• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತಂದೆಯ ಹೆಸರು ಗೊತ್ತಿಲ್ಲದೇ ಚುನಾವಣೆಗೆ ಹೇಗೆ ನಿಂತ್ರಿ ಸಿದ್ಧು, ಜಮೀರ್!!

Hanumantha Kamath Posted On January 12, 2020
0


0
Shares
  • Share On Facebook
  • Tweet It

ನನ್ನ ಮನೆಗೆ ಬರಬೇಡಿ, ನನ್ನ ತಂದೆಯ ಹೆಸರು ಕೇಳಬೇಡಿ, ನಾನು ಯಾವುದೇ ಮಾಹಿತಿ ಕೊಡುವುದಿಲ್ಲ ಎನ್ನುವ ಸ್ಟಿಕ್ಕರ್ ಗಳನ್ನು ಉಳ್ಳಾಲದ ಮನೆಗಳಲ್ಲಿ ಅಂಟಿಸಲಾಗುತ್ತಿದೆ. ಅನೇಕ ಕಡೆ ನಿಮ್ಮ ಮನೆಗೆ ಯಾರಾದರೂ ಸರಕಾರಿ ಅಧಿಕಾರಿಗಳು ಬಂದರೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿ ಎಂದು ಸೂಚನೆ ಕೊಡಲಾಗುತ್ತಿದೆ. ಈ ಮೂಲಕ ಜನರ ನಡುವೆ ಕಂದಕ ಸೃಷ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಸರಕಾರದ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಎನ್ನದೇ ಬೇರೆ ಏನು ಹೇಳುವುದು. ಮನೆಗೆ ಬರುವ ಅಧಿಕಾರಿಗಳ ಬಳಿ ಬೇಕಾದರೆ ಅವರು ಸರಕಾರಿ ಅಧಿಕಾರಿಗಳು ಹೌದಾ ಅಲ್ವಾ ಎಂದು ಪರಿಶೀಲಿಸಿ ನಂತರ ದಾಖಲೆ ಕೊಡಲಿ. ಯಾಕೆಂದರೆ ಸರಕಾರಿ ಅಧಿಕಾರಿಗಳ ಹೆಸರಿನಲ್ಲಿ ಯಾರಾದರೂ ಬಂದು ನಿಮ್ಮ ಬಳಿ ಯಾವುದೇ ಮಾಹಿತಿ ಕೇಳಿದರೆ ಆಗ ನಿಮಗೆ ಅದು ತೊಂದರೆ ಆಗಬಹುದು. ಆದರೆ ಸರಕಾರದ ಪರವಾಗಿ ನಿಯೋಜಿಸಲ್ಪಟ್ಟವರು ನಿಜವಾಗಿಯೂ ಮಾಹಿತಿ ಕೇಳಿದರೆ ಕೊಡಬೇಕಾದ್ದದ್ದು ನಮ್ಮ ಕರ್ತವ್ಯ. ಯಾಕೆಂದರೆ ಕೇವಲ ಒಂದು ಧರ್ಮದವರ ಬಳಿ ಮಾತ್ರ ದಾಖಲೆ ಕೇಳುವಂತಹ ಕ್ರಮ ಸರಕಾರ ಮಾಡುತ್ತಿಲ್ಲ.

