• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಅವರಿಗಿಂತ ನೀವು ಆಗಬಹುದು ಅಂತ ಮಂಗಳೂರಿಗರು ನಿಮ್ಮನ್ನು ಗೆಲ್ಲಿಸಿದ್ದಾರೆ ಬಿಟ್ಟರೆ, ನೀವು ಪ್ರಾಮಾಣಿಕರು ಅಂತ ಅಲ್ಲ!

Gopinath Bhat Posted On November 28, 2019
0


0
Shares
  • Share On Facebook
  • Tweet It

‌ಮಂಗಳೂರಿಗರು ಶಾಂತಿ ಪ್ರಿಯರು ನಿಜ, ಆದರೆ ಶಾಂತವಾಗಿಯೇ ಒಳಗೆ ಆಕ್ರೋಶಭರಿತರಾಗಿ ಮತ ಚಲಾಯಿಸಿದ್ದಾರೆ ಎಂದು ಗೆದ್ದ ಪಾಲಿಕೆ ಸದಸ್ಯರು ಮರೆಯಬಾರದು. ಪಾಲಿಕೆಯಲ್ಲಿ ಬಿಜೆಪಿ ಕಾಂಗ್ರೆಸ್ ಈ ಎರಡೂ ಪ್ರಮುಖ ಪಕ್ಷಗಳು ಆಢಳಿತ ನಡೆಸಿವೆ.ಇಬ್ಬರ ಅಧಿಕಾರಾವಧಿಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂಬುವುದು ಪ್ರತಿಯೊಬ್ಬರಿಗೂ ತಿಳಿದ ವಿಚಾರ.ಕಳೆದ ಚುನಾವಣೆಯಲ್ಲಿ ಮತದಾರರಲ್ಲಿ ಎರಡೇ ಆಯ್ಕೆ ಇತ್ತು, ಒಂದನೆಯದ್ದು ಮತ ಹಾಕದೇ ಸುಮ್ಮನೇ ಕುಳಿತು ಕೊಳ್ಳುವುದು, ಎರಡನೆಯದ್ದು ಇದ್ದವರಲ್ಲಿ ಸ್ವಲ್ಪ ಉತ್ತಮರನ್ನು ಆಯ್ಕೆ ಮಾಡುವುದು.ಇದ್ದವರಲ್ಲಿ ಉತ್ತಮರ ಆಯ್ಕೆ ನಡೆದಿದೆ ಇದರರ್ಥ ಅವರು ಪ್ರಾಮಾಣಿಕರು, ನಿಯತ್ತು ಇರುವವರು, ಭ್ರಷ್ಟಾಚಾರ ಮಾಡದವರು ಅಂತ ಖಂಡಿತವಾಗಿಯೂ ಅಲ್ಲ ಎಂಬುವುದನ್ನು ಗೆದ್ದ ಪಾಲಿಕೆ ಸದಸ್ಯರು ಮನದಟ್ಟು ಮಾಡಬೇಕು.

