• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಚುನಾವಣೆ ಎಂದಾಗ ಮರಾಠರ ಮೇಲೆ ಎಲ್ಲಿಲ್ಲದ ಪ್ರೀತಿ ಯಡ್ಡಿಜಿ!!

Hanumantha Kamath Posted On November 18, 2020
0


0
Shares
  • Share On Facebook
  • Tweet It

ರಾಜಕೀಯ ಜೀವನದ ಕೊನೆಯ ಇನ್ಸಿಂಗ್ಸ್ ಆಡಲು ಇಳಿದಿರುವ ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಪರಿ ಗಲೀಜು ಮಾಡಿಕೊಳ್ಳಬಾರದಿತ್ತು. ನಾನೇನೂ ಕನ್ನಡ ಪರ ಸಂಘಟನೆಯ ಪದಾಧಿಕಾರಿಯೇನಲ್ಲ. ನನ್ನ ಮಾತೃ ಭಾಷೆ ಕೊಂಕಣಿ, ಈ ನೆಲದ ಆಡು ಭಾಷೆ ತುಳುವಿನೊಂದಿಗೆ ರಾಜ್ಯ ಭಾಷೆ ಕನ್ನಡವನ್ನು ಕೂಡ ಪ್ರೀತಿಸುವವನು. ಆದರೆ ವೃದ್ಧ ದೊರೆ ಸಿಂಹಾಸನವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಂಡ ಈ ನಿರ್ಧಾರವನ್ನು ಮಾತ್ರ ಖಂಡಿತ ಸಮರ್ಥಿಸಲು ಆಗುವುದಿಲ್ಲ. ಅದೇನೋ ಮರಾಠ ಅಭಿವೃದ್ಧಿ ಪ್ರಾಧಿಕಾರ ಎಂದು ರಚಿಸಲು ಯಡ್ಡಿ ಪೇಟಾ ಕಟ್ಟಿ ಸಿದ್ಧರಾಗಿ ನಿಂತಿದ್ದಾರೆ.

ಇನ್ನೊಂದೆಡೆ ಮುಖ್ಯಮಂತ್ರಿ ಯಿಂದ ಡಿಮೋಷನ್ ಆಗಿ ಮಂತ್ರಿಯಾಗಿರುವ ಜಗದೀಶ್ ಶೆಟ್ಟರ್ ರವರ  ಮಾತುಗಳನ್ನು ಕೇಳಿ ” ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಯಾರೂ ಕೂಡ ಭಾಷೆಯ ಅಭಿವೃದ್ಧಿಗಾಗಿ ಮಾಡಿದ್ದು ಎಂದು ಅಂದುಕೊಳ್ಳಬೇಡಿ. ಅದು ಅನೇಕ ವರ್ಷಗಳಿಂದ ಕರ್ನಾಟಕದಲ್ಲಿಯೇ ಇರುವ ಮರಾಠರಿಗಾಗಿ ಮಾಡಿದ ಪ್ರಾಧಿಕಾರ” ಎಂದು ಹೇಳುತ್ತಿದ್ದಾರೆ. ಇದು ಕೇಳಿಸಿಕೊಂಡು ಒಬ್ಬ ಕನ್ನಡಿಗ ಇವತ್ತು ಬಸವಕಲ್ಯಾಣದಲ್ಲಿ ಇಂತವರಿಗೆ ಮತ ಹಾಕಬೇಕು. ಶಿರಾದಲ್ಲಿ ಇವರು ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಅಲ್ಲಿನ ಹೊಸ ಶಾಸಕರಿಗೆ ಈ ಜನ್ಮ ಸಾಕಾಗಲಿಕ್ಕಿಲ್ಲ. ಆದರೆ ಅಧಿಕಾರದಲ್ಲಿರುವ ಪಕ್ಷದ ಮುಖ್ಯಮಂತ್ರಿಯ “ವಿಜಯ”ದ ಇಂದ್ರನನ್ನು ನಂಬಿ ಜನ ಮತ ಕೊಟ್ಟಿದ್ದಾರೆ. ಮುಂದಿನ ಎರಡು ವರ್ಷಗಳೊಳಗೆ ಈಡೇರಿಸದಿದ್ದರೆ ಹೊಸ ಶಾಸಕ ಡಾ.ರಾಜೇಶ್ ಆವತ್ತೆ ಮಾಜಿಯಾಗಲಿದ್ದಾರೆ. ಅವರದ್ದು ಒಂದು ತರಹ ನಡುವಯಸ್ಸಿನಲ್ಲಿ ಮದುವೆಯಾದಂತೆ. ತುಂಬಾ ಸಮಯವಿಲ್ಲ. ಎಲ್ಲವನ್ನು ಮಾಡಿ ಮುಗಿಸಬೇಕು. ಮಾಡದಿದ್ದರೆ ಜನರೇ ಕೈ ಎತ್ತಿಬಿಡುತ್ತಾರೆ. ಆದರೆ ಯಡಿಯೂರಪ್ಪನವರಿಗೆ ಗೊತ್ತಿದೆ. ಮುಂದಿನ ಚುನಾವಣೆಯ ಹೊತ್ತಿನಲ್ಲಿ ತಾನು ಮಾರ್ಗದರ್ಶಕ ಮಂಡಳಿಯಲ್ಲಿ ಇರಲಿದ್ದೇನೆ. ಕೇಂದ್ರದಲ್ಲಿ ಒಬ್ಬ ಮಗನಿಗೆ ಸಚಿವಗಿರಿ, ಇಲ್ಲಿ ಇನ್ನೊಬ್ಬ ಮಗನಿಗೆ ಶಾಸಕತ್ವ ನಂತರ ಮಂತ್ರಿ ಕೊಡುವ ಒಪ್ಪಂದದೊಂದಿಗೆ ತಾನು ಯಾವುದಾದರೂ ರಾಜ್ಯದ ರಾಜ್ಯಪಾಲನಾಗಲಿದ್ದೇನೆ. ಆ ನಂತರ ಯಾರಾದರೂ ಕೈ ಕಾಲು ಬೇಕಾದರೆ ಬಡಿಯಲಿ, ತನಗೇನೂ ಎನ್ನುವ ಮನಸ್ಥಿತಿ. ಅವರಿಗೆ ಈಗ ಹೇಗಾದರೂ ತಮ್ಮ ಡೀಲ್ ಯಶಸ್ವಿಯಾಗಬೇಕಾದರೆ ಮಗನ ಕೈಯಿಂದಲೇ ಎಲ್ಲಾ ಉಪ ಚುನಾವಣೆಗಳು ಗೆದ್ದಿವೆ ಎಂದು ಸಾಬೀತುಪಡಿಸಿ ಹೈಕಮಾಂಡಿಗೆ ತೋರಿಸುವ ಉಮ್ಮೇದು ಮಾತ್ರ ಇದೆ. ಅದಕ್ಕಾಗಿ ಅವರು ಮರಾಠ ಅಭಿವೃದ್ಧಿ ಪ್ರಾಧಿಕಾರ ಬೇಕಾದರೆ ಮಾಡಿಯಾರು, ಗೆದ್ದರೆ ಬೆಳಗಾವಿಯನ್ನೇ ಮರಾಠರಿಗೆ ಬರೆದುಕೊಡುತ್ತೇನೆ ಎಂದು ಬೇಕಾದರೆ ಹೇಳಿಯಾರು.

ಚುನಾವಣೆ ಸಂದರ್ಭದಲ್ಲಿ ಇಂತಹ ಘೋಷಣೆ ಮಾಡುವುದು ಸುಲಭ. ಆದರೆ ದಶಕಗಳಿಂದ ಬೀದರ್, ರಾಯಚೂರು, ಬೆಳಗಾವಿ ಸಹಿತ ಮುಂಬೈ-ಕರ್ನಾಟಕ ಮತ್ತು ಹೈದ್ರಾಬಾದ್-ಕರ್ನಾಟಕದ ಕನ್ನಡಿಗರ ಪರಿಸ್ಥಿತಿ ಕೇಳಿ. ಅವರು ವ್ಯಾಪಾರ, ವ್ಯವಹಾರ, ಉದ್ಯೋಗಕ್ಕಾಗಿ ಮರಾಠಿಗಳೊಂದಿಗೆ ಬಡಿದಾಡುತ್ತಾ ಬಂದವರು. ಬೆಳಗಾವಿ ನಮ್ಮದೇ ಎಂದು ಗರ್ವದಿಂದ ಝೇಂಕರಿಸುವ ನಾಡಿನಲ್ಲಿ ಮರಾಠ ಅಭಿವೃದ್ಧಿ ಮಂಡಳಿಯೆನ್ನುವುದು ಕನ್ನಡಿಗರಿಗೆ ಮಕ್ಕರ್ ಮಾಡಿದಂತೆ ಆಗಲಿದೆ. ಅಷ್ಟಕ್ಕೂ ಈ ಗಿಮಿಕ್ ನಂಬಿ ಮರಾಠರು ಯಡಿಯೂರಪ್ಪನವರ ಪಕ್ಷವನ್ನು ಗೆಲ್ಲಿಸುತ್ತಾರಾ? ಗೆದ್ದರೂ ಬಿಎಸ್ ವೈ ಅದೇನೂ ಕೆಲಸಕ್ಕಿಲ್ಲದ ಪ್ರಾಧಿಕಾರ ಮಾಡಿ ಕಿಸಿಯಲು ಏನಿದೆ? ಈಗ ನಮ್ಮ ರಾಜ್ಯದಲ್ಲಿ ಅದೆಷ್ಟೋ ಪ್ರಾಧಿಕಾರಗಳಿವೆ. ಉದಾಹರಣೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ತೆಗೆದುಕೊಳ್ಳಿ. ಒಬ್ಬ ಅಧ್ಯಕ್ಷ, ಅವರಿಗೊಂದು ಕಚೇರಿ, ಕಾರುಗೀರು, ಟಿಎ, ಡಿಎ, ಸಿಬ್ಬಂದಿ ಸಂಬಳ, ಭತ್ಯೆ, ಪ್ರವಾಸ ಇನ್ನು ಏನೇನೋ ಕೊಟ್ಟು ಕರಾವಳಿ ಅಭಿವೃದ್ಧಿಯಾದದ್ದು ಎಲ್ಲಿ? ಇನ್ನು ವಿವಿಧ ಅಕಾಡೆಮಿಗಳನ್ನು ತೆಗೆದುಕೊಳ್ಳಿ. ಅಧ್ಯಕ್ಷರಿಗೆ 50 ಸಾವಿರದಷ್ಟು ಸಂಬಳ. ಅವರು ಭತ್ಯೆ. ಪ್ರವಾಸಕ್ಕೆ ಹೊರಟರೆ ಎಲ್ಲಾ ಖರ್ಚು. ಇದೆಲ್ಲ ಮಾಡಿ ಅವರು ಅಕಾಡೆಮಿ ಕಚೇರಿಯಲ್ಲಿ ಎಲ್ಲಿರುತ್ತಾರೆ? ಈಗ ಹೊಸ ಪ್ರಾಧಿಕಾರ. ಅದಕ್ಕೆ 50 ಲಕ್ಷ ತೆಗೆದು ಇಡುತ್ತಾರಂತೆ. ಈಗ ನಮ್ಮ ತುಳು, ಕೊಂಕಣಿ, ಬ್ಯಾರಿ, ಕೊಡವ, ಅರೆಭಾಷೆ ಅಕಾಡೆಮಿಗಳು ಅನುದಾನದ ಕೊರತೆಯಿಂದ ಬಳಲುತ್ತಿವೆ. ಇವು ನಮ್ಮ ರಾಜ್ಯದ ಭಾಷೆಗಳು. ಇದನ್ನು ಬಿಟ್ಟು ಮರಾಠರಿಗಾಗಿ ಯಡಿಯೂರಪ್ಪನವರ ಹೃದಯ ಮೀಟುತ್ತಿದೆ.

