ಕೊರೊನಾ ಸೊಂಕಿತ ಮುಸ್ಲಿಮರ ಚಿಕಿತ್ಸೆಯ ಖರ್ಚನ್ನು ಜಮೀರ್ ಕೊಡಲಿ!!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮೇಲೆ ಶಿವಮೊಗ್ಗ ಜಿಲ್ಲೆಯ ಸಾಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನರು ಪಿಎಂ ಕೇರ್ ಫಂಡ್ ಗೆ ನೀಡಿದ ದೇಣಿಗೆಯನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎನ್ನುವ ಅರ್ಥದ ಬರಹಗಳನ್ನು ಸೋನಿಯಾ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು. ಅದರ ವಿರುದ್ಧ ಒಬ್ಬರು ಪ್ರಕರಣ ದಾಖಲಿಸಿದ್ದಾರೆ. ಈಗ ಆ ಕೇಸನ್ನು ಹಿಂದಕ್ಕೆ ಪಡೆಯಬೇಕು ಮತ್ತು ಠಾಣಾಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಗ್ರಹಿಸಿದ್ದಾರೆ. ವಿಷಯ ಇರುವುದೇ ಇಲ್ಲಿ. ಕಾಂಗ್ರೆಸ್ಸಿಗೆ ತಾನು ಹೋಗಬೇಕಾದ ದಾರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದೇ ಇಷ್ಟೆಲ್ಲಾ ಆವಾಂತರಕ್ಕೆ ಕಾರಣವಾಗುತ್ತಿದೆ. ಬೇಕಾದರೆ ಉದಾಹರಣೆ ತೆಗೆದುಕೊಳ್ಳಿ. ರಾಜ್ಯದಲ್ಲಿರುವ ವಕ್ಫ್ ಬೋರ್ಡಿನ ಪ್ರಮುಖರು ಪಿಎಂ ಕೇರ್ ನಿಧಿಗೆ ಒಂದಿಷ್ಟು ನೆರವು ನೀಡಲು ತೀರ್ಮಾನಿಸಿದರು. ಅದನ್ನು ಖಂಡಾತುಂಡವಾಗಿ ವಿರೋಧಿಸಿದ್ದು ಕಾಂಗ್ರೆಸ್ ಪಕ್ಷದ ಶಾಸಕ ಜಮೀರ್ ಅಹ್ಮದ್. ಆ ಮನುಷ್ಯನ ವಾದವೇನೆಂದರೆ ಅದು ವಕ್ಫ್ ಹಣ ಅಂದರೆ ಮುಸ್ಲಿಮರ ಹಣ. ಆದ್ದರಿಂದ ಮುಸ್ಲಿಮರ ಖರ್ಚಿಗೆ ಮಾತ್ರ ವಿನಿಯೋಗಿಸಬೇಕು. ಅದಕ್ಕಾಗಿ ಪಿಎಂ ಕೇರ್ ನಿಧಿಗೆ ಕೊಡುವುದಕ್ಕೆ ತಾನು ಬಿಡುವುದಿಲ್ಲ.
