• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೀಪಾವಳಿಯಂದು ಮೀನು ವಿವಾದ ಯಾಕಾಯಿತು?

Hanumantha Kamath Posted On November 27, 2020


  • Share On Facebook
  • Tweet It

ಗೋವಾದಲ್ಲಿರುವ ಪ್ರತಿಯೊಬ್ಬರನ್ನು ಪೋರ್ಚುಗೀಸರು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೊರಟ ಸಮಯ ಅದು. ಅಲ್ಲಿ ಇದ್ದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಯಾವ ಕಾರಣಕ್ಕೂ ಮತಾಂತರ ಆಗಲ್ಲ ಎಂದು ಪೋರ್ಚುಗೀಸರ ವಿರುದ್ಧ ಸೆಟೆದು ನಿಂತಿತು. ಎಷ್ಟೇ ದೌರ್ಜನ್ಯ, ಹಿಂಸೆಯ ನಡುವೆಯೂ ಪ್ರತಿಭಟಿಸಿದ ಅಸಂಖ್ಯಾತ ಜಿಎಸ್ ಬಿಗಳು ಪ್ರಾಣಾರ್ಪಣೆ ಮಾಡಿದರೇ ವಿನ: ಮತಾಂತರ ಆಗಲಿಲ್ಲ. ಅದರಲ್ಲಿ ಅನೇಕರು ಗೋವಾದಲ್ಲಿ ಇದ್ದಬದ್ದ ತಮ್ಮ ಆಸ್ತಿಪಾಸ್ತಿ, ಹಣ, ಬಂಗಾರ ಎಲ್ಲವನ್ನು ಬಿಟ್ಟು ಕರ್ನಾಟಕದ ಕರಾವಳಿಗೆ ಓಡಿ ಬಂದರು. ಆಗ ಅವರು ತಮ್ಮೊಂದಿಗೆ ತಂದದ್ದು ದೇವರನ್ನು ಮಾತ್ರ. ಒಂದು ಕಾಲದಲ್ಲಿ ಮಂಗಳೂರಿನಲ್ಲಿ ನವರಾತ್ರಿಯ ಸಂದರ್ಭದಲ್ಲಿ ವಿಸರ್ಜನೆಯ ದಿನ ದೇವಿಯ ಮೂರ್ತಿಯನ್ನು ಶೋಭಾಯಾತ್ರೆಯ ಮೂಲಕ ಹೊತ್ತುಕೊಂಡು ಹೋಗುತ್ತಿದ್ದಂತಹ ಕಾರ್ಯಕರ್ತರ ಮೇಲೆ ಅನ್ಯಧರ್ಮಿಯ ಪ್ರಾರ್ಥನಾ ಕೇಂದ್ರದಿಂದ ಕಲ್ಲುಗಳ ಸುರಿಮಳೆ, ದೊಣ್ಣೆಯ ಏಟು ಬಿದ್ದರೂ ಮೂರ್ತಿಯನ್ನು ಬಿಡದೆ ಏಟು ತಿಂದು ಶೋಭಾಯಾತ್ರೆಯನ್ನು ಪರಿಪೂರ್ಣಗೊಳಿಸಿದ ಮಹಾನ್ ಸಹಿಷ್ಣುತಾವಾದಿಗಳು ಇದೇ ಜಿಎಸ್ ಬಿಗಳು.

