• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತುಳುನಾಡಿನ ಕಂಬಳ ಓಟಗಾರನಿಗೆ ಫಿದಾ ಆದ ಕೇಂದ್ರ ಸಚಿವ!

Hanumantha Kamath Posted On February 16, 2020
0


0
Shares
  • Share On Facebook
  • Tweet It

ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡರು, ಕೇವಲ 13.62 ಸೆಕೆಂಡ್ ಗಳಲ್ಲಿ 142.50 ಮೀಟರ್ ಓಡಿ ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಇದೀಗ ಶ್ರೀನಿವಾಸ ಗೌಡರು ದೇಶದ ಕಣ್ಮಣಿಯಾಗಿದ್ದಾರೆ. ಕಂಬಳದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಮೂಲದ ಯುವಕ ಶ್ರೀನಿವಾಸಗೌಡರನ್ನು ಟೋಕ್ಯೋ ಒಲಂಪಿಕ್ಸ್ ಕಳಿಸಿಕೊಡಿ ಎಂದು ರಾಜ್ಯ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿರುವುದು ಇಡೀ ತುಳುನಾಡಿಗೆ ಹೆಮ್ಮೆಯ ವಿಚಾರ.

ಶ್ರೀನಿವಾಸ ಗೌಡರ ಸಾಧನೆಗೆ ಫುಲ್ ಫಿದಾ ಆದ ಕ್ರೀಡಾ ಸಚಿವ…

ಹೌದು… ಕಂಬಳದ ಉಸೇನ್ ಬೋಲ್ಟ್ ಎಂದೆನಿಸಿರುವ ಶ್ರೀನಿವಾಸ ಗೌಡರನ್ನು ಸ್ವತಃ ಕೇಂದ್ರ ಕ್ರೀಡಾ ಸಚಿವ ಕಿರಣ್ ರಜಿಜು ಅವರೇ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಬಳಿಗೆ ಟ್ರಯಲ್ಸ್‍ಗೆ ಬರಲು ಆಹ್ವಾನಿಸಿದ್ದಾರೆ. ಈಗಾಗಲೇ ರೈಲ್ವೆ ಟಿಕೆಟ್ ಬುಕ್ ಮಾಡಿದ್ದು ಗೌಡರು ಸೋಮವಾರ ದಿಲ್ಲಿ ತಲುಪುವ ವ್ಯವಸ್ಥೆಯನ್ನೂ ಕೇಂದ್ರ ಸರಕಾರ ಮಾಡಿದೆ. ಅವರಿಗೆ ದೇಶದ ಪ್ರತಿಷ್ಠಿತ ತರಬೇತುದಾರರಿಂದ ತರಬೇತಿ ಒದಗಿಸಲು ನಾವು ಸಿದ್ಧ ಎಂದು ಘೋಷಿಸಿದ್ದಾರೆ.

ಅದಲ್ಲದೆ ಉದ್ಯಮಿ ಆನಂದ್ ಮಹೀಂದ್ರಾ ಶ್ರೀನಿವಾಸ ಗೌಡರ ಸಾಧನೆಯನ್ನು ಕೊಂಡಾಡಿದ್ದಾರೆ. ಒಮ್ಮೆ ಅವರ ಮೈಕಟ್ಟನ್ನು ನೋಡಿ, ಈ ಮನುಷ್ಯ ಅಸಾಧಾರಣ ಅಥ್ಲೆಟಿಕ್ ಸಾಹಸ ಮಾಡಲು ಸಮರ್ಥ. ಈ ವ್ಯಕ್ತಿಗೆ ಸರಿಯಾದ ತರಬೇತಿ ನೀಡಬೇಕು ಇಲ್ಲವೇ ಕಂಬಳವನ್ನು ಒಲಿಂಪಿಕ್ಸ್‍ಗೆ ಸೇರಿಸಬೇಕು. ಏನಾದರೂ ಮಾಡಿ ಶ್ರೀನಿವಾಸ್‍ರಿಂದ ನಮಗೆ ಚಿನ್ನದ ಪದಕ ಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಶ್ರೀನಿವಾಸ್ ಗೌಡ ಅವರ ಸಾಧನೆಯನ್ನು ರಾಜ್ಯ ಸರಕಾರವೂ ಗುರುತಿಸಿದೆ.

ಉಸೆನ್ ಬೋಲ್ಟ್ ವೇಗವನ್ನು ಮುರಿದ ಕಂಬಳ ಓಟಗಾರ

28 ವರ್ಷದ ಶ್ರೀನಿವಾಸ ಗೌಡರು ಕಟ್ಟಡ ಮೇಸ್ತ್ರಿಯಾಗಿದ್ದು ನವೆಂಬರ್‍ನಿಂದ ಮಾರ್ಚ್‍ನವರೆಗೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳದಲ್ಲಿ ಭಾಗವಹಿಸುತ್ತಾರೆ. ಇದೀಗ ಶರವೇಗದ ಕಂಬಳ ಓಟಗಾರ ದೇಶದೆಲ್ಲೆಡೆ ಸುದ್ದಿಯಲ್ಲಿದ್ದಾರೆ. ಶ್ರೀನಿವಾಸ್ ಗೌಡ ಅವರು ಕಂಬಳ ಅಕಾಡೆಮಿಯಲ್ಲಿ 2011ರಲ್ಲಿ ಓಟದ ತರಬೇತಿ ಪಡೆದಿದ್ದರು. ಆ ಬಳಿಕ ನೇಗಿಲು ಕಿರಿಯ – ಹಿರಿಯ, ಹಗ್ಗ ಹಿರಿಯ – ಕಿರಿಯ ವಿಭಾಗಗಳಲ್ಲಿ ಕೋಣಗಳನ್ನು ಓಡಿಸಿ ಸಾಧನೆ ಮಾಡಿದ್ದಾರೆ. 8 ವರ್ಷದಲ್ಲಿ 100ಕ್ಕೂ ಅಧಿಕ ಪದಕ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ವಿಶ್ವ ಚಾಂಪಿಯನ್ ಆಗಿದ್ದಾರೆ. ನಾನು ಓಡಿದ್ದು ಕೇವಲ ನಮ್ಮೂರಿನ ಕೆಸರು ಗದ್ದೆಯಲ್ಲಿ …ಇಷ್ಟರ ಮಟ್ಟಿಗೆ ಸುದ್ದಿಯಾಗಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.

0
Shares
  • Share On Facebook
  • Tweet It




Trending Now
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Hanumantha Kamath April 7, 2026
ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
Hanumantha Kamath April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
  • Popular Posts

    • 1
      ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • 2
      ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ

  • Privacy Policy
  • Contact
© Tulunadu Infomedia.

Press enter/return to begin your search