ಜಮೀರ್ ಅಹ್ಮದ್ ಒಂದು ರೀತಿಯಲ್ಲಿ ಕರ್ನಾಟಕದ ಓವೈಸಿ ಇದ್ದ ಹಾಗೆ. ಒಂದು ವೇಳೆ ಜಮೀರ್ ನ ಬಳಿ ಲೆಕ್ಕವಿಲ್ಲದಷ್ಟು ಹಣ ಇಲ್ಲದಿದ್ದರೆ ಆತನ ಈ ಹಿಂದಿನ ಹೇಳಿಕೆಗಳನ್ನು ನೋಡಿಯೇ ಕಾಂಗ್ರೆಸ್ ಆ ವ್ಯಕ್ತಿಯನ್ನು ಪಕ್ಷದಿಂದ ಕಿತ್ತುಹಾಕಬೇಕಿತ್ತು. ಆದರೆ ಹಣದ ಥೈಲಿ ಹಿಡಿದುಕೊಂಡು ಪಕ್ಷಕ್ಕೆ ಅಗತ್ಯ ಇದ್ದಾಗ ಚೆಲ್ಲುವವರನ್ನು ಅಷ್ಟು ಸುಲಭಕ್ಕೆ ಬಿಡೋಕೆ ಆಗುತ್ತಾ? ಆದ್ದರಿಂದ ಜಮೀರ್ ಪಕ್ಷದಲ್ಲಿಯೇ ಇದ್ದಾರೆ. ಅಂತಹ ಜಮೀರ್ ವಕ್ಫ್ ಆಸ್ತಿಯನ್ನು ಇವರದ್ದೇ ಪಕ್ಷದ ಮುಖಂಡರು ನುಂಗಿ ನೀರು ಕುಡಿದಿದ್ದಾರಲ್ಲ, ಅವರಿಗೆ ಯಾಕೆ ಹೇಳೋಲ್ಲ. ನೀವು ಅಲ್ಲಾನ ಆಸ್ತಿಯನ್ನು ಹೊಡೆದಿದ್ದಿರಿ. ಅದು ನಮ್ಮ ಧರ್ಮದ ಬಡವರಿಗೆ ಸಲ್ಲಬೇಕಾದದ್ದು. ಅದನ್ನು ಕಬಳಿಸುವುದು ತಪ್ಪು ಎಂದು ಯಾಕೆ ಜಮೀರ್ ಇವರ ಪಕ್ಷದ ಘಟಾನುಘಟಿಗಳಿಗೆ ಹೇಳಿಲ್ಲ. ಯಾಕೆಂದರೆ ವಕ್ಫ್ ಆಸ್ತಿ ಇರುವುದೇ ಮುಸ್ಲಿಂ ಧರ್ಮದ ಶ್ರೀಮಂತ, ಪ್ರಭಾವಶಾಲಿ ಕುಳಗಳ ಸ್ವಂತ ಉಪಯೋಗಕ್ಕೆ ಎಂದು ಎಲ್ಲಾ ಮುಸ್ಲಿಂ ಮುಖಂಡರು ಪರೋಕ್ಷವಾಗಿ ಒಪ್ಪಿದ್ದಾರೆ ಮತ್ತು ನಡೆದುಕೊಂಡು ಬಂದಿದ್ದಾರೆ. ವಕ್ಫ್ ಆಸ್ತಿಗಳನ್ನು ಆಕ್ರಮಿಸಿ ಅದ್ಭುತ ಮಾಲ್ ಗಳನ್ನು ಕಟ್ಟಿ ವರ್ಷಕ್ಕೆ ಕೋಟಿ ಲೆಕ್ಕ ಹಾಕುವ ಮುಸ್ಲಿಂ ಮುಖಂಡರ ಕರ್ಮಕಾಂಡದ ಬಗ್ಗೆ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿಯವರ ವರದಿಯನ್ನು ಬಿಜೆಪಿ ಸರಕಾರ ಮತ್ತೆ ಎತ್ತಿಕೊಂಡರೆ ಮತ್ತು ಆ ಬಗ್ಗೆ ಕೂಲಂಕೂಶವಾಗಿ ತನಿಖೆ ಮಾಡಿದರೆ ರಾಜ್ಯದ ಎಷ್ಟೋ ಮುಸಲ್ಮಾನ ಮುಖಂಡರೆನಿಸಿಕೊಂಡವರು ಉಟ್ಟಬಟ್ಟೆಯಲ್ಲಿಯೇ ಹೊರಗೆ ಓಡಿ ಬರಬೇಕಾದಿತು. ತಿನ್ನುವುದು ಒಂದು ಕಕ್ಕುವುದು ಇನ್ನೊಂದು ಎನ್ನುವುದು ಜಮೀರ್ ಅಹ್ಮದ್ ಅವರ ಪರಿಸ್ಥಿತಿ.
