ವರ್ಷದಿಂದ ವರ್ಷಕ್ಕೆ ಬೆಳೆಯುತ್ತೆ ಮರದ ಕುದುರೆ…!!!
ಉಡುಪಿ- ಮನಷ್ಯರು ಪ್ರಾಣಿಗಳು ವರ್ಷದಿಂದ ವರ್ಷಕ್ಕೆ ಬೆಳೆಯುವುದನ್ನು ನಾವು ನೀವು ನೋಡಿದ್ದೇವೆ. ಆದರೆ ನಿರ್ಜೀವ ವಸ್ತುಗಳು ಯಾವತ್ತಾದ್ರೂ ಬೆಳೆಯೋದನ್ನು ನೀವು ಕಂಡಿದ್ದೀರಾ.. ಯಾವತ್ತಿಗೂ ಕೂಡ ಅದು ನಂಬಲು ಕಷ್ಟ ಸಾದ್ಯವಾದ ಮಾತು.ಆದ್ರೆ ಉಡುಪಿಯಲ್ಲೊಂದು ಮರದಿಂದ ಕೆತ್ತಿರೋ ಪುರಾತನ ಕುದುರೆಯೊಂದಿದೆ.. ಈ ಕುದುರೆ ವರುಷದಿಂದ ವರುಷಕ್ಕೆ ಇಂಚಿಂಚಾಗಿ ಬೆಳೆಯುತ್ತಲೇ ಬಂದಿದೆ. ಅದು ಎಲ್ಲಿ ಗೊತ್ತೆ..!?
ನೀವು ಇದನ್ನ ಅಚ್ಚರಿ ಅಂತೀರೋ ಅಥವಾ ಪವಾಡ ಅಂತೀರೋ. ಆದ್ರೆ ಇಲ್ಲಿ ಕಾಣುತ್ತಿರೋ ಈ ಮರದಿಂದ ರಚಿಸಲ್ಪಟ್ಟ ಕುದುರೆ ವರುಷದಿಂದ ವರುಷಕ್ಕೆ ಇಂಚಿಂಚಾಗಿ ಬೆಳೆಯುತ್ತಿರುವುದು ಮಾತ್ರ ಸತ್ಯ. ಈ ರೀತಿ ಇಂಚಿಂಚಾಗಿ ಬೆಳೆಯುತ್ತಿರುವ ಕುದುರೆ ಉಡುಪಿ ಕಾಪುವಿನ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರಡಿಯಲ್ಲಿಯಲ್ಲಿದೆ. ಅಂದಹಾಗೆ ಈ ಗರಡಿಯಲ್ಲಿ ತುಳುನಾಡಿನ ವೀರಪುರುಷರಾದ ಕೋಟಿಚೆನ್ನಯ್ಯರನ್ನು ಆರಾಧಿಸುತ್ತಾ ಬರಲಾಗಿದೆ.. ಗರೋಡಿಯಲ್ಲಿ ಕೋಟಿ ಚೆನ್ನಯ್ಯರಿಗೆ ಇರುವಷ್ಟೇ ಪ್ರಾಧಾನ್ಯತೆ ಮರದ ಕುದುರೆಗೂ ಇದೆ ಅಂದ್ರೆ ತಪ್ಪಾಗಲಾರದು.. ಯಾಕೆಂದ್ರೆ ಗರಡಿಗೆ ಆಗಮಿಸೋ ಭಕ್ತರು ಕುದುರೆಗೂ ಭಕ್ತಿಯಿಂದ ಕೈ ಮುಗಿಯುತ್ತಾರೆ.. ಅಂದಹಾಗೆ ಈ ಕುದುರೆಗೂ ಹಲವು ವರುಷಗಳ ಪುರಾಣ ಇತಿಹಾಸವಿದೆ.. ಹಲವಾರು ವರುಷಗಳ ಹಿಂದೆ ಈ ಊರಿನ ಮಂದಿ ಅದೆಲ್ಲೋ ವ್ಯಾಪಾರಕ್ಕೆ ತೆರಳಿದ್ದ ವೇಳೆ ಈ ಮರದ ಕುದುರೆಯನ್ನು ಸಂತೆಯಲ್ಲಿ ಕಾಣುತ್ತಾರೆ.. ಅದನ್ನು ಪೊಯ್ಯ ಪೊಡಿಕಲ್ಲ ಗರಡಿಯಲ್ಲಿ ಇಡಲೆಂದು ಖರೀದಿಸೋದಕ್ಕೂ ಮುಂದಾಗ್ತಾರೆ.. ಆದ್ರೆ ಅದಾಗಲೇ ಆ ಮರದ ಕುದುರೆಯನ್ನು ಆ ಊರಿನ ಅರಸ ಖರೀದಿಸಿದ ವಿಷ್ಯ ತಿಳಿದು ವಾಪಾಸು ಹಿಂತಿರುಗಿ ಬರುತ್ತಾರೆ.. ಬಳಿಕ ಆ ಊರಲ್ಲಿ ಅರಸನ ಪಾಲಿಗೆ ಎಲ್ಲವೂ ಕೈ ಕೊಟ್ಟು