ವಾರ್ಡ್ ಸಮಿತಿ ಭ್ರಷ್ಟಾಚಾರ ತಡೆಗಟ್ಟಲು ಸಹಕಾರಿ

ಭ್ರಷ್ಟಾಚಾರ ಆರೋಪಗಳು ಪಾಲಿಕೆಯಲ್ಲಿ ತಾಂಡವ ಆಡುತ್ತಿವೆ.ಕೆಲ ಭ್ರಷ್ಟ ಅಧಿಕಾರಿಗಳು, ಇಂಜಿನಿಯರ್ ಗಳು, ಕಾಂಟ್ರೆಕ್ಟರ್ ಗಳು,ಕೆಲ ಕಾರ್ಪೋರೇಟರ್ ಗಳಿಂದ ಎಲ್ಲರೂ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾವಾಗಿದೆ.ಯೋಜನೆಗಳಿಗೆ ಹಣ ಬಿಡುಗಡೆಯಾದಾಗ ಇದರ ಸಂಪೂರ್ಣ ಆಗು ಹೋಗು, ಖರ್ಚು ವೆಚ್ಚ ಪಾರದರ್ಶಕವಾಗಿರದೇ ಕಾಂಟ್ರೆಕ್ಟರ್, ಕಾರ್ಪೋರೇಟರ್ ಮತ್ತು ಕೆಲವರ ನಡುವೆಯೇ ಸೀಕ್ರೆಟ್ ಆಗಿ ಇರುತ್ತದೆ.ಇದರಿಂದ ಇವರು ಮ್ಯೂಚುವಲ್ ಅಂಡರ್ಸ್ಟೇಂಡಿಂಗ್ ಮಾಡಿ ಜನರ ತೆರಿಗೆ ಹಣ ಗುಳುಂ ಮಾಡುತ್ತಿದ್ದಾರೆ ಎಂಬ ಮಾತು ಪದೇ ಪದೇ ಕೇಳಿ ಬರುತ್ತದೆ.ಇದಕ್ಕೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗಬೇಕಾದರೆ ವಾರ್ಡ್ ಸಮಿತಿ ಮಾಡಿ ಪ್ರತಿಯೊಂದು ವಾರ್ಡ್ ನಲ್ಲಿ ಕನಿಷ್ಠ 10 ಜನ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿ ಇರದ ಪ್ರಾಮಾಣಿಕರನ್ನು ಸೇರಿಸಬೇಕು.ತನ್ನ ಪರಿಸರದಲ್ಲಿ ಆಗುವ ಪ್ರತಿಯೊಂದು ಕಾಮಗಾರಿಯ ಖರ್ಚು ವೆಚ್ಚ ಸಹಿತ ಪ್ರತಿಯೊಂದು ಮಾಹಿತಿ ಸದಸ್ಯರಿಗೆ ತಿಳಿದಿರಬೇಕು ಮತ್ತು ಅನಗತ್ಯ ಕಾಮಗಾರಿಯನ್ನು ತಡೆಹಿಡಿಯುವ ಅಧಿಕಾರವೂ ಸದಸ್ಯರಿಗೆ ನೀಡಬೇಕು.ಇದರಿಂದ ಭ್ರಷ್ಟಾಚಾರವನ್ನೂ ಸ್ವಲ್ಪ ಮಟ್ಟಿಗೆ ತಡೆಹಿಡಿಯಬಹುದು ಮತ್ತು ಕಾರ್ಪೋರೇಟರ್ ಗಳು ತಮ್ಮನ್ನು ತಾವು ಪ್ರಾಮಾಣಿಕರು ಎಂಬುವುದನ್ನು ಕೂಡ ಸಾಬೀತು ಪಡಿಸಬಹುದು.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಾರ್ಡ್ ಸಮಿತಿ ಮಾಡುತ್ತೇವೆ ಎಂದು ಹೇಳಿಯಾಗಿದೆ.ಇದನ್ನು ನಂಬಿ ಜನತೆ ಮತ ಚಲಾಯಿಸಿದ್ದಾರೆ.ಜನತೆಗೆ ವಿಶ್ವಾಸ ದ್ರೋಹ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಇಲ್ಲವಾದರೆ ರಾಜ್ಯದಲ್ಲಿ ಕುಮಾರಸ್ವಾಮಿಗೆ ಇರುವ ವಚನ ಭ್ರಷ್ಟ ಪಟ್ಟ ಮಂಗಳೂರಿನ ಬಿಜೆಪಿ ಪಾಲಿಕೆ ಸದಸ್ಯರಿಗೂ ಸಿಗಲಿದೆ.

0
Shares
  • Share On Facebook
  • Tweet It




Trending Now
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Gopinath Bhat April 7, 2026
ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
Gopinath Bhat April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
  • Popular Posts

    • 1
      ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • 2
      ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ

  • Privacy Policy
  • Contact
© Tulunadu Infomedia.

Press enter/return to begin your search