ಉರಿ ದಾಳಿ ಥರದ ಸಂಚು ರೂಪಿಸಿದ್ದ ಉಗ್ರರು ಖತಂ
Posted On September 25, 2017

ಶ್ರೀನಗರ : ಕಳೆದ ವರ್ಷ ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆ ಗುರಿಯಾಗಿಸಿ ಪಾಕ್ ಪೋಷಿತ ಉಗ್ರರು ನಡೆಸಿದ್ದ ದಾಳಿ ಮಾದರಿಯಲ್ಲಿಯೇ ದಾಳಿಗೆ ಸಂಚು ರೂಪಿಸಿದ್ದ ಮೂವರು ಭಯೋತ್ಪಾದಕರನ್ನು ಸೇನಾ ಕಾರ್ಯಾಚರಣೆಯಲ್ಲಿ ಭಾನುವಾರ ಹೊಡೆದುರುಳಿಸಲಾಗಿದೆ. ಲಷ್ಕರೆ ತಯ್ಯಬಾ ಉಗ್ರ ಸಂಘಟನೆ ಸೇರಿದವರಿವರು ಎಂದು ತಿಳಿದುಬಂದಿದೆ.
ಸೇನೆ ಮತ್ತು ಪೊಲೀಸರು ಜಂಟಿಯಾಗಿ ಕಲ್ಗಾಯಿ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗ ದಾಳಿ -ಪ್ರತಿದಾಳಿ ನಡೆದಿದೆ. ಒಬ್ಬ ಸೈನಿಕ ಮತ್ತು ಇಬ್ಬರು ಸ್ಥಳೀಯ ನಿವಾಸಗಿಗಳಿಗೆ ಕಾರ್ಯಾಚರಣೆಯಲ್ಲಿ ಗಾಯಗಳಾಗಿದೆ. ಕಳೆದ ವರ್ಷ ಉರಿಯಲಲಿ ನಡೆದ ಆತ್ಮಹತ್ಯಾ ದಾಳಿಗೆ 19 ಯೋಧರು ಹುತಾತ್ಮರಾಗಿದ್ದರು.
- Advertisement -
Trending Now
ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
June 9, 2023
Leave A Reply