ಇಂತಹ ಮಹಾನ್ ಸಂಪ್ರದಾಯವಾದಿಗಳಾದ, ದೇವಭಕ್ತರಾದ ಜಿಎಸ್ ಬಿಗಳು ತಮ್ಮ ಆಚಾರ, ವಿಚಾರ, ಸಂಸ್ಕೃತಿಯಿಂದ ದೇವನೊಲುವೆ ಗಳಿಸಿ ಸರಕಾರದ ನೆರವು ಇಲ್ಲದೇ ಇದ್ದರೂ ಸ್ವಾವಲಂಬಿಗಳಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಬೆಳೆದು ನಿಂತಿದ್ದಾರೆ. ಅದು ಹೋಟೇಲುಗಳಿಂದ ಬ್ಯಾಂಕಿಂಗ್ ತನಕ, ಶಿಕ್ಷಣ ಸಂಸ್ಥೆಗಳಿಂದ ರಾಜಕಾರಣದತ್ತ ತಮ್ಮ ಛಾಪು ಮೂಡಿಸಿದ್ದಾರೆ. ನಂಬಿಕೆ ಮತ್ತು ವಿಶ್ವಾಸಕ್ಕೆ ಇನ್ನೊಂದು ಹೆಸರು ಎಂದು ಬೇರೆ ಸಮುದಾಯಗಳಿಂದ ಹೊಗಳಿಸಿಕೊಂಡಿರುವ ಜಿಎಸ್ ಬಿಗಳಲ್ಲಿ ಹಬ್ಬ, ಹರಿದಿನಗಳಿಗೆ ವಿಶೇಷ ಪ್ರಾಧ್ಯಾನತೆ ಇದೆ.  ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಯುವ ತಲೆಮಾರನ್ನು ಮನಸ್ಸಿನಲ್ಲಿಟ್ಟು ಅಂತವರು ತಮ್ಮ ಸಮಾಜದ ಮೂಲಬೇರುಗಳಿಂದ ವಿಮುಖರಾಗಬಾರದು ಎನ್ನುವ ಕಾರಣಗಳಿಂದ ಹುಟ್ಟಿಕೊಂಡಿದ್ದೇ ಯೂತ್ ಆಫ್ ಜಿಎಸ್ ಬಿ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ಪರಮಪೂಜ್ಯ ಗುರುವರ್ಯರ ಆರ್ಶೀವಚನಗಳು, ಭಕ್ತಿ ಸಂಗೀತ, ಕಲೆ, ಸಂಸ್ಕೃತಿಯನ್ನು ಈಗಿನ ಯುವ ಸಮುದಾಯಕ್ಕೆ ಹಿರಿಯರ ಆಶಯವನ್ನು ದಾಟಿಸುವ ಮಾದರಿ ಕೆಲಸವನ್ನು ಯೂತ್ ಆಫ್ ಜಿಎಸ್ ಬಿ ಮಾಡುತ್ತಾ ಬರುತ್ತಿದೆ. ಅದರ ಅಂಗವಾಗಿ ದೀಪಾವಳಿಯ ಸಮಯದಲ್ಲಿ ಮೀನು ತಿನ್ನುವುದು ನಮ್ಮ ಸಂಪ್ರದಾಯ ಅಲ್ಲ ಎನ್ನುವ ಕಿವಿಮಾತನ್ನು ಹೇಳುವ ಕೆಲವೇ ನಿಮಿಷಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ವರ್ಷ 2019 ರಲ್ಲಿ ಪ್ರಚುರಪಡಿಸಲಾಗಿತ್ತು. ಆ ವಿಡಿಯೋ ನೋಡಿ ಅದರಲ್ಲಿದ್ದ ಸಂದೇಶವನ್ನು ಅಸಂಖ್ಯಾತ ಜಿಎಸ್ ಬಿಗಳು ಮನಸಾರೆ ಒಪ್ಪಿಕೊಂಡಿದ್ದಾರೆ. ನಮ್ಮಲ್ಲಿ ಯಾವುದೋ ಕಾಲಘಟ್ಟದಲ್ಲಿ ಯಾರೋ ಮಾಡಿದ ತಪ್ಪಿನಿಂದ ಈ ಕ್ರಮ ಬಂದಿರಬಹುದಾಗಿದ್ದೂ, ಇನ್ನು ಹೀಗೆ ದೀಪಾವಳಿಯ ದಿನ ಮೀನು ಸೇವಿಸಲ್ಲ, ಈ ಬಗ್ಗೆ ಜ್ಞಾನ ಮೂಡಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಆ ವಿಡಿಯೋದಲ್ಲಿ ಯಾವುದೇ ಹೇರಿಕೆಯ ರೀತಿಯ ಆದೇಶವಿರಲಿಲ್ಲ.