ಇನ್ನು ಪಿಎಂ ಕೇರ್ ಫಂಡ್ ಗೆ ಹಿಂದೂಗಳು ಕೂಡ ಹಣ ನೀಡಿದ್ದಾರೆ. ಅಸಂಖ್ಯಾತ ದೇವಸ್ಥಾನಗಳು, ಮಠ, ಮಂದಿರಗಳು, ಹಿಂದೂ ಸಂಘಟನೆಗಳು, ಧಾರ್ಮಿಕ ಕೇಂದ್ರಗಳು ಕೂಡ ಹಣ ದೇಣಿಗೆಯಾಗಿ ನೀಡಿವೆ. ಆದರೆ ಎಲ್ಲಿಯೂ ಕೂಡ ಈ ಹಣವನ್ನು ಮುಸ್ಲಿಮರ ಚಿಕಿತ್ಸೆಗೆ ಬಳಸಬೇಡಿ ಎಂದು ಹೇಳಿಲ್ಲ. ಒಬ್ಬ ವ್ಯಕ್ತಿ ಕೋವಿಡ್ 19 ಸೊಂಕಿಗೆ ಒಳಗಾದರೆ ಆತನ ಗಂಟಲದ್ರವ ಪರೀಕ್ಷೆಯಿಂದ ಹಿಡಿದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗುವ ತನಕದ ಪ್ರತಿ ಖರ್ಚನ್ನು ಸರಕಾರವೇ ವಿನಿಯೋಗಿಸುತ್ತದೆ. ಒಬ್ಬ ಕೋವಿಡ್ ಸೊಂಕಿತನ ಮೇಲೆ ಖರ್ಚಾಗುವ ಹಣ ಲಕ್ಷಗಟ್ಟಲೆ ಆಗುತ್ತದೆ. ಹಾಗಿರುವಾಗ ಇಲ್ಲಿಯ ತನಕ ಕೇವಲ ಮುಸ್ಲಿಂ ಸಂಘಟನೆ ತಬ್ಲಿಘಿಯ ಸೊಂಕಿತ ಕಾರ್ಯಕರ್ತರ ಚಿಕಿತ್ಸೆಗೆ ಖರ್ಚಾದದ್ದು ಕೋಟ್ಟಿಗಟ್ಟಲೆ ರೂಪಾಯಿ ಮೇಲೆ ಆಗಿದೆ. ಇದೆಲ್ಲವನ್ನು ಕೇವಲ ಮುಸ್ಲಿಮರು ಮಾತ್ರ ಕೊಟ್ಟರಾ ಜಮೀರ್ ಸಾಹೇಬ್ರೆ, ಅಥವಾ ಯಾವುದೇ ಮುಸ್ಲಿಂ ರೋಗಿ ಕೋವಿಡ್ ಸೊಂಕಿತನಾಗಿ ಆಸ್ಪತ್ರೆಗೆ ಖರ್ಚಾದ ಹಣವನ್ನು, ಅದರ ಪೂರ್ಣ ಖರ್ಚನ್ನು ನಾನೇ ಕೊಡುತ್ತೇನೆ ಎಂದು ಜಮೀರ್ ಎಲ್ಲಿಯಾದರೂ ಹೇಳಿದ್ದಾರಾ? ನಿಮಗೆ ಮುಸ್ಲಿಮರ ನಾಯಕನಾಗುವ ಪ್ರಬಲ ಇಚ್ಚೆ ಇದ್ದರೆ ಅವರ ಪ್ರೀತಿ ಗಳಿಸಿ ನಾಯಕರಾಗಿ ಜಮೀರ್, ಅದು ಬಿಟ್ಟು ಹಿಂದೂ ವಿರೋಧಿ ಹೇಳಿಕೆ ಕೊಟ್ಟು ಅಲ್ಲ. ಕೊರೊನಾ ವಿರುದ್ಧದ ಈ ಕದನದಲ್ಲಿ ಎಲ್ಲರೂ ಒಟ್ಟಾಗಿ ಹೋಗೋಣ. ಯಾಕೆಂದರೆ ಕೊರೊನಾಗೆ ಜಾತಿ, ಧರ್ಮದ ಭೇದವಿಲ್ಲ. ಹಾಗೆ ಹಣಕ್ಕೆ ಕೂಡ!
Leave A Reply