ಭೂಲೋಕದ ಮೇಲಿನ ಸ್ವರ್ಗ ಅದು…!!!
ಉಡುಪಿ ಮಲ್ಪೆ-.. ದ ನಾಲ್ಕು ತಿಂಗಳಿಂದ ಆ ಸ್ವರ್ಗಕ್ಕೆ ಬಾಗಿಲು ಹಾಕಲಾಗಿತ್ತು. ಸ್ವರ್ಗಕ್ಕೆ ಹೋಗಲಾಗದೆ, ಜನರೆಲ್ಲಾ ಭೂಮಿ ಮೇಲೆಯೇ ಅಲೆದಾಡುತ್ತಿದ್ದರು. ಇದೀಗ ಸ್ವರ್ಗದ ಬಾಗಿಲು ತೆರೆದಿದ್ದು ಜನ ಹಾಡುತ್ತಾ.. ಕುಣಿಯುತ್ತಾ ಮಸ್ತ್ ಮಜಾ ಮಾಡುತ್ತಾ ಸುಂದರ ಸ್ವರ್ಗಕ್ಕೆ ಟ್ರಿಪ್ ಶುರು ಮಾಡಿದ್ದಾರೆ
ಮಳೆಗಾಲದಲ್ಲಿ ಮೂರೂವರೆ ತಿಂಗಳು ಸಂಪೂರ್ಣ ಬಂದ್ ಆಗಿದ್ದ ಉಡುಪಿಯ ಸೈಂಟ್ ಮೇರೀಸ್ ಪ್ರವಾಸ ಇದೀಗ ಮತ್ತೆ ಆರಂಭವಾಗಿದೆ. ಬೆಳಗ್ಗೆ 10 ಗಂಟೆಯಿಂದ ಟ್ರಿಪ್ ಶುರುವಾಗುತ್ತದೆ. ಸಂಜೆಯ ತನಕ ನಾಲ್ಕು ಸುತ್ತ ನೀರು ನಡುವೆ ಇರುವ ಭೂಲೋಕದ ಸ್ವರ್ಗಕ್ಕೆ ಹೋಗಿ ಎಂಜಾಯ್ ಮಾಡಬಹುದು. ಮಲ್ಪೆ ಬೋಟ್ ಪಾಯಿಂಟ್ ನಿಂದ ಆರೂವರೆ ಕಿಲೋಮೀಟರ್ ದೂರವಿರುವ ಸೈಂಟ್ ಮೇರೀಸ್ ದ್ವೀಪದ ಕೂಗಳತೆ ದೂರದಲ್ಲಿ ದೊಡ್ಡ ಬೋಟನ್ನು ನಿಲ್ಲಿಸಲಾಗುತ್ತದೆ. ಸಮುದ್ರದ ಮಧ್ಯೆಯೇ ಮತ್ತೊಂದು ಚಿಕ್ಕ ಬೋಟ್‍ಗೆ ಎಲ್ಲಾ ಪ್ರವಾಸಿಗರನ್ನು ಶಿಫ್ಟ್ ಮಾಡಲಾಗುತ್ತದೆ. ಆ ಬೋಟ್ ದ್ವೀಪ ತಲುಪುತ್ತದೆ. ದೊಡ್ಡ ಬೋಟ್ ಮಲ್ಪೆಗೆ ವಾಪಾಸ್ಸಾಗುತ್ತದೆ.
ಭಾರತವನ್ನು ಕಂಡು ಹಿಡಿದ ಕಲ್ಲಿಕೋಟೆಗೆ ಹೋಗುವ ಮೊದಲು ಸೈಂಟ್ ಮೇರೀಸ್ ದ್ವೀಪಕ್ಕೆ ಬಂದಿದ್ದ. ಇಲ್ಲಿನ ಸೌಂದರ್ಯವನ್ನು ಆತ ಬಹಳ ವರ್ಣಿಸಿದ್ದ. ಸೈಂಟ್ ಮೇರೀಸ್ ದ್ವೀಪದಲ್ಲಿ ಕಾಣಸಿಗುವ ವಿಭಿನ್ನಾಕಾರದ ಕಲ್ಲುಗಳು ಎಲ್ಲರನ್ನು ಸೆಳೆಯುತ್ತದೆ. ಕಲ್ಲಿನ ಮೇಲೆ ಅಪ್ಪಳಿಸೋ ತೆರೆಗಳನ್ನು ಅನುಭವಿಸೋದೆ ಚಂದ. ಸೂರ್ಯಾಸ್ತದ ಸಂದರ್ಭದಲ್ಲಿ ಇದ್ರಂತೂ ಇಡೀ ಸಮುದ್ರ ಬಂಗಾರದ ಬಣ್ಣದಲ್ಲಿ ಹೊಳೆಯುತ್ತದೆ. ಈ ಬಾರಿ ಸೇಫ್ಟಿ ದೃಷ್ಟಿಯಿಂದ ದೊಡ್ಡ ಬೋಟ್, ಅದರಲ್ಲೊಂದು ವಾಶ್ ರೂಮನ್ನೂ ನಿರ್ಮಾಣ ಮಾಡಲಾಗಿದೆ. ದೇಶ ವಿದೇಶದ ಪ್ರವಾಸಿಗರಿಗೆ ಇದು ಬಹಳ ಇಷ್ಟವಾಗಿದೆ.
ಬೋಟ್‍ನಲ್ಲಿ ಲೈಫ್ ಜಾಕೆಟ್- ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿದೆ. 250 ರುಪಾಯಿ ಟಿಕೆಟ್‍ನಲ್ಲಿ ಸೈಂಟ್ ಮೇರೀಸ್ ಕಣ್ತುಂಬಿಕೊಳ್ಳಬಹುದು. ಮಕ್ಕಳಿಗೆ 150 ರುಪಾಯಿ ಟಿಕೆಟ್ ನಿಗದಿ ಮಾಡಲಾಗಿದೆ.
ಮಳೆಗಾಲ ಆರಂಭವಾಗುವವರೆಗೆ ಸೈಂಟ್ ಮೇರೀಸ್ ಎಂಬ ಭೂಲೋಕದ ಮೇಲಿನ ಸ್ವರ್ಗ ಓಪನ್ ಇರುತ್ತದೆ. ಅರ್ಧಗಂಟೆ ದೊಡ್ಡ ಬೋಟ್‍ನಲ್ಲಿ ಪಯಣ, ಅಲ್ಲಿಂದ ಸಣ್ಣ ಬೋಟ್ ಮೂಲಕ ದ್ವೀಪಕ್ಕೆ ಶಿಫ್ಟ್, ಅಲ್ಲಿ ಬೇಕಾದಷ್ಟು ಸುತ್ತಾಟ, ಮತ್ತೆ ಎರಡು ಬೋಟ್‍ಗಳಲ್ಲಿ ಮಲ್ಪೆಗೆ ವಾಪಾಸ್. ಇಷ್ಟಕ್ಕೆ ತಗಲುವ ವೆಚ್ಚ 250 ರೂಪಾಯಿ ಮಾತ್ರ. ತಮಗೆ ಬೇಕಾದ ತಿಂಡಿ- ಊಟ ಕೊಂಡೊಯ್ದು ಫ್ಯಾಮಿಲಿ.. ಫ್ರೆಂಡ್ಸ್ .., ಲವ್ವರ್ಸ್ ಸಿಕ್ಕಾಪಟ್ಟೆ ಎಂಜಾಯ್ ಮಾಡಬಹುದು.
Leave A Reply