ಇನ್ನು ಯಡಿಯೂರಪ್ಪನವರು ಬೇರೆ ಬೇರೆ ಜಾತಿಗೆ ಸಂಬಂಧಪಟ್ಟ ಪ್ರಾಧಿಕಾರವನ್ನು ರಚಿಸುವ ಮಾತನಾಡಿದ್ದಾರೆ. ರಾಜ್ಯದಲ್ಲಿ ಲಿಂಗಾಯಿತ, ಒಕ್ಕಲಿಗ ಮಾತ್ರ ಜಾತಿ ಎಂದುಕೊಂಡು ಏನಾದರೂ ಮಾಡಲು ಹೊರಟರೆ ಯಡಿಯೂರಪ್ಪನವರನ್ನು ಉಳಿದ ಎಲ್ಲಾ ಜಾತಿಯವರು ಸೇರಿ ಮಲಗಿಸಲಿದ್ದಾರೆ. ನಿಮಗೆ ಚುನಾವಣೆಯೇ ಗೆಲ್ಲುವುದು ಮುಖ್ಯವಾಗಿದ್ದಲ್ಲಿ ಎಲ್ಲಾ ಜಾತಿಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದನ್ನು ಕಲಿಯಬೇಕೆ ವಿನ: ಯಾವ ಕ್ಷೇತ್ರದಲ್ಲಿ ಯಾವ ಜಾತಿ ಹೆಚ್ಚಿದ್ದಾರೆ ಎಂದು ನೋಡಿ ಒಲೈಕೆ ರಾಜಕಾರಣ ಮಾಡಿದರೆ ನಾಲ್ಕು ಜನ ಶಹಭಾಷ್ ಎನ್ನಬಹುದು. ಆದರೆ ಪ್ರಜ್ಞಾವಂತ ನ್ಯೂಟ್ರಲ್ ಮತದಾರ ಎಲ್ಲಾ ಕಡೆ ಇದ್ದಾನೆ. ಆತನಿಗೆ “ಶಿರಾ” ತಿನ್ನಿಸಲು ಗೊತ್ತು. “ಬಸವ”ನಿಂದ ಗುದ್ದಲೂ ಗೊತ್ತು. ಅದು ಯಡಿಯೂರಪ್ಪ ಹಾಗೂ ಪಟಾಲಾಂ ಅರ್ತ ಮಾಡಿಕೊಳ್ಳುವಷ್ಟು ಸಹನೆ ಇಟ್ಟುಕೊಂಡಿದೆಯಾ?

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search