• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಮ ಮಂದಿರದ ಸಂಭ್ರಮದಲ್ಲಿ ಹುಳಿ ಹಿಂಡಿ ಖುಷಿ ಪಡುವ ವಿಕಾರತೆ ಯಾಕೆ?

Tulunadu News Posted On August 6, 2020
0


0
Shares
  • Share On Facebook
  • Tweet It

ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಎನ್ನುವ ಸಂಘಟನೆ ಯಾಕೆ ಹೀಗೆ ಮಾಡುತ್ತೆ ಎನ್ನುವುದು ಅವರಿಗೆ ಗೊತ್ತಿರಲಿಕ್ಕಿಲ್ಲ. 500 ವರ್ಷಗಳಿಗೂ ಮಿಗಿಲಾದ ಹೋರಾಟ, ನೂರಾರು ಕದನಗಳನ್ನು ಕಂಡ ವಿವಾದ, ಲಕ್ಷಾಂತರ ಮಂದಿ ಪ್ರಾಣ ತೆತ್ತ ದುರ್ಘಟನೆ ಮತ್ತು ಅನೇಕ ದಶಕಗಳ ಕಾಲ ನ್ಯಾಯಾಲಯದಲ್ಲಿ ಸುದ್ದಿಯಾಗುತ್ತಿದ್ದ ಪ್ರಕರಣವೊಂದು ಎಲ್ಲವೂ ಮುಗಿದು ಇನ್ನೇನೂ ಭೂಮಿ ಪೂಜೆ ಕೂಡ ನಿರ್ವಿಘ್ನವಾಗಿ ನಡೆದು ವಿಶ್ವದ ಬಹುತೇಕ ನಾಗರಿಕರು ಪಕ್ಷಭೇದ ಮರೆತು ಜೈ ಶ್ರೀರಾಮ್ ಎನ್ನುತ್ತಿರುವಾಗ ಇಂತಹ ಒಂದು ಹೇಳಿಕೆ ಅಗತ್ಯ ಇದೆಯಾ ಎನ್ನುವುದು ಈಗಿನ ಪ್ರಶ್ನೆ.

ಆ ಬೋರ್ಡ್ ಒಂದು ಟ್ವಿಟ್ ಮಾಡಿ ಅಯೋಧ್ಯೆಯ ಆ ರಾಮಜನ್ಮ ಭೂಮಿ ಪ್ರದೇಶದಲ್ಲಿ ಹಿಂದೆಯೂ ಮಸೀದಿ ಇತ್ತು. ಮುಂದೆಯೂ ಇರಲಿದೆ. ಮುಂದೊಂದು ದಿನ ರಾಮ ಮಂದಿರ ಕೆಡವಿ ಮತ್ತೆ ಮಸೀದಿ ಕಟ್ಟುತ್ತೇವೆ ಎನ್ನುವ ಅರ್ಥದ ಹೇಳಿಕೆಯನ್ನು ಟ್ವಿಟ್ ಮಾಡಿದ್ದಾರೆ. ಇಂತಹ ಒಂದು ಟ್ವಿಟ್ ಮಾಡುವಾಗ ನೂರು ಸಲ ಅಲ್ಲ ಸಾವಿರ ಸಲ ಯೋಚಿಸಬೇಕು. ಯಾಕೆಂದರೆ ಅದು ವಿಶ್ವದ ಕೋಟ್ಯಾಂತರ ಜನ ರಾಮಭಕ್ತರ ಮನಸ್ಸಿಗೆ ನೋವನ್ನು ಉಂಟು ಮಾಡುವುದು ಮಾತ್ರವಲ್ಲ ಅನೇಕರಲ್ಲಿ ಆಕ್ರೋಶವನ್ನು ಕೂಡ ಉಂಟು ಮಾಡುತ್ತದೆ. ಅದು ನಮ್ಮ ಧರ್ಮಗಳ ನಡುವಿನ ವಿವಾದಕ್ಕೆ ಮತ್ತಿಷ್ಟು ತುಪ್ಪ ಸುರಿದು ಕಂದಕವನ್ನು ಜಾಸ್ತಿ ಮಾಡಬಹುದು. ರಾಮ ಮಂದಿರ ವಿವಾದ ಇನ್ನೂ ಕೂಡ ಮುಗಿಯಲಿಲ್ಲವಲ್ಲ ಎಂದು ಎಷ್ಟೋ ವೃದ್ಧ ಜೀವಗಳು ಬೇಸರಪಡಬಹುದು. ಎಷ್ಟೋ ಅಸಂಖ್ಯಾತ ಕರಸೇವಕರಲ್ಲಿ ಆಕ್ರೋಶದ ಜ್ವಾಲೆಯನ್ನು ಇದು ಉಂಟು ಮಾಡಬಹುದು. ರಾಷ್ಟ್ರೀಯವಾದಿ ಮುಸ್ಲಿಮರಲ್ಲಿ ಮತ್ತೆ ಆತಂಕವನ್ನು ಸೃಷ್ಟಿಸಬಹುದು. ಆದ್ದರಿಂದ ಬೋರ್ಡ್ ಗಳು ಯೋಚನೆ ಮಾಡದೇ ಕೆಲವೇ ಕೆಲವು ಜನರಿಗೆ ಖುಷಿಯಾಗುತ್ತೆ ಎನ್ನುವ ಕಾರಣಕ್ಕೆ ಅಸಂಬದ್ಧ ಹೇಳಿಕೆಯನ್ನು ನೀಡಬಾರದು.

