• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭೂಲೋಕದ ಮೇಲಿನ ಸ್ವರ್ಗ ಅದು…!!!

udupi reporter Posted On October 6, 2018


  • Share On Facebook
  • Tweet It

ಉಡುಪಿ ಮಲ್ಪೆ-.. ದ ನಾಲ್ಕು ತಿಂಗಳಿಂದ ಆ ಸ್ವರ್ಗಕ್ಕೆ ಬಾಗಿಲು ಹಾಕಲಾಗಿತ್ತು. ಸ್ವರ್ಗಕ್ಕೆ ಹೋಗಲಾಗದೆ, ಜನರೆಲ್ಲಾ ಭೂಮಿ ಮೇಲೆಯೇ ಅಲೆದಾಡುತ್ತಿದ್ದರು. ಇದೀಗ ಸ್ವರ್ಗದ ಬಾಗಿಲು ತೆರೆದಿದ್ದು ಜನ ಹಾಡುತ್ತಾ.. ಕುಣಿಯುತ್ತಾ ಮಸ್ತ್ ಮಜಾ ಮಾಡುತ್ತಾ ಸುಂದರ ಸ್ವರ್ಗಕ್ಕೆ ಟ್ರಿಪ್ ಶುರು ಮಾಡಿದ್ದಾರೆ

ಕಣ್ಣು ಹಾಯಿಸಿದಲ್ಲೆಲ್ಲಾ ನೀಲಿ ನೀರು.., ರಭಸವಾಗಿ ಬೀಸೋ ತಂಗಾಳಿ.., ಆಕಾಶದಲ್ಲಿ ಹಾರಾಡೋ ಅನುಭವ..ಈ ಖುಷಿ ಒಟ್ಟಿಗೆ ಒಂದೇ ಕಡೆ ಸಿಗಬೇಕಾದ್ರೆ ನೀವು ಉಡುಪಿಗೆ ಬರಬೇಕು. ಮಲ್ಪೆಗೆ ಬಂದು ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವ ಬೋಟ್ ಹತ್ತಬೇಕು. ಬೋಟ್ ಹತ್ತುತ್ತಿದ್ದಂತೆ ಕಿವಿಗೆ ಡೀಜೆ ಮ್ಯೂಸಿಕ್ ಅಪ್ಪಳಿಸುತ್ತದೆ. ಕೆಳಗೆ ಸಮುದ್ರ.. ಮೇಲೆ ಆಗಸ ಕಿವಿಗಪ್ಪಳಿಸೋ ಹಾಡು ಯಾರಿಗುಂಟು ಯಾರಿಗಿಲ್ಲ ಅಷ್ಟು ಎಂಜಾಯ್ ಮಾಡಬಹುದು.

ಮಳೆಗಾಲದಲ್ಲಿ ಮೂರೂವರೆ ತಿಂಗಳು ಸಂಪೂರ್ಣ ಬಂದ್ ಆಗಿದ್ದ ಉಡುಪಿಯ ಸೈಂಟ್ ಮೇರೀಸ್ ಪ್ರವಾಸ ಇದೀಗ ಮತ್ತೆ ಆರಂಭವಾಗಿದೆ. ಬೆಳಗ್ಗೆ 10 ಗಂಟೆಯಿಂದ ಟ್ರಿಪ್ ಶುರುವಾಗುತ್ತದೆ. ಸಂಜೆಯ ತನಕ ನಾಲ್ಕು ಸುತ್ತ ನೀರು ನಡುವೆ ಇರುವ ಭೂಲೋಕದ ಸ್ವರ್ಗಕ್ಕೆ ಹೋಗಿ ಎಂಜಾಯ್ ಮಾಡಬಹುದು. ಮಲ್ಪೆ ಬೋಟ್ ಪಾಯಿಂಟ್ ನಿಂದ ಆರೂವರೆ ಕಿಲೋಮೀಟರ್ ದೂರವಿರುವ ಸೈಂಟ್ ಮೇರೀಸ್ ದ್ವೀಪದ ಕೂಗಳತೆ ದೂರದಲ್ಲಿ ದೊಡ್ಡ ಬೋಟನ್ನು ನಿಲ್ಲಿಸಲಾಗುತ್ತದೆ. ಸಮುದ್ರದ ಮಧ್ಯೆಯೇ ಮತ್ತೊಂದು ಚಿಕ್ಕ ಬೋಟ್‍ಗೆ ಎಲ್ಲಾ ಪ್ರವಾಸಿಗರನ್ನು ಶಿಫ್ಟ್ ಮಾಡಲಾಗುತ್ತದೆ. ಆ ಬೋಟ್ ದ್ವೀಪ ತಲುಪುತ್ತದೆ. ದೊಡ್ಡ ಬೋಟ್ ಮಲ್ಪೆಗೆ ವಾಪಾಸ್ಸಾಗುತ್ತದೆ.

ಭಾರತವನ್ನು ಕಂಡು ಹಿಡಿದ ಕಲ್ಲಿಕೋಟೆಗೆ ಹೋಗುವ ಮೊದಲು ಸೈಂಟ್ ಮೇರೀಸ್ ದ್ವೀಪಕ್ಕೆ ಬಂದಿದ್ದ. ಇಲ್ಲಿನ ಸೌಂದರ್ಯವನ್ನು ಆತ ಬಹಳ ವರ್ಣಿಸಿದ್ದ. ಸೈಂಟ್ ಮೇರೀಸ್ ದ್ವೀಪದಲ್ಲಿ ಕಾಣಸಿಗುವ ವಿಭಿನ್ನಾಕಾರದ ಕಲ್ಲುಗಳು ಎಲ್ಲರನ್ನು ಸೆಳೆಯುತ್ತದೆ. ಕಲ್ಲಿನ ಮೇಲೆ ಅಪ್ಪಳಿಸೋ ತೆರೆಗಳನ್ನು ಅನುಭವಿಸೋದೆ ಚಂದ. ಸೂರ್ಯಾಸ್ತದ ಸಂದರ್ಭದಲ್ಲಿ ಇದ್ರಂತೂ ಇಡೀ ಸಮುದ್ರ ಬಂಗಾರದ ಬಣ್ಣದಲ್ಲಿ ಹೊಳೆಯುತ್ತದೆ. ಈ ಬಾರಿ ಸೇಫ್ಟಿ ದೃಷ್ಟಿಯಿಂದ ದೊಡ್ಡ ಬೋಟ್, ಅದರಲ್ಲೊಂದು ವಾಶ್ ರೂಮನ್ನೂ ನಿರ್ಮಾಣ ಮಾಡಲಾಗಿದೆ. ದೇಶ ವಿದೇಶದ ಪ್ರವಾಸಿಗರಿಗೆ ಇದು ಬಹಳ ಇಷ್ಟವಾಗಿದೆ.

ಬೋಟ್‍ನಲ್ಲಿ ಲೈಫ್ ಜಾಕೆಟ್- ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿದೆ. 250 ರುಪಾಯಿ ಟಿಕೆಟ್‍ನಲ್ಲಿ ಸೈಂಟ್ ಮೇರೀಸ್ ಕಣ್ತುಂಬಿಕೊಳ್ಳಬಹುದು. ಮಕ್ಕಳಿಗೆ 150 ರುಪಾಯಿ ಟಿಕೆಟ್ ನಿಗದಿ ಮಾಡಲಾಗಿದೆ.

