• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಶನಿವಾರ ಟೀಂ ಮೋದಿಯ ದೇವಿ ಮಹಾತ್ಮ್ಯೆಯಿಂದ ಈಗಲೇ ಕೆಲವರಿಗೆ ನಿದ್ರೆ ಹಾರಿ ಹೋಗಿದೆ!!

Hanumantha Kamath Posted On December 27, 2018
0


0
Shares
  • Share On Facebook
  • Tweet It

ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಇದೇ ಶನಿವಾರ ಡಿಸೆಂಬರ್ 29 ರಂದು ದೇವಿ ಮಹಾತ್ಮ್ಯೆ ಎಂಬ ಯಕ್ಷಗಾನ ಬಯಲಾಟವನ್ನು ಆಡಿಸಲಾಗುತ್ತದೆ. ಟೀಮ್ ಮೋದಿ ಸಂಘಟನೆ ಇದನ್ನು ಆಯೋಜಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಎರಡನೇ ಬಾರಿ ಪ್ರಧಾನಿ ಮಾಡಬೇಕು ಎನ್ನುವ ಸಂಕಲ್ಪದೊಂದಿಗೆ ಇದನ್ನು ಏರ್ಪಡಿಸಲಾಗುತ್ತಿದೆ. ಆದರೆ ಇದರಲ್ಲಿ ಮೋದಿ ವಿರೋಧಿಗಳಿಗೆ ತಪ್ಪು ಕಾಣುತ್ತಿದೆ. ರಾಜಕೀಯಕ್ಕಾಗಿ ದೇವಿಯನ್ನು ಬಳಸಿದ್ದಾರೆ ಎನ್ನುವುದು ಇದರ ಆರೋಪ.

ಇಲ್ಲಿ ದೇವರನ್ನು ಬಳಸುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎನ್ನುವುದು ನಾನು ಕೇಳುವ ಮೊದಲ ಪ್ರಶ್ನೆ. ಮೋದಿಯವರು ಇದೇ ದೇಶದವರು. ಅವರು ದೇಶದ್ರೋಹಿ ಅಲ್ಲ. ಅವರು ನವರಾತ್ರಿಯ ಸಮಯದಲ್ಲಿ ದೇವಿಯ ಆರಾಧನೆಯಾಗಿ ಒಂಭತ್ತು ದಿನಗಳ ತನಕ ಅಖಂಡ ಉಪವಾಸ ಮಾಡುತ್ತಾರೆ. ದೇಶದ ಅಭಿವೃದ್ಧಿಗಾಗಿ ಹದಿನೆಂಟು ಗಂಟೆ ದುಡಿಯುತ್ತಿದ್ದಾರೆ. ಅವರು ಮತ್ತೆ ಪ್ರಧಾನಿಯಾಗಲಿ ಎನ್ನುವ ಹಾರೈಕೆ ಬಿಜೆಪಿ ಅಲ್ಲದವರಿಗೂ ಇದೆ. ಅಂತಹ ಎಲ್ಲ ಮೋದಿ ಅಭಿಮಾನಿಗಳು ಒಂದು ಕಡೆ ಸೇರಿ ಭಕ್ತಿಯಿಂದ ಸಂಕಲ್ಪ ಮಾಡಿದರೆ ಅದರಿಂದ ಸಕರಾತ್ಮಕ ಶಕ್ತಿ ಉದ್ಭವಾಗಿ ಅದು ಈಡೇರಬಹುದು ಎನ್ನುವ ನಿರೀಕ್ಷೆ. ಮೋದಿಯವರು ಮತ್ತೆ ಪ್ರಧಾನಿಯಾದರೆ ನಮ್ಮ ದೇಶದ ಹಣ ಯಾವ ಸ್ವಿಸ್ ಬ್ಯಾಂಕಿಗೂ ಹೋಗಲ್ಲ. ಅವರು ತಮ್ಮ ಕುಟುಂಬದವರಿಗೆ ಹಣ ಕೂಡಿಡುವುದಿಲ್ಲ. ಭಾರತದ ವಿವಿಧ ರಾಜ್ಯಗಳಲ್ಲಿ ಆಸ್ತಿ ಮಾಡುವುದಿಲ್ಲ. ಪ್ರಪಂಚದಲ್ಲಿ ಎಲ್ಲಿ ಕೂಡ ಅವರಿಗೆ ಬಿಜಿನೆಸ್ ಇಲ್ಲ. ಅವರು ಕೇವಲ ದೇಶದ ಬಗ್ಗೆ ಚಿಂತಿಸುತ್ತಾರೆ. ಅಂತವರ ಫೋಟೋ ಯಕ್ಷಗಾನದ ಆಮಂತ್ರಣ ಫ್ಲೆಕ್ಸ್ ನಲ್ಲಿ ಹಾಕಿದರೆ ದೇವರು ಕೂಡ ಕೋಪಗೊಳ್ಳಲಾರ. ಏಕೆಂದರೆ ಮೋದಿಯವರ ಮನಸ್ಸು ಶುದ್ಧ. ಅವರು ದೇವಿಯ ದೊಡ್ಡ ಆರಾಧಕರು. ಅವರನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವವರಿಗೆ ಮಾತ್ರ ಅವರು ವಿರೋಧಿಗಳಂತೆ ಕಾಣುತ್ತಾರೆ. ಅವರನ್ನು ರಾಜಕೀಯ ಬಿಟ್ಟು ಚಿಂತಿಸಿ. ಅವರು ನಮ್ಮ ನಿಮ್ಮ ಅಭಿವೃದ್ಧಿಗೆ ದುಡಿಯುತ್ತಿರುವ ನಿಸ್ವಾರ್ಥಿ ಸೇವಕನಂತೆ ಕಾಣುತ್ತಾರೆ. ಆದರೆ ವಿರೋಧಿಸುವವರಿಗೆ ಅವರು ಬಿಜೆಪಿಯ ದಂಡನಾಯಕ ಮತ್ತು ಸೋಲಿಸಲು ಕಷ್ಟವಾಗುವ ಬಂಡೆ.

