• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಾರ್ ರೂಂ ಜನರಿಗಾಗಿ ಏನು ಸೇವೆ ಮಾಡುತ್ತಿದೆ?

Tulunadu News Posted On March 30, 2020


  • Share On Facebook
  • Tweet It

ದಕ್ಷಿಣ ಕನ್ನಡ ಸಂಸದರೂ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಕಾರ್ಯ ಚಟುವಟಿಕೆಯಿಂದ ಮತ್ತೆ ಎಲ್ಲಾ ಜನಪ್ರತಿನಿಧಿಗಳಿಗೂ ಮಾದರಿಯಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ 534 ಸಂಸದರಿಗೆ ಸೂಚನೆ ಕೊಡುವ ಹಿಂದಿನ ದಿನವೇ ವಾರ್ ರೂಂ ತೆರೆಯುವ ಮೂಲಕ ತಾವು ಹೇಗೆ ವಿಶಿಷ್ಟ ಎಂದು ತೋರಿಸಿಕೊಟ್ಟಿದ್ದಾರೆ. ಮಾರ್ಚ್ 24 ರಿಂದಲೇ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ತಮ್ಮ ಕಚೇರಿಯನ್ನು ವಾರ್ ರೂಂ ಆಗಿ ಪರಿವರ್ತಿಸಿದ್ದಾರೆ. ಈ ಮೂಲಕ ತಮ್ಮ ಲೋಕಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಜನ ಕೊರೊನಾ ಸಮರದಲ್ಲಿ ಲಾಕ್ ಡೌನ್ ಆಗಿರುವ ಈ ದಿನಗಳಲ್ಲಿ ಯಾವುದೇ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳಬೇಕೆಂದು ತಮ್ಮ ತಂಡಕ್ಕೆ ಸೂಚನೆ ನೀಡಿದ್ದಾರೆ.