ಇಷ್ಟು ವಿರೋಧ ಮಾಡುವುದು ಸಾಕಾಗುವುದಿಲ್ಲ ಎಂದು ಮುಂದಿನ ವಾರ ಅಡ್ಯಾರ್ ಬಳಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಘೋಷಣೆ ಮಾಡಿದೆ. ಇದು ಇನ್ನೊಂದು ಗಲಭೆಗೆ ಕಾರಣವಾದರೆ ಮಂಗಳೂರನ್ನು ರಕ್ಷಿಸುವವರ್ಯಾರು? ಬೇಕಾದರೆ ಸಿಎಎ ಬಗ್ಗೆ, ಎನ್ ಆರ್ ಸಿ ಬಗ್ಗೆ ಸೂಕ್ತ ಮಾಹಿತಿ ಇದ್ದವರನ್ನು ಕರೆದು ಜನಜಾಗೃತಿ ಮಾಡಿಸುವ ಕೆಲಸವನ್ನು ಅಡ್ಯಾರ್ ನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯವರು ಮಾಡಲಿ. ಅಲ್ಲಿ ಆರುಂಧತಿ ರಾಯ್ ಅಂತವರು ಬಂದು ಮನೆಯ ವಿಳಾಸ, ತಂದೆಯ ಹೆಸರು ಏನೇನೋ ತಪ್ಪು ಹೇಳಿ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದರೆ ದೇಶ ಮತ್ತೊಂದು ಆಂತರಿಕ ಸಮರ ಎದುರಿಸಬೇಕಾಗುತ್ತದೆ. ಇತ್ತ ಸಿದ್ಧರಾಮಯ್ಯನವರು ತಮ್ಮ ಬಳಿ ತಂದೆ ಹೆಸರು ಕೇಳಿದರೆ ಗೊತ್ತಿಲ್ಲ ಎನ್ನುತ್ತೇನೆ ಎಂದು ಹೇಳಿ ಜನರಲ್ಲಿ ಉದ್ರೇಕಿಸುವ ಕೆಲಸ ಮಾಡುತ್ತಿದ್ದಾರೆ. ಅತ್ತ ಜಮೀರ್ ನನ್ನ ತಾಯಿಗೆ ನಾಲ್ಕು ಗಂಡಂದಿರು ತಲಾಕ್ ನೀಡಿದ್ದಾರೆ. ಆದ್ದರಿಂದ ನಾನು ಯಾರ ಮಗ ಎಂದು ಹೇಗೆ ಗೊತ್ತಾಗುವುದು ಎಂದಿದ್ದಾರೆ. ಹಾಗಾದರೆ ಇಲ್ಲಿ ಒಂದು ವಿಷಯ ಬರುತ್ತದೆ. ಅದೇನೆಂದರೆ ಚುನಾವಣೆಯ ಸಂದರ್ಭದಲ್ಲಿ ಸ್ಪರ್ಧಿಸುವಾಗ ಇವರು ತಮ್ಮ ತಂದೆಯ ಹೆಸರು ಹೇಳಲಿಲ್ಲವೇ. ಹಾಗಾದರೆ ಈಗ ಗೊತ್ತಿಲ್ಲ ಎನ್ನುವುದು ಯಾಕೆ?

ಇದರ ನಡುವೆ ಉರಿಯುವ ಬೆಂಕಿಗೆ ಸರಿಯಾಗಿ ತುಪ್ಪ ಸುರಿಯುವ ಕೆಲಸವನ್ನು ಕುಮಾರಸ್ವಾಮಿಯವರು ಮಾಡಿದ್ದಾರೆ. ಯಾವುದೋ ವಿಡಿಯೋ ತಂದು ತಾವೇನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಬಹುಶ: ದಕ್ಷಿಣ ಕನ್ನಡದಲ್ಲಿ ಅಕೌಂಟ್ ತೆರೆಯುವ ಮನಸ್ಸು ಇರಬಹುದು. ಆದರೆ ಕನಿಷ್ಟ ಗ್ರಾಮ ಪಂಚಾಯತ್ ನಲ್ಲಿಯಾದರೂ ಗೆಲ್ಲುವ ಪರಿಸ್ಥಿತಿಯನ್ನು ಜೆಡಿಎಸ್ ಕಳೆದು ಹಲವಾರು ವರ್ಷಗಳೇ ಆಗಿ ಹೋಗಿದೆ. ತಾವು ನಿರ್ಮಿಸಿದ ಮಗನ ಸಿನೆಮಾಗಳು ಫ್ಲಾಪ್ ಆಗುವಂತೆ ಈ ಸಿಡಿ ಕೂಡ ಫ್ಲಾಪ್ ಆಗಿದೆ!!

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Hanumantha Kamath June 16, 2026
Najlepsze bonusy i sloty w polskim kasynie online
Hanumantha Kamath May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
  • Popular Posts

    • 1
      ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ

  • Privacy Policy
  • Contact
© Tulunadu Infomedia.

Press enter/return to begin your search