• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಡಿಕೆಶಿ ಮೇಲೆ ಸಿಬಿಐ ರೇಡ್ ಆಗಲು ಪಾಪ ಯಡಿಯೂರಪ್ಪನವರ ಕೈವಾಡ ಇಲ್ಲ!!

Tulunadu News Posted On October 6, 2020
0


0
Shares
  • Share On Facebook
  • Tweet It

ಪ್ರತಿ ಬಾರಿ ನಮ್ಮ ಪಕ್ಷದವರೇ ಯಾಕೆ? ಅದರಲ್ಲಿಯೂ ಡಿಕೆ ಶಿವಕುಮಾರ್ ಅವರೇ ಯಾಕೆ? ಭಾರತೀಯ ಜನತಾ ಪಾರ್ಟಿಯಲ್ಲಿ ಯಾರೂ ಅಕ್ರಮ ಹಣ ಮಾಡಿಲ್ವಾ ಎಂದು ಇವತ್ತು ಕಾಂಗ್ರೆಸ್ಸಿನ ಕಾರ್ಯಕರ್ತರು ಬೀದಿಯಲ್ಲಿ ನಿಂತು ಕೇಳುತ್ತಿದ್ದಾರೆ. ಅವರು ಕೇಳುತ್ತಿರುವುದು ಸಿಬಿಐ ದಾಳಿಯ ಬಗ್ಗೆ. ಸಾಮಾನ್ಯವಾಗಿ ಒಂದು ಪಕ್ಷದ ರಾಜ್ಯಾಧ್ಯಕ್ಷರ ಮೇಲೆ ಆಡಳಿತ ಪಕ್ಷದ ಸರಕಾರ ಈ ಪರಿ ಮುಗಿಬೀಳುವುದಿಲ್ಲ. ಹಾಗಂತ ಯಡಿಯೂರಪ್ಪನವರು ತಮ್ಮ ಮನೆಯಲ್ಲಿ ಕುಳಿತು ಹಟಕ್ಕೆ ಬಿದ್ದವರಂತೆ ಡಿಕೆಶಿಯವರನ್ನು ಸಿಬಿಐ ಖೆಡ್ಡಾಕ್ಕೆ ಬೀಳಿಸುತ್ತಿದ್ದಾರೆ ಎಂದು ಭಾವಿಸಬೇಡಿ. ಅಸಲಿಗೆ ಯಡಿಯೂರಪ್ಪನವರನ್ನೇ ಯಾರಾದರೂ ಅವರದ್ದೇ ಪಕ್ಷದ ಮುಖಂಡರು ಗುಟ್ಟಾಗಿ ಕೇಳಿದರೆ ” ರೀ, ಡಿಕೆಶಿಯನ್ನು ಹೀಗೆ ಸಿಬಿಐ, ಈಡಿ, ಐಟಿಯವರು ಕೆಣಕುತ್ತಾ ಹೋದಷ್ಟು ಆ ಮನುಷ್ಯ ನಮ್ಮ ಮೇಲೆ ಇನ್ನಷ್ಟು ಹೆಚ್ಚು ಪ್ರತಿಭಟನೆ ಮಾಡುತ್ತಾನೆ. ಅವನನ್ನು ತುಂಬಾ ಚೆನ್ನಾಗಿ ಇಟ್ಕೊಂಡಿದ್ದೆ. ಕನಿಷ್ಟ ನನ್ನ ಮಕ್ಕಳ ವಿಷಯಕ್ಕಾದರೂ ಬರಬೇಡಪ್ಪ ಎಂದಿದ್ದೆ. ಆದರೆ ದೆಹಲಿ ನಾಯಕರು ಹಟಕ್ಕೆ ಬಿದ್ದು ಡಿಕೆಶಿಗೆ ಖೆಡ್ಡಾ ತೋಡುತ್ತಿದ್ದಾರೆ. ಇದರಿಂದ ಕಷ್ಟ ನನಗಲ್ವಾ” ಎಂದು ಯಡಿಯೂರಪ್ಪನವರು ಹೇಳುತ್ತಿದ್ದರೋ ಏನೋ. ಈಗ ಕಾಂಗ್ರೆಸ್ಸಿನವರು ಏನೇ ಪ್ರತಿಭಟನೆ ಮಾಡಲಿ, ಅವರು ಪಾಪ ಯಡಿಯೂರಪ್ಪನವರನ್ನು ಟಾರ್ಗೆಟ್ ಮಾಡಬಾರದು. ಇದರಲ್ಲಿ ಅವರ ತಪ್ಪು ಏನೂ ಇಲ್ಲ. ಡಿಕೆಶಿ ಆವತ್ತು ಗುಜರಾತಿನಲ್ಲಿ ರಾತ್ರಿ ಹಗಲು ಒಂದು ಮಾಡಿ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಗೆಲ್ಲಿಸಿಕೊಂಡು ಬಂದರಲ್ಲ. ಅದರ ನಂತರ ಅಮಿತ್ ಶಾ ಗಾಯಗೊಂಡ ಹುಲಿ ತರಹ ಆಗಿ ಹೋಗಿದ್ದಾರೆ. ಅವರಿಗೆ ತಮ್ಮದೇ ಯುದ್ಧಭೂಮಿಯಲ್ಲಿ ಹೊರರಾಜ್ಯದ ದಂಡನಾಯಕನೊಬ್ಬ ಬಂದು ವಿಜಯದ ಪತಾಕೆ ಹಾರಿಸಿದ್ದು