ವಾರ್ ರೂಂ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಪ್ರಾರಂಭದಲ್ಲಿ ಮಾರ್ಚ್ 31 ರ ತನಕ ವಾರ್ ರೂಂ ಕಾರ್ಯ ನಿರ್ವಹಿಸಬೇಕು ಎನ್ನುವ ಯೋಜನೆಯೊಂದಿಗೆ ಪ್ರಾರಂಭವಾಗಿದ್ದರೂ ಈಗ ಅನಿರ್ದಿಷ್ಟಾವಧಿಗೆ ಈ ವಾರ್ ರೂಂ ಕಾರ್ಯ ಚಟುವಟಿಕೆ ವಿಸ್ತಾರವಾಗಿದೆ. ಹಾಗಾದರೆ ಇಲ್ಲಿ ಏನೆಲ್ಲಾ ನಡೆಯುತ್ತದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಏಳು ಜನ ಬಿಜೆಪಿ ಶಾಸಕರು ಇದರಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಬಹಳ ಪ್ರಮುಖ ಭೂಮಿಕೆಯನ್ನು ನಿರ್ವಹಿಸುತ್ತಿದ್ದಾರೆ. ವೇದವ್ಯಾಸ ಕಾಮತ್ ಅವರು ಆಹಾರ ಪೂರೈಕೆ ಮತ್ತು ಇತರ ಜವಾಬ್ದಾರಿ ವಹಿಸಿಕೊಂಡಿದ್ದರೆ, ಡಾ.ಭರತ್ ಶೆಟ್ಟಿಯವರು ವೈದ್ಯಕೀಯ ಮತ್ತು ಅದಕ್ಕೆ ಸಂಬಂಧಪಟ್ಟ ಸೇವೆಗಳ ಹೊಣೆ ಹೊತ್ತುಕೊಂಡಿದ್ದಾರೆ. ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕಾರರಾಗಿ ನಿತಿನ್ ಕುಮಾರ್ ಹಾಗೂ ಸುಧೀರ್ ಶೆಟ್ಟಿ ಕಣ್ಣೂರು ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ದಿನಗಳಲ್ಲಿ ಮುಖ್ಯವಾಗಿ ಜನರಿಗೆ ಅಗತ್ಯವಾಗಿರುವುದು ಆಹಾರ ಮತ್ತು ವೈದ್ಯಕೀಯ ಸೇವೆಗಳು. ಉದಾಹರಣೆಗೆ ಜಿಲ್ಲೆಯಲ್ಲಿ ಯಾವುದೇ ಡಯಾಲೀಸಿಸ್ ರೋಗಿಗೆ ಆಸ್ಪತ್ರೆಗೆ ಹೋಗಲು ಇರುವಾಗ ಆ ರೋಗಿ ಅಥವಾ ಅವರ ಮನೆಯವರು ಜಿಲ್ಲಾಡಳಿತದ ಕಂಟ್ರೋಲ್ ರೂಂ ನಂಬ್ರ 1077 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಆ ರೋಗಿ ಎಲ್ಲಿಂದ ಕರೆ ಮಾಡುತ್ತಿದ್ದಾರೆ ಎಂದು ನೋಡಿ ಅವರಿಗೆ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಮನೆಗೆ ಬಿಟ್ಟು ಬರುವ ಸಂಪೂರ್ಣ ಕಾರ್ಯವನ್ನು ಮಾಡಲಾಗುತ್ತದೆ. ಇದರಲ್ಲಿ ಬಡರೋಗಿಗಳಿಗೆ ಈ ಸೇವೆ ಸಂಪೂರ್ಣ ಉಚಿತ ಮತ್ತು ಇಲ್ಲಿಯ ತನಕ ಈ ಸೇವೆಯನ್ನು ಹೆಚ್ಚಿನವರು ಉಚಿತವಾಗಿ ಪಡೆದುಕೊಂಡಿದ್ದಾರೆ. ಡಯಾಲೀಸಿಸ್ ಮಾತ್ರವಲ್ಲದೆ ಬೇರೆ ಸಂದರ್ಭಗಳಲ್ಲಿಯೂ ಉದಾಹರಣೆಗೆ ಬಿಪಿ, ಶುಗರ್, ಹೃದಯ ಕಾಯಿಲೆ, ಕಿಡ್ನಿ ಪೇಶೆಂಟ್ಸ್, ಕ್ಯಾನ್ಸರ್ ರೋಗಿಗಳು ಕೂಡ ತುರ್ತಾಗಿ ವೈದ್ಯಕೀಯ ಕಾರಣಗಳಿಗೆ ಅಂಬುಲೆನ್ಸ್ ವ್ಯವಸ್ಥೆ ಬೇಕಾದ್ದಲ್ಲಿ ಆಗಲೂ ಈ ಸಂಖ್ಯೆಗಳಿಗೆ ಕರೆ ಮಾಡಬಹುದು.

