ಹಿಂದೂ ಮುಖಂಡರ ಹತ್ಯೆಯ ಸಂಚಿನ ಬಗ್ಗೆ ಬಾಯ್ಬಿಟ್ಟ ದಾವೂದ್ ಇಬ್ರಾಹಿಂ ಸಹಾಯಕ ರಷೀದ್ ಮಲಬಾರಿ
ಬೆಂಗಳೂರು: ದೇಶದಲ್ಲಿ ಹಿಂದೂ, ಹಿಂದುತ್ವ, ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರೇ, ಹಿಂದೂ ಧರ್ಮದ ಬಗ್ಗೆ ಹೇಳಿಕೊಂಡರೇ ದಾಳಿ ನಡೆಸುವ, ಅವರ ಹತ್ಯೆ ನಡೆಸುವ ಕೃತ್ಯಗಳು ಸಾಮಾನ್ಯವಾಗಿ ಬಿಟ್ಟಿವೆ. ಇದೀಗ ಅಂತಹದ್ದೇ ಹತ್ಯೆಯ ಸಂಚೋಧನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹತ್ತಿರದ ಸಂಬಂಧಿ ರಷೀದ್ ಮಲಬಾರಿ ಬಹಿರಂಗಗೊಳಿಸಿದ್ದಾನೆ.
ಹಲವು ಪ್ರಕರಣಗಳಲ್ಲಿ ಪೊಲೀಸರ ಅತಿಥಿಯಾಗಿರುವ ರಷೀದ್ ಮಲಬಾರಿ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪವನ್ನು ಹೊತ್ತಿರುವ ಕುರಿತು ತನಿಖೆ ಎದುರಿಸುತ್ತಿದ್ದಾನೆ. ಈ ಕುರಿತು ತನಿಖೆ ನಡೆಸುತ್ತಿರುವ ಕರ್ನಾಟಕದ ಪೊಲೀಸರಿಗೆ ಆಘಾತಕಾರಿ ಮಾಹಿತಿ ಹೊರ ಬಿದ್ದಿದ್ದು, ಹಿಂದೂ ಮುಖಂಡರು ವಿಶೇಷವಾಗಿ ದಕ್ಷಿಣ ಭಾರತದ ಹಿಂದೂ ಮುಖಂಡರನ್ನು ಹತ್ಯೆ ಮಾಡುವ ಸಂಚು ರೂಪಿಸಿರುವ ಕುರಿತು ಮಾಹಿತಿ ಹೊರ ಹಾಕಿದ್ದಾನೆ.
ದುಬೈ ಮೂಲದ ಉದ್ಯಮಿಯನ್ನು ಅಪಹರಿಸಿ, ಆತನಿಂದ ಐದು ಕೋಟಿ ಹಣ ವಸೂಲಿ ಮಾಡಿ. ಆ ಹಣವನ್ನು ಹಿಂದೂ ಮುಖಂಡರ ಹತ್ಯೆಗೆ ಬಳಸಿಕೊಳ್ಳಲಾಗುತ್ತಿತ್ತು. ಅದಕ್ಕಾಗಿ ಶಾರ್ಪ್ ಶೂಟರ್ ಗಳನ್ನು ನೇಮಿಸಿದ್ದ ಎಂಬ ಮಾಹಿತಿ ಹೊರ ಹಾಕಿದ್ದಾನೆ. ನನಗೆ ಚೋಟಾ ಶಕೀಲ್ ಹಿಂದೂ ಮುಖಂಡ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತು ಇಂದಿರಾ ಗಾಂಧಿ ಮೊಮ್ಮಗ ವರುಣ ಗಾಂಧಿಯನ್ನು ಹತ್ಯೆ ಮಾಡುವಂತೆ ಸಂದೇಶ ಕಳುಹಿಸಿದ್ದ. ಈ ಕೆಲಸಕ್ಕಾಗಿ ಮೂರು ಪಿಸ್ತೂಲ್ ಬೇಕು ಎಂದು ಕೇಳಿದ್ದೇ. ಅದರ ಜೊತೆಗೆ ಒಂದು ಲಕ್ಷ ರೂಪಾಯಿಯನ್ನು ಛೋಟಾ ಶಕೀಲ್ ಕಳುಹಿಸಿದ್ದ. ನಮ್ಮ ಸಮುದಾಯದ ಉಳಿವಿಗಾಗಿ ನೀನು ಈ ಕಾರ್ಯವನ್ನು ಮಾಡಬೇಕು ಎಂದು ನನಗೆ ತಿಳಿಸಿದ್ದ ಎಂಬುದು ಸೇರಿ ಇಡೀ ಹತ್ಯೆಯ ಸಂಚಿನ ಕುರಿತಾದ ಮಾಹಿತಿಯನ್ನು ರಷೀದ್ ಮಲಬಾರಿ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ.
Leave A Reply