ರಾಜ್ಯವೇ ದಿವಾಳಿಯಾಗುತ್ತಾ ಸಾಗುತ್ತವೆ.. ಈ ವೇಳೆ ಆ ಅರಸ ಜ್ಯೋತಿಷಿಯರಲ್ಲಿ ಪ್ರಶ್ನೆಯನ್ನಿಟ್ಟಾಗ ನೀನು ಖರೀದಿಸಿದ ಕುದುರೆ ಗರಡಿಯೊಂದಕ್ಕೆ ಸೇರಬೇಕಾದದ್ದು ಎಂದು ತಿಳಿಸುತ್ತಾರೆ.. ಆದ್ರೆ ಅದನ್ನು ಖರೀದಿಸಲು ಬಂದವರಾಗಲೀ, ಗರಡಿ ಎಲ್ಲಿದ್ದಾಗಲೀ ತಿಳಿಯದೇ ಹೋದಾಗ ಅರಸ ಜ್ಯೋತಿಷಿಗಳ ಸಲಹೆಯಂತೆ ಸಮುದ್ರದಲ್ಲಿ ಬಿಡುತ್ತಾನೆ.. ಈ ರೀತಿ ಬಿಟ್ಟ ಮರದ ಕುದುರೆ ಕಾಪು ಕಡಲ ಕಿನಾರೆಗೆ ಬಂದು ಮೀನುಗಾರರ ಕೈ ಸೇರಿ ಬಳಿಕ ಬ್ರಹ್ಮ ಬೈದರ್ಕಳ ಗರಡಿಗೆ ಬಂದು ಸೇರುತ್ತೆ.
ಆದ್ರೆ ಸಮುದ್ರದಲ್ಲಿ ಬಂದ ಈ ಕುದುರೆಯನ್ನು ಗರಡಿ ಒಳಗಿಡುವುದು ಕಷ್ಟವಾಯಿತು. ಕಾರಣ ಆ ಸಮಯದಲ್ಲಿ ಗರಡಿಯ ಬಾಗಿಲು ಕಿರಿದಾಗಿದ್ದು ಕುದುರೆಯನ್ನು ಒಳಗೆ ಕೊಂಡೊಯ್ಯಲಾಗಲಿಲ್ಲ. ಹಾಗಂತ ಹೊರಗಿಟ್ಟು ಹೋದ ಕುದುರೆ ಮರುದಿನ ಮತ್ತೊಂದು ಅಚ್ಚರಿ ನೀಡಿತ್ತು.. ಹೊರಗಿದ್ದ ಕುದುರೆ ತಾನಾಗಿಯೇ ಗರಡಿಯನ್ನು ಸೇರಿತ್ತು.ಇದ್ರಿಂದಾಗಿ ಜನ ಕುದುರೆಯನ್ನು ಭಕ್ತಿಯಿಂದ ಆರಾದಿಸತೊಡಗಿದ್ರು. ಇಂದಿಗೂ ಆ ಕುದುರೆಯನ್ನು ಬೆಳೆಯುವ ಕುದುರೆ ಎಂದು ಜನ ನಂಬಿದ್ದಾರೆ. ಈಗಿರುವ ಗುರಿಕಾರರ ಹಿರಿಯರ ಪ್ರಕಾರ ಅಂದು ಇದ್ದ ಕುದುರೆಗೂ ಇಂದು ಇರುವ ಕುದುರೆಗೂ ಬಹಳ ವ್ಯತ್ಯಾಸವಿದೆ ಎನ್ನುತ್ತಾರೆ. ಇಂದಿಗೂ ಪ್ರತಿ ಪರ್ವ ಸಂದರ್ಭದಲ್ಲಿ ಕುದುರೆಗೆ ಪೂಜೆ ಸಲ್ಲುತ್ತದೆ.
ದೈವಾರಾಧನೆ ಎನ್ನುವಂತದ್ದು ತುಳುನಾಡಿನ ಮೂಲಸೆಲೆ.. ದೈವಗಳ ಆರಾಧನೆ ಇಂದಿಗೂ ತುಳುನಾಡಿನಾದ್ಯಂತ ಹಾಸು ಹೊಕ್ಕಾಗಿದೆ.. ಈ ಭಾಗದ ಮಂದಿ ಸಂಕಟ ಬಂದಾಗ ವೆಂಕಟ ರಮಣ ಅನ್ನೋ ಹಾಗೆ ಕಷ್ಟಕಾಲದಲ್ಲಿ ದೈವದ ಮೊರೆ ಹೋಗುವುದು ಮಾಮೂಲು.. ಅದ್ರ ಜೊತೆಗೆ ವೀರಪುರುಷರಾದ ಕೋಟಿ ಚೆನ್ನಯ್ಯರನ್ನೂ ತುಳುನಾಡಿನ ಮಂದಿ ಆರಾಧಿಸುತ್ತಲೇ ಬಂದಿದ್ದಾರೆ.. ಅದ್ರ ನಡುವೆ ಬೆಳೆಯುವ ಕುದುರೆಯೂ ತನ್ನ ದೈವಬಲದಿಂದ ಜನರ ನಂಬಿಕೆ ಪಾತ್ರವಾಗಿರುವುದು ವಿಶೇಷ.
Leave A Reply