• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮದನ್ ಮೋಹನ್ ಎತ್ತಂಗಡಿಯಾಗಿ ರವಿಚಂದ್ರ ನಾಯಕ್ ಆ ಸ್ಥಾನಕ್ಕೆ ಬಂದದ್ದಕ್ಕೆ ಕಾರಣ ಇಲ್ಲಿದೆ!!

Tulunadu News Posted On October 17, 2020
0


0
Shares
  • Share On Facebook
  • Tweet It

ಮಂಗಳೂರು ಸಹಾಯಕ ಆಯುಕ್ತರಾಗಿದ್ದ ಮದನ್ ಮೋಹನ್ ಅವರು ಯಾವುದೋ ಕೆಲವು ರೇಡ್ ಮಾಡಿದ್ದ ಕಾರಣಕ್ಕೆ ಅವರು ರಾಜಕೀಯ ಒತ್ತಡದಿಂದ ಎತ್ತಂಗಡಿಯಾಗಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಹಾಗೆ ಕೆಲವು ಗ್ರೂಪುಗಳಲ್ಲಿ ಚರ್ಚೆ ಕೂಡ ಆಗುತ್ತಿದೆ. ಅಷ್ಟಕ್ಕೂ ನಡೆದದ್ದು ಏನು ಎನ್ನುವುದನ್ನು ಇವತ್ತಿನ ಜಾಗೃತ ಅಂಕಣದಲ್ಲಿ ಬರೆಯುತ್ತಿದ್ದೇನೆ. ನಾನು ಬರೆಯುತ್ತಿರುವುದಕ್ಕೆ ನನ್ನ ಬಳಿ ದಾಖಲೆ ಕೂಡ ಇದೆ. ಅಷ್ಟಕ್ಕೂ ಈಗ ಮದನ್ ಮೋಹನ್ ಅವರ ಸ್ಥಾನಕ್ಕೆ ಬಂದಿರುವ ರವಿಚಂದ್ರ ನಾಯಕ್ ಈ ಹುದ್ದೆಗೆ ಹೊಸದಾಗಿ ಬಂದದ್ದೇ ಅಲ್ಲ. ಮದನ್ ಮೋಹನ್ ಈ ಅಧಿಕಾರ ಸ್ವೀಕರಿಸುವ ಮೊದಲು ಈ ಹುದ್ದೆಯಲ್ಲಿ ರವಿಚಂದ್ರ ನಾಯಕ್ ಅವರೇ ಇದ್ದರು. ಆದರೆ ಈ ವರ್ಷದ ಜನವರಿಯಲ್ಲಿ ರಾಜ್ಯ ಸರಕಾರ ಅಚಾನಕ್ ಆಗಿ ರವಿಚಂದ್ರ ನಾಯಕ್ ಅವರನ್ನು ತೆಗೆದು ಅವರ ಜಾಗಕ್ಕೆ ಮದನ್ ಮೋಹನ್ ಅವರನ್ನು ಕರೆ ತಂದಿತ್ತು. ಆಗ ರವಿಚಂದ್ರ ನಾಯಕ್ ತಮ್ಮ ಸ್ಥಾನಕ್ಕೆ ಬಂದು ಏಳು ತಿಂಗಳೂ ಮುಗಿದಿರಲಿಲ್ಲ. ತಮ್ಮ ಅಚಾನಕ್ ವರ್ಗಾವಣೆಗೆ ಕಾರಣಗಳೇನು ಎಂದು ರವಿಚಂದ್ರ ನಾಯಕ್ ಅವರಿಗೆ ಗೊತ್ತಾಗಲೇ ಇಲ್ಲ. ತಮ್ಮ ಸ್ಥಾನ ತೆರವು ಮಾಡಿದ್ದಕ್ಕೆ ರವಿಚಂದ್ರ ನಾಯಕ್ ಅಸಮಾಧಾನಗೊಂಡಿದ್ದರು. ಇಂತಹ ಸಂದರ್ಭದಲ್ಲಿ ತಮ್ಮ ಕೂಗನ್ನು ಹೇಳಿಕೊಳ್ಳಲು ಸರಕಾರಿ ಅಧಿಕಾರಿಗಳಿಗೆ ಒಂದು ವ್ಯವಸ್ಥೆ ಇದೆ. ಅದನ್ನು ಕೆಎಟಿ ಎನ್ನುತ್ತಾರೆ. ಕರ್ನಾಟಕ ಅಡಿಮಿನಿಸ್ಟ್ರೇಶನ್ ಟ್ರಿಬ್ಯೂನಲ್. ಅಲ್ಲಿ ವಿಚಾರಣೆ, ತನಿಖೆ ಎಲ್ಲ ಆಗಿ ಅಧಿಕಾರಿಯನ್ನು ವಿನಾಕಾರಣ ವರ್ಗಾವಣೆ ಮಾಡಿದ್ದು ಹೌದೆಂದು ಕೆಎಟಿಯವರಿಗೆ ಕಂಡರೆ ಅವರು ಆ ಅಧಿಕಾರಿಯ ವಿಷಯದಲ್ಲಿ ಸರಕಾರ ನಡೆದುಕೊಂಡದ್ದು ಸರಿಯಲ್ಲ ಎಂದು ತೀರ್ಪು ನೀಡುತ್ತಾರೆ. ರವಿಚಂದ್ರ ನಾಯಕ್ ಅವರ ಪ್ರಕರಣದಲ್ಲಿಯೂ ಅದೇ ಆಯಿತು. ಅವರ ವಿರುದ್ಧ ಯಾವುದೇ ದೂರುಗಳಿರಲಿಲ್ಲ. ಏಳು ತಿಂಗಳೊಳಗೆ ವರ್ಗಾವಣೆ ಮಾಡುವುದಕ್ಕೆ ಕಾರಣಗಳೂ ಇರಲಿಲ್ಲ.