ವೈದಿಕ ಹಿನ್ನಲೆಯ ತಳಹದಿಯಲ್ಲಿ ಮೂಡಿಬಂದ ಕಳಕಳಿಯಿತ್ತು. ಆದರೆ ಇದನ್ನು ವಿರೋಧಿಸಬೇಕೆನ್ನುವ ಬೆರಳೆಣಿಕೆಯ ಜನರಿಗೆ ಅದರಲ್ಲಿ ಏನೋ ದೊಡ್ಡ ಅಪವಾದ ಕಂಡುಬಂದಿದೆ. ದುರಾದೃಷ್ಟವಶಾತ್ ಎಲ್ಲಾ ಕಡೆ ಇರುವಂತೆ ಜಿಎಸ್ ಬಿಗಳಲ್ಲಿಯೂ “ಬುದ್ಧಿಜೀವಿ” ಗಳೆನಿಸಿಕೊಂಡವರಿದ್ದಾರೆ.  ಅವರು ಯಾವ ಪಂಥಿಯ ಧೋರಣೆಗಳನ್ನು ಪಾಲಿಸುತ್ತಾರೆ ಎನ್ನುವುದು ಅವರವರ ಇಚ್ಚೆ. ಈ ನೆಲ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದೆ. ಹಾಗಂತ ಎಲ್ಲಾ ಜಿಎಸ್ ಬಿಗಳು ತಮ್ಮ ಹಿರಿಯರು ಅನುಸರಿಸಿಕೊಂಡು ಬಂದದ್ದನ್ನು ಸ್ವೇಚ್ಚಾಚಾರದ ಹೆಸರಿನಲ್ಲಿ ಬಿಡಲು ಸಾಧ್ಯವಿಲ್ಲ. ಇನ್ನು ಇತ್ತೀಚೆಗೆ ಒಂದು ಮಾಸಿಕದಲ್ಲಿ ಜಿಎಸ್ ಬಿಗಳು ತಾವು ಮೀನು ತಿನ್ನುವ ಬ್ರಾಹ್ಮಣರು ಎಂದು ಕರೆಸಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ. ಮೀನನ್ನು ತಿನ್ನುವುದು, ಬಿಡುವುದು ಅವರವರ ಇಚ್ಚೆಗೆ ಬಿಟ್ಟಿದ್ದು. ಆದರೆ ತೀರಾ ದೀಪಾವಳಿಯ ಹಬ್ಬದಂದು ಮಧ್ಯಾಹ್ನ ಲಕ್ಷ್ಮಿನಾರಾಯಣ ದೇವರ ಪೂಜೆಯನ್ನು ಮಾಡಿ ರಾತ್ರಿ ಮೀನೂಟ ಮಾಡುವುದು ಜಿಎಸ್ ಬಿ ಸಮುದಾಯದಲ್ಲಿ ಇರಲೇ ಇಲ್ಲ. ಮಹಾರಾಷ್ಟ್ರದಿಂದ ಗೋವಾ, ಕರ್ನಾಟಕ ಸೇರಿಸಿ ಕೇರಳದ ತನಕ ಇರುವ ಜಿಎಸ್ ಬಿಗಳು ಉದ್ಯೋಗ, ವ್ಯವಹಾರ, ಶಿಕ್ಷಣದ ನಿಮಿತ್ತ ರಾಜ್ಯ, ರಾಷ್ಟ್ರ, ಪರದೇಶಗಳಲ್ಲಿ ಕೂಡ ಇದ್ದಾರೆ. ಅಂತವರು ಆ ವಿಡಿಯೋ ನೋಡಿ ನಮ್ಮಲ್ಲಿ ದೀಪಾವಳಿಯ ಪವಿತ್ರ ದಿನದಂದು ಮೀನು ತಿನ್ನುವ ಕ್ರಮವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಮಂಗಳೂರಿನ ಕೆಲವು ಮನೆಗಳಲ್ಲಿ ಬಿಟ್ಟು ಉಳಿದ ಬಹುತೇಕ ಕಡೆ ದೀಪಾವಳಿಯ ರಾತ್ರಿ ಮೀನು ತಿನ್ನುವ ಸಂಪ್ರದಾಯ ಇಲ್ಲ ಎನ್ನುವುದು ನಮ್ಮುದಾಯದವರೇ ಒಪ್ಪಿಕೊಂಡಿದ್ದಾರೆ. ಆವತ್ತು ತಿನ್ನುತ್ತಿದ್ದವರು ಇನ್ನು ತಿನ್ನಲ್ಲ, ಜಾಗೃತಿ ಮೂಡಿಸಿದ್ದಾಗಿ ಅಭಿನಂದಿಸಿದ್ದಾರೆ. ಆದರೆ ಈ ವಿಡಿಯೋ ನೋಡಿ ನರೇಂದ್ರ ನಾಯಕ್ ಎನ್ನುವ ವ್ಯಕ್ತಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ದೀಪಾವಳಿಯ ರಾತ್ರಿ ಮೀನಿನ ವಿವಿಧ ಖಾದ್ಯಗಳನ್ನು ಬಡಿಸಿರುವ ಊಟದ ಎಲೆಯ ಫೋಟೋ ಹಾಕಿ ಹಬ್ಬದಂದು ಮೀನೂಟ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅವರಿಗೆ ಉಡುಪಿಯ ಮನೋವೈದ್ಯರಾಗಿರುವ ಪಿವಿ ಭಂಡಾರಿಯಂತವರು ಬೆಂಬಲಿಸಿದ್ದಾರೆ. ಗೋವನ್ನು ತಿನ್ನಬೇಡಿ ಎಂದ ತಕ್ಷಣ ರಸ್ತೆ ಬದಿಯಲ್ಲಿ ಗೋವನ್ನು ಕಡಿದು ಮಾಂಸದೂಟ ಮಾಡಿ ತಿಂದ ಉದಾಹರಣೆಗಳನ್ನು ನೋಡಿದ ದೇಶ ನಮ್ಮದು. ಆದರೆ ಯೂತ್ ಆಫ್ ಜಿಎಸ್ ಬಿಯವರು ಮೀನಿನ ಊಟದ ವಿಷಯದಲ್ಲಿ ಹೇಳಿದ್ದನ್ನು ವಿರೋಧಿಸಬೇಕೆನ್ನುವ ಏಕೈಕ ಕಾರಣದಿಂದ ಬಲಪಂಥಿಯರಂತೆ ವರ್ತಿಸುತ್ತಿದ್ದಾರೆ, ಹೇರಿಕೆ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳುವುದು ಸರಿಯಲ್ಲ. ಹುಟ್ಟಿದ ಪ್ರತಿಯೊಬ್ಬರು ದೇವರನ್ನು ನಂಬಲೇಬೇಕು ಎಂದು ಹೇಗೆ ಬಯಸಲು ಸಾಧ್ಯವಾಗುವುದಿಲ್ಲವೋ, ಜಿಎಸ್ ಬಿ ಸಮಾಜದಲ್ಲಿ ಹುಟ್ಟಿದ ಎಲ್ಲರೂ ಇಲ್ಲಿನ ಸಂಪ್ರದಾಯವನ್ನು ಒಪ್ಪಬೇಕು ಎಂದು ಬಯಸಲು ಆಗುವುದಿಲ್ಲ. ಬೆರಳೆಣಿಕೆಯ ವ್ಯತಿರಿಕ್ತ ಜನರು ಇರಬಹುದು. ಕೆಲವರು ದೇವರನ್ನು ಹೇಗೆ ನಂಬುವುದಿಲ್ಲವೋ ಹಾಗೇ ಸಮಾಜದ ಕಟ್ಟುಪಾಡುಗಳನ್ನು ನಂಬಲಿಕ್ಕಿಲ್ಲ. ಹಾಗಂತ ಜಿಎಸ್ ಬಿ ಸಮಾಜದಲ್ಲಿ ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದು ಸಮಾಜ ಇಬ್ಬಾಗವಾಗಿದೆ ಎಂದು ಹೇಳುವುದು ಮೂರ್ಖತನ. ಒಬ್ಬಿಬ್ಬರ ಅಭಿಪ್ರಾಯಗಳೇ ಇಡೀ ಸಮಾಜದ ಅಭಿಪ್ರಾಯ ಅಲ್ಲ. ಹಾಗೇ ನೋಡಿದರೆ ಯೂತ್ ಆಫ್ ಜಿಎಸ್ ಬಿಯ ಆ ವಿಡಿಯೋ ಸಾವಿರಾರು ಸಂಖ್ಯೆಯಲ್ಲಿ ನೋಡಿ ಸಕರಾತ್ಮಕ, ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜಿಎಸ್ ಬಿಗಳ ಅತಿ ದೊಡ್ಡ ಸಂಖ್ಯೆಯೇ ನಿಜವಾದ ಯಶಸ್ಸು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search