• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅನಧಿಕೃತ ಹೋರ್ಡಿಂಗ್ಸ್ ಅಕ್ರಮದ ಹಿಂದೆ ಇರುವ “ಕೈ” ನಾಯಕ?

Tulunadu News Posted On August 26, 2020


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆ ಹಾಳಾಗಿ ಹೋದರೂ ಪರ್ವಾಗಿಲ್ಲ. ಅಧಿಕಾರದಲ್ಲಿ ಇದ್ದಷ್ಟು ಸಮಯ ನಮ್ಮ ಜೇಬು ತುಂಬುತ್ತಾ ಇರಬೇಕು. ಈ ಜನ್ಮದಲ್ಲಿ ಸರಕಾರಿ ಉದ್ಯೋಗ ಸಿಕ್ಕಿದ್ದೆ ಲಂಚದ ಹಣ ತಿನ್ನಲಿಕ್ಕೆ ಎಂದು ಮನಪಾ ಅಧಿಕಾರಿಗಳು ನಿರ್ಧರಿಸಿ ಆಗಿರುವುದರಿಂದ ಅವರ ಕೃಪಾಕಟಾಕ್ಷದ ಡಿಜಿಟಲ್ ಪ್ರಿಂಟಿಂಗ್ ನವರು ಮತ್ತು ಜಾಹೀರಾತು ಏಜೆನ್ಸಿಯವರು ಆರಾಮವಾಗಿದ್ದಾರೆ. ಇವರ ನಡುವೆಯೂ ಒಂದಿಬ್ಬರು ಒಳ್ಳೆಯ ಅಧಿಕಾರಿಗಳು ಈ ಹಿಂದೆ ಇದ್ದ ಕಾರಣ ಮನಪಾ ವ್ಯಾಪ್ತಿಯಲ್ಲಿ 180 ಅಕ್ರಮ ಹೋರ್ಡಿಂಗ್ಸ್ ಇರುವ ವರದಿ ಬೆಳಕಿಗೆ ಬಂದಿತ್ತು. ಬೆಳಕಿಗೆ ಬಂದರೆ ಏನೂ ಪ್ರಯೋಜನ, ಅದಕ್ಕೆ ಏನಾದರೂ ವಿಲೇವಾರಿ ಮಾಡಬೇಕಾದವರು, ಆ ವರದಿಯ ಮೇಲೆ ಬಟ್ಟೆ ಹಾಕಿ ಅದನ್ನು ಮುಚ್ಚಿಬಿಟ್ಟರೆ ವರದಿಯ ಫೈಲ್ ಎನು ನಡೆದುಕೊಂಡು ಹೋಗಿ ಹೋರ್ಡಿಂಗ್ಸ್ ಅನ್ನು ಅಡ್ಡ ಬೀಳಿಸಲು ಆಗುತ್ತಾ?