ಕೆಎಟಿಯಲ್ಲಿ ಗೆದ್ದ ರವಿಚಂದ್ರ ನಾಯಕ್ ಅವರು ಆ ತೀರ್ಪಿನ ಲಿಖಿತ ಪ್ರತಿಯನ್ನು ತೆಗೆದುಕೊಂಡು ಆಗಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಎದುರಿಗೆ ನಿಂತರು. ಆದರೆ ಸಿಂಧೂ ರೂಪೇಶ್ ಏನೂ ಮಾಡುವಂತಿರಲಿಲ್ಲ. ಯಾಕೆಂದರೆ ಇದು ಜಿಲ್ಲಾಧಿಕಾರಿಯೊಬ್ಬರ ವ್ಯಾಪ್ತಿಗೆ ಬರುವುದಿಲ್ಲ. ಸರಕಾರ ಒಬ್ಬ ಅಧಿಕಾರಿಯನ್ನು ಒಂದು ಕಡೆಯಿಂದ ಕಿತ್ತು ಮತ್ತೊಂದು ಮೂಲೆಗೆ ಬಿಸಾಡಿದರೆ ಕೆಎಟಿ ಅದು ಸರಿಯಲ್ಲ ಎಂದು ಹೇಳಿ ಚಾಟಿ ಬೀಸಿದರೂ ತಾನು ಮಾಡಿದ ತಪ್ಪನ್ನು ಸರಕಾರವೇ ಒಪ್ಪಿ ಮತ್ತೆ ಅದನ್ನು ಸರಿ ಮಾಡಬೇಕು. ಕೆಎಟಿಯಲ್ಲಿ ಗೆದ್ದ ಕೂಡಲೇ ಜಿಲ್ಲಾಧಿಕಾರಿ ಆ ಅಧಿಕಾರಿಯನ್ನು ಮತ್ತೆ ಅದೇ ಸ್ಥಾನಕ್ಕೆ ಹೋಗಿ ಕೆಲಸ ಮಾಡಿ ಎಂದು ಹೇಳಲು ಆಗಲಿಲ್ಲ. ಹೇಳಬೇಕಾದದ್ದು ಸರಕಾರ. ಆದರೆ ಸರಕಾರ ಇಲ್ಲಿ ಮಾಡಲಿಲ್ಲ. ಅದರಿಂದ ಬೇಸತ್ತ ರವಿಚಂದ್ರ ನಾಯಕ್ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಅಲ್ಲಿಯೂ ರವಿಚಂದ್ರ ನಾಯಕ್ ಅವರಿಗೆ ಗೆಲುವಾಯಿತು. ಇದನ್ನು ಪ್ರಶ್ನಿಸಿ ಮದನ್ ಮೋಹನ್ ಅವರು ನ್ಯಾಯಾಲಯಕ್ಕೆ ಹೋದರು. ಅಂತಿಮವಾಗಿ ರವಿಚಂದ್ರ ನಾಯಕ್ ಅವರು ಜಯ ಸಾಧಿಸಿ ಮತ್ತೆ ತಮ್ಮ ಹುದ್ದೆಗೆ ಮರಳಿದ್ದಾರೆ. ವಿಷಯ ಇಷ್ಟೇ ಆದದ್ದು. ಆದರೆ ರವಿಚಂದ್ರ ನಾಯಕ್ ಕೋರ್ಟಿಗೆ ಹೋಗಿ ಸರಕಾರಕ್ಕೆ ಇರಿಸುಮುರಿಸು ಮಾಡಿದ್ರು ಎಂದು ಕೋಪಗೊಂಡ ಸರಕಾರ ಮಂಗಳೂರಿನಲ್ಲಿ ಕೆಎಎಸ್ ಅಧಿಕಾರಿಯಾಗಿದ್ದ ರವಿಚಂದ್ರ ಅವರ ಪತ್ನಿ ಮೇಘನಾ ಅವರನ್ನು ಇಲ್ಲಿಂದ ದೂರದ ಬಳ್ಳಾರಿಗೆ ಎತ್ತಂಗಡಿ ಮಾಡಿತ್ತು. ಕೆಲವೇ ತಿಂಗಳಲ್ಲಿ ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಕಳುಹಿಸಿಬಿಟ್ಟಿತ್ತು. ಈ ಮೂಲಕ ತನ್ನ ದ್ವೇಷವನ್ನು ಸರಕಾರ ತೀರಿಸಿದೆ. ಸರಕಾರ ರಾಜಕೀಯ ದ್ವೇಷಕ್ಕಾಗಿ ಅಧಿಕಾರಿಗಳನ್ನು ಮನಸ್ಸಿಗೆ ಬಂದಂತೆ ಎತ್ತಿ ಬಿಸಾಡುವುದನ್ನು ನಾನು ವಿರೋಧಿಸುತ್ತೇನೆ. ಅದು ಯಾವುದೇ ಸರಕಾರ ಇರಲಿ. ಕಳೆದ ಬಾರಿ ಪಾಲಿಕೆಯ ಕಂದಾಯ ಅಧಿಕಾರಿಯಾಗಿದ್ದ ಪ್ರವೀಣ್ ಚಂದ್ರ ಕರ್ಕೇರ ಅವರು ಹಿಂದಿನ ಶಾಸಕರ ಸಂಬಂಧಿಯ ಒಡೆತನದ ಅಕ್ರಮ ಹೋರ್ಡಿಂಗ್ಸ್ ಗಳಿಗೆ ಗತಿ ಕಾಣಿಸಿದ್ರು ಎನ್ನುವ ಕಾರಣಕ್ಕೆ ರಾಜಕೀಯ ಪ್ರಭಾವ ಬಳಸಿ ಅವರನ್ನು ಇಲ್ಲಿಂದ ತಕ್ಷಣ ದೂರಕ್ಕೆ ಎತ್ತಂಗಡಿ ಮಾಡಲಾಗಿತ್ತು. ಆಗ ಕಾಂಗ್ರೆಸ್ ಪಾಲಿಕೆಯಲ್ಲಿ ಮತ್ತು ರಾಜ್ಯದಲ್ಲಿ ಇತ್ತು.
ರವಿಚಂದ್ರ ನಾಯಕ್ ಮೊದಲು ಮಂಗಳೂರಿನಲ್ಲಿ ತಹಶೀಲ್ದಾರ್ ಆಗಿದ್ದರು. ಆ ಬಳಿಕ ಪಾಲಿಕೆಯಲ್ಲಿ ಕಂದಾಯ ಆಯುಕ್ತರಾಗಿದ್ದರು. ನಂತರ ಸಹಾಯಕ ಆಯುಕ್ತರಾಗಿ ಜವಾಬ್ದಾರಿ ವಹಿಸಿದ್ದರು. ಒಬ್ಬ ಅಧಿಕಾರಿ ಅತೀ ಭ್ರಷ್ಟನಾದರೆ, ಹಣ ಕೊಟ್ಟರೆ ಮಾತ್ರ ಕೆಲಸ ಮಾಡುವವನಾದರೆ ಅಂತವರನ್ನು ನೀವು ಏನೂ ಬೇಕಾದರೂ ಮಾಡಿ. ಅದು ಬಿಟ್ಟು ನಿಮ್ಮ ಮಾತು ಕೇಳಿಲ್ಲ, ನಿಮ್ಮ ಅಕ್ರಮದ ವಿರುದ್ಧ ಕ್ರಮ ತೆಗೆದುಕೊಂಡರು ಎನ್ನುವ ಕಾರಣಕ್ಕೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸರಿಯಲ್ಲ. ರವಿಚಂದ್ರ ನಾಯಕ್ ಕೆಎಟಿಗೆ ಮನವಿ ಮಾಡಿ ನ್ಯಾಯ ಕೇಳಿದ್ದ ಕಾರಣ ಇಷ್ಟು ಕಾನೂನು ಹೋರಾಟದ ಬಳಿಕ ಮತ್ತೆ ಈ ಹುದ್ದೆಗೆ ಬಂದಿದ್ದಾರೆ. ಇದೆಲ್ಲ ಆದದ್ದು ಈ ವರ್ಷದ ಜನವರಿಯಲ್ಲಿ. ಆ ಬಳಿಕ ಕೊರೊನಾ ಬಂತು. ನಾವು ಎಲ್ಲವೂ ಮರೆತುಬಿಟ್ಟು ನಂತರ ಈಗ ಮದನ್ ಮೋಹನ್ ವರ್ಗಾವಣೆಗೊಂಡ ತಕ್ಷಣ ರಾಜಕೀಯ ಪ್ರಭಾವಿಗಳ ಗಣಿಗೆ, ಮತ್ತೊಂದಕ್ಕೆ ಕೈ ಹಾಕಿದ್ರು, ರೇಡ್ ಮಾಡಿದ್ರು ಎನ್ನುವ ಕಾರಣಕ್ಕೆ ಎತ್ತಂಗಡಿ ಆಗಿದ್ದಾರೆ ಎಂದು ಹೇಳುವುದು ಸರಿಯಲ್ಲ. ಯಾಕೆಂದರೆ ವಿಷಯ ಅದಲ್ಲ!
0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search