ಇನ್ನು ಕಾಂಗ್ರೆಸ್ಸಿನವರು ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದು ರಾಜೀವ ಗಾಂಧಿ ಎಂದು ಹೇಳುತ್ತಿದ್ದಾರೆ. ಇವರಿಗೆ ಈಗ ಜೀವ ಬಂದಿದೆ. ಇಲ್ಲಿಯ ತನಕ ರಾಮ ಮಂದಿರದ ವಿರುದ್ಧವೇ ಇದ್ದ ಕಾಂಗ್ರೆಸ್ಸಿಗರಿಗೆ ಕಪಿಲ್ ಸಿಬಲ್ ಅಂತವರೇ ದೇವರಂತೆ ಕಾಣುತ್ತಿದ್ದರು. ಕಪಿಲ್ ಸಿಬಲ್ ಕಾಂಗ್ರೆಸ್ಸಿನ ಮಾಜಿ ಸಂಸದರು ಮತ್ತು ರಾಮಜನ್ಮಭೂಮಿ ಪ್ರಕರಣದಲ್ಲಿ ಹಿಂದೂಗಳ ವಿರುದ್ಧ ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು. ಹಿಂದೂಗಳಿಗೆ ಈ ಪ್ರಕರಣದಲ್ಲಿ ಜಯ ಸಿಗುವುದಿಲ್ಲ ಎಂದೇ ನಂಬಿದ್ದ ಕಾಂಗ್ರೆಸ್ಸಿಗೆ ತೀರ್ಪು ಬಂದಾಗ ಮರ್ಮಾಘಾತವಾಗಿರುವುದು ನಿಜ. ಆದ್ದರಿಂದ ಈಗ ಪೆಟ್ಟು ತಪ್ಪಿಸಲು ನಾವು ಕೂಡ ರಾಮ ಮಂದಿರದ ಪರ ಇದ್ದೇವೆ ಎಂದೇ ಹೇಳಿಕೆ ಕೊಡುತ್ತಿದ್ದಾರೆ. ರಾಮ ಮಂದಿರಕ್ಕೆ ಮೊದಲು ಶಿಲಾನ್ಯಾಸ ನೆರವೇರಿಸಿದ್ದೇ ರಾಜೀವ್ ಗಾಂಧಿ ಎನ್ನುವುದು ಈಗ ಕಾಂಗ್ರೆಸ್ಸಿಗರ ಬಾಯಿಂದ ಬರುವ ಮಾತುಗಳು. ರಾಜೀವ್ ಗಾಂಧಿಯವರು ಶಿಲಾನ್ಯಾಸ ನೆರವೇರಿಸಿದ್ದಲ್ಲ, ಜನಾಭಿಪ್ರಾಯ ಹೆಚ್ಚಾಗಿ ತಮ್ಮ ಮೇಲೆ ಒತ್ತಡ ಜಾಸ್ತಿಯಾದಾಗ ಅಯೋಧ್ಯೆಯಲ್ಲಿ ಬಾಗಿಲು ತೆರೆಸಿದ್ದು ಮಾತ್ರ ಅವರ ಸಾಧನೆ. ಒಂದು ವೇಳೆ ಕಾಂಗ್ರೆಸ್ ಆಗ ರಾಮ ಮಂದಿರದ ಪರವಾಗಿದ್ದರೆ ಇವರದ್ದೇ ಕಸಿನ್ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರಲ್ಲ ಆಗ ಶೂಟೌಟ್ ಮಾಡಬೇಡಿ ಎಂದು ಹೇಳಬಹುದಿತ್ತಲ್ಲ. ಪಿ.ವಿ.