ನಾನೇನು ಅಕ್ರಮ ಹೋರ್ಡಿಂಗ್ಸ್ ಕಿತ್ತಾಕಿ ಎಂದು ನೇರವಾಗಿ ಹೇಳಲು ಬಯಸುವುದಿಲ್ಲ. ಅಕ್ರಮ ಹೋರ್ಡಿಂಗ್ಸ್ ಸಕ್ರಮಗೊಳಿಸಲು ಸಾಧ್ಯವಿದೆ. ಅದರಿಂದ ಮನಪಾಕ್ಕೆ ಒಂದಿಷ್ಟು ಕೋಟಿ ಆದಾಯ ತಂದುಕೊಳ್ಳಬಹುದು. ಅದು ಹೇಗೆ ಎಂದು ವಿವರವಾಗಿ ಮುಂದೆ ಹೇಳ್ತಿನಿ. ನನ್ನ ಬೇಸರ ಇರುವುದು ಕಂದಾಯ ವಿಭಾಗದ ರೆವಿನ್ಸೂ ಇನ್ಸ್ ಪೆಕ್ಟರ್ಸ್ , ಬಿಲ್ ಕಲೆಕ್ಟರ್ಸ್ ಕೊಟ್ಟ ವರದಿಯನ್ನೇ ಸರಕಾರದ ಸಚಿವರು ಮುಚ್ಚಿ ಹಾಕುತ್ತಾರೆ ಎಂದರೆ ಇದಕ್ಕಿಂತ ಅಸಹ್ಯ ಬೇರೆ ಏನಿದೆ?ಈ ವರದಿ ಬಂದಾಗ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ ಸೊರಕೆ ಅವರಿಗೆ ಅಕ್ರಮ ಹೋರ್ಡಿಂಗ್ಸ್ ನವರ ಮೇಲೆ ಕ್ರಮ ಕೈಗೊಳ್ಳಲು ಹೆದರಿಕೆ ಎಂದು ನಾನು ಅಂದುಕೊಳ್ಳಬೇಕಾಗಿದೆ. ಒಂದಾ ಹೆದರಿಕೆ ಅಥವಾ ಅವರಿಗೂ ಈ ಅಕ್ರಮದಲ್ಲಿ ಪಾಲಿದೆಯ ಎಂದು ಅಲೋಚಿಸಿದೆ.
ಹಿಂದಿನ ಬಾರಿ ಮನಪಾ ಪರಿಷತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಾನು ಈ ವಿಷಯವನ್ನು ಮಾಜಿ ಸಚಿವ ವಿನಯ ಕುಮಾರ ಸೊರಕೆಯವರ ಮುಂದಿಟ್ಟಿದೆ. ನಗರಾಭಿವೃದ್ಧಿ ಸಚಿವರೇ, ಇದು ನಿಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಷಯ. 180 ಅಕ್ರಮ ಹೋರ್ಡಿಂಗ್ಸ್ ಖಾಸಗಿ ಮತ್ತು ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿಲ್ಲಿಸಲಾಗಿದೆ. ಇದಕ್ಕೆ ನೀವು ಏನು ಕ್ರಮ ಕೈಗೊಳ್ಳುತ್ತಿರಿ ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕೆ ಅವರು ಈ ಬಗ್ಗೆ ಮೂರು ತಿಂಗಳೊಳಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಅದೇ ಸೊರಕೆಯವರು ನಂತರ ವಿಧಾನಪರಿಷತ್ ನಲ್ಲಿ ಉಲ್ಟಾ ಹೊಡೆದಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಅಕ್ರಮ ಹೋರ್ಡಿಂಗ್ಸ್ ಬಗ್ಗೆ ಪ್ರಶ್ನೆ ಕೇಳಿದಾಗ ಮನಪಾ ವ್ಯಾಪ್ತಿಯಲ್ಲಿ ಕೇವಲ 15 ಅಕ್ರಮ ಹೋರ್ಡಿಂಗ್ಸ್ ಇದೆ ಎಂದು ಲಿಖಿತ ಉತ್ತರ ನೀಡಿದ್ದಾರೆ. ಭಲೇ ಸೊರಕೆಯವರೇ, ನಿಮ್ಮಿಂದ ಇಂತಹ ಉತ್ತರ ನಮ್ಮ ಜನ ನಿರೀಕ್ಷಿಸಿರಲಿಲ್ಲ. ಎಂತಹ ಹಸಿ ಹಸಿ ಸುಳ್ಳು. ಒಂದು ವೇಳೆ ನಿಮಗೆ ನಿಜವಾಗಿಯೂ ಗೊತ್ತಿಲ್ಲ ಎಂದರೆ ನಿಮಗೆ ಆ ಅಪ್ಪಟ ಸುಳ್ಳಿನ ಲೆಕ್ಕ ಕೊಟ್ಟವರ್ಯಾರು ಅವರ ಜಾತಕವನ್ನಾದರೂ ಬಿಡಿಸಬಹುದಿತ್ತು. ಇಲ್ಲದಿದ್ದರೆ ನಿಮಗೆ ಆ ಲೆಕ್ಕ ಕೊಟ್ಟ ಅಧಿಕಾರಿಯೊಂದಿಗೆ ನಾನು, ನೀವು ಸೇರಿಕೊಂಡು ಮನಪಾ ವ್ಯಾಪ್ತಿಯಲ್ಲಿ ಒಮ್ಮೆ ಸುತ್ತಾಡಿ ಬರೋಣ. ನಿಮಗೆ ನಾನು ಎಲ್ಲೆಲ್ಲಿ ಅಕ್ರಮ ಹೋರ್ಡಿಂಗ್ಸ್ ಇವರು ಹಾಕಿದ್ದಾರೆ ಎಂದು ತೋರಿಸುತ್ತಿದೆ ನನ್ನ ಒಂದು ದಿನ ವ್ಯರ್ಥವಾದರೂ ಪರವಾಗಿಲ್ಲ. ಪಾಲಿಕೆಗೆ ಒಂದಿಷ್ಟು ಕೋಟಿ ಆದಾಯ ಬರುವುದಾದರೆ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನಾನು ರೆಡಿಯಾಗಿದ್ದೆ ಪಾಲಿಕೆಯ ಅಧಿಕಾರಿಗಳು ಸಾಮಾನ್ಯ ಜನರ ಕಿವಿಯ ಮೇಲೆ ಹೂ ಇಡುತ್ತಾ ಬರುತ್ತಿರುವುದು ವಿಶೇಷವೇನಲ್ಲ. ಆದರೆ ಸೊರಕೆಯವರು ತನ್ನ ಕಿವಿಯ ಮೇಲೂ ಹೂವಿನ ಕುಂಡವನ್ನೆ ಇಡಲು ಬಿಟ್ಟಿರಲ್ಲ ಅದು ನನಗೆ ಅಸಹ್ಯವಾಗಿತ್ತು. ರಾಜಕೀಯದ ಅಷ್ಟೂ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡಿರುವ ನೀವು ಬರಿ ಹದಿನೈದೇ ಅನಧಿಕ್ರತ ಹೋರ್ಡಿಂಗ್ಸ್ ಇರುವುದು ಎನ್ನುವುದನ್ನು ಕಣ್ಣು ಮುಚ್ಚಿ ನಂಬುತ್ತಿರಾದರೆ ನಿಮಗೆ ನಗರಾಭಿವೃದ್ಧಿಯ ವಿಷಯದಲ್ಲಿ ಮಂಗ ಮಾಡಲು ಅಧಿಕಾರಿಗಳಿಗೆ ಸುಲಭ ಎನ್ನುವುದು ಸಾಬೀತಾಗಿ ಹೋಗಿತ್ತು. ಭವಿಷ್ಯದಲ್ಲಿ ಅಧಿಕಾರಿಗಳು ಕೊಡುವ ಸುಳ್ಳು ಲೆಕ್ಕವನ್ನು ನೀವು ಕಣ್ಣು, ಕಿವಿ, ಬಾಯಿ ಮುಚ್ಚಿ ಒಪ್ಪಿಕೊಂಡರೆ ನಗರಾಭಿವೃದ್ಧಿ ಇಲಾಖೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅಧಿಕಾರಿಗಳು ಯಾರಿಗಾದರೂ ಮಾರಿ ಹೊರಟು ಹೋಗುತ್ತಾರೆ. ಅವರಿಗೇನೂ ಜನರ ಹಂಗಿದೆಯಾ? ಸರಕಾರಿ ಇಲಾಖೆಗಳಲ್ಲಿ ಅಂತಹ ಅಧಿಕಾರಿಗಳು ಹೆಚ್ಚು ಇದ್ದ ಕಾರಣ ಭಾರತದ ಪರಿಸ್ಥಿತಿ ಇನ್ನೂ ಕೂಡ ಹೀಗೆ ಇದೆ. ಆದರೆ ನಾನು ಒಂದು ಮಾತು ಹೇಳ್ತಿನಿ, ಸೊರಕೆಯವರೇ, ನೀವು ಬುದ್ಧಿವಂತರು. ನಿಮಗೆ ಸಣ್ಣ ಸುಳಿವು ಕೂಡ ಅರ್ಥವಾಗುತ್ತದೆ ಎಂದು ಅಂದುಕೊಂಡಿದ್ದೇನೆ. ಅಕ್ರಮ ಹೋರ್ಡಿಂಗ್ಸ್ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸುಳ್ಳು ಲೆಕ್ಕ ಕೊಡಲು ನಿಮ್ಮದೇ “ಕೈ” ಮುಖಂಡರೊಬ್ಬರು ಸಾಕಷ್ಟು ಪ್ರಭಾವ ಬೀರಿದ್ದಾರೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. 180 ರಿಂದ 15 ಕ್ಕೆ ಅಕ್ರಮ ಹೋರ್ಡಿಂಗ್ಸ್ ಲೆಕ್ಕ ಇಳಿಸಲು ಆ “ಕೈ” ನಾಯಕರು ನಿಮ್ಮ ಮೇಲೆ ಕೂಡ ಒತ್ತಡ ತಂದಿರಬಹುದು. ನೀವು ಅವರೊಂದಿಗೆ ಮಾತನಾಡಿ ಪಾಲಿಕೆಗೆ ಆದ ನಷ್ಟವನ್ನು ತುಂಬಿಸಿಕೊಟ್ಟು ಆ ಅನಧಿಕ್ರತ ಹೋರ್ಡಿಂಗ್ ಗಳನ್ನು ಅಧಿಕ್ರತಗೊಳಿಸಬಹುದಿತ್ತು . ಇದರ ನಂತರ ಬಂದ ನಿಮ್ಮ ಕಾಂಗ್ರೆಸ್ ಪಕ್ಷದ ಇಬ್ಬರು ಸಚಿವರು ಏನೂ ಮಾಡಲಿಲ್ಲ. ಇತ್ತೀಚೆಗೆ ತರಾತುರಿಯಲ್ಲಿ 180 ರಲ್ಲಿ 150 ಹೋರ್ಡಿಂಗ್ಸ್ ಅನ್ನು ಪಾಲಿಕೆಯ ಅಂದರೆ ಸರಕಾರಿ ಜಾಗದಲ್ಲಿದ್ದರೂ ಅದು ಖಾಸಗಿ ಜಾಗ ಎಂದು ತೋರಿಸಿ ಸಕ್ರಮ ಮಾಡಿಕೊಳ್ಳಲಾಗಿದೆ. ಅಷ್ಟಕ್ಕೂ ಯಾವ ಹೋರ್ಡಿಂಗ್ಸ್ ಅಕ್ರಮ ಮತ್ತು ಅದನ್ನು ಸಕ್ರಮ ಮಾಡಿ ಪಾಲಿಕೆಗೆ ಕೋಟಿಗಟ್ಟಲೆ ಆದಾಯ ತರುವುದು ಹೇಗೆ? ಜನರಿಗೆ ನಾನು ತಿಳಿಸಬೇಕು. ಯಾಕೆಂದರೆ ಮುಂದಿನ ಬಾರಿ ಯಾವುದಾದರೂ ಹೋರ್ಡಿಂಗ್ಸ್ ನೋಡುವಾಗ ಅದರಲ್ಲಿರುವ ಬಿಳಿ ಜಾಹೀರಾತಿಗಿಂತ ಅದರ ಹಿಂದೆ ಇರುವ ಕಪ್ಪು ಮುಖಗಳನ್ನು ಒಮ್ಮೆನೀವು ಜ್ಞಾಪಿಸಿಕೊಳ್ಳಬಹುದು..

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search