ಮಳೆಗಾಲ ಆರಂಭವಾಗುವವರೆಗೆ ಸೈಂಟ್ ಮೇರೀಸ್ ಎಂಬ ಭೂಲೋಕದ ಮೇಲಿನ ಸ್ವರ್ಗ ಓಪನ್ ಇರುತ್ತದೆ. ಅರ್ಧಗಂಟೆ ದೊಡ್ಡ ಬೋಟ್‍ನಲ್ಲಿ ಪಯಣ, ಅಲ್ಲಿಂದ ಸಣ್ಣ ಬೋಟ್ ಮೂಲಕ ದ್ವೀಪಕ್ಕೆ ಶಿಫ್ಟ್, ಅಲ್ಲಿ ಬೇಕಾದಷ್ಟು ಸುತ್ತಾಟ, ಮತ್ತೆ ಎರಡು ಬೋಟ್‍ಗಳಲ್ಲಿ ಮಲ್ಪೆಗೆ ವಾಪಾಸ್. ಇಷ್ಟಕ್ಕೆ ತಗಲುವ ವೆಚ್ಚ 250 ರೂಪಾಯಿ ಮಾತ್ರ. ತಮಗೆ ಬೇಕಾದ ತಿಂಡಿ- ಊಟ ಕೊಂಡೊಯ್ದು ಫ್ಯಾಮಿಲಿ.. ಫ್ರೆಂಡ್ಸ್ .., ಲವ್ವರ್ಸ್ ಸಿಕ್ಕಾಪಟ್ಟೆ ಎಂಜಾಯ್ ಮಾಡಬಹುದು.

  • Share On Facebook
  • Tweet It


#malpe


Trending Now
ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
udupi reporter February 16, 2019
ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
udupi reporter February 15, 2019
Leave A Reply

  • Recent Posts

    • ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
    • ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
    • ಸೋರಿ ಹೋಗಿರುವ ಎರಡು ಕೋಟಿ ಪತ್ತೆ ಹಚ್ಚಲು ಕಾಮನ್ ಸೆನ್ಸ್ ಬೇಕು, ಸಿಎ ಡಿಗ್ರಿ ಅಲ್ಲ!!
    • ಟ್ರೇಡ್ ಲೈಸೆನ್ಸ್ ನವೀಕರಣದ ಕೊನೆಯ ದಿನ ಹತ್ತಿರ ಬಂದಂತೆ ಇದೇನು ಉಪಟಳ!!
    • ಈ ಬಾರಿಯ ಬಜೆಟ್‍ನಲ್ಲೂ ಕುಮಾರಸ್ವಾಮಿಯವರು ಕರಾವಳಿಗೆ ಮಲತಾಯಿ ಧೋರಣೆ ಮಾಡಿದ್ರಾ?!
    • ತೆರಿಗೆ, ಬಿಲ್ ವಸೂಲಿ ಮಾಡುವುದು ಪಾಲಿಕೆಯ ಹಕ್ಕು, ಭಿಕ್ಷೆ ತೆಗೆದುಕೊಂಡ ಹಾಗೆ ಅಂಗಲಾಚಬಾರದು!!
    • ಯಕ್ಷಗಾನ ಕಲಾವಿದನ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ರೈಗಳು ಮಾಡಿದ್ದು ಸರಿಯಾ ಪೊಲೀಸರೇ?
    • ಕಾಂಕ್ರೀಟಿಕರಣದ ನಡುವೆ ಹೀಗೊಂದು ಹೊಸ ಡಸ್ಟ್ ಬಿನ್!!
    • ಶ್ರೀನಿವಾಸ್ ಕಾಲೇಜಿನವರೇ ನಿಮ್ಮ ಅಂಗೈ ಅಗಲದ ಜಾಗದಲ್ಲಿ ರಸ್ತೆ ಅಗಲ ಮಾಡೋಕೆ ಆಗಲ್ಲ!!
    • ಮುಳುಗುವ ಹಡಗಿನಲ್ಲಿ ತೂತು ಕೊರೆದ ಪಾಲಿಕೆಯ ಕೊನೆಯ ಬಜೆಟ್!!
  • Popular Posts

    • 1
      ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
    • 2
      ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
    • 3
      ಸೋರಿ ಹೋಗಿರುವ ಎರಡು ಕೋಟಿ ಪತ್ತೆ ಹಚ್ಚಲು ಕಾಮನ್ ಸೆನ್ಸ್ ಬೇಕು, ಸಿಎ ಡಿಗ್ರಿ ಅಲ್ಲ!!
    • 4
      ಟ್ರೇಡ್ ಲೈಸೆನ್ಸ್ ನವೀಕರಣದ ಕೊನೆಯ ದಿನ ಹತ್ತಿರ ಬಂದಂತೆ ಇದೇನು ಉಪಟಳ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search