ಮಂಗಳೂರಿನಲ್ಲಿ ರಿಂಗ್ ರೋಡ್, ಸ್ಲಂ ಇಲ್ಲದಿದ್ದರೂ ಹೊಸ ಟ್ಯಾಕ್ಸ್!!
Posted On July 26, 2020
- Advertisement -
ಇನ್ನು ಈಗಾಗಲೇ ಇರುವ .5% ಶುಲ್ಕವನ್ನು ನಿಗದಿಗೊಳಿಸುವಾಗಲೇ ನಾಗರಿಕರಿಂದ ವಿರೋಧ ವ್ಯಕ್ತವಾಗಿತ್ತು. ನಂತರ ಈಗಿನ ಶಾಸಕರು ಅದನ್ನು ತಮ್ಮ ಸರಕಾರ ಬಂದ ಕೂಡಲೇ ಮುಖ್ಯಮಂತ್ರಿಯೊಂದಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಕೈ ಬಿಡುವ ಅಥವಾ ಕಡಿಮೆ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಮತ್ತೆ .5% ವನ್ನು ರಾಜ್ಯ ಸರಕಾರ ಜಾಸ್ತಿ ಮಾಡಿದೆ. ಇದು ಶಾಸಕರ ಗಮನಕ್ಕೆ ಬಂದಿದ್ದರೆ ಈ ಬಗ್ಗೆ ತಕ್ಷಣ ಅವರು ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಯಾವುದೇ ನಿಯಮ ಬದಲಾವಣೆ ಮಾಡುವಾಗ ಅದನ್ನು ಆ ಭಾಗದ ನಾಗರಿಕರೊಂದಿಗೆ ಸಮಾಲೋಚನೆ ಮಾಡಿ ಜಾರಿಗೆ ತಂದರೆ ಆಗ ಅದು ಉತ್ತಮ. ಬೇಕಾದರೆ ಮೂಡಾ ಸಭೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ, ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ, ಶಾಸಕರುಗಳ ಅಭಿಪ್ರಾಯದ ಪ್ರಕಾರ ಸಮಾಲೋಚನೆ ಮಾಡಿ ಏನಾದರೂ ನಿರ್ಧಾರಕ್ಕೆ ಬರಬಹುದಿತ್ತು. ಆದರೆ ಈಗ ಅದ್ಯಾವುದೂ ಮಾಡದೇ ನೇರಾನೇರ ಹೀಗೆ ಹೆಚ್ಚಳ ಮಾಡುವುದರಿಂದ ಜನರಿಗೆ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ನಿರಾಶೆ ಉಂಟಾಗುತ್ತದೆ. ಅದಕ್ಕೆ ನಾನು ಹೇಳಿದ್ದು, ಬೆಂಗಳೂರಿನಲ್ಲಿ ಎಸಿ ರೂಂನಲ್ಲಿ ಕುಳಿತು ಅಧಿಕಾರಿಗಳು ಮಾಡುವ ನಿಯಮಗಳು ಮಂಗಳೂರಿನಲ್ಲಿ ಹೊಂದಿಕೆಯಾಗುವುದು ಕಡಿಮೆ!
Leave A Reply