ್ಸಿಗರಿಗೆ ಸಹಿಸಲು ಆಗಲಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಅವರು ಮೋದಿ ವಿರುದ್ಧ ಮಾತನಾಡಿದರು. ನರೇಂದ್ರ ಮೋದಿ ಅವರು ಸರ್ಕಾರದ ಹಣದಲ್ಲಿ ಯೋಗ, ವ್ಯಾಯಾಮ ಮಾಡಿದ್ದಾರೆ. ಇದಕ್ಕೆ 35 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಆರೋಪಿಸಿದ್ದರು.
ಆದರೆ ಇದಕ್ಕೆ ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಠೋಡ್ ಅವರು ಸ್ಪಷ್ಟನೆ ನೀಡಿದ್ದು, ಮೋದಿ ಅವರ ವೀಡಿಯೋಕ್ಕಾಗಿ ಸರ್ಕಾರ ಒಂದು ನಯಾಪೈಸೆಯೂ ಖರ್ಚು ಮಾಡಿಲ್ಲ. ಪ್ರಧಾನಮಂತ್ರಿ ಕಚೇರಿಯ ಫೋಟೋಗ್ರಾಫರ್ ಈ ವೀಡಿಯೋ ಮಾಡಿದ್ದು, 35 ಲಕ್ಷ ರೂಪಾಯಿ ಅಲ್ಲ, ಒಂದು ಲಕ್ಷ ರೂಪಾಯಿ ಸಹ ಖರ್ಚು ಮಾಡಿಲ್ಲ. ಶಶಿ ತರೂರ್ ಸತ್ಯದ ಮೇಲೆ ಹೊಡೆಯುವ ಹಾಗೆ ಸುಳ್ಳು ಹೇಳಿದ್ದಾರೆ ಎಂದು ಸಿಂಗ್ ಜಾಡಿಸಿದ್ದಾರೆ. ಇದು ಶಶಿ ತರೂರ್ ಅವರಿಗೆ ಮುಖಭಂಗವಾಗಿದೆ.
Leave A Reply