ದೇವಿ ಮನಸ್ಸು ಮಾಡದಿದ್ದರೆ…

ವಿಷಯ ಏನೆಂದರೆ ದೇವಿ ಮಹಾತ್ಮ್ಯೆ ಯಕ್ಷಗಾನ ಎಲ್ಲಿ ಇದ್ದರೂ ಅದಕ್ಕೆ ಅದರದ್ದೇ ಆಗಿರುವ ಅಭಿಮಾನಿಗಣವಿದೆ. ಯಕ್ಷಗಾನ ಪ್ರಿಯರು ದೇವಿ ಮಹಾತ್ಮ್ಯೆಯನ್ನು ಭಯ ಭಕ್ತಿಗಳಿಂದ ನೋಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲೊಂದು ದೇವಿಯ ಶಕ್ತಿ ಪ್ರವಹಿಸುತ್ತದೆ. ದೇವರು ನೆಲೆಸಿ ಆರ್ಶೀವಾದಿಸುತ್ತಾರೆ ಎನ್ನುವ ನಂಬಿಕೆ ಇದೆ. ಅದು ನಿಜ ಕೂಡ. ಹಾಗಿರುವಾಗ ದೇವಿ ಮಹಾತ್ಮ್ಯೆಯನ್ನು ಆಡಿಸಿ ದೇವರು ನಮ್ಮ ರಾಷ್ಟ್ರದ ಏಳಿಗೆಗಾಗಿ ಹಗಲಿರುಳು ಯೋಚಿಸುವ ಒಬ್ಬ ವ್ಯಕ್ತಿಯನ್ನು ಮತ್ತೆ ಪ್ರಧಾನಿಯಾಗಿ ಆಯ್ಕೆ ಮಾಡಿದರೆ ತಪ್ಪೇನು? ಅಷ್ಟಕ್ಕೂ ಯಕ್ಷಗಾನಕ್ಕೆ ಬರುವ ಭಕ್ತಗಣದವರು ಅಲ್ಲಿ ದೇವಿ ಮಹಾತ್ಮ್ಯೆಯನ್ನು ನೋಡುತ್ತಾರೆ ವಿನ: ಮೋದಿಗೆ ಜಯಕಾರ ಹಾಕಲು ಬರುವುದಿಲ್ಲವಲ್ಲ. ಆದ್ದರಿಂದ ಇದರಿಂದ ಮೋದಿ ವಿರೋಧಿಗಳು ಭಯಪಡುವಂತದ್ದು ಏನಿದೆ? ಇನ್ನು ಒಂದು ತಿಂಗಳ ಮೊದಲು ಹುಟ್ಟಿದ ಟೀಂ ಮೋದಿಯವರಿಗೆ ಅಷ್ಟು ಬೇಗ ತತ್ಕಾಲ್ ನಲ್ಲಿ ಯಕ್ಷಗಾನ ಆಡಿಸುವ ಅವಕಾಶ ಹೇಗೆ ಬಂತು ಎನ್ನುವುದು ಹಲವರ ಪ್ರಶ್ನೆ. ತತ್ಕಾಲನಲ್ಲಿ ಬುಕ್ ಮಾಡಿದವರು ಶುದ್ಧ ಮನಸ್ಸಿನಿಂದ ಬುಕ್ ಮಾಡಿರಬೇಕು. ಯಾಕೆಂದರೆ ಯಾರು ಏನೇ ಹೇಳಿದರೂ ಕಟೀಲಿನ ಒಳಗೆ ಕುಳಿತಿರುವ ದೇವಿಗೆ ಮನಸ್ಸಿಲ್ಲದಿದ್ದರೆ ಯಾರೂ ಕೂಡ ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿ ನಡೆದುಬಂದರೂ ಅವರಿಗೆ ದೇವಿ ಮಹಾತ್ಮ್ಯೆ ಆಡಿಸುವ ಅವಕಾಶ ಸಿಗಲಿಕ್ಕಿಲ್ಲ. ನಿಮಗೆ ಯಾವ ವ್ಯಕ್ತಿಯ ಶಿಫಾರಸ್ಸು ಇದ್ದರೂ ಒಳಗೆ ಕುಳಿತಿರುವ ತಾಯಿ “ಎಸ್” ಎನ್ನದಿದ್ದರೆ ನೀವು ಬುಕ್ ಮಾಡಿ ಕಾದದ್ದೇ ಬಂತು ವಿನ: ದೇವಿ ಮಹಾತ್ಮ್ಯೆ ಆಡಿಸುವ ಭಾಗ್ಯ ಸಿಗುವುದಿಲ್ಲ. ಕಟೀಲಮ್ಮನ ಕೃಪೆಯಿಂದ ಸೌಭಾಗ್ಯ ಸಿಕ್ಕಿದೆ. ಉಳಿದದವರು ಎಲ್ಲರೂ ಕೇವಲ ನಿಮಿತ್ತ ಮಾತ್ರ.

ಮೋದಿಗೆ ನಿಜಕ್ಕೂ ಇದೆಲ್ಲ ಅಗತ್ಯವೇ ಇಲ್ಲ…

ಇನ್ನು ಕೆಲವರು ಹಣಕಾಸಿನ ವಿಷಯ ಎತ್ತಿದ್ದಾರೆ. ಒಂದು ಯಕ್ಷಗಾನ ಆಡಿಸಿ, ಅನ್ನ ಸಂತರ್ಪಣೆ ಮಾಡಿಸಿ ಮುಗಿದಾಗ ಎಷ್ಟು ಖರ್ಚಾಗುತ್ತದೆ ಎನ್ನುವುದು ಮಾಡಿಸಿದವರಿಗೂ ಗೊತ್ತು. ಮಾಡಿಸದವರಿಗೂ ಗೊತ್ತು. ಹಾಗಿರುವಾಗ ಅಷ್ಟು ಹಣವನ್ನು ಹೊಂದಿಸುವುದು ಅದನ್ನು ನಿರ್ವಹಿಸುವವರ ಟೆನ್ಷನ್. ಅದನ್ನು ಯಾಕೆ ಬೇರೆಯವರು ತೆಗೆದುಕೊಳ್ಳಬೇಕು. ಕೆಲವರಿಗೆ ದೇವಿ ಮಹಾತ್ಮ್ಯೆ ನೋಡಿ ಪುಣ್ಯ ಸಂಪಾದಿಸುವುದಕ್ಕಿಂತ ಅದನ್ನು ಆಡಿಸುವವರಿಗೆ ಏನು ಲಾಭ ಎನ್ನುವುದೇ ಚಿಂತೆ. ಇದು ಒಂದು ರೀತಿಯಲ್ಲಿ ನಾವು ಔಷಧ ಖರೀದಿಸುವುದರಿಂದ ಮೆಡಿಕಲ್ ನವನಿಗೆ ಎರಡು ರೂಪಾಯಿ ಲಾಭ ಆಗುತ್ತಾ ಎನ್ನುವ ಹೊಟ್ಟೆಕಿಚ್ಚಿನಿಂದ ನೋವು ಸಹಿಸಿಯಾದರೂ ಪರವಾಗಿಲ್ಲ. ಮೆಡಿಕಲ್ ನಲ್ಲಿ ಔಷಧ ಖರೀದಿಸಲು ಕೆಲವರು ಹೋಗುವುದಿಲ್ಲ. ಹಾಗೆ ಆಗುತ್ತಿದೆ.

