• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮಂಗಳೂರಿನಲ್ಲಿ ರಿಂಗ್ ರೋಡ್, ಸ್ಲಂ ಇಲ್ಲದಿದ್ದರೂ ಹೊಸ ಟ್ಯಾಕ್ಸ್!!

Tulunadu News Posted On July 26, 2020
0


0
Shares
  • Share On Facebook
  • Tweet It

ರಾಜ್ಯ ಸರಕಾರಗಳು ಕೆಲವು ನಿಯಮಗಳನ್ನು ಜಾರಿಗೆ ತರುವಾಗ ಅದು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ತರುವುದು ಸಹಜ. ಆದರೆ ಹಾಗೆ ಮಾಡುವಾಗ ಆಯಾ ಪ್ರಾಂತ್ಯಗಳಿಗೆ ಅನುಗುಣವಾಗಿ ಕೆಲವು ಬದಲಾವಣೆ ಮಾಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಕುಳಿತು ಬದಲಾವಣೆ ಮಾಡುವ ನಿಯಮಗಳು ಮಂಗಳೂರಿಗೆ ಸೂಕ್ತವಾಗದಿದ್ದರೆ ಅದರಿಂದ ಜನರಿಗೆ ತೊಂದರೆಯಾಗುವುದೇ ವಿನ: ಏನೂ ಪ್ರಯೋಜನವಿಲ್ಲ. ಉದಾಹರಣೆಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಷಯವನ್ನೇ ತೆಗೆದುಕೊಳ್ಳಿ. ಹಿಂದೆ ನೀವು ಮೂಡಾಕ್ಕೆ ಏಕನಿವೇಶನಕ್ಕೆ ಶುಲ್ಕ ಕಟ್ಟಲು ಹೋಗುವಾಗ .5% ಹೆಚ್ಚುವರಿ ಶುಲ್ಕ ಕಟ್ಟಬೇಕಿತ್ತು. ಅದು ಕೆರೆಗಳ ಅಭಿವೃದ್ಧಿಗೆಂದು ಅವರು ಮೀಸಲಿಡುತ್ತಿದ್ದರು. ಆದರೆ ಈಗ .5% ದೊಂದಿಗೆ ಏಕ್ಸಟ್ರಾ .5% ಸೇರಿಸಿಯೇ ಕಟ್ಟಲು ನಿಯಮ ತಂದಿದ್ದಾರೆ. ಹಾಗಾದರೆ ಹೆಚ್ಚುವರಿ ತೆಗೆದುಕೊಳ್ಳುತ್ತಿರುವ .5% ಶುಲ್ಕ ಯಾವ ಘನಂಧಾರಿ ಕೆಲಸಕ್ಕೆ ಎಂದು ವಿವರಿಸುತ್ತೇನೆ. ಅದು ಯಾವುದಕ್ಕೆಂದರೆ ಒಂದು .2% ರಿಂಗ್ ರೋಡ್ ನಿರ್ಮಾಣಕ್ಕೆ, ಇನ್ನೊಂದು .2% ಸ್ಲಂ ಅಭಿವೃದ್ಧಿಗೆ ಮತ್ತು .1% ಕೆರೆ ಅಭಿವೃದ್ಧಿಗೆ. ಹೀಗೆ ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವುದು ತಪ್ಪೆಂದು ನನ್ನ ವಾದವಲ್ಲ. ಯಾಕೆಂದರೆ ಅಭಿವೃದ್ಧಿಯಾಗುವಾಗ ಈಗಿನ ಪರಿಸ್ಥಿತಿಯಲ್ಲಿ ಜನರಿಂದಲೇ ಹೀಗೆ ಒಂದಿಷ್ಟು ಹಣವನ್ನು ಸಂಗ್ರಹಿಸಲೇಬೇಕಾಗುತ್ತದೆ. ಉದಾಹರಣೆಗೆ ಟೋಲ್ ಗೇಟ್ ಇದೆಯಲ್ಲ, ಹಾಗೆ. ಆದರೆ ಯಾವ ನಗರದಲ್ಲಿ ಸಂಗ್ರಹ ಆಗಬೇಕೋ ಅಲ್ಲಿ ಮಾತ್ರ ಮಾಡದೇ ಎಲ್ಲಾ ಕಡೆ ಅನ್ವಯಿಸುವುದು ಎಷ್ಟು ಸರಿ ಎನ್ನುವುದು ನಾನೀಗ ಕೇಳುತ್ತಿರುವುದು.  ಇದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅನ್ವಯ ಮಾಡುವುದಾದರೆ ಓಕೆ. ಏಕೆಂದರೆ ಅಲ್ಲಿ ರಿಂಗ್ ರೋಡ್ ನಿರ್ಮಾಣವಾಗಲೇಬೇಕು. ಆದ್ದರಿಂದ ಅಲ್ಲಿ ಜನರಿಗೆ ಸ್ವಲ್ಪ ಹೆಚ್ಚು ತೆರಿಗೆ ವಿಧಿಸಿ ಅದನ್ನು ತೆಗೆದುಕೊಂಡರೆ ಅದರಲ್ಲಿ ತಪ್ಪೇನಿಲ್ಲ. ನಗರದ ಅಭಿವೃದ್ಧಿಯ ದೃಷ್ಟಿಯಿಂದ ಓಕೆ. ಇದು ಮೈಸೂರಿನಂತಹ ನಗರಗಳಿಗೂ ಕೂಡ ಅನ್ವಯಿಸಬಹುದು. ಅಲ್ಲಿಯೂ ರಿಂಗ್ ರೋಡ್ ನಿರ್ಮಾಣ ಮಾಡುವ ಸಂದರ್ಭ ಇಂತಹ ಫಂಡ್ ಇದ್ದರೆ ಆ ನಗರದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದರೆ ಮಂಗಳೂರಿನಲ್ಲಿ ಯಾವ ರಿಂಗ್ ರೋಡ್ ನಿರ್ಮಾಣವಾಗಲು ಇದೆ. ಮಂಗಳೂರಿನಲ್ಲಿ ರಿಂಗ್ ರೋಡ್ ಕಲ್ಪನೆ ಮಾಡುವುದೇ ಇವತ್ತಿನ ದಿನಗಳಲ್ಲಿ ಅನಾವಶ್ಯಕವಾಗಿದೆ. ಇದ್ದದ್ದು ಒಂದೇ ಅದು ಮಂಗಳಾ ಕಾರ್ನಿಶ್ ಯೋಜನೆ. ಅದು ಈ ದಶಕದಲ್ಲಿ ಆಗುತ್ತಾ, ಇಲ್ವಾ ದೇವರಿಗೆ ಗೊತ್ತು. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಕೈ ಜೋಡಿಸಿದರೆ ಮಾತ್ರ ಸಾಧ್ಯ. ಸದ್ಯ ಮೂಡಾದ .2% ಅನುದಾನವನ್ನು ನಂಬಿದರೆ ಈ ಶತಮಾನವೂ ಸಾಲುವುದಿಲ್ಲ. ಆದ್ದರಿಂದ ರಿಂಗ್ ರೋಡ್ ನಿರ್ಮಾಣಕ್ಕೆ ಹಣ ವಸೂಲಿ ಬೇಡವೇ ಬೇಡಾ. ಇನ್ನೊಂದು .2% ಸ್ಲಂ ಅಭಿವೃದ್ಧಿಗೆಂದು ವಸೂಲಿ ಮಾಡುತ್ತಿದ್ದಾರೆ. ಮಂಗಳೂರು ನಗರದಲ್ಲಿ ಯಾವ ಸ್ಲಂ ಇದೆ. ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ ಇರಬಹುದು. ಅಲ್ಲಿ ಸ್ಲಂ ಅಭಿವೃದ್ಧಿಗೆ ಹಣ ಬೇಕಾಗಬಹುದು. ಆದರೆ ಅದು ಮಂಗಳೂರಿಗೆ ಅನ್ವಯ ಮಾಡಲೇಬಾರದು. ಸ್ಲಂ ಎಂಬುದೇ ಇಲ್ಲವಾದರೆ ನಂತರ ಆ ಹಣವನ್ನು ಇವರು ಯಾಕೆ ವಸೂಲಿ ಮಾಡುವುದು ಎಂದೇ ಗೊತ್ತಾಗುವುದಿಲ್ಲ. ಆದ್ದರಿಂದ ಮಂಗಳೂರಿನಲ್ಲಿ ನೋ ಸ್ಲಂ, ನೋ ಟ್ಯಾಕ್ಸ್. ಮೂಡಾದಲ್ಲಿ ಕೆರೆ ಅಭಿವೃದ್ಧಿ ಶುಲ್ಕ ಎಂದು ಸಂಗ್ರಹ ಆದದ್ದೇ ಕೋಟಿಗಟ್ಟಲೆ ಹಣ ಇದೆ. ಇನ್ನು ಮೂಡಾದಿಂದ ಕೆರೆ ಅಭಿವೃದ್ಧಿ ಎಷ್ಟು ಆಗಿದೆ ಎನ್ನುವುದನ್ನು ಪೀನ ಮಸೂರ ಹಿಡಿದುಕೊಂಡು ನೋಡಬೇಕು. ಈಗ ಅಭಿವೃದ್ಧಿ ಹೊಂದಲು ಕಾಮಗಾರಿ ನಡೆಯುತ್ತಿರುವ ಕಾವೂರು ಕೆರೆ ಮತ್ತು ಗುಜ್ಜರಕೆರೆಗಳು ಸ್ಮಾರ್ಟ್ ಸಿಟಿ ಫಂಡ್ ನಿಂದ ಅಭಿವೃದ್ಧಿ ಹೊಂದುತ್ತಿವೆ ಬಿಟ್ಟರೆ ಅದಕ್ಕೂ ಮೂಡಾದ ಕೆರೆ ಅಭಿವೃದ್ಧಿ ನಿಧಿಗೂ ಯಾವುದೇ ಸಂಬಂಧವಿಲ್ಲ.