ರಸ್ತೆಬದಿಯಲ್ಲಿ ವಾಸಿಸುವ ನಿರ್ಗತಿಕರಿಗೆ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಂಗಳೂರಿನ ಕೆಲವು ಕಡೆ ಊಟ ತಯಾರಿಸಿ ಅದನ್ನು ಕಾರ್ಯಕರ್ತರು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಇನ್ನು ಕಂಟ್ರೋಲ್ ರೂಂಗೆ ಕರೆ ಮಾಡಿ ಊಟಕ್ಕೆ ತೊಂದರೆ ಇದೆ ಎಂದು ಹೇಳಿದರೆ ಅಂತವರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹೌಸ್ ಗಳಲ್ಲಿ ವಾಸಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಆರ್ಥಿಕವಾಗಿ ಶಕ್ತರಾದವರಿಂದ ಮಾತ್ರ ಹಣ ಸ್ವೀಕರಿಸಲಾಗುತ್ತದೆ. ಆದರೆ ಬಹುತೇಕ ಕಡೆ ಉಚಿತವಾಗಿ ಊಟವನ್ನು ವಿತರಿಸಲಾಗುತ್ತದೆ. ಇನ್ನು ಹಿರಿಯ ಜೀವಗಳು, ವೃದ್ಧರು ಏಕಾಂಗಿಯಾಗಿ ವಾಸಿಸುತ್ತಿದ್ದು ಅಥವಾ ದಂಪತಿಗಳು ಅಡುಗೆ ಮಾಡಿಕೊಳ್ಳಲಾಗದೇ ಹೋಟೇಲಿನ ಮೇಲೆ ಅವಲಂಬಿತರಾದವರು ಕೂಡ ಕರೆ ಮಾಡಿದ್ದಲ್ಲಿ ಊಟ ವಿತರಿಸಲಾಗುತ್ತಿದೆ. ದಿನಕೂಲಿ ಮಾಡುವವರು, ಬಡ ಕುಟುಂಬಗಳು, ನಿತ್ಯದ ಕೂಲಿ ಆದಾಯದ ಮೇಲೆ ಅವಲಂಬಿತರಾದವರು ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದರೆ ಅವರು ಕರೆ ಮಾಡಿದಾಗ ಊಟ ವಿತರಿಸಲಾಗುತ್ತಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಊಟ ವಿತರಿಸುವ ಕಾರ್ಯ ಲಾಕ್ ಡೌನ್ ಆದ ದಿನಗಳಿಂದಲೂ ನಿರಂತರವಾಗಿ ನಡೆಯುತ್ತಿದೆ. ಎರಡೂ ಹೊತ್ತಿನ ಊಟ ಬೇಕಾದವರು ಎರಡೂ ಬಾರಿ ಕರೆ ಮಾಡಿ ಬೇಡಿಕೆ ಇಟ್ಟಲ್ಲಿ ಆಗ ಅವರ ಅವಶ್ಯಕತೆಯ ಆಧಾರದ ಮೇಲೆ ಊಟ ಪೂರೈಸಲಾಗುತ್ತಿದೆ.

ಅಕ್ಕಿ, ಬೇಳೆ, ತರಕಾರಿ ಸಹಿತ ಜಿನಸಿ ವಸ್ತುಗಳ ಅವಶ್ಯಕತೆಗೆ ಸಂಬಂಧಪಟ್ಟಂತೆ ಕರೆಗಳು ಬರುತ್ತಿದ್ದು ಅವರಿಗೂ ಅದನ್ನು ಪೂರೈಸಲಾಗುತ್ತಿದೆ. ಪ್ರಾರಂಭದಲ್ಲಿ ಬೆಳಿಗ್ಗೆ 6 ರಿಂದ 12 ರ ತನಕ ಜೀವನಾವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಇದ್ದ ಕಾರಣ ಅಂತಹ ಕರೆಗಳು ಕಡಿಮೆ ಇದ್ದವು. ಈಗ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ಅಂತಹ ಬೇಡಿಕೆಗಳನ್ನು ಜನ ಮುಂದಿಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಫುಡ್ ಕಿಟ್ ತಯಾರಿಸುವ ಪ್ರಕ್ರಿಯೆಗಳು ಆರಂಭವಾಗಿದ್ದು ಅದನ್ನು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ತೆರೆದಿರುವ ವಾರ್ ರೂಂಗಳ ಮೂಲಕ ಸಾರ್ವಜನಿಕರಿಗೆ ವಿತರಿಸುವ ಕಾರ್ಯ ಮಾಡಲಾಗುತ್ತದೆ. ಜಿನಸು ಪದಾರ್ಥಗಳಿಗಾಗಿ ಬೇಡಿಕೆ ಬಂದಲ್ಲಿ ಆನ್ ಲೈನ್ ಡೆಲಿವರಿ ಮೂಲಕ ಮನೆಗಳಿಗೆ ತಲುಪಿಸಲಾಗುತ್ತಿದೆ. ಔಷಧಗಳ ಅವಶ್ಯಕತೆ ಇದ್ದಲ್ಲಿ ಅದನ್ನು ಅದನ್ನು ಕೂಡ ಕಾರ್ಯಕರ್ತರು ಮೆಡಿಕಲ್ ಗಳಿಂದ ಖರೀದಿಸಿ ತಲುಪಿಸುವ ಕೆಲಸ ಮಾಡುತ್ತಾರೆ. ಅದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ಭಾಜಪಾ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿ ಬೂತಿನಲ್ಲಿ ತಲಾ 5 ಕಾರ್ಯಕರ್ತರನ್ನು ಆಯ್ದು ಅವರಿಗೆ ಇಂತಹ ವಿತರಣೆಯ ಸೇವಾ ಜವಾಬ್ದಾರಿ ನೀಡಲಾಗಿದೆ. ಅಂತಹ ಕಾರ್ಯಕರ್ತರಿಂದ ವಿತರಿಸುವ ಕಾರ್ಯವನ್ನು ನಡೆಸಲಾಗುತ್ತದೆ. ಫಲಾನುಭವಿಗಳ ಮತ್ತು ಕಾರ್ಯಕರ್ತರ ಪಟ್ಟಿ ತಯಾರು ಮಾಡಲಾಗಿದ್ದು ಅದಕ್ಕೆ ತಕ್ಷಣ ಚಾಲನೆ ಸಿಗಲಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಾಕ್ ಡೌನ್ ನಿಂದ ಸಾರಿಗೆ ವಾಹನಗಳಿಲ್ಲದೆ ತೊಂದರೆಗೆ ಸಿಲುಕಿದ ಸುಮಾರು ಹತ್ತು ಸಾವಿರ ಜನರಿಗೆ ಅವರ ಊರಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಇನ್ನು ನಮ್ಮ ಜಿಲ್ಲೆಯ ಸಾವಿರಾರು ನಾಗರಿಕರು ಬೇರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡಾಗ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ.