ಕೊನೆಯದಾಗಿ ಈ ವಿವಾದ ಮುಗಿಸುವ ಮೊದಲು ಹೇಳುತ್ತೇನೆ. ಮಣ್ಣಗುಡ್ಡೆಯಲ್ಲಿ ದೇವಿ ಮಹಾತ್ಮ್ಯೆ ನಡೆಯುವುದರಿಂದ ಮೋದಿಗೆ ಏನೂ ಆಗಬೇಕಾಗಿಲ್ಲ. ಅವರಿಗೆ ಇದೆಲ್ಲ ಬೇಕಾಗಿಯೂ ಇಲ್ಲ. ಅವರದ್ದೇನಿದ್ದರೂ ಕೆಲಸ ಮಾಡುವುದು, ಭಾರತಾಂಬೆಯ ಸೇವೆ ಮಾಡುವುದು. ಅದನ್ನು ಬಿಟ್ಟು ನೀವು ಯಕ್ಷಗಾನ ಬೇಕಾದರೆ ಆಡಿಸಿ, ಕಂಬಳ ಬೇಕಾದರೆ ಮಾಡಿಸಿ. ಮೋದಿ ನಿರ್ಲಿಪ್ತ. ಅವರು ಮುಂದಿನ ಬಾರಿ ಪ್ರಧಾನಿಯಾಗದೇ ಇದ್ದರೆ ಅವರು ಕಳೆದುಕೊಳ್ಳುವುದು ಏನಿಲ್ಲ. ಅವರು ಒಂದು ಬ್ಯಾಗ್ ನಲ್ಲಿ ತಮ್ಮ ಬಟ್ಟೆಗಳನ್ನು ತುಂಬಿಸಿ ದೆಹಲಿಯಿಂದ ಗುಜರಾತಿಗೆ ರೈಲು ಹತ್ತುತ್ತಾರೆ. ನಂತರ ದೆಹಲಿ ಗದ್ದುಗೆಯಲ್ಲಿ ಕುಳಿತವರು ರೈಲು ಬಿಡಲು ಶುರು ಮಾಡುತ್ತಾರೆ. ಕೆಲವರು ಯಾರೂ ತಮ್ಮನ್ನು ಗುರುತಿಸುವುದಿಲ್ಲ ಎನ್ನುವ ಟೆನ್ಷನ್ ನಲ್ಲಿ ಫ್ರೀಯಾಗಿ ಸಿಕ್ಕಿರುವ ಜೀಯೋ ಇಂಟರ್ ನೆಟ್ ನಲ್ಲಿ ಮಧ್ಯಾಹ್ನದ ನಿದ್ರೆ ಮಾಡಿ ಎದ್ದು ಬೇರೆಯವರ ಬೆನ್ನು ತುರಿಸಲು ಹೊರಡುತ್ತಾರಲ್ಲ, ಅಂತವರಿಗೆ ಸದ್ಭುದ್ಧಿ ಸಿಗಲಿ ಎಂದು ನಾನು ನಾಡಿದ್ದು ವಿಶೇಷವಾಗಿ ಪ್ರಾರ್ಥಿಸುತ್ತೇನೆ!

0
Shares
  • Share On Facebook
  • Tweet It




Trending Now
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Hanumantha Kamath July 5, 2025
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Hanumantha Kamath July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
  • Popular Posts

    • 1
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 2
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 3
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 4
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 5
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು

  • Privacy Policy
  • Contact
© Tulunadu Infomedia.

Press enter/return to begin your search