ನರಸಿಂಹ ರಾವ್ ಸರಕಾರ ಕೇಂದ್ರದಲ್ಲಿ ಇತ್ತು. ಅದು ರಾಮಭಕ್ತರ ವಿರುದ್ಧ ಖಡಕ್ ಕ್ರಮ ಕೈಗೊಂಡಿರಲಿಲ್ಲ ಎಂದು ನಂತರ ನರಸಿಂಹ ರಾವ್ ಅವರನ್ನು ಸೋನಿಯಾ ಗಾಂಧಿ ಹೇಗೆ ಮೂಲೆಗುಂಪು ಮಾಡಿದರು ಎಂದರೆ ನರಸಿಂಹ ರಾವ್ ಅವರನ್ನು ಮಾಜಿ ಪ್ರಧಾನಿ ಎಂಬ ಕಿಂಚಿತ್ ಗೌರವ ಕೂಡ ಕೊಡುತ್ತಿರಲಿಲ್ಲ. ನರಸಿಂಹ ರಾವ್ ನಿಧನದ ನಂತರ ಅವರಿಗೆ ದೆಹಲಿಯಲ್ಲಿ ಸಮಾಧಿ ಮಾಡಲು ಕೂಡ ಜಾಗ ಸಿಗದ ಹಾಗೆ ಕಾಂಗ್ರೆಸ್ ಮಾಡಿತ್ತು. ಇದು ನರಸಿಂಹ ರಾವ್ ರಾಮ ಭಕ್ತರ ಪರ ಸ್ವಲ್ಪ ಮೃಧು ಧೋರಣೆ ತಳೆದಿದ್ದರು ಎನ್ನುವ ಕೋಪವಲ್ಲದೇ ಮತ್ತೇನು? ಹೀಗಿರುವಾಗ ರಾಮ ಕಾಲ್ಪನಿಕ ವ್ಯಕ್ತಿ ಎನ್ನುತ್ತಿದ್ದ ಕಾಂಗ್ರೆಸ್ ಈಗ ಜನಸಮೂಹದ ಭಕ್ತಿಗೆ ವಿರುದ್ಧವಾಗಿ ಹೋದರೆ ಮುಂದಿನ ಬಾರಿ ಎರಡಂಕೆ ಕೂಡ ಬರುವುದಿಲ್ಲ ಎಂದು ತಿಳಿದು ರಾಮ ಎಲ್ಲ ಹಿಂದೂಗಳ ದೇವರು ಎನ್ನುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಹಿಂದೂಗಳ ಪರ ಇದ್ದರೆ ಮುಂದೆ ಕಾಶಿ, ಮಥುರಾದಲ್ಲಿ ಹಿಂದೂ ಭವ್ಯ ದೇವಾಲಯ ನಿರ್ಮಾಣವಾಗುವ ಹೋರಾಟ ನಡೆಯಲಿದೆಯಲ್ಲ ಆಗ ಹಿಂದೂಗಳ ಪರ ನಿಲ್ಲಲಿ. ಇನ್ನು ರಾಷ್ಟ್ರಪತಿಗಳು ದಲಿತರು ಎನ್ನುವ ಕಾರಣಕ್ಕೆ ಕರೆದಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡುತ್ತಿದೆ. ದೇಶದಲ್ಲಿ ಕೊರೊನಾ ಈ ರೀತಿ ತಾಂಡವ ಆಡದೇ ಇರುತ್ತಿದ್ದರೆ ಬಹುಶ: ಸೋನಿಯಾ ಅವರಿಗೂ ಆಹ್ವಾನ ನೀಡಬಹುದಿತ್ತು. ಆದರೆ ವಯಸ್ಸಿನ ಕಾರಣಗಳಿಂದ ಹಲವರನ್ನು ಕರೆಯಲಾಗಿಲ್ಲ. ಅದಕ್ಕೆ ಜಾತಿಯ ಲೇಪ ಬೇಕಾಗಿಲ್ಲ!

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Tulunadu News September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Tulunadu News September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search