ಇವತ್ತಿಗೂ ಮರೆಯಲು ಆಗಲ್ಲ. ಒಂದು ವೇಳೆ ಮರೆತರೂ ಅಹ್ಮದ್ ಪಟೇಲ್ ರಾಜ್ಯಸಭೆಯಲ್ಲಿ ಕುಳಿತದ್ದು ನೋಡಿದಾಗ ಅಮಿತ್ ಶಾಗೆ ಡಿಕೆಶಿ ನೆನಪಾಗುತ್ತಾರೆ. ಆವತ್ತು ಡಿಕೆಶಿ ತನ್ನ ಅಷ್ಟೂ ಹಣ, ಧನವನ್ನು ಪಣಕ್ಕೆ ಇಟ್ಟು ಗುಜರಾತಿಗಳನ್ನು ಕೆಣಕಿ ಬಿಟ್ಟಿದ್ದರು. ನಿನ್ನಲ್ಲಿ ಭಾರಿ ಹಣ ಇದೆಯಲ್ಲ, ಆ ಅಹಂಕಾರವನ್ನು ಇಳಿಸುತ್ತೇವೆ, ನೋಡ್ತಾ ಇರು ಎಂದು ದೆಹಲಿ ಬಿಜೆಪಿ ನಾಯಕರು ಶಪಥ ಹಾಕಿದ್ರಾ? ಡಿಕೆಶಿಯಂತೂ ಅಹ್ಮದ್ ಪಟೇಲ್ ಗೆದ್ದ ನಂತರ ನಿದ್ರೆ ಮಾಡುವುದನ್ನೇ ಮರೆತುಬಿಡುವ ಪರಿಸ್ಥಿತಿ ಬಂದಿದೆ.
ಆದರೆ ಇದನ್ನು ಬಾಯಿಬಿಟ್ಟು ಯಾವುದೇ ಬಿಜೆಪಿ ಮುಖಂಡರು ಹೇಳುವ ಸ್ಥಿತಿಯಲ್ಲಿ ಇಲ್ಲ. ಸಿಬಿಐ ಸ್ವಾಯತ್ತ ಸಂಸ್ಥೆ, ಅವರು ಅವರ ಪಾಡಿಗೆ ಕೆಲಸ ಮಾಡುತ್ತಲೇ ಇರುತ್ತಾರೆ. ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಬಿಜೆಪಿ ಮುಖಂಡರು ಎದುರಿಗೆ ಹೇಳಿದ್ದನ್ನೇ ಗಟ್ಟಿ ಹಿಡಿದುಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗಾದರೆ ಸಿಎಂ ಮಗನ ವಿರುದ್ಧ ಯಾಕೆ ತನಿಖೆ ಆಗಲ್ಲ ಎನ್ನುತ್ತಿದ್ದಾರೆ. ಇಲ್ಲಿ ವಿಷಯ ಏನೆಂದರೆ ಟಿವಿ ಮಾಧ್ಯಮವೊಂದು ಸಿಎಂ ಮಗನ ವಿರುದ್ಧ ಸಮರ ಸಾರಿರಬಹುದು. ಅದನ್ನೇ ಎತ್ತಿ ಕಾಂಗ್ರೆಸ್ ಸದನದಲ್ಲಿ ಮಾತನಾಡಿರಬಹುದು. ಹೊರಗೆ ಸುದ್ದಿಗೋಷ್ಟಿ ಮಾಡಿರಬಹುದು. ಆದರೆ ತಾವು ಅಷ್ಟು ಮಾಡಿರುವುದರಿಂದ ತನಿಖೆಯಾಗಲಿ ಎಂದು ಬಯಸುವುದು ತಪ್ಪು. ನಿಜಕ್ಕೂ ಕಾಂಗ್ರೆಸ್ಸಿಗರಿಗೆ ಆ ಪ್ರಕರಣದಲ್ಲಿ ಆಸಕ್ತಿ ಇದ್ದರೆ ಕೇಂದ್ರದ ಮುಖಂಡರಿಂದ ದೆಹಲಿಯಲ್ಲಿ ಸುದ್ದಿಗೋಷ್ಟಿ ಮಾಡಿಸಲಿ. ಸುರ್ಜೇವಾಲ ಅಂತವರು ಐಟಿ, ಈಡಿ ತನಿಖೆಗೆ ಒತ್ತಾಯಿಸಲಿ. ಆದರೆ ಅಷ್ಟು ಮಾಡುವ ಮೊದಲು ಕಾಂಗ್ರೆಸ್ ಸೂಕ್ತ ದಾಖಲೆಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ಇನ್ನೊಂದು ಮುಖಭಂಗವಾದೀತು. ಆದರೆ ಯಾವುದೇ ಅಧ್ಯಯನ ಇಲ್ಲದೆ, ಸಿಬಿಐ ಸಿಎಂ ಮಗನ ವಿಷಯದಲ್ಲಿ ತನಿಖೆ ಮಾಡಲಿ, ದಾಳಿ ಮಾಡಲಿ ಎಂದು ನಿರೀಕ್ಷೆ ಮಾಡುವುದು ಮೂರ್ಖತನವಾದಿತು. ಇನ್ನು ಕೊರೊನಾ ಪರಿಹಾರ ಕಾರ್ಯದಲ್ಲಿ ರಾಜ್ಯ ಸರಕಾರ ಹಣ ಹೊಡೆದಿದೆ ಎಂದು ಕಾಂಗ್ರೆಸ್ ಹೇಳುವುದಾದರೆ ಸೂಕ್ತ ಸಮಯ ಬಂದಾಗ ಅದನ್ನು ದಾಖಲೆಯೊಂದಿಗೆ ಜನರ ಮುಂದೆ ಇಡಲಿ. ಅದ್ಯಾವುದೂ ಮಾಡದೇ ಡಿಕೆಶಿ ಮನೆಗಳಿಗೆ ರೇಡ್ ಆಯಿತು ಎಂದ ಕೂಡಲೇ ಬಿಜೆಪಿ ಮುಖಂಡರ ಮನೆ ಮೇಲೆಯೂ ದಾಳಿ ಆಗಲಿ ಎಂದು ಅಂದುಕೊಳ್ಳುವುದು ಚೆಸ್ ಆಡಿದಂತೆ ಅಲ್ಲ ಎಂದು ಗೊತ್ತಿರಲಿ.