ಇಸ್ಕಾನ್ ಸಂಸ್ಥೆಯಿಂದ ಊಟದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 2 ಸಾವಿರ ಜನರಿಗೆ ಅದನ್ನು ತಲುಪಿಸುವ ಮತ್ತು ವಿತರಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಸ್ವಯಂಸೇವಕರಾಗಿ ಮಾಡುತ್ತಿದ್ದಾರೆ.

ಜಿಲ್ಲೆಯ ಜನರು ಲ್ಯಾಂಡ್ ಲೈನ್ ಸಂಖ್ಯೆಗಳಾದ 1077 ಅಥವಾ 0824-2448888 ಸಂಖ್ಯೆಗಳಿಗೆ ಮಾಡುವ ಕರೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಮೇಯರ್ ದಿವಾಕರ ಪಾಂಡೇಶ್ವರ್ ಅವರು ಸ್ವತ: ಅಕ್ಕಿ, ಬೇಳೆ ವಿತರಿಸುವ ಕಾರ್ಯವನ್ನು ಮನೆಮನೆಗೆ ಹೋಗಿ ಮಾಡುತ್ತಿದ್ದಾರೆ.

ಸಂಸದರ ವಾರ್ ರೂಂನಿಂದ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳ ವಾರ್ ರೂಂಗಳನ್ನು ಸಂಪರ್ಕಿಸಿ ತೊಂದರೆಯಲ್ಲಿರುವವರನ್ನು ಗುರುತಿಸುವ ಮತ್ತು ಅವರಿಗೆ ಆಹಾರ, ಔಷಧ ಪೂರೈಸುವ ಕೆಲಸಗಳನ್ನು ಮಾಡುತ್ತಾ ಬರಲಾಗುತ್ತಿದೆ.

ವೃದ್ಧರಿಗೆ ಔಷಧಿಗಳನ್ನು ಪೂರೈಸುವುದು ಮಾತ್ರವಲ್ಲ, ಒಂದು ವೇಳೆ ನಿಧನ ಸಂಭವಿಸಿದ್ದಲ್ಲಿ, ನಮ್ಮ ತಂಡದಿಂದ ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಸರಕಾರಿ ಅಧಿಕಾರಿಗಳ ಸಮನ್ವಯದಲ್ಲಿ ಅಂಬ್ಯುಲೆನ್ಸ್ ಬಳಕೆಯ ಮೂಲಕ ಮಾಡಲಾಗುವುದು.

ಇದನ್ನು ತಂಡ ಪ್ರಯತ್ನವಾಗಿದ್ದು, ಜನರಿಂದ ಕೂಡ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search