ಇನ್ನು ಈಗಾಗಲೇ ಇರುವ .5% ಶುಲ್ಕವನ್ನು ನಿಗದಿಗೊಳಿಸುವಾಗಲೇ ನಾಗರಿಕರಿಂದ ವಿರೋಧ ವ್ಯಕ್ತವಾಗಿತ್ತು. ನಂತರ ಈಗಿನ ಶಾಸಕರು ಅದನ್ನು ತಮ್ಮ ಸರಕಾರ ಬಂದ ಕೂಡಲೇ ಮುಖ್ಯಮಂತ್ರಿಯೊಂದಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಕೈ ಬಿಡುವ ಅಥವಾ ಕಡಿಮೆ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಮತ್ತೆ .5% ವನ್ನು ರಾಜ್ಯ ಸರಕಾರ ಜಾಸ್ತಿ ಮಾಡಿದೆ. ಇದು ಶಾಸಕರ ಗಮನಕ್ಕೆ ಬಂದಿದ್ದರೆ ಈ ಬಗ್ಗೆ ತಕ್ಷಣ ಅವರು ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಯಾವುದೇ ನಿಯಮ ಬದಲಾವಣೆ ಮಾಡುವಾಗ ಅದನ್ನು ಆ ಭಾಗದ ನಾಗರಿಕರೊಂದಿಗೆ ಸಮಾಲೋಚನೆ ಮಾಡಿ ಜಾರಿಗೆ ತಂದರೆ ಆಗ ಅದು ಉತ್ತಮ. ಬೇಕಾದರೆ ಮೂಡಾ ಸಭೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ, ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ, ಶಾಸಕರುಗಳ ಅಭಿಪ್ರಾಯದ ಪ್ರಕಾರ ಸಮಾಲೋಚನೆ ಮಾಡಿ ಏನಾದರೂ ನಿರ್ಧಾರಕ್ಕೆ ಬರಬಹುದಿತ್ತು. ಆದರೆ ಈಗ ಅದ್ಯಾವುದೂ ಮಾಡದೇ ನೇರಾನೇರ ಹೀಗೆ ಹೆಚ್ಚಳ ಮಾಡುವುದರಿಂದ ಜನರಿಗೆ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ನಿರಾಶೆ ಉಂಟಾಗುತ್ತದೆ. ಅದಕ್ಕೆ ನಾನು ಹೇಳಿದ್ದು, ಬೆಂಗಳೂರಿನಲ್ಲಿ ಎಸಿ ರೂಂನಲ್ಲಿ ಕುಳಿತು ಅಧಿಕಾರಿಗಳು ಮಾಡುವ ನಿಯಮಗಳು ಮಂಗಳೂರಿನಲ್ಲಿ ಹೊಂದಿಕೆಯಾಗುವುದು ಕಡಿಮೆ!

0
Shares
  • Share On Facebook
  • Tweet It




Trending Now
ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
Tulunadu News March 2, 2026
ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
Tulunadu News March 2, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
  • Popular Posts

    • 1
      ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • 2
      ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • 3
      ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • 4
      ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • 5
      ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!

  • Privacy Policy
  • Contact
© Tulunadu Infomedia.

Press enter/return to begin your search