• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯಾರ ಬಂಧನ ಆಗುವಾಗ ಯಾರ್ಯಾರ ಹೇಳಿಕೆ ಹೇಗಿರುತ್ತದೆ?

Hanumantha Kamath Posted On November 6, 2020


  • Share On Facebook
  • Tweet It

ರೇಡ್ ಎನ್ನುವ ಸಿನೆಮಾ ಬಂದಿತ್ತು. ಅಜಯ್ ದೇವಗನ್ ನಾಯಕ. ಅದರಲ್ಲಿ ಅವರದ್ದು ಆದಾಯ ತೆರಿಗೆ ಅಧಿಕಾರಿಯ ಪಾತ್ರ. ಒಬ್ಬ ಪ್ರಭಾವಿ ರಾಜಕಾರಣಿಯ ಬಂಗ್ಲೆಯಲ್ಲಿ ಅಕ್ರಮವಾಗಿ ಲೆಕ್ಕಕ್ಕೆ ಸಿಗದಷ್ಟು ಆಸ್ತಿಪಾಸ್ತಿ ಇದೆ ಎನ್ನುವ ಮಾಹಿತಿ ಅವರದ್ದೇ ಕುಟುಂಬದವರಿಂದ ಐಟಿ ಇಲಾಖೆಗೆ ಸಿಗುತ್ತದೆ. ನಾಯಕ ಪಾತ್ರಧಾರಿ ಅಜಯ್ ದೇವಗನ್ ತನ್ನ ತಂಡದ ಜೊತೆಗೆ ದಾಳಿ ಮಾಡುತ್ತಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಪತ್ರ, ಹಣ, ಬಂಗಾರ ಸಿಗುತ್ತದೆ. ಆಗ ರಾಜಕಾರಣಿ ಒಂದು ಉಪಾಯ ಮಾಡುತ್ತಾನೆ. ತನ್ನ ಮೇಲೆ ಸುಳ್ಳು ದಾಳಿಯಾಗಿದೆ, ತನ್ನನ್ನು ಬಂಧಿಸುತ್ತಾರೆ ಎಂದು ಅಕ್ಕಪಕ್ಕದ ಹಳ್ಳಿಗಳಿಗೆ ಸುದ್ದಿ ಮುಟ್ಟುವಂತೆ ನೋಡಿಕೊಳ್ಳುತ್ತಾನೆ. ಸ್ಥಳೀಯರು ಏನೂ ಗೊತ್ತಾಗದೇ ತಮ್ಮ ಅಮಾಯಕ ನಾಯಕನನ್ನು ಬಂಧಿಸಬಾರದು ಎಂದು ಆಗ್ರಹಿಸಿ ರಾಜಕಾರಣಿಯ ಮನೆಯ ಹೊರಗೆ ಜಮಾಯಿಸುತ್ತಾರೆ.

ಕಥೆ ಹೀಗೆ ಸಾಗುತ್ತದೆ. ಈ ಸಿನೆಮಾ ಬಂದು ಕೆಲವು ವರ್ಷವಾಯಿತು. ಆದರೆ ಆ ದೃಶ್ಯಗಳು ಆಗಾಗ ಬೇರೆ ರೂಪದಲ್ಲಿ ನಮ್ಮ ರಾಜ್ಯ, ದೇಶದಲ್ಲಿ ನಡೆಯುತ್ತಲೇ ಇದೆ. ಅಧಿಕಾರ ಎನ್ನುವ ಸೈಕಲ್ ಚಕ್ರದಲ್ಲಿ ಯಾರು ಯಾವಾಗ ಮೇಲಿರುತ್ತಾರೆ, ಯಾವಾಗ ಕೆಳಗಿರುತ್ತಾರೆ ಎಂದು ಹೇಳುವುದು ಕಷ್ಟ, ಆದರೆ ಇದು ನೂರಕ್ಕೆ ನೂರು ನಿಜ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಸಚಿವರಾಗಿದ್ದ ಧಾರವಾಡದ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿಯನ್ನು ಸಿಬಿಐ ಇವತ್ತು ಬಂಧಿಸಿ ವಿಚಾರಣೆ ಮಾಡಿದೆ. ಅದರೊಂದಿಗೆ ಅವರ ಸಹೋದರ ವಿಜಯ್ ಕುಲಕರ್ಣಿಯವರನ್ನು ಕೂಡ ಬಂಧನ ಮಾಡಿ ವಿಚಾರಣೆ ಮಾಡುತ್ತಿದೆ. ಅವರನ್ನು ಧಾರವಾಡದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುತ್ತಿದ್ದಂತೆ ಠಾಣೆಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಸೇರಿದೆ. ಜನ ತಂಡೋಪತಂಡವಾಗಿ ಸೇರಿದ್ದಾರೆ. ಸ್ವಾಮೀಜಿಯೊಬ್ಬರು ಕೂಡ ಬಂದಿದ್ದಾರೆ. ಇದೆಲ್ಲವೂ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ತರುವಂತಹ ಪ್ರಯತ್ನ ಅಲ್ಲದೆ ಬೇರೆ ಏನೂ ಇಲ್ಲ. ಇಂತಹ ವಿಷಯಗಳಲ್ಲಿ ಯಾವುದೇ ಮಠದ ಸ್ವಾಮೀಜಿ ಎನಿಸಿಕೊಂಡವರು ಬರುವುದೇ ತಪ್ಪು. ಒಂದು ವೇಳೆ ವಿನಯ್ ಕುಲಕರ್ಣಿ ಅವರ ಶಿಷ್ಯನಾಗಿದ್ದರೂ ಠಾಣೆಯ ಹೊರಗೆ ಬಂದು ಗುಂಪುಗಾರಿಕೆ ನಡೆಸುವುದು ಸರಿಯಲ್ಲ. ಏಕೆಂದರೆ ವಿನಯ್ ಬಂಧಿತನಾಗಿರುವುದು ಯಾವುದೇ ಸ್ವಾತಂತ್ರ್ಯ ಹೋರಾಟಕ್ಕೆ ಹೋಗಿ ಅಲ್ಲ. ಜನರ ಅಭಿವೃದ್ಧಿಗಾಗಿ ಪ್ರತಿಭಟನೆಯಲ್ಲಿ ಧುಮುಕಿ ಅಲ್ಲ. ನಾಗರಿಕರಿಗೆ ಸೌಲಭ್ಯ ಕೊಡಿಸಲು ಪ್ರತಿಭಟನೆಗೆ ಕುಳಿತಾಗ ಅವರ ಬಂಧನವಾದದ್ದಲ್ಲ. ವಿನಯ್ ಕುಲಕರ್ಣಿ ಬಂಧನವಾದದ್ದು ಒಂದು ಕೊಲೆ ಪ್ರಕರಣದಲ್ಲಿ. ಅದು ಕೂಡ ತನ್ನ ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರನ್ನು ಹತ್ಯೆ ಮಾಡಿದ್ದಕ್ಕಾಗಿ ಸಿಬಿಐ ಪ್ರಕರಣ ದಾಖಲಾಗಿತ್ತು. ಅದರ ವಿಚಾರಣೆಯ ಅಂಗವಾಗಿ ಬಂಧನವಾಗಿದೆ. ಇದರಲ್ಲಿ ವಿರೋಧ ಮಾಡುವಂತದ್ದು ಏನೂ ಇಲ್ಲ. ಒಂದು ವೇಳೆ ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲವೆಂದರೆ ಅದರಲ್ಲಿ ಯಾರಿಗಾದರೂ ಯಾಕೆ ಹೆದರಿಕೆ ಎನ್ನುವುದೇ ಗೊತ್ತಾಗುವುದಿಲ್ಲ. ಬೇಕಾದರೆ ಡ್ರಗ್ಸ್ ರಂಪಾಟ ಕಳೆದ ಕೆಲವು ದಿನಗಳಿಂದ ಆಗುತ್ತಿದೆಯಲ್ಲ, ಅದರಲ್ಲಿ ಬಿನೋಯ್ ಎನ್ನುವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಕರೆದು ವಿಚಾರಣೆ ನಡೆಸಿದ್ದರು. ನಂತರ ಮಾಹಿತಿಗಳನ್ನು ತೆಗೆದುಕೊಂಡು ಬಿಟ್ಟಿದ್ದರು. ಹೀಗೆ ಸಿಸಿಬಿ ಆಗಲಿ ಸಿಬಿಐ ಆಗಲಿ ಯಾವುದೇ ತನಿಖಾ ಸಂಸ್ಥೆಯಾಗಲಿ ವಿಚಾರಣೆಗೆ ಕರೆದಾಗ ಅವರಲ್ಲಿ ಏನಾದರೂ ಮಾಹಿತಿ ಇದ್ದೇ ಇರುತ್ತದೆ. ಆ ಮಾಹಿತಿಯಿಂದ ತನಿಖಾಧಿಕಾರಿಗಳಿಗೆ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒಟ್ಟು ಮಾಡಲು ಅನುಕೂಲವಾಗುತ್ತದೆ. ಆ ಸಂದರ್ಭದಲ್ಲಿ ನಾವು ತನಿಖಾ ಸಂಸ್ಥೆಗಳಿಗೆ ಅವರವರ ಪಾಡಿಗೆ ಬಿಟ್ಟರೆ ಒಳ್ಳೆಯದು. ಇನ್ನು ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮುಖಂಡರ ಬಂಧನವಾದರೆ ಆಗ ಕಾಂಗ್ರೆಸ್ ಪ್ರತಿಭಟನೆ ಮಾಡುವುದು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ಮುಖಂಡರ ಬಂಧನವಾದರೆ ಇವರು ಪ್ರತಿಭಟನೆ ಮಾಡುವುದು ಮಾಡುತ್ತಾ ಹೋದರೆ ರಾಜಕೀಯ ಇನ್ನಷ್ಟು ಹೊಲಸಾಗುತ್ತದೆ. ಪ್ರತಿ ಬಾರಿ ಇಂತಹ ಬಂಧನವಾದಾಗ ಕೇಳುವ ಒಂದೇ ಮಾತು “ರಾಜಕೀಯ ದ್ವೇಷ”. ಯಾವ ಪಕ್ಷದ ಸರಕಾರ ಅಧಿಕಾರದಲ್ಲಿ ಇರುತ್ತದೆಯೋ ಅವರು ಹೇಳುವ ಮಾತು “ಇಲ್ಲಿ ಸಿಬಿಐ ತನ್ನ ಕೆಲಸ ಮಾಡುತ್ತಿದೆ. ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿಲ್ಲ”. ಇದು ಫಿಕ್ಸ್ ಡೈಲಾಗ್. ಸಿಬಿಐ ಕಾನೂನು ಪ್ರಕಾರ ತನ್ನ ಕೆಲಸ ಮಾಡುತ್ತಿದೆ- ಈ ವಾಕ್ಯವನ್ನು ಯಾವ ಪಕ್ಷದವರು ನಾಳಿನ ಪತ್ರಿಕೆಯಲ್ಲಿ ಹೇಳಿರುತ್ತಾರೆ ಎನ್ನುವುದನ್ನು ಜನ ಮೊದಲೇ ಊಹಿಸಬಹುದು. ರಾಜಕೀಯವಾಗಿ ಸಿಬಿಐಯನ್ನು ಬಳಸಲಾಗುತ್ತಿದೆ ಎಂದು ಎನ್ನುವ ಹೇಳಿಕೆ ನಾಳೆ ಪತ್ರಿಕೆಯಲ್ಲಿ ಪ್ರಿಂಟ್ ಆಗಿರುವುದು ಯಾರ ಹೆಸರಿನಲ್ಲಿ ಎನ್ನುವುದನ್ನು ಇವತ್ತೆ ಊಹಿಸಬಹುದು. ಈಗ ಅರ್ನಬ್ ಬಂಧನವಾಗಿದೆ. ಬಲಪಂಥಿಯರು ವಿರೋಧಿಸುತ್ತಿದ್ದಾರೆ. ಇದು ಎರಡು ವರ್ಷಗಳ ಹಿಂದಿನ ಪ್ರಕರಣ, ಈಗ ದ್ವೇಷ ರಾಜಕೀಯವನ್ನು ಮಹಾರಾಷ್ಟ್ರ ಸರಕಾರ ಮಾಡುತ್ತಿದೆ ಎನ್ನುತ್ತಿದ್ದಾರೆ. ಅದನ್ನು ಈಗ ತೆಗೆಯುವ ಅಗತ್ಯ ಏನಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಈಗ ವಿನಯ್ ಕುಲಕರ್ಣಿ ವಿಷಯದಲ್ಲಿಯೂ ಹಾಗೆ. ಇದು ಕೂಡ ನಾಲ್ಕೂವರೆ ವರ್ಷಗಳ ಹಿಂದಿನ ಪ್ರಕರಣ. ಇದನ್ನು ಈಗ ತನಿಖೆ ಮಾಡುವಾಗ ರಾಜಕೀಯ ದ್ವೇಷ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ ಬಿಜೆಪಿ ಮುಖಂಡರು ಅದು ತನಿಖೆ ಅದರ ಪಾಡಿಗೆ ಅದು ನಡೆಯುತ್ತಿದೆ ಎನ್ನುತ್ತಿದ್ದಾರೆ. ಪವರ್ ಟಿವಿಯ ವಿಷಯದಲ್ಲಿ ಕಾಂಗ್ರೆಸ್ ಪವರ್ ಟಿವಿ ಪರವಾಗಿ ನಿಂತಿತ್ತು. ಬಿಜೆಪಿ ಮೌನವಾಗಿತ್ತು. ಒಟ್ಟಿನಲ್ಲಿ ಇಂತದ್ದು ನೋಡಿ ನೋಡಿ ಜನರಿಗೆ ಅಭ್ಯಾಸವಾಗಿದೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search