ಕೋವಿಡ್ ನಿಂದ ಮೃತ ಶರೀರದ ಪ್ಯಾಕ್ ತೆರೆದು ಆತಂಕ ಸೃಷ್ಟಿಸಿದ ಕಾಂಗ್ರೇಸ್ ಮುಖಂಡರು!
ಬೋಳೂರು ಸ್ಮಶಾನದಲ್ಲಿ ನಿಯಮ ಉಲ್ಲಂಘಿಸಿ ಕೋವಿಡ್ ನಿಂದ ಮೃತ ಶರೀರದ ಪ್ಯಾಕ್ ತೆರೆದು ಆತಂಕ ಸೃಷ್ಟಿಸಿದ ಕಾಂಗ್ರೇಸ್ ಮುಖಂಡರು.
ಸಾಮಾನ್ಯವಾಗಿ ಕೊರೋನ ಪೀಡಿತ ವ್ಯಕ್ತಿ ಮೃತಪಟ್ಟರೆ ಆ ವ್ಯಕ್ತಿಯ ಸಂಬಂಧಿಕರಿಗೂ ಬಂಧು ಮಿತ್ರರಿಗೂ ಅಂತಿಮ ದರ್ಶನಕ್ಕೂ ಅವಕಾಶವಿರುವುದಿಲ್ಲ. ಯಾಕೆಂದರೆ ಮೃತ ದೇಹದಿಂದ ವೈರಸ್ ಹರಡದಂತೆ ಸಂಪೂರ್ಣವಾಗಿ ಪ್ಯಾಕ್ ಮಾಡಲಾಗಿರುತ್ತದೆ. ಆದರೆ ನಿನ್ನೆ ರಾತ್ರಿ ಕಾಂಗ್ರೇಸ್ ಮುಖಂಡರ ಪ್ರಚಾರದ ತೆವಲಿನಿಂದ ಆ ಪರಿಸರದಲ್ಲಿ ಭೀತಿ ಸೃಷ್ಠಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೈರಸ್ ಈಗಾಗಲೇ ಸೋಂಕಿತರ ಸಂಖ್ಯೆಯನ್ನು ಗಗನಕ್ಕೇರಿಸುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಎಲ್ಲರಿಗಿಂತಲೂ ಹೆಚ್ಚು ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕಾದವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು. ಜಿಲ್ಲಾಡಳಿತ ಜಾರಿಗೊಳಿಸಿರುವ ನಿಯಮವನ್ನು ಜನಪ್ರತಿನಿಧಿಗಳೇ ಧಿಕ್ಕರಿಸಿದರೆ ಜನ ಸಾಮಾನ್ಯರು ನಿಯಮ ಪಾಲಿಸುವುದು ಹೇಗೆ ? ಶಾಸಕರಾಗಿ, ಸಚಿವರಾಗಿ ಅನುಭವಿ ರಾಜಕಾರಣಿ ಯು.ಟಿ ಖಾದರ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ರಾಜಕೀಯ ಪ್ರಚಾರದ ತೆವಲು ಈ ಮಟ್ಟಕ್ಕೆ ಇಳಿದಿರುವುದು ಸಾಮಾನ್ಯ ಜನತೆಯನ್ನೂ ಆತಂಕಕ್ಕೆ ದೂಡಿದೆ.
ನಿನ್ನೆ ಕೋವಿಡ್ ನಿಂದ ಮೃತಪಟ್ಟ ವ್ಯತ್ತಿಯ ಶವ ಸಂಸ್ಕಾರಕ್ಕಾಗಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಸ್ವಯಂ ಸೇವಕರು ಶವವನ್ನು ಬೋಳೂರು ಸ್ಮಶಾನಕ್ಕೆ ತಂದಿದ್ದ ಸಂದರ್ಭ ಅಲ್ಲಿಗೆ ಆಗಮಿಸಿದ ಶಾಸಕ ಯು.ಟಿ ಖಾದರ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಕಾಂಗ್ರೇಸ್ ಮುಖಂಡರು ಒತ್ತಾಯ ಪೂರ್ವಕವಾಗಿ ಶವದ ಮೇಲಿನ ಪಿಪಿಇ ಕಿಟ್ ಸರಿಸಿ ಫೋಟೋ ಶೂಟ್ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಮೃತಪಟ್ಟರೆ ಆತನ ಮನೆಯವರಿಗೂ ಕೂಡ ಅಂತಿಮ ದರ್ಶನಕ್ಕೆ ಅನುವು ಮಾಡಿ ಕೊಡದೆ ಇರುವ ಪರಿಸ್ಥಿತಿಯಲ್ಲಿ ಒಬ್ಬ ಶಾಸಕ ಮತ್ತೊಬ್ಬ ಮಾಜಿ ವಿಧಾನ ಪರಿಷತ್ ಸದಸ್ಯರಿಗೆ ನಿಯಮ ಪರಿಪಾಲನೆಯ ಜವಬ್ದಾರಿ ಇಲ್ಲವೆ ?
ಅಂದ ಹಾಗೆ ಕಳೆದ ಕೆಲವು ದಿನಗಳಿಂದ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಶವಸಂಸ್ಕಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆಯೂ ಕೂಡ ಬೋಳೂರು ಸ್ಮಶಾನಕ್ಕೆ ಬಜರಂಗದಳ ಕಾರ್ಯಕರ್ತರು ಶವ ತಂದಾಗ ಕಾಂಗ್ರೇಸಿಗರು ಅದರ ಭಾವಚಿತ್ರವನ್ನು ಕಾಂಗ್ರೇಸಿನ ಸ್ವಯಂ ಸೇವಕರೇ ಶವ ಸಂಸ್ಕಾರ ಮಾಡಿರುವುದು ಎಂಬಂತೆ ಬಿಂಬಿಸಲು ಅದೇ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಬೆಚತ್ತಲಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಹೆಣದ ಮೇಲಿನ ರಾಜಕೀಯ ಮಾಡುತ್ತಿರುವ ಖಾದರ್,ಐವನ್ ಅವರ ಮೇಲೆ ಜಿಲ್ಲಾಡಳಿತ ಕ್ರಮ ಜರಗಿಸಬಹುದೇ ??
Leave A Reply