ಇನ್ನು ಲಾಕ್ ಡೌನ್ ನಂತರ ರಾಜ್ಯದಲ್ಲಿ ಮೊದಲ ಸಿಬಿಐ ದಾಳಿ ಮಾಡಿದ್ದು ರಾಜಕೀಯ ದ್ವೇಷಕ್ಕೆ ಎಂದು ಕಾಂಗ್ರೆಸ್ಸಿಗರು ಬೊಬ್ಬೆ ಹೊಡೆಯುತ್ತಿದ್ದಾರೆ. ಲಾಕ್ ಡೌನ್ ಗೂ ಸಿಬಿಐ ದಾಳಿಗೂ ಸಂಬಂಧ ಇಲ್ಲ. ಸಿಬಿಐ ಸಾಕಷ್ಟು ಮಾಹಿತಿ ಸಂಗ್ರಹಿಸಿದ ನಂತರ ಒಂದು ಬೆಳ್ಳಂಬೆಳಗೆ ದಾಳಿಯನ್ನು ಮಾಡಿಬಿಡುತ್ತದೆ. ಆದರೆ ಕೊರೊನಾ ಕಾಯಿಲೆ ಕರ್ನಾಟಕದಲ್ಲಿ ತೀವ್ರಗತಿಯಲ್ಲಿ ಏರುತ್ತಿದೆ ಎಂದು ಗೊತ್ತಿದ್ದೂ ಕಾಂಗ್ರೆಸ್ಸಿಗರು ಮುಖಕ್ಕೆ ಮಾಸ್ಕ್ ಹಾಕದೇ ಪ್ರತಿಭಟನೆಗೆ ಇಳಿದುಬಿಟ್ಟರು. ವಿಡಿಯೋ, ಫೋಟೋದಲ್ಲಿ ಮುಖ ಸರಿ ಬರಲ್ಲ ಎಂದು ಅಂದುಕೊಂಡು ಮಾಸ್ಕ್ ಕುತ್ತಿಗೆಗೆ ಎಳೆದು ಪ್ರತಿಭಟನೆ ಮಾಡಿದರಲ್ಲ. ಅವರಿಗೆ ಎಷ್ಟು ರೂಪಾಯಿ ದಂಡ ಹಾಕುತ್ತಿರಿ ಪಾಲಿಕೆಯವರೇ? ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದವರು ಮಾಸ್ಕ್ ಹಾಕದೇ ಇದ್ದದ್ದಕ್ಕೆ ಟಿವಿಯವರು ವಿಡಿಯೋ ಹಾಕಿ ತೋರಿಸುತ್ತಿದ್ದೀರಲ್ಲ. ಇಲ್ಲಿ ಪ್ರತಿಭಟನೆಯ ವಿಡಿಯೋ ಪೊಲೀಸರ ಬಳಿಯಲ್ಲಿಯೂ ಇದೆ. ಎಲ್ಲಾ ನಾಯಕರ ಮನೆಗೂ ದಂಡದ ನೋಟಿಸು ಕಳಿಸಿ. ನಂತರ ಹಣ ಕಕ್ಕಿಸಿ!
0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Tulunadu News January 10, 2026
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Tulunadu News January 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
  • Popular Posts

    • 1
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 2
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 3
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 4
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search